ಶ್ರೀ ಹಯಗ್ರೀವ ಮಂತ್ರಸ್ತೋತ್ರ
ಜ್ಞಾನ ಬಲಾನಂದಾದಿ ಸರ್ವಗುಣ ವಾರಿನಿಧಿ
ಅನಿಷ್ಟಹರ ಇಷ್ಟಪ್ರದ ಹಯಗ್ರೀವ ಅನಘ
ಸನ್ನುತ ಸೇವ್ಯ
ಘನ ದಯಾಂಬುಧೇ ನಮೋ ಗುರುಗ ಲಕ್ಷ್ಮೀಶ ಪ
ಕಮಲಾಸನ ಋಷಿಯು ಗಾಯತ್ರಿಛಂದಸ್ಸು
ಅಮಲಾಷ್ಟಾಕ್ಷರ ಮಂತ್ರ ದೇವತೆ ಹಯಾಸ್ಯ
ಸೋಮ ಮಂಡಲ ಸ್ಥಿತನು ಅಕಳಂಕ ಕಾಂತಿಮಾನ್
ಅಮೃತ ತನ್ನಯ ಸ್ವರೂಪ ಕಿರಣ ಸುರಿಸುವನು 1
ನಾಶರಹಿತನು ಅವ್ಯಯ ನಿತ್ಯೋ ನಿತ್ಯಾನಾಮ
ಅಂಡ ಬಹಿರಂತರದಿ ಎಲ್ಲೂ
ಪುಸ್ತಕ ಚಿನ್ಮುದ್ರೆಯು ಶಂಖಾಕ್ಷ ಮಾಲಾಧರ
ಕಾಶಿಸುತಿಹ ತುರಗ ವದನ ಸರ್ವಜ್ಞ2
ಪೂರ್ಣ ಜ್ಞಾನಾತ್ಮನು ಪೂರ್ಣ ಐಶ್ವರ್ಯಾತ್ಮ
ಪೂರ್ಣ ಪ್ರಭಾತ್ಮನು ಪೂರ್ಣ ತೇಜಾತ್ಮಾ
ಪೂರ್ಣಾನಾನಂದಾತ್ಮನು ಪೂರ್ಣ ಶಕ್ತ್ಯಾತ್ಮನು
ಪೂರ್ಣ ಗುಣನಿಧಿ ಸದಾ ನಿರ್ದೋಷ ಈಶ 3
ಪ್ರತಿವಾದಿ ಜಯಪ್ರದನು ಸರ್ವ ವಿದ್ಯಾದಾತ
ಬುದ್ದಿ ಸ್ಥೈರ್ಯ ಸತ್ಜ್ಞಾನ ವರ್ಚಸ್ಸು ಈವ
ಮುಕ್ತ್ತಿಸಾಧನೆ ಅಪರೋಕ್ಷಜ್ಞಾನವನಿತ್ತು
ಸಾಧು ಅಧಿಕಾರಿಗಳ ಯೋಗಕ್ಷೇಮ ವಹಿಪ 4
ಏಕದಶÀ ಶತÀ ಸಹಸ್ರಾನಂತ ರೂಪನೇ
ಸ್ವಗತ ಭೇದ ವಿಲ್ಲದ ಸುಪೂರ್ಣ ಸ್ವತಂತ್ರ
ಶ್ರೀಕದಶ ವಿಧಿಪಿತ ಪ್ರಸನ್ನ ಶ್ರೀನಿವಾಸ ನಮೋ
ವ್ಯಾಂ ಕಪಿಲದತ್ತÀ ವರಾಹಹಯಗ್ರೀವ 5
ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು