ಶ್ರೀಹರಿ ನಿನ್ನನ್ನೆ ಪಡೆವುದು ಭಾಗ್ಯ
ಬಾಹಿರನೆನಿಸದೆ ಸೇರಿಸು ಯೋಗ್ಯ ಪ
ಹೃದಯಾರವಿಂದದೆ ದೇವಿಯರುಸಹಿತ
ಸದಯ ಸನ್ನಿಧಿ ಮಾಡು ಅದು ನನಗೆ ವಿಹಿತ 1
ಭಾಗವತ ಕೈಕಂರ್ಯ ಹಗಲಿರುಳು ಇರಲಿ
ನಿತ್ಯ ಸಿದ್ಧಿಸಲಿ 2
ಇಡುದೇವ ಪದಕಮಲ ನನ್ನ ತಲೆಮೇಲೆ
ಅನುದಿನ ಲೀಲೆ 3
ಕೊನೆಗಾಲದಲಿ ಬಂದು ನೆನೆವಂತೆ ನೀಡೈ
ಮನಕೆ ಮಂಗಳರೂಪ ಧ್ಯಾನ ದಯಮಾಡೈ 4
ಅವತಾರಫಲಗಳ ಸ್ಮರಣೆ ಬರುತಿರಲಿ
ಭವವೆಲ್ಲ ಕರಣಗಳು ನಿನ್ನ ಸೇವಿಸಲಿ 5
ದಾಸನ್ನ ಚರಣಾಂಬುಜದÀಡಿಯಿರಿಸು
ಶ್ರೀಶನೆ ಪ್ರೇಮದ ಸವಿಯನುಣಬಡಿಸು 6
ಎಲ್ಲವು ನಿನ್ನದೆ ನನ್ನದೇನಿಲ್ಲ
ಬಲ್ಲವನೆ ನೀನಾಗಿ ಮುಕ್ತಿಕೊಡು ನಲ್ಲ 7
ಹಿಂದೇಳು ಮುಂದೇಳು ತಲೆಮಾರಿನವರು
ತಂದೆ ನಿನ್ನಂಘ್ರಿ ಶೇಷಾಂಕಮುದ್ರಿತರು 8
ಕುಲಧನವೆ ನೀನಮ್ಮಕುಲಕೋಟಿಯನ್ನ
ಒಲಿದು ಕಾಪಾಡಯ್ಯ ಕರುಣಿ ಪ್ರಸನ್ನ 9
ಹೆಜ್ಜಾಜಿ ಕೇಶವ ಇದು ನಮ್ಮ ಮೋಕ್ಷ
ಅರ್ಜುನಸಾರಥಿ ಕಾಣು ಪ್ರತ್ಯಕ್ಷ10