ಒಟ್ಟು 40 ಕಡೆಗಳಲ್ಲಿ , 18 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲಕ್ಕೆ ನೀನೆ ಸ್ವತಂತ್ರನಾಗಿರ್ದು ಅಖಿಲೇಶ ಎನ್ನ ಸ್ವತಂತ್ರನೆನಿಸಿ ಕೊಲ್ಲುವರೆ ಪ ನೀನೆ ನಡೆಸಲು ನಡೆವೆ ನೀನೆ ನುಡಿಸಲು ನುಡಿವೆ ಸೂತ್ರ ಬೊಂಬ್ಯಂತೆ ನಾನಾಪರಿಯಲಿ ಎನಗೆ ಹೀನ ಬವಣ್ಯಾತಕೊ ದೀನಜನ ಭಂಧುವೆ ನೀನೆ ನೀಖಿಲೇಶ 1 ಅಡವಿ ಮಹದಾರಣ್ಯ ಗಿಡ ಗುಡ್ಡ ಗಂಹ್ವರ ಕಡುಕ್ಷೇತ್ರ ಮೊದಲಾದ ಇಡಿ ಬ್ರಹ್ಮಾಂಡಗಳ ಬಿಡದೆ ಉದರದೊಳಿಟ್ಟು ಅಡಗಿ ಮತ್ತದರೊಳಗೆ ನಡೆಸುವಿಯೆಲೊ ಸೃಷ್ಟಿ ಕಡುಚಿತ್ರಮಹಿಮ 2 ನಿನ್ನ ಮಹಿಮಿದು ಎಲ್ಲ ಭಿನ್ನವಿದರೊಳೊಂದು ಪರಿ ಬನ್ನ ಬಡಿಸುವುದು ಇನ್ನಿದು ತರವಲ್ಲ ಪನ್ನಂಗಶಯನನೆ ಮನ್ನಿಸಿ ಪೊರೆ ದಯದಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಸರಸಿಜೋದ್ಭವನುತ ಸಿರಿಲೋಲ ಹರಿ ಸರ್ವರೊಳಿಹ ಶ್ರೀ ಗೋಪಾಲ ಶರಣಾಗತವತ್ಸಲ ಕರುಣಾನಿಧಿ ಕೃಪಾಲ ಸುರಜನ ಸಾನುಕೂಲ ವರಮುನಿಪಾಲ 1 ಮಾಮನೋಹರ ಮಾರಪಿತನೀತ ಕಾಮಪೂರಿತ ವಿಮಲ ಚರಿತ ಸಾಮಗಾಯನಪ್ರಿಯ ಸೋಮಶೇಖರ ಧೇಯ ಸಾಮಜ ವರದ ಸಮಸ್ತಹೃದಯ 2 ಸಾಹ್ಯಸಕಲಕೆ ಸನ್ನಿಧನೀತ ಇಹ ಸರ್ವಾನಂದ ಸರ್ವಭರಿತ ಸ್ವಹಿತ ಸುಖದಾತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಶ್ರೀಹರಿ ಸಾಕ್ಷಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವ ಸಹಕಾರಿ ಶ್ರೀಹರಿ ಸರ್ವ ಸಹಕಾರಿ ಧ್ರುವ ಸುರಜನ ಪಾಲ ಸಕಲಕಾಧಾರಿ ಪರಮ ಪುರುಷ ಪೀತಾಂಬರಧಾರಿ 1 ಶರಣ ರಕ್ಷಕ ಸುದಯದಲ್ಯುದಾರಿ ವಾಹನ ಮುಕುಂದ ಮುರಾರಿ2 ತೋರುವ ನಿತ್ಯಾನಂದದ ಲಹರಿ ಬೀರುವ ಸುಖ ಸಾಧನೆ ಪರೋಪರಿ 3 ಕರುಣದಾಕ ಮಹಿಪತಿ ಸಹಕಾರಿ ಸಿರಿಯನಾಳುವ ಸ್ವಾಮಿಯು ನರಹರಿ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ಸಮಾಗಮ ಸಾಧನಕುತ್ತಮೋತ್ತಮ ಸಾಧಿಸಿದವ ಸಕಲಕ ನಿಸ್ಸೀಮ ಧ್ರುವ ಸಾಧು ಸುದರುಶನ ಸದಮಲಾನಂದ ಪೂರ್ಣ ಸದಾ ಸದ್ಗೈಸುವ ಸುಖಸಾಧನ 1 ಸಾಧು ಸಂಭಾಷಣ ಸುಧಾರಸ ಪ್ರಾಶನ ಸದೋದಿತ ಸಹಿತ ಭೂಷಣ2 ಸದಾ ಸಕಾಲದಲಿ ಮಹಿಪತಿಗಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು | ಇಂದೆನ್ನ ಜನುಮ ಸಫಲ | ಹಿಂದೆ ಅನಂತೇಶನೆಂದೆಂಬ ನಾಮದಲಿ | ಕಂಬು | ಕಂದರದ | ತಿಮ್ಮನ ಪ ಮಕರ ಕುಂಡಲಧಾರ | ಮಕ್ಕಳಾ ಮಣಿಸು ಕಾಮದಾ | ಅಕಳಂಕ ತುಲಸಿ ಸರ | ಕಮಲ ಅಕುಟಿಲ ಹೃದಯಮಂದಿರ | ಸಕಲಕಾಲದಲಿ ನಿಜ | ಭಕುತರಿಗೆ ಒಲಿದಿಪ್ಪ | ಅಖಿಳ ಲೋಕಾಧೀಶ ಮುಕುತಾರ್ಥ ಮುರವೈರಿ1 ಕರ ಮುಂಗೈಯ ಕಡಗ ಕಂಕಣ ಬಾಹು ಭುಜಕೀರ್ತಿ | ಮುಂಗೈಯ ಫಣಿಯ ತಿಲಕಾ | ಬಂಗಾರದಂಬರ ಭವದೂರಾ ಪದದಲ್ಲಿ | ಪೊಂಗೆಜ್ಜೆ ಸರ್ವಾಭರಣದಿಂದ ಒಪ್ಪುವಾ 2 ಪಾಂಡೆ ದೇಶವಾಸಾ ಪಾಂಡವರ ಸಂರಕ್ಷಕ | ಚಂಡ ಪ್ರಚಂಡ ಮಹಿಮಾ | ಗಂಡುಗಲಿಗಳ ಗಂಡಾ | ಕೊಂಡಾಡಿದವರಿಗೆ ತಂಡ | ತಂಡದ ವರವೀವಾ | ಉದ್ದಂಡ ವಿಜಯವಿಠ್ಠಲ| ಅಂಡಜಗಮನ ಕೃಷ್ಣಾ ತಿಮ್ಮಾ3
--------------
ವಿಜಯದಾಸ
ಸ್ವಾಮಿ ಭಜನೆ ಮಾಡೊ ಮನುಜ ಪ್ರೇಮದಿಂದಲಿ ಪಾದ ಹಿಡಿದು ಪ ಬಂಧು ಬಳಗ ಭಾಗ್ಯವೆಂಬ ಬಯಲು ವಸ್ತುವೊ ಹಿಂದು ಮುಂದೇನು ಬರುವರು ಯಾರು ಇಲ್ಲವೊ ಎಂದು ತಿಳಿದು ಹರಿಯ ಮನದಿ ಮರೆಯಬೇಡವೊ ಇಂದಿರೇಶ ಸಕಲಕರ್ತ ವೆಂಕಟಾದ್ರಿ ನಿಲಯನಾದ 1 ನಿತ್ಯನೇವÀು ನಿಷ್ಠೆಯಿಂದ ನಿಜವು ತಿಳಿದು ನಿ ಸತ್ಯವಂತರ ಸಂಗ ಬಿಡದೆ ಸರ್ವಕಾಲದಿ ಭೃತ್ಯರಿಗೆ ಭೃತ್ಯನಾಗಿ ಪೂರ್ಣಭಾವದಿ ಮರಿಯದ್ಹೋಗಿ ಬಿಡದೆ 2 ಗಾನಲೋಲ ಕರುಣಾಸಾಗರ ಘನವಿಲಾಸನ ಭಾನುಕೋಟಿ ತೇಜನಾದ ಪರಮ ಪುರುಷನಾ ಶರಧಿ ಧ್ಯಾನದಲಿ ಚಿತ್ತವಿಟ್ಟು ಧೇನು ಪಾಲಕ ದಿವಿಜವಂದ್ಯನ 3
--------------
ಹೆನ್ನೆರಂಗದಾಸರು
ಭಾಗೀರಥೀದೇವಿ ಭಯನಿವಾರಣೆ ಗಂಗೆ |ಸಾಗರನ ನಿಜರಾಣಿ ಸಕಲಕಲ್ಯಾಣಿ ಪಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |ಬ್ರಹ್ಮಕರ ಪಾತ್ರೆಯಲಿನಿಂದುಬಂದೆ ||ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |ಬೊಮ್ಮಾಂಡವನು ಪಾವನಮಾಡ ಬಂದೆ 1ದೇವಿ ನೀ ವಿಷ್ಣುಪಾದೋದಕವೆಂದೆನಿಸಿ |ದೇವತೆಗಳಿಗೆಲ್ಲ ಅಧಿಕವಾದೆ ||ದೇವರೆಲ್ಲರು ನೆರೆದು ತಲೆಬಾಗಿದರು ಮಹಾ-|ದೇವನ ಶಿರದಿಂದ ಧರೆಗಿಳಿದು ಬಂದೆ 2ಜಹ್ನವಿನುದರದಿ ಪೂಕ್ಕ ಕಾರಣದಿಂದ |ಜಾಹ್ನವಿಯೆಂದು ನೀನೆನಿನೆಕೊಂಡೆ ||ಮುನ್ನ ನರಕಕ್ಕಿಳಿದ ಸಗರರಾಯನ ವಂಶ- |ವನ್ನು ಪಾವನಮಾಡಿ ಪೊರೆಯಲು ಬಂದೆ 3ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ |ದಿಟ್ಟಿಸಲು ಮೂರುಜನ್ಮದಿ ಮುಕುತಿಯು ||ಮುಟ್ಟಿ ಮಾಡಿದರೊಂದು ಸ್ನಾನಮಾತ್ರದಲಿ |ಸುಟ್ಟು ಹೋಹುದು ಸಾಸಿರಜನ್ಮ ಪಾಪ 4ಹಲವು ಪರಿಯಲಿ ಹರಿಯ ಸ್ಮರಣೆಯಿಲ್ಲದೆ ಭವ-|ದೊಳಗೆ ಸಿಲುಕಿ ಕಡುನೊಂದೆ ನಾನು ||ಹಲವು ಮಾತೇಕೆ ಶ್ರೀ ಪುರಂದರವಿಠಲನ |ಚೆಲುವಪದದಿಂದಿಳಿದು ಒಲಿದು ದಯೆ ಮಾಡೆ 5
--------------
ಪುರಂದರದಾಸರು
ಸರಿಸರಿದೋಡುತಿವೆಲವತ್ರುಟಿಗಳುತಿರುಗದಲಿಟ್ಟಡಿಯಹರಿಗುರು ಪ್ರೀತಿಯ ದೊರಕಿಸು ಪ್ರಾಣಿಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.ಪರದಾರ ಪರಸಿರಿ ಪರನಿಂದೆ ನಿರುತದಿಚಿರರತಿ ಬೆರತ್ಯಲ್ಲೊಪರಉಪಕಾರ ದಾರಿಯರಿಯದೆ ಬರಿ ಒಣಗರುವಿನಲಿರುವ್ಯಲ್ಲೊನರಹರಿ ಚರಣವಾದರಿಸದೆ ಸ್ಮರಿಸದೆನರರನುಸರಿಪ್ಯಲ್ಲೊಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ 1ಸುಖಗಳ ಕಕುಲತೆಗಖಿಳ ಸಾಧಕನಾದೆಭಕುತಿಗಳಿಕೆ ತೊರೆದುಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿರಕ್ತಿಸರಕುದೋರೈಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕಸುಖತೀರ್ಥವಾಕುದೋರೈಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆಮುಕುತಿ ಹೊಂದಿಕೆ ತೋರೈ ಪ್ರಾಣಿ 2ಅಶನದುವ್ರ್ಯಸನಕೆ ನಿಶಿದಿನ ವಶನಾದೆಶ್ರೀಶ ಭೃತ್ಯೆನಿಸಿಕೊಳ್ಳೊಹುಸಿಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆದಶವ ವರಿಸಿಕೊಳ್ಳೈವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀನ್ಯಶಸ ಕೂಡಿಸಿಕೊಳ್ಳೈಹಸಿತೃಷೆಗಸಣೆಗೆ ಬೇಸರದೆ ಪ್ರಸನ್ವೆಂಕಟೇಶನ ಒಲಿಸಿಕೊಳ್ಳೈ ಪ್ರಾಣಿ 3
--------------
ಪ್ರಸನ್ನವೆಂಕಟದಾಸರು