ಮದನ ಗೋಪಾಲಗೊ
ಸುದತಿ ಯಶೋದೆ ನಂದ ಕಂದನಿಗೊ ಪ
ಶ್ರೀಶ ಶ್ರೀ ಕೇಶವ ನಾರಾಯಣನಿಗೊ
ಮಾಧವ ಗೋವಿಂದ ಹರಿಗೊ
ಸಾಸಿರ ನಾಮದ ವಿಷ್ಣು ಮಧುಸೂದನಗೊ
ಭೂಸುರ ಪಾಲ ತ್ರಿವಿಕ್ರಮ ವಾಮ£ಗೊ 1
ಮುದ್ದು ಮೂರುತಿ ಶ್ರೀಧರ ಹೃಷಿಕೇಶಗೊ
ಪದ್ಮನಾಭ ದಾಮೋದರಗೊ
ಶುದ್ಧಮನದಿ ಸಂಕರ್ಷಣ ವಾಸುದೇವಗೊ
ಅನಿರುದ್ಧ ಮೂರುತಿಗೊ 2
ಹರುಷದಿ ನಾರಸಿಂಹ ಅಚ್ಚುತಗೊ
ಸರಸಿಜನಯನ ಜನಾರ್ದನುಪೇಂದ್ರಗೊ
ಸಿರಿ ಹರಿ ಕೃಷ್ಣಗೊ 3
ಶಂಖು ಚಕ್ರ ಗದಾ ಪದ್ಮವು ಧರಿಸಿದ
ವೆಂಕಟರಮಣಗೊ ಶ್ರೀಹರಿಗೊ
ಪಂಕಜನಯನ ಶ್ರೀರಂಗನಾಥನಿಗೊ
ಬಿಂಕದಿ ಪಾಂಡುರಂಗ ವಿಠ್ಠಲಗೊ 4
ಘನಮಹಿಮ ಮನು ಕಂಚಿ ವರದರಾಜನಿಗೊ
ಇನಕುಲ ತಿಲಕ ಶ್ರೀರಾಮಚಂದ್ರನಿಗೊ
ವನಿತೆಯರೊಡಗೂಡಿ ಮೆರೆವ ಕೃಷ್ಣನಿಗೊ
ವನಜಾಕ್ಷ ಪಶ್ಚಿಮ ರಂಗಧಾಮನಿಗೊ 5
ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ
ಅಗಣಿತ ಮಹಿಮಗೊ ಆಶ್ಚರ್ಯಗೊ
ಖಗವಾಹನ ಕರಿರಾಜ ವರದಗೊ
ನಿತ್ಯ ತೃಪ್ತನಿಗೊ 6
ಶ್ರದ್ಧೆಯಿಂದಲಿ ತನ್ನ ಭಜಿಪ ಭಕ್ತರ ಕಾಯ್ವ
ರೌದ್ರಿನಾಮ ಸಂವತ್ಸರದಿ
ಮುದ್ದು ಮೂರುತಿ ಕಮಲನಾಭ ವಿಠ್ಠಲನಿಗೆಪದ್ಮಾಕ್ಷಿ ವನಮಾಲೆ ಹಾಕಿದೆಯಾ 7