ಶರತ್ಕಾಲ ಶಶಿ|
ಪೂರ್ಣನಿಭಾನನೆ|
ಜಗದಂಬ, ಜಗದಂಬ ಪ
ನಿರುತವು ನಿನ್ನಯ|
ಚರಣವ ಸ್ಮರಿಸುವ|
ಶರಣಾಮರತರು|
ಕರುಣಿ ಭವಾನಿ|
ಜಗದಂಬ, ಜಗದಂಬ|| 1
ನೀ ಕರುಣಿಸದೆ ನಿ|
ರಾಕರಿಸಲು ಎನ್ನ|
ಸಾಕುವರಾರು ಪ|
ರಾತ್ಪರ ಜನನಿ|
ಜಗದಂಬ, ಜಗದಂಬ||2
ಶರಣಾಗತರನು|
ಪೊರೆವಳೆಂಬ ಘನ|
ಬಿರುದನಾಂತ ಶ್ರೀ|
ಪರಮೇಶ್ವರಿಯೆ|
ಜಗದಂಬ, ಜಗದಂಬ||3
ಪಂಕಜಾಕ್ಷಿ ಅಖಿ|
ಲಾಂಕಮಹಿಮೆ ತವ|
ಕಿಂಕರರನು ಪೊರೆ|
ಶಂಕರಿ ದೇವಿ|
ಜಗದಂಬ, ಜಗದಂಬ||4
ಜಟಾಮಕುಟಸುರ|
ತಟನೀಧರಸತಿ|
ನಿಟಿಲಾಂಬಕಿ ಶ್ರೀ|
ಕಟಿಲಪುರೇಶ್ವರಿ|
ಜಗದಂಬ, ಜಗದಂಬ||5