ಒಟ್ಟು 105 ಕಡೆಗಳಲ್ಲಿ , 30 ದಾಸರು , 92 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಸಿಂಹ ಶ್ರೀ ನಾರಸಿಂಹ ಪಾರುಗಾಣಿಸಿ ದುರಿತೌಘಹರಿಸಿ ಕಾಯೊ ಪ ನರಹರಿ ಜ್ವರಹರ ಘೋರವ್ಯಾಧಿಯ ಪರಿಹಾರಗೈಸಿ ಪರಿಪಾಲಿಸಬೇಕಯ್ಯಾ ಅ.ಪ ಘುಡು ಘುಡಿಸುತ ಪಲ್ಕಡಿದು ಚೆಂಡಾಡುತ ಮೃಡನೆ ಪರನು ಎಂದು ನುಡಿದ ಕಶಿಪುವಿನ ಒಡನೆ ಕಂಭದಿ ಬಂದು ಒಡಲ ಬಗೆದು ನಿನ್ನ ಧೃಡ ಭಕುತಗೆ ಬಂದೆಡರ ಬಿಡಿಸಿದೆ1 ತುಷ್ಟಿಪಡಿಸೊ ಪರಮೇಷ್ಟಿಯ ಪಿತ ನಿನ್ನ ದೃಷ್ಟಿಯಿಂದ ಅನಿಷ್ಟ ನಿವಾರಣ ಅಷ್ಟಕರ್ತೃತ್ವದ ಪ್ರಭೋಕಷ್ಟಹರಿಸಿಭಕ್ತ- ರಿಷ್ಟ ಪಾಲಿಪ ಸರ್ವಸೃಷ್ಟಿಗೊಡೆಯ ದೇವ2 ಸಂಕಟ ಬಿಡಿಸೊ ಭವಸಂಕಟದಿಂದ ಶ್ರೀ ವೇಂಕಟೇಶಾತ್ಮಕ ಭೀಕರ ರೂಪ ಶಂಕರಾಂತರ್ಗತ ಸಂಕರುಷಣ ಮೂರ್ತೇ ಮಂಕುಹರಿಸಿ ಪಾದಪಂಕಜ ತೋರಯ್ಯ 3
--------------
ಉರಗಾದ್ರಿವಾಸವಿಠಲದಾಸರು
ನಿಂತ ಕಾರಣ ಪೇಳು ಹಣುಮಂತರಾಯಾ ಪ ಶಾಂತನಾಗಿ ವಿಶ್ರಾಂತಿಯಗೋಸುಗಕಂತುಪಿತನ ಮಹಮಂತ್ರವ ಜಪಿಸುತಅ.ಪ. ದಾಶರಥಿಯ ದೂತಾ ದಶಮುಖಪುರವಸ್ವಾಹೇಶಗೆ ದಾತಾ ಗುರುತು ಕೊಟ್ಟು ದಾತನ ಎದುರಿಗೆ ಬಂದು1 ಶಂಖ ಕುಲದಲಿ ಜನಿಸಿ ನಿಃಶಂಖದಿ ಖಳರನು ವರಿಸಿ ಶಂಕರಾದಿನುತ ಪದ ಶಂಬಧರನ ಕಾಜಲ್ಕದಿ ಸ್ಮರಿಸುತ 2 ಮೂರನೇ ರೂಪವ ಧರಿಸಿ ಧರೆಯೊಳು ಬಂದು ಅವತರಿಸಿ ಬೋಧಿಸಿ ಮಾರ್ಗವ ತೋರಿಸಿ ತಂದೆವರದಗೋಪಾಲವಿಠ್ಠಲನಸೇವಿಸಿ 3
--------------
ತಂದೆವರದಗೋಪಾಲವಿಠಲರು
ನಿರವದ್ಯ ಪ ಸದ್ಗುಣಪೂರ್ಣ ನೀನೇನೊ ಮೂಢ ಅ.ಪ ಬ್ರಹ್ಮಜಿe್ಞÁಸದ ಕ್ರಮವ | ನಿರ- ಸಮ್ಯಕ್ ಶೋಧಿಸದೇ ಅಹಂ ಬ್ರಹ್ಮಾಸ್ಮಿ ಎಂಬುವ ಆಮ್ನಾಯ ವಾಕ್ಯಕೆ ಅರ್ಥವ ತಿಳಿಯದೆ 1 ಕಾಕುಮಾಡುತಲರ್ಥ ಪೇಳ್ವುದಧರ್ಮ ಏಕವಾವುದು ಇನ್ನು ಏಕವಾವುದು ಎಂದು ನೀಕಳವಳಿಸುತ ನಿಜತತ್ವವರಿಯದೆ 2 ಆತ್ಮನಾತ್ಮಗಳೆಂದರೇನೊ | ಪರ- ಮಾತ್ಮ ಜೀವಾತ್ಮರೊ ಜೀವದೇಹಗಳೊ ಸ್ವಾತ್ಮಾನುಸಂಧಾನದಿಂದಲಿ ನೋಡ- ಧ್ಯಾತ್ಮ ವಿದ್ಯಾಭ್ಯಾಸ ಮಾಡದೆ ಬಾಯೊಳು 3 ರವಿ ಗಣಪತಿ ಶಿವ ಶಕ್ತಿ | ಭೈ- ರವ ವಿಷ್ಣು ಎಂಬುವ ಷಣ್ಮತಯುಕ್ತಿ ಎವೆ ಮಾತ್ರ ಸ್ವಾತಂತ್ರ್ಯವಿಲ್ಲ ಕೇಳ್ ಸರ್ವಶ- ಬ್ದವುಯಾವನಲ್ಲಿ ಸಮನ್ವಯವರಿಯದೆ 4 ಜೀವ ಜೀವರಿಗೆಲ್ಲ ಭೇದ | ವಿದುಸ್ವ ಭಾವವಾಗಿರುವುದು ಯಾತಕೀವಾದ ಜೀವರೂಪದಿ ಸರ್ವಜೀವರೊಳಗಿದ್ದು ದೇವಸಕಲ ಕರ್ಮಗಳ ಮಾಡಿಸುವನು 5 ಕರ್ಮವೆಂಬುದು ಅವನಿಗೆ ಲೋಪವಿಲ್ಲ ನಿರ್ಮಲ ಸಚ್ಚಿದಾನಂದ ಬ್ರಹ್ಮ ಎಂದು ನೀನೆ ಪೇಳುವೆಯಲ್ಲ ನಿನಗೆ ನಿಜವಿಲ್ಲ 6 ಸೂರ್ಯ | ಚಂದ್ರ ಕಿನ್ನರ ಸಿದ್ಧ ಸಾಧ್ಯ ನರತಿರ್ಯಕ್ ಪಶುಪಕ್ಷಿ ಕೀಟಾದಿ ನಾಮಗಳು ಪರಮಾತ್ಮನಲಿ ಸಮನ್ವಯವರಿಯದೆ 7 ಮಾಯಾ ಪ್ರಪಂಚವಿದೆನ್ನುತ | ನಿ- ಮಾಯೆಯಧಿಷ್ಠಾನದೊಳನಂತ ಜೀವನಿ- ಕಾಯವು ಗುಣಗಳಿರುವ ಮರ್ಮವರಿಯದೆ 8 ಸಾರ ಭೇದವಬದ್ಧ ಅಭೇದ ನಿಶ್ಚಯವೆಂದು ವಾದಿಸುವುದಕೇನಾಧಾರ ನಿನಗುಂಟೊ 9 ಜೀವಬ್ರಹ್ಮೈಕ್ಯವೆ ಮುಕ್ತಿ | ವೇ- ದಾವಳಿಗಳ ಪರಮಾರ್ಥದ ಉಕ್ತಿ ಜೀವನಿಂದೇನಾಗುವುದೆಂಬುದರಿಯದೆ 10 ದ್ವಾಸುಪರ್ಣವೆಂಬುವುದಕೆ | ವಿಷ- ಯಾಸಕ್ತ ಜೀವ ಆತ್ಮನು ಸಾಕ್ಷಿಯದಕೆ ನೀಸರ್ವೋತ್ತಮನಾದರೆ ಇನ್ನು ಮಹದಾದಿ ಈ ಸೃಷ್ಟಿ ಸ್ಥಿತಿಲಯವೇತಕೆ ತಿಳಿ ಜೋಕೆ 11 ಅಂಧ ಪರಂಪರವಾದ | ಬಿಟ್ಟು ಚಂದಾಗಿ ಪರಿಶೋಧಿಸು ಭÉೀದಾಭÉೀದ ತಂದೆತಾಯಿಗು ಮಗನಿಗೂ ಎಷ್ಟು ಭÉೀದ ಆ- ಪರಿ ತಿಳಿದರೆ ನಿರ್ವಾದ 12 ಪೂರ್ವೋತ್ತರ ವಿರೋಧವಿಲ್ಲ | ದಂತೆ ಸರ್ವಶೃತಿಗಳರ್ಥ ತಿಳಿದು ನುಡಿಸೊಲ್ಲ ಗರ್ವವೇತಕೆ ನಿನಗಿದರೊಳೇನಿಲ್ಲ ನೀ ಸರ್ವಜ್ಞನೊ ಕಿಂಚಜ್ಞನೊ ನೋಡು ದೃಢಮಾಡು 13 ಯೋಗ ಒದಗಿದಾಗ ಒಂದೆ ಎಂಬುವರೆ ಈಗೇನು ಆಗೇನು ಇಲ್ಲೇನು ಉಂಟೆ ನಾ- ವಾಗಲು ಜೀವರಿಗೆ ಹರಿಕರ್ತನಾಗಿರೆ 14 ಕಾಲಕರ್ಮ ಸ್ವಭಾವ ಜೀವ | ಹರಿಯ ಆಲಸ್ಯ ಬಿಟ್ಟು ಅವನಿಗೆ ದಾಸನಾಗದೆ 15 ಆಲೋಚಿಸಿದರರ್ಥ ನಿಜವಾಗಿ ತಿಳಿಯದೆ 16 e್ಞÁನವೆ ನಾನು ಕರ್ಮವೆ ಮಿಥ್ಯವೆಂದು ನೀನಾಡುವುದಕೇನು ನೆಲೆ ಮೂಲ ಯಾವುದು ಸ್ವಾನುಭವವೋ ಶಾಸ್ತ್ರವೊ ಮನಕೆ ತೋರಿದ್ದೊ 17 ಹೋಮ ಜಪವು ಸ್ನಾನ ದಾನ | ನಿತ್ಯ ಭೃತ್ಯ ನ್ಯಾಯವರಿಯದವನು ಶುದ್ಧ ತತ್ವಾರ್ಥಿ ಎನಿಸುವನೆ 18 ಕರ್ತನು ನೀನೆಂದು ಭೃತ್ಯನು ನಾನೆಂದು ತೀರ್ಥಪಾದನ ದಿನದಿನದಿ ಸಂಸ್ತುತಿಸದೆ 19 ಪಾದ ವನಜಕೊಪ್ಪಿಸಿ ಸಂಸಾರದ ಕರಕರೆಯ ಮನದಿ ಲೆಕ್ಕಿಸದೆ ಚಿಂತನಗೈದು ಸರ್ವತ್ರ ಘನಮಹಿಮನ ದಿವ್ಯಗುಣರಾಶಿ ಪೊಗಳದೆ 20 ಹೊರಗಣ್ಣ ಮುಚ್ಚಿ ಮೋದದಲಿ | ಒಳ- ಗಿರುವಾಧಾರಾದಿ ಚಕ್ರಗಳ ಸ್ಥಾನದಲಿ ಸರಸಿಜಭವ ಶಂಕರಾದಿ ಸುರರ ನೋಡಿ ತರತಮವಾಗಿ ಮುಂದಿನ ಪರಿಯ ತಿಳಿಯದೆ 21 ಮಂಗಳ ಮೂರ್ತಿಯ ನೋಡಿ ಕೊಂಡಾಡಿ ಅ- ನಂಗಗೆ ಸಿಲುಕದೆ ಅರ್ಥಿಯ ಪೊಂದದೆ 22 ಎಪ್ಪತ್ತೆರಡು ಸಹಸ್ರನಾಡಿ | ಗಳೊ- ಳೊಪ್ಪುವ ಭಗವದ್ರೂಪಗಳನು ನೋಡಿ ಅಪ್ಪ ನೀನೆಂದು ಭಕ್ತಿಯಲಿ ಕೊಂಡಾಡಿ ಪುನ- ರಾವರ್ತಿರಹಿತ ಶಾಶ್ವತ ಸುಖಿಯಾಗನೆ 23 ವಿಪರೀತ ಮತಿಪುಟ್ಟದಂತೆ | ಧ್ಯಾನ- ಗುಪಿತವಾಗಿರುತ ಜನರಿಗೆ ಹುಚ್ಚನಂತೆ ಅಪವರ್ಗಾಪೇಕ್ಷಯಿಂ ನಿಷ್ಕಾಮಿಯಾಗದೆ24 ಆಪಾದಮಸ್ತಕ ದೇಹ | ದಿಸು ರಾಪದಜನಕ ಶ್ರೀಗುರುರಾಮವಿಠಲ ವ್ಯಾಪಾರವೆಲ್ಲ ಮಾಡಿಸುವನೆಂದರಿತರೆ ಸಾಫಲ್ಯನಾಗಿ ಜೀವನು ಧನ್ಯನಾಗುವ 25
--------------
ಗುರುರಾಮವಿಠಲ
ನೀವೆಲ್ಲ ಪರಮಾತ್ಮನೆ ಏಳಿ ಸಾರುವೆ ಈ ನುಡಿ ಕೇಳಿ ಪ ತುಂಬಿಹ ಜಗವನು ನಿಮ್ಮೊಳಗಿರನೇ ಅಲೋಚಿಸಿರೀನುಡಿಯಾ ನಂಬಿರಿ ಶ್ರುತಿಶಿರ ಸಾರಿತು ಪರಮನು ಹೃದಯದ ಗುಹೆಯೊಳಗಿರುವಾ ಕಾಂಬನು ಗುಹೆಗಳ ಕಳೆದುಳಿದಾ ನಿಜ ಸಂಪೂರ್ಣಪದವೇ ಪರಾನಂದಾ 1 ಸ್ಥೂಲದೇಹಮೊದಲಾಗಿಹ ಗುಹೆಗಳ ನೈದನು ಕಳೆಯಲು ಉಳಿವಾ ಮೂಲರೂಪ ಪರಮಾತ್ಮನೆ ತಾನೆಂ ದರಿಯುತ ತಿಳಿಯಿರಿ ನಿಜವಾ ತಿಳಿಯಿರಿ ನಿರುತದಿ ನೀವೇ ಆ ಪದ ಮಾಯಾ ಶಂಕರಾರ್ಯ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮ ಕಾರುಣ್ಯ ಗುರು ಕರುಣಿಸೆನಗ್ಹರಿ ಪದವ ಶರಣೆಂದು ನಮಿಪೆ ನಿಮಗೆ ಪ. ಹರಿಯ ದಾಸತ್ವದಲಿ ವರದೀಕ್ಷೆಯನೆ ಕೊಟ್ಟು ಕರುಣಿಸಿ ಕೃಪೆಗೈದಿರಿ ಗುರುವೆ ಅ.ಪ. ಅಂಕಿತವ ಮೊದಲಿತ್ತು ಹೃದಯಾಂಕದಲಿ ನಿಲಸಿ ಮಂಕುಬುದ್ಧಿಯ ತೊಲಗಿಸಿ ಶಂಖ ಚಕ್ರಾಂಕಿತನ ಪದಕಮಲವನು ಮನ ಪಂಕಜದೊಳಗೆ ತೋರಿ ಶಂಕರಾರ್ಚಿತನ ಕೃಪೆ ಎನ್ನೊಳಾಗಲಿ ಎಂದು ಶಂಕಿಸದೆ ವರವಿತ್ತಿರಿ ಗುರುವೆ 1 ಶ್ರೀನಿವಾಸನು ನಿಮ್ಮೊಳ್ ಸಾನುರಾಗದಿ ನೆಲಸಿ ತಾನಿತ್ತ ದಾಸತ್ವವ ಏನೆಂಬೆ ಈಗಭಿಮಾನವ ತೊರೆ ಎನುತ ತಾ ನುಡಿಸುತಿಹನು ನಿಮ್ಮೊಳ್ ಮಾನಾಭಿಮಾನ ಹರಿ ಗುರುವಶವಾಗಿರಲು ನಾನಳುಕಲಿದಕೇತಕೆ ಗುರುವೆ 2 ಸ್ವಪ್ನದಲಿ ದಾಸತ್ವ ಸಿದ್ಧಿಸಲಿ ಎಂದೆನುವ ಅಪ್ರತಿಮ ನುಡಿ ಕೇಳಿದೆ ಕ್ಷಿಪ್ರದಿಂದಲಿ ಕರುಣಿಸಿದಿರೆನಗಾಗಿದನಿನ್ನು ತಪ್ತವಾಯಿತು ಭವದ ದುರಿತ ಆಪ್ತಗುರು ನಿಮ್ಮಂಥ ಮಹಿಮರನು ನಾ ಕಾಣೆ ಗುಪ್ತದಲಿ ಜಗದಿ ಮೆರೆವ ಗುರುವೆ 3 ಇತ್ತಿರೆನಗೊಂದೊಂದೆ ದಾಸತ್ವ ಸಾಮಗ್ರಿ ಅತ್ಯಧಿಕ ಕರುಣೆಯಿಂದ ನಿತ್ಯವಾಗಿರಲಿ ಹರಿದಾಸತ್ವ ಇಹ ಪರದಿ ಸತ್ಯವಂತರ ಕೃಪೆಯಲಿ ನಿತ್ಯದಲಿ ನೀತ ಗುರು ನಿಮ್ಮಿಂದ ನಿಜ ರೂಪ ವ್ಯಕ್ತವಾಗಲಿ ಜ್ಞಾನದೀ ಗುರುವೆ 4 ಸಿರಿ ತಂದೆ ಮುದ್ದುಮೋಹನದಾಸರಾಯ ಗುರುವೆ ನಿಮ್ಮ ಕರುಣದಿ ಪರಿ ಪರಿ ಭವಪಾಶ ದುರಿತಗಳು ದೂರಾದವು ಪರಮ ಸಾತ್ವಿಕರೆ ಸಿರಿವರನ ಪದ ಭಜಿಪಂಥ ವರದೇವತಾಂಶರೆನಿಪ ಗುರುವೆ 5 ಮಂದರಿಗೆ ಬಹು ಮಲಿನರಂದದಲಿ ತೋರುತ ಕಂದರ್ಪಪಿತನ ಸ್ಮರಿಪ ಒಂದೊಂದು ವ್ಯಾಪಾರ ಅರಿಯಲಳವಲ್ಲಿನ್ನು ಮಂದಮತಿಯಾದ ಎನಗೆ ಬಂದು ಭೂಲೋಕದಲಿ ಸಜ್ಜನರನುದ್ಧರಿಪ ತಂದೆ ನಿಮ್ಮರಿವರ್ಯಾರೊ ಗುರುವೆ 6 ಅರಿಯೆ ಅನ್ಯರನಿನ್ನು ಶ್ರೀ ಗುರುವೆ ಕರುಣಿಸಿರಿ ವರe್ಞÁನ ಸುಧೆಯನಿತ್ತು ವರಶೇಷಶಯನನ ನಿರುತ ಸೇವಿಸುವಂಥ ಪರಮಭಾಗ್ಯವ ಕರುಣಿಸಿ ಸಿರಿವರ ಗೋಪಾಲಕೃಷ್ಣವಿಠ್ಠಲನ ರೂಪ ತ್ವರಿತದಿಂ ತೋರಿ ಪೊರೆಯೊ ಗುರುವೆ 7
--------------
ಅಂಬಾಬಾಯಿ
ಪರಮಾತ್ಮ ದಿವ್ಯಚರಣಾ ಭಜಿಸುವೆವು ಜÁ್ಞನ ಪೂರ್ಣ ನೀ ತೋರ್ಪುದಯ್ಯ ಕರುಣಾ ತಾಪ ಹರಣಾ ಆನಂದ ರೂಪ ತಾಣಾ ನಾರಾಯಣಾತ್ಮಪೂರ್ಣ ನಿನ್ನಿರವೇ ಜಗವಿದೆಲ್ಲ ನಿನ್ನರಿವೇ ಜೀವರೆಲ್ಲಾ ನಿನ್ನಿಂದೆ ಸುಖವಿದೆಲ್ಲಾ ನೀನೆ ಇದೆಲ್ಲಾ ದೇವಾ ನೀ ಸತ್ಯ ನಿರ್ವಿಕಾರ ನೀನಾತ್ಮರೂಪಸಾರಾ ನೀ ಪರಮ ಮೋಕ್ಷತಾಣಾ ಮರೆತಿರಲು ಜೀವ ನಿನ್ನ ದೊರೆಯುವುದೆ ಶಾಂತಿ ನಿನ್ನ ಪರಿತಾ¥ಬಿಡುತ ಮುನ್ನಾ ತಿರುಗುವನೋ ಜನ್ಮ ಜನ್ಮ ಗುರು ಶಂಕರಾರ್ಯ ನಿನ್ನ ಶರಣುಹುದೆ ಶಾಂತಿತಾಣ ನೀ ಸರ್ವರಾತ್ಮಪೂರ್ಣ
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮಾನಂದ ಪರಿಪೂರ್ಣಾ ನೀ ಗುರುವರಾ ಜÁ್ಞನಾದಾತಾ ಮಾನಿತಾ ನೀ ದೇಹಾದಿಸಂಘಾತವಾ ಮೀರಿರ್ದ ಸ್ವರೂಪವಾ ಮಹಾಗೂಢವಾ ಬೋಧಿಸೀ ಮುಕುತಿ ನೀಡುತಿರುವಾ ನೀ ಸ್ವರೂಪಾಜÁ್ಞನಾ ಮಹಾಸಾಧನಾ ಪೇಳಿದ ನೀನೇ ದಯಾಘನಾ ಮಾನಿತನೇ ಪರಾತ್ಪರಾ ನಿರಾಮಯಾ ನೀನೇ ಸ್ವರೂಪಾತ್ಮನೈ ನೀನೇ ನಾನಾದೆ ದೇವಾಗುರುವೇ ಶಂಕರಾರ್ಯ
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಸುಖಕರಾ ಗುರುಬೋಧಸಾರಾ ಮರಣಾ ಜರಾ ದುರಿತಾದಿ ದೂರಾ ಪ ಜೀವಭಾವವಾ ಸಟೆಯಾಗಿ ಗೈವ ದೇವಭಾವನಾ ಬಗೆಸಿನಿಲಿಸುವಾ ಸಾವಿನಂಜಿಕೆ ದೂರಾಗಿ ಮಾಳ್ಪ ಜೀವಂತಮುಕುತಿ ಕರದೀಯುವಾ 1 ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ ದೃಶ್ಯವಸ್ತುವಿಂದ ಬೇರೆನಿಸುವಾ ಶಾಶ್ವತಾದ ಆ ಪದ ತೋರಿ ಮನದ ಕಶ್ಮಲವನು ಕಳೆವ ಭವತಾರಕಾ 2 ಭೇದಭಾವವಾ ಛೇದಿಸುತ ಮನದಿ ಬೋಧನಾರಾಯಣನ ಕೃಪೆ ಪೊಂದಿದಾ ಬೋಧರೂಪ ಗುರುವು ಪೇಳಿರ್ದ ಬೋಧ ಸಾಧು ಶಂಕರಾರ್ಯ ತಾನೆನ್ನುವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಪ್ರಾಣಾಂತರ್ಗತಪ್ರಾಣ ಅಣು ರೇಣುಚರಾಚರಪೂರ್ಣ ಪ. ಕಾಣೆನು ನಿನ್ನ ಸಮಾನ ಮಾನದ ಪು- ರಾಣಪುರುಷ ಸುತ್ರಾಣ ವರೇಣ್ಯಅ.ಪ. ಪಂಕಜನಾಭ ಶ್ರೀವೆಂಕಟರಮಣನೆ ಕಿಂಕರಜನಮನಃಪ್ರೇಮದನೆ ಶಂಕರಾದಿ ಸುರಸಂಕುಲ ಸೇವಿತ ಶಂಖ ಸುದರ್ಶನ ಗದಾಬ್ಜಹಸ್ತನೆ 1 ಪಾಪಿಯು ನಾ ನೀ ಪಾಪಹ ಪಾವನ ರೂಪ ಪರಾತ್ಪರ ಗೋಪಾಲ ಕಾಪಾಡೆಮ್ಮ ಸಮೀಪಗನಾಗಿ ಜ- ಯಾಪತಿ ಗೋಪತಿ ಶ್ರೀಪತಿ ನೀ ಗತಿ 2 ಚಟುಳ ನೇತ್ರಾವತಿತಟ ನಿಕಟ ಪ್ರಕಟ ವಟಪುರವರ ವೆಂಕಟಧಾಮ ವಟುವಾಮನ ಲಕ್ಷ್ಮೀನಾರಾಯಣ ಪಟುವೀರ್ಯ ತಮಃಪಟಲನಿವಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಂದಿದ್ದನೆ ರಂಗ ಬಂದಿದ್ದನೆ ಕೃಷ್ಣ ಬಂದಿದ್ದನೆ ಪ. ಬಂದಿದ್ದನೆ ನಮ್ಮ ಮಂದಿರದೊಳು ಬೆಳ ದಿಂಗಳ ತೆರದೊಳು ಬಂದಿದ್ದನೆ ಅ.ಪ. ಗೆಜ್ಜೆ ಕಾಲ್ಕಡಗ ಸಜ್ಜಿನಿಂದಿಟ್ಟು ಕರ ಕ್ಷಿತಿ ತಳ ವಂದಿತ ಸತಿ ಪದುಮಾವತಿ ಲಕುಮಿ ಸಹಿತ ಕೃಷ್ಣ 1 ರವಿಯ ಕಾಂತಿ ಕೋಟಿ ಪ್ರಭೆ ಕಿರೀಟವು ವರದ ಮಾಧವನು2 ಚತುರ ಹಸ್ತದಿ ಶಂಖ ಚಕ್ರಗದಾ ಪದ್ಮ ಸತಿ ತುಳಸಿಯ ಮಾಲಧರನೆ ಜತೆ ತನ್ನ ಭಕ್ತರ ಹಿತದ ಪೂಜೆಯಗೊಂಡು ವಿತತ ವೈಭವದಿಂದ 3 ವರಪ್ರದ ವೆಂಕಟ ವರಗಳ ನೀಡುತ ತನ್ನ ಚರಣ ತೋರುತ ಭಕ್ತರಿಗೆ ಕೇಸರಿ ತೀರ್ಥವ ಕರುಣದಿ ತೋರುತ ಕರಿವರದ ಕೃಷ್ಣ 4 ಪಂಚಾಮೃತದಭಿಷೇಕವ ಕಂಡೆನೆ ಎನ್ನ ಸಂಚಿತಾರ್ಥದ ಪುಣ್ಯದ ಫಲದಿ ಮಿಂಚಿದ ಪಾಪವ ಕಳೆದರತಿಹರುಷದಿ ಹಂಚಿ ವರದ ಹಸ್ತ ಕಂಚಿ ವರದ ತೋರೆ ಬಂದಿದ್ದನೆ 5 ಕಂಕಣ ಕೈಯೊಳು ಧರಿಸಿಹನೆ ದಿವ್ಯ ಹೇಮ ಶೋಭಿತನೆ ಕಿಂಕರ ವರದ ಮಾಂಗಲ್ಯ ಕಟ್ಟಿದ ಸತಿ ಶಂಕರಾದಿ ಸ್ತುತ ವೆಂಕಟರಮಣನು 6 ಸುರವರÀ ವಂದ್ಯಗೆ ಆರತಿ ಎತ್ತಲು ಕೇಸರಿ ತೀರ್ಥವ ನೀಡಿದನೆ ವರ ಪ್ರಸಾದದ ಮಹಿಮೆಯ ತೋರುತ ಶರಧಿ ಗಂಭೀರನು 7 ಉರುಟಣಿಯ ಮಾಡಿದ ವರಸತಿ ಜತೆಯಲಿ ವರ ಶೇಷಾಚಲನು ತಾನೆ ಹರುಷವ ಬೀರುತ ವರ ಶೇಷನ ಮೇಲೆ ಮೆರೆವ ಶಯನಗೊಂಡು ಹರುಷದಿ 8 ಗಂಧ ಪುಷ್ಪ ತಾಂಬೂಲವಗೊಂಡನೆ ತಂಡ ತಂಡ ಭಕ್ತರ ವಡೆಯ ಉದ್ದಂಡ ಭಕ್ತರಿಗೆ ಉದ್ದಂಡ ವೆಂಕಟ 9 ನಾಟಕಧಾರಿ ತಾ ವಧೂಟಿ ಭೂಪ ಲಕ್ಷ್ಮಿ ಸಹ ನೋಟಕರಿಗೆ ಆನಂದ ತೋರಿದನೆ ಧಾಟಿಧಾಟಿ ರಾಗದಿ ಭಕ್ತರು ಸ್ತುತಿಸೆ ಸಾಟಿಯಿಲ್ಲದ ವೈಭವವ ತೋರುತ ಕೃಷ್ಣ 10 ಕರವ ಮುಗಿದು ಸ್ತೋತ್ರವ ಮಾಡಿದೆನೆ ಎನ್ನ ಕರೆದಾದರಿಸು ಹರಿಗೆ ನಿರುತ ಎಮ್ಮನು ಹಯನೇರಿದನೆ ಭಯಕೃದ್ಭಯ ಹಾರಿ 11
--------------
ಸರಸ್ವತಿ ಬಾಯಿ
ಬಾರೆ ಸಖಿ ವಾರಿಜ ಮುಖಿ ಬಾರೆ ಬಾರೆ ಸಖಿ ಬಾರೆ ಕೋಪಿಸೋರೆ ಹೀಗೆ ಯಾರುಪದೇಶವುಮುರಾರಿಯ ಮುಖ್ಯ ಬಲರಾಮನ ಸಖಿಯೆಬಾರೆ ಬಾರೆ ವಾರಿಜ ಮುಖಿಯೆ ಪ. ಪುಟ್ಟ ಸುಭದ್ರಾ ನಿನಗೆ ಸಿಟ್ಯಾಕ ಒದಗಿತಇಟ್ಟ ಮುದ್ರಿಗಳು ತಡವಾಗಿಇಟ್ಟ ಮುದ್ರಿಗಳು ತಡವಾಗಿ ಮುಯ್ಯವಇಷ್ಟು ಹೊತ್ತನಾಗೆ ತರಬಹುದೆ 1 ಕೇಳೆ ಸುಭದ್ರಾ ಮುಯ್ಯಾ ಕಾಳ ರಾತ್ರಿಲೆ ತಂದುಭಾಳ ಕೋಪಿಸುವ ಬಗಿ ಹೇಳಭಾಳ ಕೋಪಿಸುವ ಬಗಿ ಹೇಳ ಮುತ್ತಿನ ತೋಳುತಾಯಿತವ ಕೊಡುವೆನ 2 ಧಿಟ್ಟ ಸುಭದ್ರಾ ಮುಯ್ಯಾ ಇಷ್ಟೊತ್ತ್ತಿನಾಗ ತಂದು ಸಿಟ್ಟು ಮಾಡಿದ ಬಗಿ ಹೇಳಸಿಟ್ಟು ಮಾಡಿದ ಬಗಿ ಹೇಳ ಮುತ್ತಿನ ಕಟ್ಟಾಣಿ ಕೊಡುವೆ ನಿನಗಿನ್ನು3 ಲೋಕನಾಯಕಿ ಕೃಷ್ಣ್ಣಿ ಕೋಪವ್ಯಾ ಕೊದಗಿತಹಾಕಿದ ಮುದ್ರಿ ತಡವಾಗಿ ಹಾಕಿದ ಮುದ್ರಿ ತಡವಾಗಿ ಮುಯ್ಯವ ಈ ಕಾಲದೊಳಗೆ ತರಬಹುದೆ4 ಕೆಂಡದಂಥವಳ ಗುಣ ಕಂಡೇವ ಸಭೆಯೊಳು ಚಂಡಿತನವನೆ ಬಿಡು ಕೃಷ್ಣಿಚಂಡಿತನವನೆ ಬಿಡು ಕೃಷ್ಣಿ ಮುತ್ತಿನ ದಂಡೆ ಕೊಡುವೆ ಬಿಡುಕೋಪ5 ಬೆಂಕಿಯಂಥವಳ ಗುಣ ಶಕ್ಯವೆ ವರ್ಣಿಸಲು ಶಂಕರಾದ್ಯರಿಗೆ ವಶವಲ್ಲಶಂಕರಾದ್ಯರಿಗೆ ವಶವಲ್ಲ ಮುತ್ತಿನ ವಂಕಿಯ ಕೊಡುವೆ ನಿನಗಿನ್ನು 6 ಸತಿಯು ಸುಭದ್ರೆ ನೀನು ಯತಿಯ ಬೆನ್ಹತ್ತಿದಾಗ ಅತಿಭೀತಿ ಎಲ್ಲಿ ಅಡಗಿತ್ತಅತಿಭೀತಿ ಎಲ್ಲಿ ಅಡಗಿತ್ತ ನಾವುನಿನ್ನ ಪತಿವ್ರತ ತನವ ಅರಿವೆನೆ7 ಮಿತ್ರೆಯರು ನಾವೆಲ್ಲ ತುಪ್ಪಅನ್ನವನುಂಡುಪುತ್ರರ ಸಹಿತ ಸುಖನಿದ್ರೆಪುತ್ರರ ಸಹಿತ ಸುಖನಿದ್ರೆ ಗೈವಾಗ ಮತ್ತ ನೀ ಮುಯ್ಯ ತರಬಹುದೆ8 ಲೋಲ ರಾಮೇಶನು ಹಾಲು ಅನ್ನವನುಂಡುಬಾಲರ ಸಹಿತ ಸುಖನಿದ್ರೆಬಾಲರ ಸಹಿತ ಸುಖನಿದ್ರೆ ಗೈವಾಗಮ್ಯಾಲೆ ಮುಯ್ಯ ತರಬಹುದೆ9
--------------
ಗಲಗಲಿಅವ್ವನವರು
ಬಾರೋ ಬಾರೋ ಮನುಕುಲಗುರುಗುಹಾ ಸೇರಿದಾನತರ್ಗೆ ಚಾರುಸುರಭೂರುಹಪ. ಮಾನಾಭಿಮಾನ ನಮ್ಮದು ನಿನ್ನಾಧೀನ ದೀನಜನರ ಸುರಧೇನು ಮಹಾಸೇನ1 ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆ ಭಕ್ತಿe್ಞÁನವನೀಯೋ ಶಂಕರಾತ್ಮಜನೆ 2 ಲಕ್ಷ್ಮೀನಾರಾಯಣನ ಧ್ಯಾನಾಭರಣ ಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ3
--------------
ತುಪಾಕಿ ವೆಂಕಟರಮಣಾಚಾರ್ಯ
ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನು ಕೃಷ್ಣನೇ ಸರ್ವೋತ್ತಮ ಮತ್ತಾರೊಬ್ಬರಿಲ್ಲವೆಂದು ಪ ಪಂಕಜಾಸನಾಹಿಪ ಶಂಕರಾದಿಗಳು ಹರಿಗೆ ಕಿಂಕರರು ಮತ್ತು ಇವಗೆ ಪುತ್ರ ಪೌತ್ರರು `ಏಕೋ ನಾರಾಯಣ ಆಸೀನ್ನಬ್ರಹ್ಮೇ'ತಿ ಶ್ರುತಿಯೊಂದೇ ಸಾಕೊ ಮತ್ತಿನ್ಯಾಕೆ ಸಂಶಯ ಹರಿ ನೀನೆ ಗತಿಯೆಂದು 1 `ಯಂಕಾಮಯೇ' ಎಂಬ ಶ್ರುತಿ ಪಂಕಜಾಸನಾನಿಲ ಶಂಕರರೆಲ್ಲರೂ ಹರಿಕಿಂಕರರು ಸಿರಿಗೆ ಕಿಂಕರರೆಂಬುದ ನಿಶ್ಶಂಕವಾಗಿ ಪೇಳಲು ಶಂಕೆ ಯಾಕೊ ಸಲಹೊ ಶ್ರೀ ಪಂಕಜಲೋಚನನೆಂದು 2 ಜಾನಕಿ ವಿಯುಕ್ತನಾಗಿ ಕ್ಲೇಶಗಳಪಟ್ಟಿರುವ ಮತ್ತು ಜರಾಸಂಧಗಂಜಿ ಬೆಟ್ಟವೇರಿದನು ನಿರವದ್ಯ ನಿರನಿಷ್ಟ ಎಂಬೊ ಶ್ರುತಿಯನ್ನೆ ನೋಡಿ ನಿರ್ದೋಷನಿದನೆಂದು 3 ದೇವದತ್ತ ಯಜ್ಞದತ್ತ ಮೊದಲಾದ ಜನರಂತೆ ಪುರುಷನಾದ ಮೇಲೆ ಇವನಲ್ಪಗುಣನು ಎಂಬ ದುರ್ಮತಿಯ ಬಿಟ್ಟು ಗುಣಶ್ರುತ ಸವಿರುದ್ಧ ಎಂಬೋ ಶ್ರುತ್ಯರ್ಥವ ತಿಳಿದು ಹರಿಗುಣಪೂರ್ಣನೆಂದು 4 ಸೋಮಕುಲಶೇಖರನೆ ಭಾಮಾವಲ್ಲಭ ಬಲ ರಾಮನಿಗೆ ಸಹೋದರ ಸಾಮಗಪ್ರಿಯ ಶ್ರೀಮನ್ನಾಮಗಿರಿ ಶ್ರೀ ಸ್ವಾಮಿ ನೃಹರಿಯೆ ವಿದ್ಯಾ ರತ್ನಾಕರ ಯೋಗಿಯನ್ನು ಹರಿ ನೀನೆ ರಕ್ಷಿಸೆಂದು 5
--------------
ವಿದ್ಯಾರತ್ನಾಕರತೀರ್ಥರು
ಬೇಡುವೆ ನಾ ಯಾದವಾ ಬÉೂೀತಿ ಮನದ ಮೋಹವಾ ಓಡಿಸುತಲಿ ಮಾಧವಾ ನಿನ್ನ ಸೇರಿಕೊಂಬುವಾ ನೀಡು ಇನಿತು ಭಾಗ್ಯವಾ ನಾನು ಇದುವೆ ನನ್ನದು ಮಾನವಗಿದು ಪಾಶವು ದೀನಬಂಧು ಇವನು ನೀ ಮಾಣದೆ ಬಿತಿಸೈ ಪ್ರಭೋ ಬೇಡಿಕೊಂಬೆ ಹೇ ವಿಭೋ ನೀನೆ ಪರಮಸದ್ಗುರು ಹೃದಯದಲ್ಲಿ ನೆಲೆಸಿದಾ ಆತ್ಮರೂಪವನು ಸದಾ ಮುದದಿ ತಿಳಿಯುವಂತೆ ನೀ ಸನ್ಮತಿ ದಯಪಾಲಿಸೈ ಸದಮಲಾತ್ಮಶಂಕರಾ ಬೇಡುವೆ ನಿನಗೀಶ್ವರಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಬೋಧಾ ಜÁ್ಞನದಾ ಬೋಧ ಮೋದಾ ಶಾಂತಿಯಾ ಸ್ವಾದಾ ಪ ಸ್ವರೂಪದಾ ಸುಖಸ್ಪದಾ ಪ್ರಶಾಂತ ಗುರುಬೋಧಾ ಬೋಧ ಅ.ಪ. ಸುಲಭಸಾಧ್ಯ ಸುವಿಚಾರಾ ವೇದಾಂತಶಾಸ್ತ್ರದ ಸಾರಾ ತಾನೇ ಪರಮಾತ್ಮನು ಎನುವಾ ಸ್ವಾನುಭವಾಮೃತಜಲಧಾರಾ ಘೋರಾ ಸಂಸ್ಕøತಿಯ ಪಾರಾ 1 ಜೀವಭಾವವ ಮರೆಯಿಸುತಿರುವಾ ಸಾವ ನೀಗುವಾ ಮಂತ್ರವಾ ಸಾರಿ ಪೇಳ್ವ ಶಂಕರಾರ್ಯ ಮೋದಾ ಶಾಂತಿಯಾ ಸ್ವಾದಾ 2
--------------
ಶಂಕರಭಟ್ಟ ಅಗ್ನಿಹೋತ್ರಿ