ಒಟ್ಟು 646 ಕಡೆಗಳಲ್ಲಿ , 82 ದಾಸರು , 509 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುತೀಯ ಬೆಳಗಿರೀಗ ನಾರಿಯೇರು ಶ್ರೀನಿವಾಸಗಾರುತೀಯ ಪ. ಆರುತೀಯ ಬೆಳಗಿರೀಗ ಸಾರಸಾಕ್ಷ ಪದ್ಮಿನೀಯ ಸೇರಿ ಲಕುನಿಯಿಂದ ಮೆರೆವೊ ಮೂರುಲೋಕದೊಡೆಯ ಕೃಷ್ಣಾ ಅ.ಪ. ಮೀನನಾಗಿ ವೇದ ತಂದು ದಾನವರ ವಂಚಿಸುತ್ತ ಯಾನದಲ್ಲಿ ಭೂಮಿ ತಂದ ದೀನರಕ್ಷಕ ನಾರಸಿಂಹಗೆ 1 ಚಲುವ ಬ್ರಹ್ಮಚಾರಿಯಾಗಿ ಛಲದಿ ಕ್ಷತ್ರಿಯೇರ ಕೊಂದು ಒಲಿವ ಶಿವನ ಬಿಲ್ಲ ಮುರಿದು ನಲಿದು ಬಂದ ಗೋಪಿಕಂದಗಾ 2 ನಾರಿಯೇರ ವ್ರತವನಳಿದು ತೆÉೀಜಿಯೇರಿ ಮೆರೆವ ಧೀರ ವಾರವಾರ ಪೂಜೆಗೆಂದು ಶೂರ ಶ್ರೀ ಶ್ರೀನಿವಾಸಗಾರುತೀಯ 3
--------------
ಸರಸ್ವತಿ ಬಾಯಿ
ಆವ ಭಯವಿಲ್ಲ ಪರಾವರೇಶನ ಸಕಲ ಪ ಭಾವಜ್ಞ ಜನರಿಗಿನ್ನು ಅ.ಪ. ದೇಶಕಾಲೋಚಿತ ಧರ್ಮ ಗಿರ್ಮಗಳು ಸ ನ್ಯಾಸ ಮೊದಲಾದಾಶ್ರಮೋಚಿತ ಸುಕರ್ಮಗಳು ಮಾಸೋಪವಾಸ ವ್ರತ ನೇಮ ಗೀಮಗಳು ಸದ್ ಪ್ರದೋಷನ ಧ್ಯಾಯಗೀಯ ಶ್ವಾಸ ಬಂಧನ ಉಪನ್ಯಾಸ ತೀರ್ಥಾಟನೆ ರ ಮೇಶನ ಗುಣಗಳಟ್ಟಹಾಸದಲಿ ನೆನೆವುತ ನಿ ರಾಶೆಯಿಂದಿಪ್ಪ ಹರಿದಾಸ ದಾಸರಿಗೆ 1 ಸ್ನಾನ ಜಪ ದೇವತಾರ್ಚನೆ ವೈಶ್ಯದೇವ ಬಲಿ ವಿಧಿ ನಿಷೇಧಗಳು ವಿ ಸಂಹನನ ವೈರಾಗ್ಯ ಶಕ್ತಿ ಶ್ರೀನಿವಾಸನ ಪರಮ ವಿಮಲ ಲೋಕೈಕ ಕ ಲ್ಯಾಣ ಗುಣ ರೂಪ ಕ್ರಿಯೆಗಳನು ಜಡ ಚೇತನದಿ ಧೇನಿಸುತ ಮನದಿ ಹಿಗ್ಗುತ ತುತಿಸಿ ನಲಿವ ಸುಮ ಹಾನು ಭಾವರಿಗೆ ಈರೇಳು ಲೋಕದೊಳು ಇನ್ನು2 ಮಲಿನರಾಗಿಹರು ನೋಳ್ಪರಿಗೆ ಪ್ರತಿ ದಿನದಲ್ಲಿ ಸುಲಭರಂತಿಹರು ದುರ್ಗಮರಾಗಿ ತೋರುವರು ಅಳುವರೊಮ್ಮೊಮ್ಮೆ ಪರವಶರಾಗಿ ಮೈ ಮರೆದು ನಲಿವರೊಮ್ಮೊಮ್ಮೆ ನಗುತಾ ಜಲಜಾಕ್ಷನಮಲ ಮಂಗಳ ಗುಣವ ಕೇಳಿ ಗಂ ಟಲ ಶಿರಗಳುಬ್ಬಿ ಚಪ್ಪಳೆಗಳಂ ಬಾರಿಸುತ ಮುಳುಗಿ ಸುಖ ವನಧಿಯೊಳು ತನು ಪುಳಕೋತ್ಪವದಿ ಇಳೆಯೊಳಗೆ ಸಂಚರಿಪ ಕಲುಷವರ್ಜಿತಂಗೆ 3 ನೋಡುವುದೆ ಹರಿಮೂರ್ತಿ ಕೇಳುವುದೆ ಹರಿಕೀರ್ತಿ ಆಡುವುದೆ ಹರಿವಾರ್ತೆ ಮಾಡುವುದೆ ಹರಿಪೂಜೆ ನೀಡುವುದೆ ಅವಧಾನ ಬೇಡುವುದೆ ಪುರುಷಾರ್ಥ ಕೂಡುವುದೆ ಸಾಯುಜ್ಯವು ದಾಡಿಯಿಂದಲಿ ದನುಜರಳಿದು ಧರಣಿಯನು ತಂದ ಕ್ರೋಢರೂಪನೆ ಲೋಕಕ್ಕೆಲ್ಲ ಆನಂದ ನಾಡಾಡ ದೈವದಂತಿವನಲ್ಲವೆಂದು ಕೊಂ ಡಾಡುತವನಿಯೊಳು ಸಂಚರಿಸುವ ವಿಪಶ್ಚಿತರಿಗೆ 4 ಕುಟಿಲರಹಿತನು ಧರ್ಮಾರ್ಥ ಮುಕುತಿ ಸಂ ಸುರನದಿ ಮುಖ್ಯ ತೀರ್ಥ ವೆಂ ಕಟ ಶೈಲ ಮೊದಲಾದ ಕ್ಷೇತ್ರದಲಿ ಸತ್ಕರ್ಮ ಹಟದಿಂದ ಮಾಳ್ಪರೆಲ್ಲಾ ವಟ ಪತ್ರಶಯನನೊಲುಮೆಯನೆ ಬಯಸುವ ಜಾಂಡ ಕಟಹದ್ಭಹಿವ್ರ್ಯಾಪ್ತನಾದ ಶ್ರೀ ಜಗನ್ನಾಥ ವಿಠಲನಾವ ದೇಶದಿ ಕಾಲದಲ್ಲಿ ಪಾ ಸಟೆಯಿಲ್ಲವೆನುತ ಲಾಲಿಸುತಿಪ್ಪರಿಗೆ5
--------------
ಜಗನ್ನಾಥದಾಸರು
ಆವಪರಿಯಲಿ ನಿನ್ನನು ವೊಲಿಸುವೆ ದೇವ ಎನ್ನೊಳಗೆ ಒಂದಾದರೂ ಗುಣವಿಲ್ಲಾ ಪ ಅರಿಯೆ ಧರ್ಮವ ಪಾಪ | ಮರಿಯೆ ಉತ್ತಮರನ್ನ ಕರಿಯೆ ನಾಮಕೆ ಬಾಯಿ | ತೆರಿಯೆ ಸುರಿಯೆ ಜರಿಯೆ ಮೋºಕೆ ಮನ | ಮುರಿಯೆ ವ್ಯಾಕುಲ ಜ್ಞಾನಾಂ | ಕುರಿಯ ನಿನ್ನವರೊಳು | ಬೆರಿಯೆನರಿಯೆ ಸರಿಯೆ ದುಸ್ಸಂಗ ಕಥಾ | ಬರಿಯೆ ಕರದಿ ಯಾತ್ರಿಗೆ ಹರಿಯೆ ಪುಣ್ಯ ತೀರ್ಥ | ವರಿಯೆ ಮೊರಿಯೆ ಹರಿಯೆ ಜಗದೊರೆಯೆ | ಸಿರಿದೊರೆಯೆ ಅಘ ಕರಿಗೆ ಕೇಸರಿಯೆ ಮತ್ತಾ | ರರಿಯೆ ನಿನ್ನವರ ಮರಿಯೆ1 ನಡಿಯೆ ಸುಮಾರ್ಗ ವ್ರತವಿಡಿಯೆ ಮುಡಿದ ಪೂವು ಮುಡಿಯೆ ಕಾಮದ ಮರ್ಮ | ತಡಿಯೆ ಕಡಿಯೇ ಕುಡಿಯೆ ಪಾಪೋದಕವ ನುಡಿಯೆ ಮಂಗಳ ವಾರ್ತಿ ಪಿಡಿಯೆ ಭಕುತಿ ನೀತಿ ಪಿಡಿಯೆ ಗುಡಿಯೇ ಸುಕೃತಿ ಕಾಳ | ಗೆಡಿಯೆ ಪರರೊಸ್ತಕ್ಕೆ ತೊಡಿಯೆ ಚಿಂತಾತುರವ | ವುಧಿಯೆ ಹೊಡಿಯೆ ಕೊಡಿಯೆ ಎನ್ನಗೊಡಿಯೆ ನೆಂ | ದೆಡೆಯಲ್ಲಿ ಸೂಸಿದಾ ಪುಡಿಯಲ್ಲಿ ವೊಡಬೆರಸೆ | ಅಡಿಗಡಿಗೆ ಎನ್ನ ಕಡಿಗೆ 2 ಸುಳಿಯೆ ಕೀರ್ತನಿಗೆ ಮದ | ವಳಿಯೆ ಗುರುನಿಂದಕರ ಹಳಿಯೆ ಕಾಮದ ಕುಪ್ಪೆ | ಕಳಿಯೆ ಬಳಿಯೆ ತೊಳಿಯೆ ಮನನ ನರಕಕ್ಕೆ | ಮುಳಿಯೆ ಸುಮತಿಮಾರ್ಗ ತಿಳಿಯೆ ಪದವಿಗೆ ಪೋಗಿ | ಇಳಿಯೆ ಬೆಳಿಯೆ ಛಳಿಯೆ ಮುಂದಿನ ಜನನ | ಹೊಳೆಯೆಂಬೋದು ಅರಿದು ಸಂಚಿತ ಕರ್ಮ | ವಳಿಯೆ ತುಳಿಯೆ ವುಳಿಯೆ ಬೊಬ್ಬುಳಿಯೆ ಈ | ಕಳೆಯೇನುವಲ್ಲನಭ ಸುಳಿ ಹೃದಯಾವಳಿಯಲ್ಲಿ | ವಿಜಯವಿಠ್ಠಲವೊಳಿಯೆ3
--------------
ವಿಜಯದಾಸ
ಆವಭೇಧವಿಲ್ಲದವನೆ ನಿಜಜ್ಞಾನಿಯು ತನು ಭಾವವರಿತು ನಡೆಯುವನೆ ನಿಜ ಭಾಗವತನು ಪ ಮಾನ ಅಪಮಾನ ಸಮಕಾಣುವನೆ ಸಜ್ಜನನು ತಾನು ತನ್ನದೆಂಬ ಮಾಯವಳಿದವನೆ ಸಾಧು ಏನು ಕೊಟ್ಟರು ಒಲ್ಲೆನೆಂಬುವನೆ ಸನ್ಯಾಸಿ ದೀನರನು ಕಂಡು ಮನಮರುಗುವನೆ ಭಕ್ತ 1 ನಿಜಧರ್ಮವರಿಯದ ಪಾಮರನೆ ಶೂದ್ರನು ನಿಜವಾಕ್ಯಗಳ ಕೇಳಿ ಅಳಿವವನೆ ಭವಿಯು ಸುಜನರಿಗೆ ತಲೆಬಾಗಿ ನಡೆವವನೆ ಸಿದ್ಧಾಂತಿ ಕುಜನರ ಮಾತಿಗೊಳಪಡುವವನೆ ನರಕಿ 2 ಪಿಡಿದ ವ್ರತನೇಮಗಳ ಬಿಡದವನೆ ಕಡುಗಲಿ ಜಡದೇಹ್ಯಮೋಹವನು ತೊಡೆದವನೆ ಸತ್ಯ ಬಂಟ ಜಗದೊಳಗೆ ಒಡೆಯ ಶ್ರೀರಾಮನಡಿ ದೃಢಯುತನೆ ಮುಕ್ತ 3
--------------
ರಾಮದಾಸರು
ಆಶ್ರಮ ಧರ್ಮ ನಾಲ್ಕು ಉಪದ್ರಆಶ್ರಮ ಧರ್ಮ ಬಿಡೆ ಅವ ಪಟ್ಟ ಬದ್ಧ ಪ ಬ್ರಹ್ಮಚಾರಿಯು ಆಗೆ ಕರ್ಮದ ಉಪದ್ರಬ್ರಹ್ಮಚರ್ಯವು ಹೋಗೆ ಸ್ತ್ರೀಯ ಉಪದ್ರಸುಮ್ಮಗೆ ವಾನಪ್ರಸ್ಥನಾಗೆ ಬೆಂಕಿ ಉಪದ್ರಹಮ್ಮಳಿದು ಸಂನ್ಯಾಸಿಯಾಗೆ ಸ್ನಾನದುಪದ್ರ 1 ಗೃಹಸ್ಥನಾಗೆ ವ್ರತಗಳ ಉಪದ್ರಸತತ ಸಂಧ್ಯಾ ಜಪತಪದ ಉಪದ್ರಮಿತಿ ಇಲ್ಲದ ನಾನಾ ಕರ್ಮಗಳ ಉಪದ್ರಸತತ ಶುಚಿ ಅಶುಚಿ ಎಂಬುದರ ಉಪದ್ರ 2 ಆವ ಆಶ್ರಮದಲಿರೆ ಆವುದೊಂದು ಉಪದ್ರಆವ ಆಶ್ರಮದಿ ಉಪದ್ರವೇ ಅದು ಹೋಗದುಆವಾಶ್ರಮಗಳಿಗೆ ಬೇರೆ ಇರೆ ಸುಖಿಯಿಹದೇವ ಚಿದಾನಂದ ಮಹ ಸರ್ವಮಹೋಪದ್ರವ ಪರಿಹಾರವಯ್ಯ 3
--------------
ಚಿದಾನಂದ ಅವಧೂತರು
ಇ) ಶ್ರೀಮನ್ಮಧ್ವಾಚಾರ್ಯರು ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ ಪ ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ಅ.ಪ. ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ 1 ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ 2 ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ ಪುಟ್ಟದಂತೆಶ್ರೀರಂಗವಿಠಲನ ಭಜಿಸದೆ ಮುಂದೆಪರಮಗತಿ ದೊರಕೊಳ್ಳದಂತೆ 3
--------------
ಶ್ರೀಪಾದರಾಜರು
ಇಂಥಾ ಗುರುಗಳ ಕಾಣೆನೋ ಈ ಜಗದೊಳು ನಾ ಪ ಇಂಥಾ ಗುರುಗಳನೆಂದು ಕಾಣೆನಾ ನಂತ ಚೇತನರಂತರ ಬಹಿರದಿ ನಿಂತು ಕರ್ಮವವರಂತೆ ಮಾಳ್ಪಾ - ನಂತ ಮಹಿಮಾನಂತನಾಂಶಜರಿಂಥಾಅ.ಪ ತುಂಗಾತೀರದಿ ನಿವಾಸಾ ಮಂತ್ರಾಲಯಕೀಶ ತುಂಗ ವಿಕÀ್ರಮ ಜಗದೀಶಾ ಶ್ರೀಹರಿ ದಾಸಾ ಮಂಗಲ್ಮಾತಕ ವೃಂದಾವನ ದೇಶಾ ಸಾರಿದ ವ್ರತೀಶಾ ಮಂಗಲ ಮಹಿಮ ರಂಗನ ಕರುಣಾಪಾಂಗ ಪಡೆದ ಕೃ - ಪಾಂಗ ಯತಿಕುಲೋತ್ತುಂಗ ಮಾಯಿ ಮಾ - ತಂಗ ಸಂಘಕೆ ಸಿಂಗ ದುಷ್ಟ ಭು - ವಿಹಂಗ ಸ್ವಮತೋ - ಭೃಂಗ ಮನ್ಮನೋ - ರಂಗ ಬಿಂಬನ ಇಂಗಿತಙ್ಞರ ಸಂಗ ನೀಡಿ ಕಂಗಳಿಗೆ ತಾವು ಕಂಗೊಳಿಪರಿಂಥಾ 1 ಮೇದಿನಿ ತಳದಲಿ ಜನಿಸೀ ಸುಖತಿರ್ಥರ ಭಜಿಸೀ ಭೇಧಮತವನೆ ಸಾಧಿಸೀ ವಾದದಿ ಜೈಸಿ ಮಾಧವನೆ ಸರ್ವೋತ್ತಮನೆನಿಸಿ ಸ್ವಮತವ ಸ್ಥಾಪಿಸಿ ಭೋಧಿಸಿ ತತ್ತ್ವವ ಭೇಧಿಸಿ ಪರಮತ ಛೇಧಿಸಿ ಕುಮತಿಯ ಶೋಧಿಸಿ ತತ್ತ್ವದ ಹಾದಿಯ ಹಿಡಿಸಿ - ಮೋದಕೊಡುವ ಪಂಚ ಭೇದವ ತಿಳಿಸೀ ಸಾದರ ತನ್ನಯ ಪಾದಸೇವೆಯ ಮೋದವ ನೀಡುವ ಮೇದಿನೀ ದಿವಿಜಾರಾಧಿತ ಪದಯುಗ ಶೋಧಿಸಿ ಜನಮನೋ ಖೇದಗೊಳಿಪ ಭ - ವೋಧಧಿ ದಾಟಿಸಿ ಶ್ರೀದÀನ ತೆರದಲಿ ಮೇದಿನಿಯಾಳುವರಿಂಥಾ 2 ಧಿಟ್ಟ ಗುರು ಜಗನ್ನಾಥ ವಿಠಲದೂತಾ ಸೃಷ್ಟಯೊಳಗತಿ ವಿಖ್ಯಾತಾನೆನಿಸಿದ ಯತಿನಾಥಾ ಕುಷ್ಟಾದಿ ರೋಗದ ಘಾತಾ ಮಾಡುವೊದಾತಾ ಇಷ್ಟಾರ್ಥವಾ ತಾ ಸೃಷ್ಠಿಗೆ ಬೀರುವ ಶಿಷ್ಟಜನರನುತ್ನøಷ್ಟದಿ ಪಾಲಿಪ ಎಷ್ಟು ಪೇಳುವುದೋ ಉತ್ಕøಷ್ಟನ ಗುಣಗಳ ಭ್ರಷ್ಟರರಿಯರೆಲೆ ಶಿಷ್ಟರು ಬಲ್ಲರು ಇಷ್ಟೇ ಅಲ್ಲವೀತನ ವಿಶಿಷ್ಟ ಮಹಿಮೆಗ - ಳೆಷ್ಟು ಪೇಳಲವಶಿಷ್ಟವೆನಿಪವೋ ದೃಷ್ಟಿಹೀನರಿಗೆ ದೃಷ್ಟಿ ನೀಡುವ ದೃಷ್ಟಿ ಮಾತ್ರದಿ ತುಷ್ಟಿಬಡಿಸುವೊರಿಂಥಾ 3
--------------
ಗುರುಜಗನ್ನಾಥದಾಸರು
ಇಂದಿರೆ ಪ ಸಿಂಧು ಸಂಭೂತೆ | ಪೂರ್ಣ ಚಂದಿರ ಮುಖಿ ಸುಖದಾತೆ ಅ.ಪ ಇಂದೀವರಾಕ್ಷಿಯೆ | ಪೊಂದಿ ತ್ವತ್ವಾದಕೆ ವಂದಿಪೆ ಮನ್ಮನ ಮಂದಿರದೊಳು ಬಾರೆ || ಕೃತಿ ಶಾಂತಿ ಜಯಮಾಯೆ ಸೀತೆ ದೇವಿ ಪತಿತಪಾವನೆ ಕ್ಷಿತಿಜಾತೆ | ವಿಧಿ ಶಿತ ಕಂಧರಾದಿ ನಮಿತೆ | ಮಹ | ಪತಿವ್ರತೆ ಪರಮವಿಖ್ಯಾತೆ ಆಹಾ ಶೃತಿವಿನುತಳೆ ಸದಾ | ನುತಿಸಿ ಬೇಡಿ ಕೊಂಬೆ ಅತಿಹಿತದಲಿ ತವ ಪತಿಯ ಪಾದವ ತೋರೋ 1 ಹರಿಣಲೋಚನೆ | ಶ್ರೀರುಕ್ಮಿಣೀ | ಮದ ಕರಿ ಮಂದಗಮನೆ ಕಲ್ಯಾಣಿ ದ್ವಿಜ ಪರಿವಾರ ಸಂಸ್ತುತೆ ಜಾಣೆ | ಚಾರು ಚರಿತೆ ಚಂಚರೀಕ ಸುವೇಣಿ || ಆಹಾ || ಸಿರಿ ಸತ್ಯಭಾಮೆಯ | ಮರೆಯದೆ ಎನ್ನಯ ದುರಿತ ವಿಚ್ಛೇದಿಸಿ | ಹರಿಸ್ಮರಣೆ ನೀಡೆ 2 ಕಂಬು ಕಂಧರೆ ಕಾಮನ ತಾಯೆ ಅರ ಭವ ಚಂದನ ಗಂಧಿಯೆ | ನಂದ ನಂದನ ಶಾಮ ಸುಂದರವಿಠಲನ್ನ ಸಂದರುಶನವೀಯೆ 3
--------------
ಶಾಮಸುಂದರ ವಿಠಲ
ಇಂದು ಸಲಹಿದೇ ಇಂದು ಸಲಹಿದೇ ಆರ್ತರ ಬಂಧು ಸಿಂಧು ಪ ಅಂದು ಪ್ರಲ್ಹಾದ ನೆಂಬುಧಿಯೊಳಗ ಬಂದು ಉಳುಹಿದ ತರದಿಂದಲೆನಗೆ 1 ಹಿಂದ ಪ್ರಳಯ ಜಲದಿ ಸತ್ಯ ವ್ರತನಾ ಪರಿ ಸಿರಿರಮಣಾ2 ಕುದಿ ವೆಣ್ಣೆ ಗೊಪ್ಪರಿಗೆಯೋಳಿಹ ಸುಧನ್ವನಾ ಪ್ರಾಣನುಳಹಿದ ಪರಿಯಾ3 ತಂದೆ ಮಹಿಪತಿ ಪ್ರಭು ದತ್ತಾತ್ರೆಯಾ ಬಂದದುರಿತದಿ ಬಿಡಿಸುತ ಕಾವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇ ಹೌದು ಭವತರಿಯುವ ಶಸ್ತ್ರ ಪದೇ ಪದೇ ಸಿರಿವರನ ಸ್ತೋತ್ರ ಪ ಅಧಮಮತಿಯ ಬಿಟ್ಟು ಸದಮಲ ಮನದಿಂ ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ ದಾನಧರ್ಮಯಜ್ಞ ಇವು ಯಾಕೊ ಸ್ನಾನ ಮೌನ ಜಪ ಮತ್ತ್ಯಾಕೊ ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ ನಾನಾಪರಿಯಲಿಂದ ದೀನದಯಾಪರ ಗಾನಲೋಲನ ಭಜನಾನಂದ ಪಡೆವುದೆ1 ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ ಸಾಧನಸಿದ್ಧಿಗಳ ಬಲವ್ಯಾಕೋ ಭೇಧಯೋಗದ ಬಹು ಬೋಧಗಳ್ಯಾತಕೊ ಓದಿಓದಿ ದಿನಗಳಿಲ್ಯಾಕೊ ವೇದಗಮ್ಯದಾದಿ ಮೂರುತಿ ಶ್ರೀ ಪಾದವರಿತು ಆರಾಧಿಸುತಿರುವುದೆ 2 ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ ಸಾಸಿರದೈವಕೆ ಬಾಗುವುದ್ಯಾಕೊ ಮಾಸಪಕ್ಷ ವ್ರತ ನೇಮಗಳ್ಯಾತಕೊ ಘಾಸಿಯಾಗಿ ದೇಹ ದಂಡಿಸಲ್ಯಾಕೊ ಶೇಷಶಯನ ನಮ್ಮ ಶ್ರೀಶ ಶ್ರೀರಾಮನ ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ 3
--------------
ರಾಮದಾಸರು
ಇವನ ಕಂಡಿರ್ಯಾ ಕಾವಕರುಣನ ಭಾವ ಭಾವಿಸುವ ಪರಿಯಾಗುವ ದೇವನ ಧ್ರುವ ಸಗುಣಲೀಹ್ಯನಾ ಭಕುತಿಗೊಲಿವನಾ ಸುಗಮದಿಂದ ನಿಗಮನುಳುಹಿ ನಗವ ನೆಗೆದನಾ 1 ಸಿರಿಯ ಲೋಲನಾ ವರಕೃಪಾಲನಾ ಧರಿಯನುಳುಹಿ ತರಳಗೊಲಿದು ಪ್ರಿಯವಾದನಾ2 ವರವ ಬಲಿಗೆ ಇತ್ತು ದೋರಿದ ಭಾರ್ಗವರೂಪನಾ 3 ಪರಮ ಆತ್ಮನಾ ಹರಿಸರ್ವೋತ್ತಮನಾ ಸುರರ ನೆರೆಯ ಬಿಡಿಸಿ ಹೊರಟ ಪಾಂಡವಪ್ರಿಯನಾ 4 ಹೊಳೆವ ತೇಜನಾ ಮೂಲೋಕ ಪಾವನಾ ಹಳಿದು ವ್ರತವ ನೋಡಿ ಹಯವನೇರಿ ಸುಳಿದನಾ 5 ಘನ ಮಹಿಮನಾ ದಯಾ ನಿಸ್ಸೀಮನಾ ದೀನ ಮಹಿಪತಿಸ್ವಾಮಿ ಭಾನುಕೋಟೆ ದೀಪ್ತನಾ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈತ ಸೀತಾನಾಥನೇ|ವಾತಾಜಾತ ಪ್ರೀತನೇ| ಧಾತು ಮಾತು ರಹಿತ ಖ್ಯಾತ|ಭೂತವ್ರತದಾತನೆ ಪ ಸುಗ್ರೀವಗೆ ಸಾಮಗ್ರನೆ|ಶೀಘ್ರಗೈದನುಗ್ರಹನೆ| ನಿಗ್ರಹಿಸಿದಾ ವಾಘ್ರದಶಾ|ಗ್ರೀವನುಗ್ರಹ ವಿಗ್ರಹನೆ1 ಕಾಮನಿವಾನೇಮನೆ|ನಾಮಸಾರ್ವಭೌಮನೆ| ರಾಮಶ್ಯಾಮ ಮಹೀಪತಿನಂದನ|ಹೃತ್ಕುಮುದಾ ಸೋಮನೆ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಉದ್ದಾಳಿಕನ ಕಥೆ ಪಾಶಾಂಕುಶ ಧರನೆ ಕರಿಣಿಸೊ ಮತಿಯ 1 ಮಾನಿನಿಕುಲಕೆ ಕಟ್ಟಾಣಿ ಕರುಣಿಸೆ ಮತಿಯ2 ಮನೋಹರನೆ ನಿಜಮತಿಯ 3 ಅಂಬರ ಮೇಲಾದಷ್ಟದಿಕ್ಪಾಲಕರು ಪುಣ್ಯಕಥೆಯ 4 ಓಣ್ಯೊಳು ಚೆಲ್ಲಿದ ಅಣಿ ಮುತ್ತಾರಿಸಿ ನೂಲಿಗೆ ಪೋಣಿಸಿದಂತೆ ಯೋಗಿಗಳರಸುದ್ದಾಳಿಕನ ಕಥೆಯನು ಹೇಳುವೆ ಚರಿತೆಯ ಮಾಡಿ5 ವೇದವೇದಾಂತ ಪಾರಗನು ಧರ್ಮ ಪತ್ನಿ 6 ಸುತಜನಿಸಿದ ಉದ್ದಾಳಿಕ ಮಾಡಿದ ಕ್ರಮದಿಂದ 7 ಮೌಂಜಿಯ ಕಟ್ಟಿ ನಡೆದರು ಪರಗತಿಗೆ 8 ನಾಲ್ಕು ವೇದಗಳ ಘನತಪವನಕಾಗಿ ನಡೆದ 9 ನಿಂದು ಬೆಳಗುವ ಜ್ಯೋತಿಯಂತೆ ಸಂದವರುವತ್ತು ಸಾವಿರವು 10 ಪಟ್ಟಣದಿ ರಾಜ್ಯವಾಳುವನು 11 ಕನ್ಯಾದಾನವು ಭೂದಾನ ರಾಜ್ಯವಾಳುವನು 12 ಹೆತ್ತ ತಾಯಿ ಮಕ್ಕಳಗಲರೆಂದೆದಿಗು ಬತ್ತದೆ ಕರೆವ ಧೇನುಗಳು ದೇಶದೊಳಗೆ 13 ಪುಣ್ಯಸಾಧನರು ಸಜ್ಜನರು ಧರ್ಮಗಳಾ ದೇಶದೊಳಗೆ 14 ಬಡವರಿಲ್ಲಿ ಚಾರರುಂಟು ದೇಶದೊಳಗೆ 15 ಧರ್ಮವ ನಡೆಸಿ ರಾಜ್ಯವಾಳುವನು 16 ಮಕುಟವೆಂದೆನಿಸಿ ಪಟ್ಟದರಸಿಯಲ್ಲದನ್ಯತ್ರ ನೋಡೇಕ ಪತ್ನಿಯ ವ್ರತವ ನಡೆಸಿದನು17 ಸಂತೋಷದೋರಲು ಹುಟ್ಟಿದಳ್ ಚಂದ್ರಾವತಿಯು 18 ಹೊನ್ನಿನ ರಾಸಿ ಸುವರ್ಣದ ಬೆಟ್ಟವು ಕನ್ಯಾದಾನದ ಹೆಬ್ಬೆಳಸು ಮಾಣಿಕವೆ ಸಂತಾನ 19 ನಡೆಯೋಳು ದಟ್ಟಡಿಯಿಡುತ ಕಡುಲಾಲಿಕೆ ಬಾಲಲೀಲೆ 20 ಬಡವಾದಾಳೆಂದು ಕಡುಹರುಷದಲಿ ಹಿಗ್ಗಿದರು 21 ಅಕ್ಷರಾಭ್ಯಾಸವ ಮಾಡಿಸಿ ಕುಮಾರಿಗೆ ನರ್ತನ ಗೀತವ ಕಲಿಸಿ ಪುತ್ರಿಗಭ್ಯಾಸ ಮಾಡಿಸಿದ 22 ಯೌವನವು ತೋರಿದವು ಆಲಯವನೆ ಕಟ್ಟಿಸಿದ 23 ಪುತ್ರಿಯ ಸೇವೆಗೆ ಇಟ್ಟನೆ ಭೂಪಾಲ ಹತ್ತುಸಾವಿರ ಕೆಳದಿಯರ ಸುತ್ತಲು ಪ್ರಾಕಾರ ಎಸೆದವು ರಕ್ಷೆಗೆ ಇಟ್ಟನೆ ದ್ವಾರಪಾಲಕರ24 ಮುನಿಕೌಶಿಕನು ನೋಡುತಲಿ 25 ಸತ್ಯಲೋಕ ತಪೋಲೋಕವ ಚರಿಸುತ್ತ ಹೊಕ್ಕ[ನೆ] ಯಮ ಲೋಕವನು ಜೀವಿಗಳ ತಾಕಂಡ 26 ತೃಣದ ಮೂಲಾಗ್ರದಿ ನಡುಗುತಿಪ್ಪರ ಕಂಡು ಬ[ಳಿ] ಯಲ್ಲಿ ನಿಂತು ಮಾತಾಡಿ ತಿಳಿದು ಹೇಳುವುದು ಎನ್ನೊಡನೆ 27 ಜಗದೊಳಗೆ ಎಮಗೆ ಪತನಕ್ಕೆ ಬಿದ್ದೆವೆಂದೆನಲು 28 ಕಾಣಿಸುವ ದೌಹಿತ್ರರು ಮುನಿಯು ಕೇಳಿದನು 29 ಹೆಣ್ಣನೊಲ್ಲದೆ ಅರಣ್ಯವ ಚರಿಸುವ ಉನ್ನಂತ ತಪಸೀಲಿದ್ದ ತಿಳಿದು ಹೇಳುವುದು 30 ಪುತ್ರಸಂತಾನವ ಪಡೆದು ವಿಸ್ತಾರವಾಗಿ ಹೇಳುವುದು 31 ಭೋರನಲ್ಲಿಂದ ತೆರಳಿದನಾಗಲೆ ಮುನಿ ಅರಣ್ಯವ ಚರಿಸುತಲೆ ತಪೋವನವ 32 ಕರವಿಡಿದು ಕರೆ ತಂದನಾಗ ಬರವೇನೆಂದು ಕೇಳಿದನು 33 ಯಮ ಲೋಕವನು ಅತ್ಯಂತ ನರಕಕೈದುವರು 34 ಆಲಸÀ್ಯವಿಲ್ಲದೆ ಬೀಳ್ಪರು ಪತನಕ್ಕೆ º
--------------
ಹೆಳವನಕಟ್ಟೆ ಗಿರಿಯಮ್ಮ
ಉದ್ಧಾರ ಮಾಡಯ್ಯ ಉಡುಪಿ ನಿಲಯ ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ಪ. ಬಂದೆ ಬಹುದೂರದಲಿ ನಿಂದೆ ತವಚರಣದಡಿ ತಂದೆ ಮುದ್ದುಮೋಹನ ಗುರುಕರುಣದಿಂದ ಕುಂದುಗಳನೆಣಿಸದೆಲೆ ಸಿಂಧುಶಯನನೆ ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ 1 ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು ಕರ್ಮಸಾಸಿರ ಕಡಿದು ಕರುಣದಿಂದ ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ ಸನ್ಮಾರ್ಗವನೆ ತೋರೊ ಸರ್ವಲೋಕೇಶ 2 ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ ಉಪವಾಸದುಪಟಳವು ಗತಿ ತೋರದೆನಗೆ ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ ಅಪಹಾಸಗೊಳಿಸದಲೆ ಆದರಿಸೊ ಜೀಯ 3 ಬೇಡಲೇನನು ನಿನ್ನ ಕಾಡಲೇತಕೆ ನಾನು ದಾತ ನೀ ಸರ್ವಜ್ಞನಿರಲು ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ 4 ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ ಕಾಂತ ಕಾಪಾಡು ಕಡು ಕರುಣಿ ಮಧ್ವೇಶ 5
--------------
ಅಂಬಾಬಾಯಿ
ಉಪವಾಸ ಬೀಳುವುದ್ಯಾಕೋ ಮನುಜಉಪವಾಸ ಬೀಳುವುದ್ಯಾಕೋಉಪವಾಸ ಬೀಳಲಿಕೆ ನಿನಗೆ ಗ್ರಹಚಾರ ಸಾಲದೆ ಬೇಕೋ ಪ ಅಂಗದಿ ತತ್ವಾಭಿಮಾನವು ಇರಲಿಕೆ ಆಹಾರವರ್ಜಿಪುದ್ಯಾಕೋಮಂದ ಮತಿಗಳು ಕೂಡಿಯೆ ನೀನು ಮಂದಮತಿಯಾದೆ ಯಾಕೋ 1 ದೇಹದಿ ವೈಶ್ವಾನರನಿರಲಿಕೆ ದೇಹವ ದಂಡಿಪುದ್ಯಾಕೋಮಹಾವ್ರತವೆಂದು ಮೊಸರ ಬಿಟ್ಟು ಮಣ್ಣನೆ ಮುಕ್ಕುವಿಯಾಕೋ 2 ನಿತ್ಯಾತ್ಮನು ಚಿದಾನಂದ ತಾನಿರೆ ನಿರಾಹಾರವದ್ಯಾಕೋಮತ್ತೇಕಾದಶಿ ಶಿವರಾತ್ರೆನ್ನುತ ಬಿಣ್ಣನೆ ಬಳಲುವಿಯಾಕೋ 3
--------------
ಚಿದಾನಂದ ಅವಧೂತರು