ನೀನು ನಾನು ಸಮನೆಂತಹೆವು ಕಾಣೆನ್ಯಯ್ಯಾ ಪ
ಮಾನವ ರಕ್ಕಸ ಜನರ ಕುತರ್ಕವದೇನೊ ಅ.ಪ.
ಹದಿನಾಲ್ಕು ಲೋಕಗಳನು ಪೊರೆವ ದಾತನು ನೀನು
ಉದರಕಾಗಿ ಅಂಡಲೆವ ತಿಂಡಿಪೋತನು ನಾನು
ಮಧುರ ರಕ್ಕಸನ ಸೀಳ್ದ ಘನ ಪರಾಕ್ರಮಿ ನೀನು
ಸುದತಿ ಗದರಿಸಲು ಗದಗದ ನಡುಗುವೆ ನಾನು 1
ವ್ಯಾಳಶಯನನಾಗಿ ಸುಖದಿ ನಿದ್ರಿಸುವೆ ನೀನು
ಚೇಳು ಕುಟುಕಲು ಬಾಯ್ಬಡುಕೊಂಬುವೆನು ನಾನು
ನಿತ್ಯ ತೃಪ್ತನು ನೀನು
ಕೂಳಿಲ್ಲದಿರೆ ಮೇಲಕೇಳಲಾರೆನೊ ನಾನು 2
ಸರ್ವಜ್ಞನಾದ ರಂಗೇಶವಿಠಲ ನೀನು
ಗರ್ವಿಷ್ಟನಾದ ಮಹಾಜ್ಞಾನಿಯು ನಾನು
ಶರ್ವಾದಿಗಳಿಂದ ಸ್ತುತ್ಯನಾದವ ನೀನು
ಉರ್ವಿಯೊಳು ಸರ್ವರಿಂದ ನಿಂದಿತನು ನಾನು 3