ಜೋಜೋಜೋ ಬಾಲ ಮುಕುಂದಾ |
ಯೋಗಿ ಹೃದಯಾನಂದ |
ಜೋಜೋ ನಮ್ಮ ಗೋಪಿಯ ಕಂದಾ |
ಜೋಜೋ ಗೋಪಾಲ ಗೋವಿಂದಾ | ಜೋ ಜೋ ಪ
ಉರಗರಾಜನ ಹಾಸಿಗೆ ಮೇಲೆ |
ಶಿರಿದೇವಿ ಕೈಯಲಿ ಶೇವೆಯ ಕೊಳ್ಳುತಲಿ |
ಭರದಿ ನಾರದ ಗಾಯನದಲಿ | ಇಂಥಾ |
ಮೆರೆವ ಯೋಗದ ನಿದ್ರೆಯಲೀ || ಜೋಜೋ 1
ಆದನೆಲ್ಲವ ಬಿಟ್ಟು ಶ್ರೀಹರಿ |
ವಿದಿತ ಬಾಲಕ ವೇಷವದೋರಿ |
ಪುದುಳದಿಂದಲಿ ತೊಟ್ಟಿಲ ಸಾರಿ |
ಮುದದಲ್ಲಾಡುವ ಸುರ ಸಹಕಾರಿ || ಜೋಜೋ 2
ಏನು ಪುಣ್ಯವೋ ಗೋಕುಲ ಜನರ |
ಶ್ರೀ ನಂದಾತ್ಮಜ ನಾದವಿನೋದಾ |
ಧ್ಯಾನ ಮೌನಕೆ ಗೋಚರಪಾದ | ಮಹಾ |
ದಾನಿ ಮಹೀಪತಿಸುತ ಪ್ರಿಯನಾದಾ | ಜೋ ಜೋ 3