ಸುಮ್ಮನೆ ಹರಿಯ ದೂಷಿಸದಿರು ಯಮ-
ಧರ್ಮನಾಳ್ಗಳು ನಿನ್ನ ಎಳದೊಯ್ವರೊ ಪ
ಇಷ್ಟೂನು ವಿಷ್ಣು ಮಾಯವು ಎಂದು
ಈ ಸೃಷ್ಟಿ ಕರ್ತನು ಶ್ರೀಹರಿ ಎಂದು
ಸ್ಪಷ್ಟದಿ ಮನದಲ್ಲಿ ತಿಳಿಯದೆ
ದುರುಳ ಮಾತನಾಡಬಹುದೆ 1
ಲೋಕನಾಯಕ ಲಕ್ಷ್ಮೀಲೋಲನಾ
ಜಗದೇಕ ವಿನುತರಾಮ ದೇವರನಾ
ಶ್ರೀ ಕರುಣಾಂಬುದಿ ಶಾಂತನಾ
ಇನ್ನು ನೀ ಕಾಣದೆ ಈ ಪರಿನಿಂದೆಯೆನೆ 2
ಹರಿಶರಣರ ಕೊಂಡಾಡುತಿರು
ಘೋರ ನರಕದೊಳಗೆ ಬಿದ್ದು ನರಳದಿರು
ಪರಮಭಕ್ತರ ಬಾಯಿಲೆ ಬೊಗಳದಿರು
ಅತಿ ಪಾಪಿಯಾಗಿರುವರ ಸೇರಿ ಹೋಗದಿರು 3
ಶೃತಿ ಶಾಸ್ತ್ರಗಳು ಸುಜ್ಜನ--------
ಇಂಥ ಕೃತಕ ಶಾಸ್ತ್ರಗಳ ನೋಡಿ ಕೂಗಬೇಡಾ
ಸದ್ಗತಿ ಮಾರ್ಗಕೆ ಹೊರಗಾಗ ಬೇಡಾ 4
ಹರಬ್ರಹ್ಮ ಇಂದ್ರಾದಿಗಳೆಲ್ಲ
ಶ್ರೀಹರಿಯ ಸೇವಕರೆಂಬುದು ಬಲ್ಲ
'ವರಹೆನ್ನ ವಿಠ್ಠಲನ ’ ನೀನೆ ಬಲ್ಲ
ಅವರ ಚರಣಕ್ಕೆ ಎರಗುವದು ಅಲ್ಲಾ 5