ಒಟ್ಟು 97 ಕಡೆಗಳಲ್ಲಿ , 7 ದಾಸರು , 97 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ -ದೇವತಾ ಸ್ತುತಿ ಬ್ರಹ್ಮದೇವರು 352 ವಂದಿಸುವೆ ಜಗದ್ಗುರುವೆ ಮಂದಜಾಸನ ಬ್ರಹ್ಮ ನಂದಿವಾಹನಶೇಷಗರುಡರ ತಂದೆ ಸುಗುಣೋದ್ದಾಮ ಪ. ಚತುರವದನ ಶ್ರೀಹರಿಯ ಪ್ರಥಮ ಪುತ್ರ ವಿಧಾತ್ರ ಸತತ ಭಕ್ತಿಯೋಗೀಶಿರೋರತುನ ವಾಣೀಕಳತ್ರ ನೂರುಕಲ್ಪ ತಪವಗೈದ ಸಾರಋಜುಗಣೇಶ ಪಾರಮಾರ್ಥಜ್ಞಾನನಿಧಿ ಗಂಭೀರ ಸತ್ತ್ವವಿಲಾಸ 2 ಶ್ರೀ ಲಕ್ಷ್ಮೀನಾರಾಯಣನ ದಾಸಜನವರೇಣ್ಯ ವಾಸವಾದಿ ನಿರ್ಜರೌಘಪೋಷಕಾಗ್ರಗಣ್ಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬಿದೆ ನಾಗರಾಜ ಹರಿಯ ಪಾ- ದಾಂಭೋಜಭಕ್ತಿಭಾಜ ಪ. ಶಂಭುಶಕ್ರಾದ್ಯರು ಹಂಬಲಿಪರು ನಿನ್ನ ತುಂಬಿದ ಜೀವಕದಂಬಾಭಿಮಾನಿಯೆ ಅ.ಪ. ಸಾವಿರ ಜಿಹ್ವೆಯೊಳು ಹರಿಯ ಸ್ತುತಿ ಗೈವೆ ನಿರತ ಕೃಪಾಳು ಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟು ದೇವೇಶನಾದರು ಯಾವನು ಬಣ್ಣಿಪ ಶ್ರೀವಧೂವರನ ಕಮಲಪದ ರಾ- ಜೀವ ಸೌಂದರ್ಯವನು ತನ್ನಯ ಸಾವಿರಾಕ್ಷಿಗಳಿಂದ ಕಾಣುತ ಕೇವಲಾನಂದಾಬ್ಧಿ ಮಗ್ನನೆ 1 ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆ ಧರಿಸಿದೆ ಸುಪ್ರಚಂಡ ವರ ರಘುರಾಮನಾವರಜ ಲಕ್ಷ್ಮಣನಾದೆ ಹರಿ ಕೃಷ್ಣರಾಯನ ಪಿರಿಯನಾಗಿ ಅವ- ತರಿಸಿ ಭೂಭಾರವನುರೆ ಸಂ- ಹರಿಸಿ ವೇದ ಪುರಾಣ ತತ್ತ್ವವ ಶರಣಜನರಿಗೆ ಬೋಧಿಸುವ ಮಹಾ ಕರುಣಿ ಕಮಲಾಕಾಂತನ ಭಕ್ತನೆ 2 ಲಕ್ಷ್ಮೀನಾರಾಯಣನ ನಿದ್ರಾಸ್ಪದ ರಕ್ಷಿಸು ಕೃಪೆಯಿಂದೆನ್ನ ಸಾಕ್ಷಾದಚಲರೂಪ ನಿನ್ನೊಳು ನೆಲಸಿದ ಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸ ಮೋಕ್ಷ ಮಾರ್ಗಪ್ರದರ್ಶಿ ಸತತ ಮು- ಮುಕ್ಷು ಜನಮನಹರ್ಷ ನಿರ್ಜರ- ಪಕ್ಷ ಸುಫಲಪ್ರದ ಸದಾ ನಿರ- ಪೇಕ್ಷ ಗುರುವರ ರಾಕ್ಷಸಾಂತಕ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬಿದೆ ನಿನ್ನ ಗಣೇಶ ಜಗ- ದಂಬಿಕಾತನಯ ವಿಶ್ವಂಭರದಾಸ ಪ. ಲಂಬೋದರ ವಿಘ್ನೇಶ ಶರ- ಣೆಂಬುದು ಸುರನಿಕುರುಂಬ ಮಹೇಶ ಅ.ಪ. ತರುಣಾದಿತ್ಯಪ್ರಕಾಶ ನಿನ್ನ ಶರಣಾಗತನಾದೆ ಮೋಹನ ವೇಷ ಸುರುಚಿರ ಮಣಿಗಣ ಭೂಷ ಜಗ ದ್ಗುರುವೆ ಗುಹಾಗ್ರಜ ಪೊರೆಯೋ ನಿರ್ದೋಷ 1 ಸಂತಜನರ ಮನೋವಾಸ ಮೋಹ ಭ್ರಾಂತಿಯಜ್ಞಾನಧ್ವಾಂತವಿನಾಶ ಶಾಂತಹೃದಯ ಸುಗುಣೋಲ್ಲಾಸ ಏಕ ದಂತ ದಯಾಸಾಗರ ದೀನಪೋಷ 2 ಲಕ್ಷ್ಮೀನಾರಾಯಣನೆ ವ್ಯಾಸ ಗುರು ಶಿಕ್ಷಿತ ಸುಜ್ಞಾನ ತೇಜೋವಿಲಾಸ ಅಕ್ಷರ ಬ್ರಹ್ಮೋಪದೇಶವಿತ್ತು ಹುತಾಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋ ನಮೋ ಕಾಲಭೈರವ ಹರಿಯ ಚರಣ- ಸಮೀಪದೊಳಗಿದ್ದು ಮೆರೆವ ಪ. ಸಮೀಚೀನಜ್ಞಾನಭಕ್ತ- ಸಮೂಹವ ಕಾವ ಲಕ್ಷ್ಮೀ- ರಮಣನ ಕಾರ್ಯಮಂತ್ರಿ- ಯು ಮಾಧವನ ಸಮಾನಬಲ ಅ.ಪ. ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ- ಮುಟ್ಟಿ ಭಜಿಪ ವೈರಿಮರ್ದನ ಸೃಷ್ಟಿ ಮೂರರಲ್ಲಿ ಕೀರ್ತಿ- ಪಟ್ಟ ದಿಟ್ಟ ಧೀರ ಪರಮ ನಿಷ್ಠ ಪುಷ್ಪ ತುಷ್ಟಿಪ್ರದ ಬ- ಲಿಷ್ಠ ಶ್ರೇಷ್ಠ ಭೂತಪತಿಯೆ 1 ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ- ಧಾನ ಕಾರ್ಯ ನಿನ್ನದೆಂಬುದೆ ತಾನು ಕಿಂಚಿದರಿತು ಸನ್ನಿ- ಧಾನವನ್ನೋಲೈಸಿ ಬಂದೆ ದೀನಬಂಧು ಸುಗುಣಸಿಂಧು ಮಾನತ್ರಾಣವಿತ್ತು ಸಲಹೊ 2 ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ ಸ್ವಂತ ಬಂದು ಮಾಡು ರಕ್ಷಣೆ ಅಂತ್ಯಕಾಲದಲ್ಲಿ ಹರಿಯ ಚಿಂತನೆಗೆ ವಿಘ್ನ ಬಾರ- ದಂತೆ ಕಾವ ಮಹಾ ತೇಜೋ- ಸೂರಿ 3 ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ ಪಾಲಿಸುವ ಚಂದ್ರಶೇಖರ ಖೂಳ ಜನರ ಗರ್ವಮುರಿವ ಶೂಲಪಾಣಿ ಸುಗುಣಶ್ರೇಣಿ ಮೂಲಪತಿಯ ಪಾದಪದ್ಮ ಮೂಲದೊಳಗೆ ನಲಿವ ಚೆಲುವ 4 ಭೂರಿ ಮಹಿಮೆಯ ಭಕ್ತರಿಂಗಾ- ಧಾರವಾಗಿ ರಾಜಿಸಿರುವೆಯ ಧೀರ ಲಕ್ಷ್ಮೀನಾರಾಯಣನ ಸೇರಿದಾನತರ್ಗೆ ಮಂ- ದಾರ ಮಹೋದಾರ ಗಂ- ಭೀರ ಧೀರ ಚಾರುಚರಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪೋಗಿ ಬರುವೆನು ಎನ್ನ ಮನೆಗೆ ಜಗದೀಶ ಭಾಗವತಪ್ರಿಯ ಭಾಗೀರಥೀಜನಕ ಪ. ವರುಷವರುಷಕೆ ನಿನ್ನ ದರುಶನವನಿತ್ತೆನ್ನ ಕರುಣಿಸೈ ಶೇಷಾದ್ರಿವರ ಶ್ರೀನಿವಾಸ ವರ ಪ್ರಸಾದವನೀಯೊ ಜನ ಮೆಚ್ಚುವಂತೆ 1 ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿ ನಿಯಮತಿಯೀಯೊ ನೀರಜನಾಭನೆ ದಯಮಾಡೊ ತವ ಪಾದಸೇವೆಯನ್ನಿತ್ತೆನಗೆ ಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ2 ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾ ಧೀನ ನೀನೆಂಬ ಬಿರುದುಂಟಾದಡೆ ಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನ ಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಂದನು ಸರದಾರ ಸರದಾರ ಅಂಧಕರಿಪು ಸುಕುಮಾರಪ. ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರ ಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ1 ವಲ್ಲೀದೇವಿಮನೋಹಾರ ಒಲ್ಲದಜನಕತಿದೂರ ಸಾರ ಖುಲ್ಲದನುಜ ಸಂಹಾರ2 ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರ ಲಕ್ಷ್ಮೀನಾರಾಯಣನ ಕಿಂಕರ ರಕ್ಷಿಸು ನಮಿತಕುಬೇರ3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರಮ್ಮ ಸರಸ್ವತಿ ಬಾ ದ್ರುಹಿಣಯುವತಿ ಬಾ ನಿರ್ಮಲಮತಿ ತೋರಿ ಭಾರತಿ ಪ. ಭುಜಗ ಸದೃಶ ವೇಣಿ ಭಜಕರ ಚಿಂತಾಮಣಿ ಕೀರವಾಣಿ 1 ವೇದಾಂತರಂಗಿಣಿ ನಾದಸ್ವರೂಪಿಣಿ ಪ್ರಾದುರ್ಭವಳಾಗು ಸಾಧ್ವೀಕಲ್ಯಾಣಿ 2 ಅಕ್ಷಯ ಸುಖಭಾಷೆ ಆಶ್ರಿತಕಜನಪೋಷೆ ಲಕ್ಷ್ಮೀನಾರಾಯಣನ ಸೊಸೆ ಸುವಿಲಾಸೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೋ ಬಾರೋ ಮನುಕುಲಗುರುಗುಹಾ ಸೇರಿದಾನತರ್ಗೆ ಚಾರುಸುರಭೂರುಹಪ. ಮಾನಾಭಿಮಾನ ನಮ್ಮದು ನಿನ್ನಾಧೀನ ದೀನಜನರ ಸುರಧೇನು ಮಹಾಸೇನ1 ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆ ಭಕ್ತಿಜ್ಞಾನವನೀಯೋ ಶಂಕರಾತ್ಮಜನೆ 2 ಲಕ್ಷ್ಮೀನಾರಾಯಣನ ಧ್ಯಾನಾಭರಣ ಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ3
--------------
ತುಪಾಕಿ ವೆಂಕಟರಮಣಾಚಾರ್ಯ
ಬಿನ್ನಪ ಲಾಲಿಸಯ್ಯ ಭಕ್ತಪರಾಧ- ವನ್ನು ಕ್ಷಮಿಸಬೇಕಯ್ಯ ಪ. ಅನ್ಯಾಯ ಕಲಿಕಾಲಕ್ಕಿನ್ನೇನು ಗತಿ ಸುಪ್ರ- ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತಅ.ಪ. ಮಕ್ಕಳ ಮಾತೆಯಂದದಿ ಕಾಯುವ ಮಹ- ದಕ್ಕರದಿಂದ ಮುದದಿ ಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತು ರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನು ದಿಕ್ಕಿಲ್ಲದವರ ಧಿಕ್ಕಾರ ಗೈದರೆ ಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ- ವರ್ಕಳಮಣಿ ನಿನಗಕ್ಕಜವಲ್ಲವು ಕುಕ್ಕುಟಧರವರ ಮುಕ್ಕಣ್ಣತನಯ1 ಜಾತಿ ನೀತಿಯನು ಬಿಟ್ಟು ಡಾಂಭಿಕತನದ ರೀತಿಗೆ ಪ್ರೀತಿಪಟ್ಟು ಸೋತು ಹಣವ ಕೊಟ್ಟು ಖ್ಯಾತರೆಂಬುವ ಗುಟ್ಟು ಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿ ಯಾತುಧಾನರ ಗುಣ ಯಾತಕ್ಕರಿಯದು ಭೂತೇಶ್ವರಸಂಜಾತ ಸುರನರ- ವ್ರಾತಾರ್ಚಿತ ಪುರಹೂತಸಹಾಯಕ ನೂತನಸಗುಣವರೂಥ ಪುನೀತ2 ಯಾವ ಕರ್ಮದ ಫಲವೋ ಇದಕಿ- ನ್ಯಾವ ಪ್ರಾಯಶ್ಚಿತ್ತವೋ ಯಾವ ವಿಧವೊ ಎಂಬ ಭಾವವರಿತ ಪುರುಷ ಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲ ದೇವ ಲಕ್ಷ್ಮೀನಾರಾಯಣನ ಪಾದ ಸೇವಕನೀ ಮಹಾದೇವನ ಸುತ ಕರು- ಣಾವಲಂಬಿಗಳ ಕಾವ ನಮ್ಮಯ ಕುಲ- ದೇವ ವಲ್ಲೀಪತಿ ಪಾವಂಜಾಧಿಪ3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಭರತನ ರಮಣಿ ಶಿರಬಾಗುವೆ ತ್ರಿಜಗಜ್ಜನನಿ ಪ. ಭಾರತ ಭಾಗವತಾರ್ಥ ಬೋಧಿನಿ ಶಾರದೇಂದುನಿಭವದನಿ ಅ.ಪ. ಹರಿಗುರುಗಳಲಿ ಸದ್ಭಕ್ತಿ ದೃಢ ಕರುಣಿಸು ಸರಸಿಜನೇತ್ರಿ ಗಿರೀಶಾದಿ ಸರ್ವಸುರೌಘಪ್ರಣೇತ್ರಿ ಶರಣು ಶರಣು ಸುಪವಿತ್ರಿ 1 ಕಾಳಿ ದ್ರೌಪದಿ ಸುನಾಮೆ ನಮ್ಮ ಪಾಲಿಸು ಭೀಮಪ್ರೇಮ ಶ್ರೀ ಲಕ್ಷ್ಮೀನಾರಾಯಣನ ಭೃತ್ಯೆ ಕಾಲತ್ರಯ ಕೃತಕೃತ್ಯೆ 2
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಭಾಗ್ಯವತಿ ಜಯತಿ ಪ. ಸೂರಿಜನೋದ್ಧರೆ ಸುಗುಣಾಲಂಕಾರ ಸಾರಸದಳನೇತ್ರಿ ಜಯತಿ 1 ಚಿತ್ರಚರಿತ್ರೆ ಚಿತ್ಸುಖಗಾತ್ರೆ ಸತಿ ಜಯತಿ 2 ಅನಘ ಲಕ್ಷ್ಮೀನಾರಾಯಣನ ಶ್ರೀಚರಣಾ- ವನತರ್ಗೆ ನೀನೆ ಗತಿ ಜಯತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಪದಗಳು ಜಯದೇವ ಜಯದೇವ ಜಯ ಸುಬ್ರಹ್ಮಣ್ಯ ವರೇಣ್ಯ ಪ. ಅರಳಿದ ಕಮಲಸನ್ನಿಭಶುಭಚರಣ- ವರ ಪಂಚಾನನ ಪೋಲ್ವ ಕಟಿಕಾಂಚ್ಯಾಭರಣ ಉರುಶಕ್ತಿಕುಕ್ಕುಟಾಭಯವಜ್ರಹಸ್ತ ಶರಣಾಗತಜನದ ರಿತವಿಧ್ವಸ್ತ1 ಬಲಮುರಿಶಂಖದಂತಿಹ ಚೆಲ್ವಗ್ರೀವ ಸುಲಲಿತಮಾಣಿಕ್ಯಹಾರದಿಂ ಪೊಳೆವ ನಲಿವ ಕರ್ಣಕುಂಡಲಗಳ ಶೋಭ ಜ್ವಲಿತಕಿರೀಟಮಸ್ತಕ ಸೂರ್ಯಾಭ2 ಈ ಕ್ಷಿತಿಯೊಳಗೆ ಪಾವಂಜೇತಿ ನಾಮ ಸುಕ್ಷೇತ್ರವಾಸ ಸುಜನಜನಪ್ರೇಮ ಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರ ರಾಕ್ಷಸಾರಣ್ಯದಹನವೀತಿಹೋತ್ರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮರೆತಿರಲಾರೆ ಮನಸಾರೇ ಹರೇ ಪ ಮರೆತಿರಲಾರೆ ನಾ ಮಹಿತಚಾರಿತ್ರನ ಸರಸಿಜಪತ್ರ ನೇತ್ರನ ಅ.ಪ ಬಗೆಬಗೆ ರತಿಯಲಿ ಜಗವನು ಮೋಹಿಪ ಸುಗುಣನ ಜಗತ್ಪ್ರಾಣನ 1 ಚೇತನರಿಗೆ ಸುಖದಾತನ ದುಃಖ ವಿ ಘಾತನ ಲಕ್ಷ್ಮೀನಾರಾಯಣನ 2 ದಾಸರ ಹೃದಯನಿವಾಸನ ದೋಷನಿರಾಸನ ಶ್ರೀನಿವಾಸನ 3 ವೆಂಕಟರಮಣನ ಕಿಂಕರಶರಣನ ಸಂಕಟಹರ ನಿಷ್ಕಳಂಕನ 4 ಮಾನಿನಿಯ ಅಭಿಮಾನವ ಕಾಯ್ದನ ದೀನರ ಹರ್ಷನಿಧಾನನ 5 ರಾಮನ ದೈತ್ಯವಿರಾಮನ ಪಾವನ ನಾಮನ ಹೃದಯಾರಾಮನ 6 ಧರೆಯೊಳುತ್ತಮಪುಲಿಗಿರಿಯೊಳು ನೆಲಸಿಹ ವರದ ವಿಠಲವರದನ ದೇವನ 7
--------------
ವೆಂಕಟವರದಾರ್ಯರು
ಮರೆಯಲಿನ್ನೆಂತುಪಕಾರ ಮಾರುತಿ ಮರೆಯಲಿನ್ನೆಂತುಪಕಾರ ಪ. ವಿಧಿ ಮುಂತಾದ ತ್ರಿದಶರಿಂದೆನ್ನಯ ಸದಮಲಪ್ರಾಣಾಧಾರ 1 ಬ್ರಹ್ಮಚರ್ಯವ್ರತಧರ್ಮನಿಯಾಮಕ ನಿರ್ಮಲ ವಜ್ರಶರೀರ 2 ದಾಸವರ್ಯ ಗುಣರಾಶಿ ತ್ವದೀಯ ವಿ- ಶ್ವಾಸವಿನ್ನೆಷ್ಟೊ ಗಭೀರ 3 ವ್ಯಾಪ್ತಮಾದಾಪದಕಾಪ್ತ ನಿನ್ನುಪಕೃತಿ ಸಪ್ತಸಾಗರದಿಂದಪಾರ 4 ಶ್ರೀಲಕ್ಷ್ಮೀನಾರಾಯಣನು ಹನುಮನ ಆಲಿಂಗಿಸಿದನುದಾರ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಯಾಮಯ ಜಗವೆಲ್ಲ ಇದ- ರಾಯತ ತಿಳಿದವರಿಲ್ಲಪ. ಕಾಯದಿಂ ಜೀವನಿಕಾಯವ ಬಂಧಿಸೆ ನೋಯಿಸುವಳು ಸುಳ್ಳಲ್ಲಅ.ಪ. ತಿಳಿದು ತಿಳಿಯದಂತೆ ಮಾಡಿ ಹೊರ- ಒಳಗಿರುವಳು ನಲಿದಾಡಿ ಹಲವು ಹಂಬಲವ ಮನದೊಳು ಪುಟ್ಟಿಸೆ ನೆಲೆಗೆಡಿಸುವಳೊಡಗೂಡಿ 1 ಯೋಷಿದ್ರೂಪವೆ ಮುಖ್ಯ ಅ- ಲ್ಪಾಸೆಗೆ ಗೈವಳು ಸಖ್ಯ ದೋಷದಿ ಪುಣ್ಯದ ವಾಸನೆ ತೋರ್ಪಳು ಜೈಸಲಾರಿಂದಶಕ್ಯ2 ಕರ್ತ ಲಕ್ಷ್ಮೀನಾರಾಯಣನ ಭೃತ್ಯರ ಕಂಡರೆ ದೂರ ಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ- ರಾರ್ಥಕೆ ಕೊಡಳು ವಿಚಾರ3
--------------
ತುಪಾಕಿ ವೆಂಕಟರಮಣಾಚಾರ್ಯ