ರುಕ್ಮಿಣಿಯ ದಿವ್ಯತರ ರೂಪವನು ವರ್ಣಿಸಲು
ರುಕ್ಮಗರ್ಭಗೆ ವಶವೆ ರೂಢಿಯೊಳಗೆ ಪ
ಮಿಕ್ಕ ಮನುಜರ ಮಾತು ಲೆಕ್ಕವೇತರದಯ್ಯಾ
ಪಕ್ಷಿವಾಹನ ಕೇಳು ಪರಮಪುರುಷ ಅ.ಪ
ಆ ದೇವಿಯಂಘ್ರಿಗಳ ಕೋಮಲಕೆ ಕುರುಹಾಗಿ
ಭೂದೇವಿ ತರುಗಳಲಿ ತಳಿರ ತಾಳಿಹಳೊ 1
ಪಾದ ನಖಕಾಂತಿ ತಾ ಪ್ರಕಾಶಿಪ ತೆರೆಯು
ಈ ಪುತ್ಥಳಿಯ ಗಮನವಾದರ್ಶ ಹಂಸಕೆ 2
ಬಡನಡುವ ತಾ ನೋಡಿ ಅಡವಿ ಸೇರಿತು ಸಿಂಹ
ಚೆಲುವ ನೇತ್ರವ ನೋಡಿ ಚಪಲ ಹೊಂದಿತು ಹರಿಣ3
ನೀಲವೇಣಿಯ ನೋಡಿ ನಾಗಗಳು ನಾಚಿದವುಶ್ರೀ ಲಕುಮಿಯಾ ಕನ್ಯೆ ಶ್ರೀ ಕರಿಗಿರೀಶನರಾಣಿ 4