ರಾಮ ನಿನ್ನಯ ಚರಿತೆ ರಘು
ರಾಮ ನಿನ್ನಯ ಚರಿತೆ ಪ.
ಪ್ರೇಮದಿ ಭಜಿಸಲು ಕ್ಷೇಮವಹುದು ರಘುರಾಮ ಅ.ಪ.
ದಶರಥ ಪುತ್ರ ಕೌಶಿಕನ್ಯಾಗ ಕರ್ತ
ಪಶುಪತಿ ಧನುಭಂಗ ಜಾನಕೀಪತಿ ರಘು 1
ಪರಶುರಾಮನ ಗರ್ವಮುರಿದ
ವರ ಮಾತೆ ವಾಕ್ಯವ ಸಲಿಸೆ ಕಾನನಕೈದ ರಘುರಾಮ 2
ದಶಶಿರ ಸೀತೆಯ ಕದ್ದೊಯ್ಯಲು ಅರಸುತ
ಪತಿ ಹನುಮಗುಂಗುರವಿತ್ತ ಧೀರ 3
ಶರಧಿಯ ಲಂಘಿಸಿ ವರಹನುಮನು ತನ್ನ
ಕರದಲಿಯದ ವರ ಜಾನಕಿಗಿತ್ತ 4
ಚೂಡಾಮಣಿ ಮಾರುತಿಗೊಡೆ ಸೇತುವೆ
ಅತಿಶಯದಲಿ ಬಂಧಿಶಿ ದಶಶಿರನಳಿದಾ ರಘುರಾಮ 5
ನಿನ್ನಡಿ ನೆನೆವರೆ ಧನ್ಯರು ನಿತ್ಯ
ಸನ್ನುತ ಚರಿತ ಶ್ರೀ ಶ್ರೀನಿವಾಸ ರಘುರಾಮ 6