ಪವಮಾನ ಸುತರ ಪದಕಮಲಗಳ
ಸ್ತವನವು ಸಾಧನವು ಜವದಲಿ ಶ್ರೀ ಹರಿದಯ ಪಡೆವುದಕೆ ಪ
ನವ ನವ ರೂಪದಿ ಅವನಿತಲದೊಳಗೆ
ಭುವನಜನಾಭನ ವಿವರವನರುಹಿದ ಅ.ಪ
ಶ್ರೀ ರಾಘವನಾಜ್ಞೆಯ ಶಿರದಲಿ ವಹಿಸಿ
ವಾರಿಧಿಯನೆ ಲಂಘಿಸಿ ವಾರಿಜಲೋಚನೆ ಸೀತೆಯ ಕಂಡು
ತೋರುವ ಭಕುತಿಯನು ಶೂರ ದಾಶರಥಿಯಂಗುಳಿಯವ ಕೊಟ್ಟು
ಧೀರತನದಿ ಲಂಕೆಯ ಸೂರೆಯ ಮಾಡಿದ 1
ಪಾಂಡುಸತಿ ಮನುವನು ಜಪಿಸಲು ಜನಿಸಿ ಭೂ
ಪಾಂಡು ತನುಜರೊಳು ಮಂಡನರೆನಿಸಿ ಪ್ರಚಂಡ ವಿಕ್ರಮರಾದ 2
ಬಾದರಾಯಣರೊಳು ಶ್ರವಣವ ಮಾಡಿ
ಮೋದವ ಪೊಂದುತಲಿ ಸಾಧಿಸಿ ದ್ವೈತವ ಮೇದಿನಿಯಲಿ
ಸಾಧುಗಳಿಗೆ ಶ್ರೀಹರಿ ಪಾದಕಮಲದಲಿ
ಆದರ ನೀಡಿ ಸದಾ ಪ್ರಸನ್ನ ಪೂರ್ಣಬೋಧರೆಂದೆನಿಸಿದ 3