ತ್ಯಜಿಸಬಾರದೋ ನೀವು ಸಜ್ಜನರ ಸಂಗತ್ಯಜಿಸಬಾರದೋ ನೀವು ಪ
ದರುಶನ ಮಾಡೆ ದುರ್ದೋಷವು ಹರಿವುದುಸ್ಪರ್ಶವ ಮಾಡೆ ಪ್ರಪಂಚವು ಹರಿವುದು 1
ಮಾತು ಆಡುತಲಿರೆ ಮೈಯದು ಮರೆವುದುಪ್ರೀತಿಯಿಂ ಶರಣೆನೆ ಪರಿಣಾಮ ತೋರ್ಪುದು 2
ವಾಸನೆ ಇರೆ ನಿರ್ವಾಸನೆಯಹುದುಸೂಸುತಲಿಹ ಮನ ನಿಶ್ಚಿತವಹುದು 3
ಸಂಶಯವಿರೆ ನಿಃಸಂಶಯವಹುದುಹಂಸೋಹಂ ಭಾವ ಸಹಜಾವಾಗಿ ನಿಲ್ಲುವುದು 4
ಸುದತಿ ಇಹಪರ ತಾ ಬಿಡಲು ಬಹುದುಸುಧಾ ಚಿದಾನಂದನ ಬೆರೆತರೆ ತ್ಯಾಗ ಮಾಡಲು ಬಾರದು 5