ಸದಮಲ ಸುಂದರ ಪೀಠಕೆ ಪ
ಇಂದು ಸುಂದರಮುಖಿ ಮಂದಗಮನೆ ಸಖಿ
ಚಂದ್ರ ಬಿಂಬಾಧರೆ ಸುಂದರಿ ವೈಯಾರಿ ಮಂದಾರ ಮಾಲೆಯೆ 1
ನೀರಜನೇತ್ರೆಯೆ ಚಾರುದಸುಗಾತ್ರಿಯೆ
ಮಾರಹರನ ಸಖ ಮೋಹನ ಮಿತ್ರೆಯೆ ಕೀರವಾಣಿಯೆ 2
ಸುರವರ ಪೂಜಿತೆ ನರವರ ವಂದಿತೆ
ಶರಣಾಗತ ಪರಿಪಾಲಿನಿ ಭಾಮಿನಿ ರಾಮ ವಲ್ಲಭೆ 3
ದಿವ್ಯ ಮಂಗಳರೂಪೆ ಭವ್ಯ ಕಲಾಲಾಪೆ
ಸರ್ವ ಸುಗುಣಮಣಿ ಹಾರಿಣಿ ರಮಣಿ ಭೂಮಿ ನಂದಿನಿ 4
ಮಾನಿನಿ ಕಾಮಿನಿ
ಜ್ಞಾನ ಸಂವರ್ಧಿನಿ ಜಾನಕಿ ಜನನಿ ಮಾನವೇಶ್ವರಿ5