ಪಾದ ಪಂಕಜವನು ಪ
ಮಂಕುಮತಿಯ ಬಿಡಿಸಿ ನಿನ್ನ ಕಿಂಕರನೆಂದೆನಿಸೊ ಅ.ಪ.
ಕಲಿಯುಗದೊಳು ನೀನು ಸಕಲ ಸುಜನರ
ಕಲುಷ ಕಳೆಯುವೆನೆಂದು ಬಹುಮೋದದಿಂದ
ಎಲರುಣಿ ಪರುವತದೊಳಗೆ ವಾಸನಾಗಿ
ಕರ ಪಿಡಿದಂಥ 1
ತೆತ್ತೀಸಕೋಟಿ ದೇವತೆಗಳು ತನ್ನ
ಸುತ್ತಲು ನಿಂತು ಪರಿಚರಿಯವನು ಮಾಡೆ
ಎತ್ತ ನೋಡಲು ಸಿರಿಯು ಓ ಎನುತಿರೆ
ಚಿತ್ತಜನೈಯ್ಯನು ನಗುತ ನಿಂದಿರುವಂಥ 2
ಭುವನತ್ರಯಂಗಳನೆಲ್ಲ ಲೀಲೆಯಿಂ ಕಾವ
ಪವನವಂದಿತನೆ ಮಹಾನುಭಾವ
ನವ ಮೋಹನಾಂಗ ಶ್ರೀ ರಂಗೇಶವಿಠಲಜವನ ಬಾಧೆಯ ಬಿಡಿಸಯ್ಯಾ ಶ್ರೀಲೋಲ 3