ಶ್ಯಾಮಸುಂದರಿ ಭೂಮಿನಂದಿನಿ ರಾಮಸುಂದರಿ ಸೀತೆಯೆ ಪ
ಪ್ರೇಮದಿಂದ ದಿವ್ಯ ಪೀಠಕೆ ಭಾಮಿನಿಯೆ ಬಾ ಪ್ರಿಯೆ ಅ.ಪ.
ದೇವ ಸುಂದರಿಯರು ಸೇರಿ ದೇವಿ ನಿನ್ನ ಕರೆವರು
ದೇವ ವೃಂದವು ನಿನ್ನ ಸ್ಮರಿಸಿ ಭಾವಿಸುತ್ತಲಿರುವರು 1
ಮಂದಗಮನೆ ಸುಂದರಾಂಗಿ ಮಂದಹಾಸ ಶೋಭಿತೆ
ಚಂದ್ರಬಿಂಬ ಸದೃಶವದನೆ ಚಂದ್ರವಂಶ ನಂದಿನಿ 2
ಭ್ರಮರ ವೇಣಿ ಸುಮ ಸುಮಾಲಿ ಕಾಯುತೆ
ವಿಮಲ ವಾಣಿ ರಮಣಿ ತರುಣಿ, ಸುಮನ ಕೀರವಾಣಿಯೆ 3
ಮಾನಿನಿ ಶಿರೋಮಣಿಯೆ ಧೇನುನಗರ ವಲ್ಲಭೆ
ಜಾನಕಿಯೆ ಸನ್ನುತೆಯೆ ಮೌನಿ ಬೃಂದವಂದಿತೆ4