ಒಟ್ಟು 40 ಕಡೆಗಳಲ್ಲಿ , 1 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಕೊಳ್ಳವ ಬೀಳದಿರೊ ಪ ಹರುಷ ವಿಷಾದವು ಮನಸಿನದೆಂಬರೆ | ಮನಕೆ ತಗುಲಿತೆಂತಾ || ಸ್ಪರಿಶ ಶಬ್ದವು ರೂಪವು ರಸ ಗಂಧದಿ | ತೋರಿತು ಭ್ರಾಂತೀ1 ಹಸಿವು ತೃಷವು ಜೀವನದೆಂಬರೆ ಜೀವನಕದು ಉಂಟೇ || ವಿಷಯ ಸುಖವು ಕಳೆದಾನಂದದ ಬೋಧದೊಳಗುಂಟೇ 2 ಜರೆ ಮರಣವು ತನುವಿನದೆಂಬರೆ | ತನುವದು ಒಂದಲ್ಲಾ || ಚಿನುಮಯ ಭವತಾರಕನೊಲಿದರೆ ಶೇಡೋರ್ಮಿಗಳೇನಿಲ್ಲಾ 3
--------------
ಭಾವತರಕರು
ಮಾಡಿದ್ಯಾ ಇಂದಿಗೆ ಹೀಂಗ | ಆಗದ್ಹಾಂಗ || ಕೂಡಿ ದುರ್ಜನರೆಲ್ಲ ನಗುವ ಪರಿಯಲಿ ಪ ಏನು ಕಂಡು ಒಲಿದೀ ನೀ ಅವಗೆ | ಖಳನ ಘಾತಕಮನದವಗೆ | ತಾನು ದಾರೆಂದು ವಿಚಾರಿಸದಧಮಗೆ |ಸಾನುಕೂಲಾಗಿ ಸರ್ವ ಬಗೆಯಲಿ 1 ಸಾಧು ಸಂತರು ಎಂಬುದನರಿಯಾ | ಭೇದವಾದ ಕುಬುದ್ಧಿಯಮರೆಯಾ || ಕಾದಾಡಿ ಕರ್ಮದ ಹಾದೀ ಹಿಡಿಯದ | ವಾದಕಂಜದ ಜನ ಸಾಧಕನಿಗೆ 2 ಹಿಂದಿನ ಗುಣಗಳ ಬಿಟ್ಟ್ಯಾಕೋ | ಮಂದಿಗೆ ಪದವಿಯ ಕೊಟ್ಟ್ಯಾಕೋ ತಂದೆ ಸದ್ಗುರು | ಭವತಾರಕನಂಘ್ರಿಯ | ಹೊಂದಿದವರಿಗಭಿಮಾನವಿಲ್ಲದಂತೆ 3
--------------
ಭಾವತರಕರು
ಮೊಚ್ಚೆ ಮೊಚ್ಚೆಲಿ ಹೊಡೆಯಿರಿ ಇವನ | ನೆಚ್ಚಿದೆತನುವಿದನೆಂಬುವನ || ಹುಚ್ಚ ನಾಯಿಯೋಲ್‍ಎಚ್ಚರವಿಲ್ಲದೆ | ಅರ್ಚಕ ಜನರನು ಬೊಗಳುವನ ಪ ಪರ ಉಪಕಾರಿಲ್ಲದ | ಮಾನುಷನಾಗಿಬಾಳುವನ || ತಾ ಅಜ್ಞಾನ ಮಾರ್ಗದಿ ನಡೆದು |ಜ್ಞಾನವ ಪರರಿಗೆ ಹೇಳುವನ 1 ಸತಿಸುತರತಿಶಯ ಹಿತವರು ಎನುತಲಿ | ಸತತವು ಅವರೊಳುಮರಗುವನ | ಮಿತಿಯಿಲ್ಲದೆ ಧನಧಾನ್ಯವ ಬೇಡುತ |ಕ್ಷಿತಿಯ ಮೇಲೆ ತಿರುಗುವನ2 ಕರುಣವ ಪಡೆಯದೆ ಭವತಾರಕನ | ನರ ತನುಗಳನುಸ್ತುತಿಸುವನ | ಪರಿಪರಿ ಸಂಸಾರದ ವಿಷಯದಲಿ |ನಿರುತದಿ ಮನವನು ಮಥಿಸುವನ 3
--------------
ಭಾವತರಕರು
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ಪ್ರಪಂಚದಿ ಈಡ್ಯಾಡೋ ಪ ಸ್ಥೂಲಕೆ ಭೋಗಕೆ ಸಾಕ್ಷಿಯು ಸೂಕ್ಷ್ಮವು | ಕಾರಣದಲಿ ಸಾಕ್ಷೀ || ಭೋಗಾಪೇಕ್ಷೆಯು ಸೂಕ್ಷ್ಮವು ನೀನಿತುದುಹ ಕಾರಣ ಲಕ್ಷೀ 1 ಸ್ಪರ್ಶದಿ ಶಬ್ದವು ಶಬ್ದಾಸ್ಪರ್ಶವಿದು | ರೂಪವು ತೋರಿತು ರೂಪವು ರಸದಲಿ || ಗಂಧದಿ ಕಾಣಿಸಿತೊ 2 ಕರ್ಮದಿ ರೂಪವು ರೂಪದಿ ಕರ್ಮವು | ಕರ್ಮರೂಪಕ್ಕೇ ||ವ್ಯಾಪಕ ಭವತಾರಕನೆಂದರಿಯದೆ ಕಲಾಪವ್ಯಾಕೀ ಮನಕೆ 3
--------------
ಭಾವತರಕರು
ಸುಖವಿಲ್ಲ ಆತ್ಮಕೆ ಈ ದೇಹದಿಂದ |ಸುಖವ ಪಡೆವುದು ದೇಹ ಈ ಆತ್ಮದಿಂದ ಪ ಕರ್ಮದೊಳು ಜನಿಸಿ ಬಂದದ್ದು ಈ ದೇಹ |ಕರ್ಮಕ್ಕೆ ಅನುಕೂಲವಾಗುವದು ಈ ದೇಹ |ಕರ್ಮವನು ಕಡೆ ತನಕ ಮಾಡುತಿರುವದು ದೇಹ 1 ನಾಮರೂಪದಲ್ಲಿ ನಿಲಿಸಿಹುದು ಈ ದೇಹ |ನೇಮನೀತಿಯನ್ನು ನಡೆಸುವದು ಈ ದೇಹ ||ಕಾಮ ಕ್ರೋಧದಲ್ಲಿ ಕುಂದಿ ಕುಂದಿ ಬೆಂದು |ಪ್ರೇಮದಲಿ ವೈರಾಗ್ಯ ತೊರೆ ತೊರೆದು 2 ಹಿಂದೆ ಬಂದಿದ್ದು ಈ ದೇಹ ಮುಂದೆ ನಿಂತಿದ್ದು ಈ ದೇಹ |ಎಂದೆಂದೂ ಬಿಡನು ಜೀವನು ಈ ದೇಹ ||ತಂದೆ ಗುರು ಭವತಾರಕನ ಪಾದಾರವಿಂದವ |ಹೊಂದಿದವರಿಗೆ ಇಲ್ಲೋ ಈ ನಾಲ್ಕು ದೇಹ 3
--------------
ಭಾವತರಕರು
ಹೆಡಗುಡಿ ಕಟ್ಟಿ ಹೊಡೆಯಿರಿ ಇವನ | ಬಡತನ ಸಂತರಿಗ್ಹೇಳುವನ ಪ ಸೆಡಗರದಲಿ ಸಂಸಾರವ ಮಾಡುತ ಬಿಡದಾಶೆಯಲೀ ಮರಗುವನ ಅ. ಪ ಅನ್ನವ ಬೇಡುವ ಅತಿಥಿಯು ಬಂದರೆ | ನಿನ್ನೆ ನಾ ಉಪವಾಸೆಂಬುವನ | ಅನ್ಯಾಯದಲಿ ಪಾಪವ ಗಳಿಸಿ |ನಾಯ್ ಕುನ್ನಿಯಂತೆ ಎಲ್ಲರ ಬೊಗಳುವನ 1 ವಸ್ತ್ರವ ಕೊಡು ಎಂದವರಿಗೆ ಹರಕೊಂ- | ದೊಸ್ತ್ರವ ತೆರೆದು ತೋರುವನ | ವೇಶ್ಯಾ ಸ್ತ್ರೀಯರ ಕಂಡರೆ ಕರೆದು | ಉತ್ತಮ ವಸ್ತ್ರವನೀಯುವನ 2 ಮಂತ್ರವ ಅರಿಯದೆ | ತಂತ್ರವ ಮಾಡುತ | ಅಂತರ ಪೂಜೆಯ ಅರಿಯದವನ | ಅಂತರಂಗದಿ ಭವತಾರಕನಂಘ್ರಿಯ | ಶಾಂತದಿಂದಲಿ ಧ್ಯಾನಿಸದವನ 3
--------------
ಭಾವತರಕರು