ಒಟ್ಟು 39 ಕಡೆಗಳಲ್ಲಿ , 29 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿವರನ ಕರುಣಕ್ಕೆ ಪಾತ್ರ ನಾನಾದೆ ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ ಪರಮಪ್ರಹ್ಲಾದರಿಗೆ ನಿರುತ ಶರಣೆಂದು 1 ಪನ್ನಂಗಶಯನ ಉನ್ನತ ಮಹಿಮೆಗಳ ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ ಗನ್ನಗತಕನಾದ ಅಣ್ಣನಿಗೆ ಮಹ ನೀತಿ ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು 2 ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ ವನಜನಾಭನ ಸೇವೆ ಮನುಮುಟ್ಟಿ ಗೈದು ಜನನಮರಣವ ಗೆಲಿದು ಘನಪದವಿ ಗಳಿಸಿದ ಹನುಮರಾಯರ ಪದಕೆ ಮಣಿದು ಶರಣೆಂದು 3 ತರಳತನದಲಿ ನಿಖಿಲ ಧರೆಭೋಗಗಳ ತೊರೆದು ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ ಪರಮಕಂಟಕ ಗೆಲಿದವರಿಗರಿತು ಶರಣೆಂದು 4 ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ ಭಕ್ತರೆನಿಸಿದ ಮಹ ನಿತ್ಯಾತ್ಮರ ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು 5
--------------
ರಾಮದಾಸರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಕಡುಕೃಪೆಯಿಂದಹರಿ ಒಲದರೆ ಸತ್ಯದ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನಡೆವಳಿ ಮೌನವೆ ಸಾಕ್ಷಿದೃಡ ಭಕ್ತರಿಗುಣಬಡಿಸಿದಂಥವರಿಗೆಷಡುರ ಸ್ನಾನವೇ ಸಾಕ್ಷಿ ಪಅನ್ನದಾನ ಮಾಡಿದ ಮನುಜಗೆ - ದಿವ್ಯಾನ್ನವುಂಬುವುದೇ ಸಾಕ್ಷಿಅನ್ನದಾನ ಮಾಡದ ಮನುಜಗೆ - ಸರರನ್ನಕೆ ಬಾಯ್ಬಿಡುವುದೆ ಸಾಕ್ಷಿ 1ಕನ್ಯಾದಾನ ಮಾಡದ ಮನುಜಗೆ ಚೆಲ್ವಹೆಣ್ಣಿನ ಭೋಗವೇ ಸಾಕ್ಷಿಕನ್ಯಾದಾನ ಮಾಡದ ಮನುಜಗೆ -ಪರಹೆಣ್ಣಿನ ಹೋರಾಟವೇ ಸಾಕ್ಷಿ 2ಪರರಿಗೊಂದು ತಾನೊಂದುಂಬುವರಿಗೆಜ್ವರ -ಗುಲ್ಮ ರೋಗವೇ ಸಾಕ್ಷಿಪರಿಪರಿ ವಿಧದಿಂದ ಹಿರಿಯರ ದೂರುವಗೆತಿರಿದು ತಿಂಬುವುದೇ ಸಾಕ್ಷಿ 3ಕಂಡ ಪುರುಷಗೆ ಕಣ್ಣಿಡುವ ಸತಿಯು - ತನ್ನಗಂಡನ ಕಳೆಯುದೇ ಸಾಕ್ಷಿಪುಂಡತನದಿಪರ ಹೆಂಗಳೆನುಳುಪುವಗೆಹೆಂಡಿರು ಕಳೆವುದೇ ಸಾಕ್ಷಿ 4ಕ್ಷೇತ್ರದಾನದ ಮಾಡಿದ ಮನುಜಗೆ - ಏಕಛತ್ರದ ರಾಜ್ಯವೇ ಸಾಕ್ಷಿಮುಕ್ತಿ ಪಡೆದು ತಿಳಿ ಪುರಂದರವಿಠಲನಭಕ್ತನಾಗುವುದೇ ಸಾಕ್ಷಿ 5
--------------
ಪುರಂದರದಾಸರು
ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾದಿಂಡೆಯರಾದವರ ಖಂಡಿಸುತಿರುವ ಕತ್ತಿಯತಿರುಹುತಿರುವ ಗದೆಯಪನಿಷ್ಟರಾಗಿಹ ಭಕ್ತರ ದೂರನುಕೇಳಿಕೋಪವತಾಳಿಕಟ್ಟುಗಳಿಲ್ಲದ ರೌದ್ರವು ತೋರಲುಮೋರೆಕಂಗಳುಕೆಂಪೇರಲುಉಟ್ಟಿಹ ಪೀತಾಂಬರವನೆ ಕಾಶಿಯಹೊಯ್ದು ದಿಟ್ಟ ನಿಟ್ಟುಸಿರಸುಯ್ದುಕಟ್ಟಿದಳು ಆಯುಧಂಗಳ ಧರಿಸಿ ಝಳಝಳ ಝಳಪಿಸಿ1ಹೂಕಾಂರವನೇ ಮಾಡುತ ದೇಹವ ಮರೆದು ಕಂಗಳ ತೆರೆದುಬೆಂಕಿಯ ಸುರಿಯಲು ಎಡಬಲ ಅದಿರೆ ಹರಿಹರ ಬೆದರೆಅಂಕೆಯಿಲ್ಲದ ಸಿಡಿಲಬ್ಬರದಂತಾಗೆ ಹಾ ಎಂದು ಕೂಗೆಪಂಕಜಮುಖಿತಾ ಕೂಗುತ ಅವುಡುಗಚ್ಚೆಭೂಮಿ ಬಾಯಿ ಬಿಚ್ಚೆ2ನಡೆದಳು ಶತ್ರುಗಳೆಡೆಗೆ ಆಗ ವೇಗದಲಿ ಮನೋ ಯೋಗದಲಿತೊಡರಿಕೊಂಡಳುವೈರಿಸೇನೆಯ ನಿಲಿಸಿ ತಾ ಘುಡು ಘುಡಿಸಿತುಡುಕಿ ಪಿಡಿದಳು ದುಷ್ಟರ ಜಿಹ್ವೆಯನೂಕಿ ತಾ ಮುಂದಕೆ ಜೀಕಿಖಡುಗದಿ ಸೀಳುತ ರೌದ್ರದಿ ನಿಂತಳು ವೀರೆಕಂಗಳುಕಿಡಿಯನೆ ಕಾರೆ3ಹೊಯ್ದಳಾಕ್ಷಣ ದುರ್ಜನ ಸೇನೆಯ ಬಗಳೆರಿಪುತಲೆಗಳು ಉರುಳೆತೊಯ್ದಳಾಕ್ಷಣ ರಕ್ತದ ಬಿಂದಿಗೆ ಉಕ್ಕೆ ಮುಖ ಪುಟವಿಕ್ಕೆಸುಯ್ದರು ವೈರಿಗಳೆಲ್ಲರು ಗತಿಮತಿಗೆಟ್ಟು ಬಹುಕೇಡ ಕೆಟ್ಟುಕಾಯ್ದಳು ತನ್ನನು ನಂಬಿದವರ ಭಯ ಹರಿಯೆಬಹು ಸುಖ ಸುರಿಯೆ4ಹಮ್ಮಿನವರನೆಲ್ಲರ ತೊಳೆದು ಶಾಂತಳಾಗಿ ಬಗಳೆ ತಾ ತೃಪ್ತಳಾಗಿಬ್ರಹ್ಮ ಚಿದಾನಂದ ಭಕ್ತನಾಥನ ಸೇರಿ ಅಮಿತಾನಂದವೇರಿಸುಮ್ಮಗೆ ಪೂಜಿಸಿಕೊಳುತ ಕೇವಲ ಘನದಿ ತಾ ನಿತ್ಯನುದಿನದಿಬ್ರಹ್ಮರಂದ್ರದಿ ವಾಸ ಮಾಡಿಹ ಸುಖಿಯಆ ಬಗಳಾಮುಖಿಯ5
--------------
ಚಿದಾನಂದ ಅವಧೂತರು
ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ ||ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ಪಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |ಹಿಂಗಿಕೊ ಭವಜನ್ನ್ಯ ದುಃಖ ||ಸಂಗಾವಾಗಿ ರುದ್ರಾಕ್ಷಿಯಂಗಾಳರ್ಚಿಸೂತಾ | ನಿಃಸಂಗನಾಗೊ ದುರ್ವಿಷಯದೀ 1ಸುವಿವೇಕಿ ಮನಸಿಲಿಂದಾ ಶಿವಶಬ್ದವ ಶೋಧಿಸಿ |ಕವಿಗಳ ಮುಖದಿಂದ ತಿಳಿಯೋ ||ನವತ್ರಿಪತ್ರಯುಕ್ತ ಬಿಲ್ವಾ ಸಮರ್ಪಣೆ ಮಾಡೊ |ಸವೆಯಾದಂಥ ಪದವೈದೂವಿ2ಭಜಿಸೋ ವೀಭೂತಿಯನ್ನು ದ್ವಿಜಸ್ತೋಮಾಕೆರಗಾದೀರೊ |ಪ್ರಜಗಳಿಗೆ ತೋರದಿರು ಭಾವಾ ||ಅಜಪ್ರಾಣೇಶ ವಿಠ್ಠಲಾನು ಅಜಿನಾಂಬರ ಸಮನೆನಬ್ಯಾಡಾ |ವಿಜಯವಂತನಾಗುವೀ ಜಗದೀ 3
--------------
ಪ್ರಾಣೇಶದಾಸರು
ಹನುಮ-ಭೀಮ-ಮಧ್ವ60ಕರುಣಿಸೈಹರಿಚರಣಸೇವೆ ನಿರುತಪಪರಿಪರಿಯ ಕ್ಲೇಶಗಳ ಪರಿಹರಿಸುತ ಪೊರೆವದುರಿತದೂರ ಹರಿಯಚರಣಸೇವಕನೆಅ.ಪಕಂಜಾಕ್ಷನ ದಯದಿ ಅಂಜದೆ ನೀರಧಿಯಹಿಂಜರಿಯದೆ ದಾಂಟಿ ಸಂಜೆ ಕಳೆಯೆ ಲಂಕೆರಂಜಿಸುವದು ಕಂಡು ಕಂಜಾಕ್ಷಿಗುಂಗುರ ಪ್ರ-ಭಂಜನನೀಡಿದೆಯೊ ಅಂಜನೆಯತನಯ1ದುರಳ ದೈತ್ಯನಾದ ಜರೆಯ ಸುತನ ಸೀಳಿಹರಿಗರ್ಪಿಸಿ ಸರ್ವವನು ಧರಣಿ ಭಾರನಿಳುಹಿಹರಿಯ ಮನವನರಿತು ಪರಿಪರಿಲಿ ಸೇವಿಸುತಪರಮಭಕ್ತನಾದೆ ಪರಿಸರನೆ ಸಲಹೊ2ಮುದ್ದು ಕೃಷ್ಣನ ಸೇವೆ ಶುದ್ಧಮನದಿ ಮಾಡಿಸದ್ವೈಷ್ಣವರ ಕುಲದ ಪದ್ಧತಿಯನರುಹಿಪದ್ಮನಾಭಕಮಲನಾಭ ವಿಠ್ಠಲನೊಲಿಸಿಸದ್ಗ್ರಂಥಗಳ ರಚಿಸಿ ಉದ್ಧರಿಸಿದೆ ಜಗವ 3
--------------
ನಿಡಗುರುಕಿ ಜೀವೂಬಾಯಿ
ಹರಿಪದಯುಗಲವನಿತ್ಯ ನೆನೆದವೆಗೆ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಪರಮಪದವಿಯೇ ಸಾಕ್ಷಿ ||ಹರಿ -ಗುರು ದೂಷಣ ಮಾಡಿದ ಮನುಜಗೆ |ನರಕರೌರವವೆ ಸಾಕ್ಷಿ ಪ.ಕಡುಭಕ್ತಿಯಲಿ ಕೃಷ್ಣನÀ ನೆನೆದರೆ |ನಡೆಯಲಿ ಸತ್ಯವೆ ಸಾಕ್ಷಿ ||ದೃಡ ಭಕುತಿಯಿಂದ ಉಣಬಡಿಸಿದವಗೆ |ಷಡುರಸಾನ್ನವೇ ಸಾಕ್ಷಿ 1ತಾನೊಂದುಂಡು ಪರರಿಗೊಂದಿಕ್ಕುವಗೆ |ಗುಲ್ಮರೋಗವೇ ಸಾಕ್ಷಿ ||ಹೀನನಾಗಿ ಹಿರಿಯರನು ದೂಷಿಪಗೆ |ಹೀನ ನರಕವೇ ಸಾಕ್ಷಿ 2ಕನ್ಯಾದಾನವ ಮಾಡಿದವಗೆ ದಿವ್ಯ |ಹೆಣ್ಣಿನ ಭೋಗವೆ ಸಾಕ್ಷಿ ||ಕನ್ಯಾದಾನವ ಮಾಡದ ಮನುಜಗೆ |ಹೆಣ್ಣಿನ ದೈನ್ಯವೇ ಸಾಕ್ಷಿ 3ಅನ್ನದಾನ ಮಾಡಿದ ಮನುಜಗೆ ದಿ - |ವ್ಯಾನ್ನವನುಂಬುದೆ ಸಾಕ್ಷಿ ||ಅನ್ನದಾನ ಮಾಡದ ಮನುಜಗೆ ತಿರಿ -ದುಣ್ಣುತಿರುವುದೇ ಸಾಕ್ಷಿ 4ಕ್ಷೇತ್ರದಾನ ಮಾಡಿದ ಮನುಜಗೆ ಏತ - |ಛತ್ರವನಾಳ್ವುವದೆ ಸಾಕ್ಷಿ ||ಪಾತ್ರವರಿತು ಧರ್ಮಮಾಡಿದವಗೆ ಸತ್ -ಪುತ್ರರಾಗುವುದೆ ಸಾಕ್ಷಿ 5ಕಂಡ ಪುರುಷರಿಗೆ ಕಣ್ಣಿಡುವ ನಾರಿಗೆ |ಗಂಡನು ಕೇಳುವುದೆ ಸಾಕ್ಷಿ ||ಪುಂಡನಾಗಿ ಪರಸ್ತ್ರೀಯರ ಸೇರುವಗೆ |ಹೆಂಡಿರ ಕಳೆವುದೆ ಸಾಕ್ಷಿ 6ಭಕ್ತಿಯರಿಯದ ಅಧಮನಿಗೊಂದು |ಕತ್ತಲಮನೆಯೇ ಸಾಕ್ಷಿ ||ಮುಕ್ತಿಪಡೆವುದಕೆ ಪುರಂದರವಿಠಲನ |ಭಕ್ತನಾಗುವದೆ ಸಾಕ್ಷಿ 7
--------------
ಪುರಂದರದಾಸರು