ಗುಣಾತೀತ ಸದ್ಗುರು ಗಣನಾಥ
ಘನಸುಖದಾಯಕ ಸದೋದಿತ ಧ್ರುವ
ಅನುದಿನ ಮಾಡುವೆ ಮನೋಹರ
ಅಣುರೇಣುದೊಳು ನೀ ಸಾಕ್ಷಾತ್ಕಾರ
ಮುನಿಜನರಿಗಾಗುವಿ ಸಹಕಾರ
ನೀನಹುದೋಭಕ್ತರ ವಿಘ್ನಹರ 1
ನಿಮ್ಮ ಭೋಧಗುಣವೆ ಸರಸ್ವತಿ
ಸಮ್ಯಜ್ಞಾನ ಬೀರುವ ನಿಜಸ್ಥಿತಿ
ಬ್ರಹ್ಮಾದಿಗಳೊಂದಿತ ನಿಜಖ್ಯಾತಿ
ಬ್ರಹ್ಮಾನಂದ ದೋರುವ ಫಲಶ್ರುತಿ 2
ಬೇಡಿಕೊಂಬೆ ನಿಮಗೆ ಅನುದಿನ
ಕುಡುವವರಿಗೆ ನೀ ನಿಧಾನ
ಮೂಢ ಮಹಿಪತಿ ಒಡೆಯ ನೀ ಪೂರ್ಣ
ಮಾಡುತಿಹ ನಿತ್ಯವು ನಾ ನಮನ 3