ಕಂಡದಿಲ್ಲದ ಚಿತ್ರ ನಾ ಕಂಡೆ ಪ
ಕೋತಿ ಸತ್ತುದ ಕಂಡೆ ಕೋಣನಳಿದುದ ಕಂಡೆಮಾತಿಗೆ ಬಾರದ ನಾಯ ಹರಿ ತಿಂಬುದ ಕಂಡೆ 1
ಕಾಗೆ ಕಣ್ಣು ಹೋದುದ ಕಂಡೆ ಕಳ್ಳರ ತಲೆ ಬಿದ್ದುದ ಕಂಡೆಕೋಗಿಲೆ ಕೊನೆಯಲಿ ಕೂಗಿದುದ ಕಂಡೆ 2
ಮರವ ಕಡಿದುದ ಕಂಡೆ ನೆರಳಲಿ ನಿಂತುದ ಕಂಡೆಬರಿಯ ವೋಡಲಿ ಹಾಲ ಕರೆದುಂಬುದ ಕಂಡೆ 3
ನೀರ ಮೇಲೆ ಒಲೆ ಉರಿವುದ ಕಂಡೆಮೇರುವಿನ ಶಿಖರದಿ ಜ್ಯೋತಿಯ ಕಂಡೆ 4
ಇರುಳು ಹಗಲು ಒಂದಾಗಿ ಇರುವುದ ಕಂಡೆಗುರು ಚಿದಾನಂದ ಬ್ರಹ್ಮವ ಗುರುತಿಲ್ಲದ ಕಂಡೆ5