ದೇವನಲ್ಲವೇನೋ ಸದ್ಗುರು ಮಹಾದೇವನಲ್ಲವೇನೋ | ಆದಿಯೋಳ್ ಸಿದ್ಧರು ಹೋದ ದಾರಿಯ | ತೋರಿ ಭೇದವ ಬಿಡಿಸಿದ ಮೂರುತಿ ಪ
ನರಜನ್ಮದೊಳಗೆ ಬಂದು ನೀನು | ಪ್ರಪಂಚದ ಕಡಲು ಮಧ್ಯದಿ ನಿಂದು | ಅರಿತು ಮರೆತು ಒಮ್ಮೆ ಗುರುವೆಂದು ನೆನೆದರೆ | ಗುರುತಿಟ್ಟು ಅವರಿಗೆ ಪರತರ ತೋರುವ 1
ಆಶಾಪಾಶವ ಬಿಡಿಸಿ ಮಾಡಿದ | ದೋಷ ಭವಂಗಳ ಕರ್ಮವ ಕೆಡಿಸಿ | ನ್ಯಾಸ ಧ್ಯಾಸದಿ ಜಪ ಮಾಡೆ ಗುರು |ಬೋಧ ಪ್ರಕಾಶವ ತೋರಿದ ಈಶನು 2
ಭಕ್ತಿ ಜ್ಞಾನವ ಹಿಡಿದು ನಂಬಿದಗೆ | ಮುಕ್ತಿಯ ನಿಶ್ಚಯದಿ ಪಾಲಿಸುವ | ಕರ್ತೃ ಸದ್ಗುರು ಭವತಾರಕ ಧರೆಯಲಿ | ಪ್ರತ್ಯಕ್ಷವಾದಂಥ ಪರಬ್ರಹ್ಮರೂಪನು 3