ಒಟ್ಟು 38 ಕಡೆಗಳಲ್ಲಿ , 20 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇವ ಬೆಲ್ಲದೊಳಿಡಲೇನು ಫಲಹಾವಿಗೆ ಹಾಲೆರೆದೇನು ಫಲ ? ಪ.ಕುಟಿಲವ ಬಿಡದಲೆ ಕುಜನರು ಮಂತ್ರವಪಠನೆಯ ಮಾಡಿದರೇನು ಫಲ?ಸಟೆಯನ್ನಾಡುವ ಮನುಜರು ಮನದಲಿವಿಠಲನ ನೆನೆದರೆ ಏನು ಫಲ ? 1ಮಾತಾ - ಷತೃಗಳ ಬಳಲಿಸುವಾತನುಯಾತ್ರೆಯ ಮಾಡಿದರೇನು ಫಲ ?ಘಾತಕತನವನು ಬಿಡದೆ ನಿರಂತರನೀತಿಯನೋದಿದರೇನು ಫಲ ? 2ಕಪಟತನದಲಿ - ಕಾಡುವರೆಲ್ಲರುಜಪಗಳ ಮಾಡಿದರೇನು ಫಲ ?ಕುಪಿತ ಬುದ್ಧಿಯನು ಬಿಡದೆ ನಿರಂತರಉಪವಾಸ ಮಾಡಿದರೇನು ಫಲ ? 3ಪತಿಗಳ ನಿಂದಿಸಿ ಬೊಗಳುವ ಸತಿಯರುವ್ರತಗಳ ಮಾಡಿದರೇನು ಫಲ ?ಅತಿಥಿಗಳೆಯಡೆಯಲಿ ಭೇದವ ಮಾಡಿ ಸದ್ಗತಿಯನು ಬಯಸಿದರೇನು ಫಲ ? 4ಹೀನ ಗುಣಂಗಳ ಬಿಡದೆ ನದಿಯೊಳುಸ್ನಾನವ ಮಾಡಿದರೇನು ಫಲ ?ಜಾÕನಿ ಪುರಂದರವಿಠಲನ ನೆನೆಯದೆಮೌನವ ಮಾಡಿದರೇನು ಫಲ? 5
--------------
ಪುರಂದರದಾಸರು
ಮಾವನ ಮನೆಯೊಳಗೆ ಕೋವಿದರಿರಬಹುದೆ ? ಪ.ಹಾವ ಹಿಡಿಯಲು ಬಹುದುಹರಣ ನೀಡಲು ಬಹುದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇವ ಕಿಚ್ಚನು ಹಿಡಿದು ನುಂಗಬಹುದು ||ಭಾವೆಯ ತಂದ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ 1ಪರರ ಸೇರಲುಬಹುದು ಪತಿತರಲ್ಲಿರಬಹುದು |ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು ||ತರುಣಿಯ ತಂದೆಯ ಮನೆಯವಾಸಕ್ಕಿಂತ |ತರುಗಿರಿಗುಹೆಗಳಲಿ ಇದ್ದು ಜೀವಿಸಬಹುದು 2ಮಾವ - ಅತ್ತೆಯ ನೊಂದು ಅತ್ತಿಗೆಯು ತಾ ಜರೆದು |ಹೇವವನಿಕ್ಕಿ ಚೂರ್ಣವ ಮಾಡಲು ||ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3ಒಂದೊಂದು ತೆಂಗಳೂಳು ಬಹುಮಾನ ನಡತೆಗಳು |ಒಂದೆರಡು ತಿಂಗಳೊಳಗೆ ಹಿತವಾದವು ||ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು |ಸಂದೇಹವೇಕೆ ಸಂಸಾರಿಗೂ 4ಈ ಪರಿಯಲುಂಬಂಥ ಅಳಿಯ ಭೋಜನದಿಂದ |ಗೋಪಾಳ ಲೇಸು ಅಭಿಮಾನಿಗಳಿಗೆ ||ಶ್ರೀಪತಿ ನಮ್ಮ ಪುರಂದರವಿಠಲನಈಪರಿಭಜಿಸಿ ಸುಖಿಯಾಗೊ ಮನವೆ* 5
--------------
ಪುರಂದರದಾಸರು
ಯಮ ತನ್ನ ಪುರದಿ ಸಾರಿದನು ನಮ್ಮಕಮಲನಾಭನ ದಾಸರ ಮುಟ್ಟದಿರಿ ಎಂದು ಪ.ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತನಿಜ ದ್ವಾದಶನಾಮ ಧರಿಸಿಪ್ಪರ ||ತ್ರಿಜಗವಂದಿತಳಾದ ತುಳಸೀ ಮಾಲಿಕೆಯುಳ್ಳಸುಜನರ ಕೆಣಕದೆ ಸುಮ್ಮನೆ ಬನ್ನಿರೊ ಎಂದು 1ತಾಳದಂಡಿಗೆ ಗೀತವಾದ್ಯ ಸಮ್ಮೇಳದಿಊಳಿಗವನು ಮಾಳ್ಪ ಹರಿದಾಸರ ||ಕೇಳಿದೊಡನೆ ಕರವೆತ್ತಿ ಮುಗಿದು ಯಮನಾಳುಗಳೆಂದು ಹೇಳದೆ ಬನ್ನಿರೊ ಎಂದು 2ಹೆಮ್ಮೆಯ ಸಿಡಿಯೇರಿ ಬೇವಿನುಡುಗೆಯುಟ್ಟುಚಿಮ್ಮುತ ಚೀರುತ ಬೊಬ್ಬೆಯಿಟ್ಟುಕರ್ಮಕೆ ಗುರಿಯಾಗಿ ಪ್ರಾಣಹಿಂಸೆಯ ಮಾಳ್ಪಬ್ರಹ್ಮೇತಿಕಾರನೆಳತನ್ನಿರೋ ಎಂದು 3ಮಾತಾಪಿತರ ದುರ್ಮತಿಯಿಂದ ಬೈವರಪಾತಕಿಗಳ ಪರದ್ರೋಹಿಗಳನೀತಿಯಿಲ್ಲದೆ ವಿಮೋಹಿಸಿದವರ ಬಾಯೊಳುಒತ್ತಿ ಸೀಸವ ಕಾಸಿ ಹೊಯ್ದು ಕೊಲ್ಲಿರಿ ಎಂದು 4ನರರ ಹಾಡಿ ಪಾಡಿ ನರರ ಕೊಂಡಾಡುವನರಕಿಗಳ ಕೀಳುನಾಯ್ಗಳ ಮನ್ನಿಸುವದುರುಳ ಜಾÕನಿಜನರನೆಳೆತಂದು ಬಾಯೊಳುಅರಗನೆ ಕಾಯಿಸಿ ಹೊಯ್ದು ಕೊಲ್ಲಿರಿ ಎಂದು 5ಕೇಶವಹರಿ ಎಂಬ ದಾಸರ ಹೃದಯದಿವಾಸವಾಗಿಹಸಿರಿ ತಿರುಮಲೇಶದಾಸರ ದಾಸರ ದಾಸನೆನಿಪಹರಿದಾಸರನ್ನು ಕೆಣಕದೆ ಬನ್ನಿರೋ ಎಂದು 6ಅನ್ಯಮಂತ್ರವ ಬಿಟ್ಟು ದೈವಮಂತ್ರವ ಭಜಿಸಿಪನ್ನಗಶಯನನೆ ಗತಿಯೆನ್ನುತತನ್ನ ಭಕ್ತರ ಕಾಯ್ವ ಪುರಂದರವಿಠಲನಉನ್ನತದಲಿ ನಮಸ್ಕರಿಸಿ ಬನ್ನಿರೊ ಎಂದು 7
--------------
ಪುರಂದರದಾಸರು