ಒಟ್ಟು 47 ಕಡೆಗಳಲ್ಲಿ , 22 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹ್ಯಾಂಗೆ ಉದ್ದರಿಸುವಿ ಎನ್ನ ಕೃಷ್ಣ ಕರುಣ ಸಂಪನ್ನ ಪ ಹೋಗಿ ಹೊಗಿ ವಿಷಯ ಕೂಪದಲ್ಬೀಳ್ವವನಾಅ.ಪ. ದಾಸನು ಎಂದೆನಿಸಿ ಮೆರೆವೆ ಮನದೀ ಲೇಶಾ ಭಕುತಿಯನಾನೊಂದರಿಯೇ ವೇಷಹಾಕಿದೆ ಧನಕೆ ಬರಿದೇ ಆಶೆ ಇಟ್ಟು ಭವದಿ ವಂಚಕನೆನಿಸಿದವನಾ1 ಮಂದಿ ಜನರ ಮುಂದೆ ವೈರಾಗ್ಯನಟನೆ ಮಂದಿರದೊಳು ಬಹು ಕಾಮದ ಭಜನೆ ಬಂಧು ಬಳಗ ಕೂಡೆ ಬಹಳ ಭಕ್ತಿ ಇಂದಿರೇಶನ ಧ್ಯಾನ ದೋಳ್ವಿರಕ್ತಿ2 ಗುರುಹಿರಿಯರ ಜರಿವೊದೆ ಜಪವು ದುರುಳರ ಸಂಗ ದೋಳ್ಮೆರೆವೋದೆ ವ್ರತವು ಪರಿಸರನ ಶಾಸ್ತ್ರದೋಳ್ಮೌನ ನರನಾರಿ ಸ್ತವ ದೋಳ್ಧ್ಯಾನ 3 ವೇದ ಓದಿದೆ ನಾನು ಆದರೇನು ಮೋದತೀರ್ಥರ ಮರ್ಮ ಸಿಗಲಿಲ್ಲವು ಇನ್ನು ವಾದಕ್ಕನುಕೂಲ ವಾಯ್ತದು ಅಷ್ಟೆ ಖೇದ ತೊಲಗದೆ ಮನದಿ ಬಹುಕಷ್ಟಪಟ್ಟೇ 4 ಭುಕ್ತಿ ಪಡೆಯೆ ಕಾಲಕಳೆದೆನಲ್ಲಾ ಯುಕ್ತಿಯಿಂದಲಿ ನೀನು ಒಲಿವೋನು ಅಲ್ಲಾ ಭಕ್ತ ಜನರ ಸಂಗ ನಾ ಪಿಡಿಯಲಿಲ್ಲ ಮುಕ್ತಿಗಾಗುವ ಭಾಗ್ಯ ಎನ್ನಲಿಲ್ಲವಲ್ಲಾ 5 ಸ್ವೋತ್ತುಮರ ನೋಡೆ ಮಾತ್ಯರ್ಯ ಎನಗೇ ವಾತ್ಯಲ್ಯ ತೋರೆನು ಸ್ಧಾವರ ಜನಕೇ ಕುತ್ಸಿತ ಪಾವಡ ಬೀರುವೆ ಜಗಕೆ ತಾತ್ಸಾರ ತೋರುವೆ ಭಕ್ತರ ಗುಣದೀ6 ಈಷಣ ತ್ರಯಗಳ ಬಿಡಲಿಲ್ಲ ಲೇಶಾ ಭಾಷಣದಿ ತೋರ್ಪೆಜ್ಞಾನ ಪ್ರಕಾಶ ಈಶ ನೀನೊಬ್ಬನೆ ಸರಿಯೆಂಬೆ ಹರಿಯೆ ದಾಸನಾಗಿ ಬಾಳ್ವೆ ಬಹು ನೀಚ ಜನಕೆ 7 ನಾನು ನಾನೆಂಬುದು ತುಂಬಿದೆ ಮನದಿ ನೀನು ನಿನ್ನಾಧೀನ ವೆಂತ್ಹೇಳಿ ದೃಢದಿ ಜ್ಞಾನವಿದ್ದರು ಇಲ್ಲ ಎನಚರ್ಯೆ ನೋಡೆ ಮಾನಿನಿಯರ ಬೊಂಬೆ ಗುಣಗಣನೆ ಮಾಡೆ 8 ಮೂರೊಂದು ಹರಿತ್ಯಾಗ ತೊರೆಯಲಿಲ್ಲ ವೈರಿ ಆರರ ಬೇರು ನಾಕೀಳಲಿಲ್ಲ ವೀರ ವೈಷ್ಣವನಾಗಿ ಬಾಳಲಿಲ್ಲಾವಲ್ಲ ಗಾರು ಮನ್ನಿಸದಿರೆ ಗತಿಯೊಬ್ಬರಿಲ್ಲಾ 9 ವ್ರತನೇಮ ಉಪವಾಸ ಸಾಧನೆಯಿಲ್ಲ ರತಿಯಿಂದ ಸಲಹೆಂದು ನಾಕೂಗಲಿಲ್ಲ ಮತಿ ಮತದಿ ಪುಟ್ಟಿದರು ಫಲವಾಗಲಿಲ್ಲ ಗತಿ ನೀನೆ ಕೈ ಪಿಡಿಯೊ ಕೇಳುತ ಸೊಲ್ಲ 10 ಡಂಭಕ ತನದಿಂದ ಬಹುಕಾಲ ಕಳೆದೇ ತುಂಬಿ ಭಕ್ತಿಯ ಬೇಗ ನೀ ಕಾಯೋಮುಂದೆ ಜಂಭಾರಿ ಜಯತೀರ್ಥ ವಾಯ್ವಾಂತರ್ಗತನಾದ ಕಂಬುಕಂಧರಧಾರಿ “ಶ್ರೀ ಕೃಷ್ಣವಿಠಲ” 11
--------------
ಕೃಷ್ಣವಿಠಲದಾಸರು
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆಪುಟ್ಟಬಾಲಕರೊಳುಪರಮಶ್ರೇಷ್ಠನಾದನಾಪಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನಕ್ನೂರರೂಪ ತೋರಿ ಭೂಮಿದಾನ ಬೇಡ್ದನ 1ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಮಾವ ಕಂಸನ ತರಿದ ಬಲರಾಮನನುಜನ 2ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ 3ಉಲಿವು ಮಾಡಬೇಡಿರಮ್ಮ ಚಲುವ ಮಲಗುವನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ 4ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ 5
--------------
ನಿಡಗುರುಕಿ ಜೀವೂಬಾಯಿ
ನೆಲೆಸೆನ್ನ ಹೃದಯ ಮಂದಿರದಿ - ಶ್ರೀ ಹರಿಯೆ ನೀ |ಸಲಿಸೆಮ್ಮ ಮನದಿಷ್ಟಅನುದಿನ ದಯದಿಪಸಿರಿಮಿಂಚಿ ಮರುತ್ಯುಪರ್ಣ ಪು - |ರಾರಿವಂದಿತಚರಣಸರಸಿಜ ||ಪರಮಭಕ್ತ ಪ್ರಹ್ಲಾದ ನಾರದ |ವರಪರಾಶರ ಮುಖಸುಸನ್ನುತ ಅ.ಪನಾರುವಿ ಭಾರವ ಪೊರುವಿ - ಬಲು - |ಬೇರುಗಳನೆ ಕಿತ್ತು ಮೇಲುವಿ -ಕರಿ - |ವೈರಿ ರೂಪಗೊಂಡ ಗರುವಿ - ಬ್ರಹ್ಮ - |ಚಾರಿ ಖಳರ ಕತ್ತರಿಸುವಿ |ವೀರದಶರಥಸುತ ಸುರಾರ್ಚಿತ |ಜಾರತನದಲಿ ವ್ರತವ ಕೆಡಿಸುತ |ತೋರಿ ಮೆರೆವನೆತರಳ ಬಲು ಗಂ - |ಭೀರ ಕುದುರೆಯನೇರಿ ಮೆರೆವನೆ 1ಅನಿಮಿಷ ಮಂದರೋದ್ಧರಣ - ನೀನಾ - |ವನಗಪಂಚಾನನವದನ - ವಾ - |ಮನ ದಾನವರ ಕೊಯ್ವಕದನ - ಹೀನ - |ದನುಜರಾವಣ ಸಂಹರಣ ||ಧೇನುಕಾಸುರ ಶಕಟಮರ್ದನ |ಜಾÕನದಾನ ವಿಡಂಬನಾನಕ |ಭಾನುಮಸ್ತಕ ನೀಲವರಕರ |ದೀನಜನಸಂತ್ರಾಣ ನಿಪುಣನೆ 2ಮಚ್ಛಕಚ್ಛಪ ಸ್ವಚ್ಛಕಿರನೆ - ಬಲು - |ಅಚ್ಚ ಶಿಶುಮೊರೆ ಕೇಳಿದವನೆ ||ಸ್ವೇಚ್ಛೆಯವಟು ಪರಶುಕರನೆ - ರಾಮ - |ವತ್ಸಾಸುರನ ವಧಿಸಿದವನೆ ||ತುಚ್ಛ ಜನರಿಗೆ ಕಪಟಕಾರಣ |ಹೆಚ್ಚಿನಶ್ವದ ಮೇಲೆ ಹೊಳೆವನೆ |ಮೆಚ್ಚಿಪುರಂದರ ವಿಠಲನಪರ - |ಮಾಚ್ಯುತದ ಪದವೀವ ದೇವನೆ 3
--------------
ಪುರಂದರದಾಸರು
ಪರಮದೇಶಿಕ ಮಾವಿನೋದಾ ದಿವ್ಯಪರಮಾರ್ಥಮುನು ವೇಗಾ-ಬೋಧಿಂಚರಾದಾ ಪಸುರಮುನೀಂದ್ರ ವಿಚಾರ-ಸೋಹಮಸ್ಮಿಧಿಯೇರಾವರಮುಲಡಗಿತಿನಿಚ್ಚಿ-ದಾರಿದೇರ್ಚುಕೋರಾ 1ನೀದು ಶೇವಕುಡೈತಿ-ನಿಚ್ಚಯಿಂಚಿನ ಚಾಲೂವಾದಿ ಭೀಕರು ಡೈನ-ವೈಷ್ಣವಾಗ್ರಜುಡೇ 2ಆಳ್ವಾರೆಂಬೇರುಮಾನಾರ್ ಜೀಯರ್ ಸ್ವಾಮುಲೆ ಗಾದಾತಾಳ್ವೋಯ ಚೂಡಿದಿ ಯನುಚು ಪಾಲಿಂಚಲೇದಾ 3ಮಂತ್ರಜ್ಞಾನ ರಹಸ್ಯಮಂತ್ಯಮಾದಿಗ ಜೂಪೆಅಂತರಂಗುಡೆ ಸ್ವತಂತ್ರಸ್ಯ ತಂತ್ರ 4ಯೇಲೆ ವಾಡನಿ ವಚ್ಚಿ-ಅಲಗಿಂಚಿನದಿಚ್ಚೆಕೋಲುಪೇಟೇಶ ಮಾಂಪಾ ಅತುಲ ಶ್ರೀರಾಮಾ 5
--------------
ತುಳಸೀರಾಮದಾಸರು
ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |ಮಡಿ ಮಾಡುವ ಬಗೆ ಬೇರುಂಟು ಪ.ಪೊಡವಿ ಪಾಲಕನ ಧ್ಯಾನ ಮಾಡುವುದು |ಬಿಡದೆ ಭಜಿಸುಮದು ಅದು ಮಡಿಯಾ ಅಪಬಟ್ಟೆಯ ನೀರೊಳಗಿಟ್ಟು ಒಣಗಿಸಿ |ಉಟ್ಟರೆ ಅದು ತಾ ಮಡಿಯಲ್ಲ ||ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |ಬಿಟ್ಟರೆ ಅದು ತಾ ಮಡಿಯೊ 1ಪರಧನ ಪರಸತಿ ಪರನಿಂದೆಗಳನು |ಜರೆದಹಂಕಾರಗಳನೆ ತೊರೆದು ||ಹರಿಹರಿಯೆಂದು ದೃಢದಿ ಮನದಲಿಇರುಳು ಹಗಲು ಸ್ಮರಿಸಲು ಮಡಿಯೋ 2ಎಚ್ಚರವಿಲ್ಲದೆ ಮಲ ಮೂತ್ರ ದೇಹವ |ನೆಚ್ಚಿ ಕೆಡಲು ಬೇಡಲೊ ಮನವೆ ||ಅಚ್ಚುತಾನಂತನ ನಾಮವ ಮನಗೊಂಡು |ಸಚ್ಚಿಂತೆಯಲಿರುವುದೆ ಮಡಿಯೊ 3ಭೂಸುರರು ಮಧ್ಯಾಹ್ನಕಾಲದಲಿ |ಹಸಿದು ಬಳಲಿ ಬಂದರೆ ಮನೆಗೆ ||ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |ಹಸನಾಗಿ ಉಂಬುವುದು ಅದು ಮಡಿಯೊ ? 4ದಶಮಿ - ದ್ವಾದಶಿಯ ಪುಣ್ಯಕಾಲದಲಿ |ವಸುದೇವ ಸುತನ ಪೂಜಿಸದೆ ||ದೋಷಕಂಜದೆ ಪರರನ್ನು ಭುಜಿಸಿ ಯಮ - |ಪಾಶಕೆ ಬೀಳ್ವುದು ಹುಸಿಮಡಿಯೊ ? 5ಸ್ನಾನ -ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |ಜಾÕನ -ಮಾನ - ಸುಮ್ಮಾನದಿಂದ ||ದೀನವಂದ್ಯನಸುಜನ ಸಂತರ್ಪಣ |ಅನುದಿನಮಾಡುವುದು ಘನಮಡಿಯೊ6ಗುರು ಹಿರಿಯರ ಹರಿದಾಸರ ನೆನೆದು |ಚರಣಕೆರಗಿ ಭಯ ಭಕ್ತಿಯಿಂದ ||ಪರಿಪರಿ ವಿಧದಲಿ ಪುರಂದರವಿಠಲನ |ನೆರನೆಂಬುವುದು ಉತ್ತಮ ಮಡಿಯೊ 7
--------------
ಪುರಂದರದಾಸರು