ಒಟ್ಟು 47 ಕಡೆಗಳಲ್ಲಿ , 21 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಘುರಾಮಗೆ ಬೆಳೆಗಿರೆ ಬೇಗ ಆರತಿ ಪ. ಪಶುಪತಿ ಮಿತ್ರಗೆ ಋಷಿಗಳ್ಯಾಗವ ಕಾಯ್ದವಗೆ ಶಶಿಮುಖಿ ಅಹಲ್ಯೆ ಶಾಪವ ಕಳೆದ ಅತುಳ ಮಹಿಮ ಶ್ರೀಹರಿಗೆ 1 ಶಿವನ ಧನುವ ಮುರಿದವನಿಜೆಯಳ ತಂದು ಜವದಿ ಪರಶುರಾಮನಿಗೆ ತವಕದಿ ಗರ್ವವ ಮುರಿದವನೀಶಗೆ ಕಮಲಾಕ್ಷಿಯರೀಗ ಬೇಗಾ 2 ಅನುಜನವಡಗೂಡಿ ವನಿತೆ ಸಹಿತಲೀ ತನುಜನಗೂಡಿದನುಜನ ಮುರಿದ ಘನದ ಶ್ರೀ ಶ್ರೀನಿವಾಸನಿಗೆ 3
--------------
ಸರಸ್ವತಿ ಬಾಯಿ
ಶ್ರೀಶ ವೇದವ್ಯಾಸನಾದನು ಪ ಶ್ರೀಶ ವೇದವ್ಯಾಸನಾಗಲು ಸಾಸಿರ ನಯನ ಸಾಸಿರ ವದನ ಕರ ಮಿಕ್ಕ ಸುರರೆಲ್ಲ ತು- ತಿಸಿ ಹಿಗ್ಗುತ ಹಾರೈಸಲಂದು ಅ.ಪ. ದರ್ಪಕ ಜನಕ ಸರ್ಪತಲ್ಪನಾಗಿ ತಪ್ಪದನುಗಾಲ ಇಪ್ಪ ವಾರಿಧೀಲಿ ಕಂದರ್ಪ ಹರನೈಯ ಸುಪರ್ಣರಥನಾಗಿ ಒಪ್ಪಿಕೊಂಡು ಇಪ್ಪತ್ತು ಲಕ್ಷಗಲಿಪ್ಪ ಯೋಜನದ ಅಪ್ಪನ ಅರಮನೆ ದರ್ಪಣದಂತೆ ತಾ ರಪ್ಪಥ ಮೀರಿದಂತಿಪ್ಪದು ನೋಡಿ ಸಾ- ಮೀಪಕ್ಕೆ ವಾಣೀಶ ಬಪ್ಪ ಬೇಗಾ 1 ಬಂದು ಬೆನ್ನೈಸಿದ ಮಂದಮತಿ ಕಲಿ- ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು ಕುಂದ ಭಕ್ತನಿಗೆ ಒಂದೆ ಮಾತಿನಲಾ- ನಂದ ಬಡಿಸಿ ಪೋಗೆಂದು ಪೇಳೆ ಅಂದು ಸುಯೋಜನಗಂಧಿ ಗರ್ಭದಲ್ಲಿ ನಿಂದವತರಿಸುತ ಪೊಂದಿದ ಅಜ್ಞಾನ ಅಂಧಕಾರವೆಲ್ಲ ಹಿಂದು ಮಾಡಿ ಸುರ- ಸಂದಣಿ ಪಾಲಿಸಿ ನಿಂದ ದೇವ 2 ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ ಕಂಜಾಪ್ತನಂದನದಿ ರಂಜಿಸುವ ಕಾಯ ಮಂಜುಳ ಸುಜ್ಞಾನ ಪುಂಜನು ವಜ್ಜರ- ನಿತ್ಯ ಅಂಜಿದಗೆ ಸಂಜೆಯ ತೋರಿ ಧನಂಜಯ ಶಿಷ್ಯ ನೀ- ಗಂಜದಂತೆ ಕರಕಂಜವ ತಿರುಹಿ ನಿರಂಜನ ಪೇಳಿದ ಕುಂಜರ ವೈರಿಯ ಭಂಜನನು 3 ಗಂಗಾತೀರದಲಿ ಶೃಂಗಾರ ಉಪವ- ನಂಗಳದರೊಳು ಶಿಂಗಗೋಮಾಯು ಭು ಮೂಷಕ ಮಾತಂಗ ಸಾರಮೇಯ ಕೊಂಗಹಂಗ ಸರ್ವಾಂಗ ರೋಮ ಶರಭ ವಿಹಂಗ ಶಾರ್ದೂಲ ಸಾ- ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ ವಂಗ ತುರಂಗ ಪತಂಗ ಭೃಂಗಾದಿ ತು- ರಂಗವು ತುಂಬಿರೆ ಮಂಗಳಾಂಗ 4 ಬದರಿ ಬೇಲವು ಕಾದರಿ ಕಾಮರಿ ಮಧುಮದಾವಳಿ ಅದುಭುತ ತೆಂಗು ಕದಳಿ ತಪಸಿ ಮದಕದಂಬ ಚೂ- ತದಾರು ದ್ರಾಕ್ಷಿಯು ಮೃದು ಜಂಬೀರವು ಬಿದಿರು ಖರ್ಜೂರ ಮೋದದಿ ದಾಳಿಂಬ ತುದಿ ಮೊದಲು ಫ ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ ಇದೆ ಆರು ಋತು ಸದಾನಂದ 5 ವನದ ನಡುವೆ ಮುನಿಗಳೊಡೆಯ ಕಾನನ ಸುತ್ತಲು ಆ- ನನ ತೂಗುತ್ತ ಧ್ವನಿಯೆತ್ತಿ ಬಲು- ಗಾನ ಪಾಡಿದವು ಗುಣದಲ್ಲಿ ಕುಣಿದು ಖಗಾದಿ ಗಣಾನಂದದಿಂದಿರೆ ವನನಿಕರ ಮೆಲ್ಲನೆ ಮಣಿದು ನೆ- ಲನ ಮುಟ್ಟುತಿರೆ ಅನಿಮಿಷರು ನೋ ಡನಿತಚ್ಚರಿಯನು ಪೇಳೆ 6 ಮೌನಿ ನಾರದನು ವೀಣೆ ಕೆಳಗಿಟ್ಟು ಮೌನವಾದನು ಬ್ರಹ್ಮಾಣಿ ತಲೆದೂಗಿ ಗೀರ್ವಾಣ ಗಂಧರ್ವರು ಗಾನ ಮರೆದು ಇದೇನೆನುತ ಮೇನಕೆ ಊರ್ವಸಿ ಜಾಣೀರು ತಮ್ಮಯ ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ ದೀನರಾದರು ನಿಧಾನಿಸಿ ಈಕ್ಷಿಸಿ ಎಣಿಸುತ್ತಿದ್ದರು ಶ್ರೀನಾಥನ 7 ನಮೋ ನಮೋಯೆಂದು ಹಸ್ತ- ಕಮಲ ಮುಗಿದು ನಮಗೆ ನಿಮ್ಮಯ ಅಮಲಗುಣ ನಿಗಮದಿಂದೆಣಿಸೆ ಕ್ರಮಗಾಣೆವು ಉತ್ತಮ ದೇವ ಕೂರ್ಮ ಖಗಮೃಗ ಸಮವೆನಿಸಿ ಅ- ಚಮತ್ಕಾರದಲ್ಲಿ ನಾಮಸುಧೆಯಿತ್ತ ರಮೆಯರಸ ಆಗಮನತ8 ಇದನು ಪಠಿಸೆ ಸದಾ ಭಾಗ್ಯವಕ್ಕು ಮದವಳಿ ದಘವುದದಿ ಬತ್ತೋದು ಸಾಧನದಲ್ಲಿಯೆ ಮದುವೆ ಮುಂಜಿ ಬಿಡದಲ್ಲಾಗೋದು ಶುಭದಲ್ಲಿ ಪದೆಪದೆಗೆ ಸಂಪದವಿಗೆ ಜ್ಞಾನ- ನಿಧಿ ಪೆಚ್ಚುವುದು ಹೃದಯ ನಿರ್ಮಲ ಬದರಿನಿವಾಸ ವಿಜಯವಿಠ್ಠಲ ಬದಿಯಲ್ಲೆ ಬಂದೊದಗುವ 9
--------------
ವಿಜಯದಾಸ
ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು ತ್ವರದಿ ಉದ್ಧರಿಸೋ ಈ ಭವದಿ ಬೇಗಾ ಪ ಪೊಟ್ಟಿಯೊಳಿರುವ ಶಿಶು ಕಷ್ಟವನೆ ಕೊಡಲು ಸಹ ಕೆಟ್ಹೋಗಲೆಂದು ತಾ ಬಯಸಳು ಸೃಷ್ಟಿ ನಿನ್ನೊಳಗಿರಲು ಹೊಟ್ಟೆಯೊಳಗಿರುವೆನು ಅಷ್ಟು ತಪ್ಪೇನು ಕ್ಷಮಿಸಿ ಪೊರೆವುದಾ ತೆರದಿ 1 ಜ್ಞಾನವಿಲ್ಲದೆ ಹರಿಯೇ ನಾನು ನೀನು ಸರಿಸ- ಮಾನರೆಂದರಿತು ನಾ ಮೋಸ ಹೋದೆ ನಾನು ನಿನ್ನಾಧೀನವಿರುವೆನೇ ಹೊರ್ತು ನೀ ನೆನ್ನಧೀನನೆಂದಿಗೂ ಅಲ್ಲವೊ ದೊರೆಯೇ 2 ಏಸು ಜನ್ಮಗಳಿಂದ ವೇಷವಾ ಧರಿಸಿ ಹನು- ಮೇಶ ವಿಠಲನೆ ನಾ ತೋರಿಸಿದೆನೋ ಕೇಶವಾ ಕೊಡು ನೀ ಸಂತೋಷವಾಗಿರೆ ಮುಕ್ತಿ ಬೇಸರಾಗಿರೆ ಇನ್ನು ವೇಷವನು ಬಿಡಿಸೊ 3
--------------
ಹನುಮೇಶವಿಠಲ