ಒಟ್ಟು 63 ಕಡೆಗಳಲ್ಲಿ , 24 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಯ್ಯ ಶ್ರೀಹರಿ ಬೆಳಗಾಯಿತು ಪ.ಏಳು ದೇವಕಿತನಯ ನಂದನಕಂದಏಳು ಗೋವರ್ಧನ ಗೋವಳರಾಯ ||ಏಳುಮಂದರಧರ ಗೋವಿಂದ ಫಣಿಶಾಯಿಏಳಯ್ಯ ನಲಿದು ಉಪ್ಪವಡಿಸಯ್ಯ 1ಕ್ಷಿರಸಾಗರವಾಸ ಬೆಳಗಾಯಿತು ಏಳುಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||ವಾರಿಜನಾಭನೆ ದೇವ ದೇವೇಶನೆಈರೇಳು ಲೋಕಕಾಧಾರ ಶ್ರೀ ಹರಿಯೇ 2ಸುರರುದೇವತೆಗಳು ಅವಧಾನ ಎನುತಿರೆಸುರವನಿತೆಯರೆಲ್ಲ ಆರತಿ ಪಿಡಿದರೆ ||ನೆರೆದು ಊರ್ವಶಿ ಭರದಿ ನಾಟ್ಯವಾಡಲುಕರುಣಿಸೊ ಪುರಂದರವಿಠಲ ನೀನೇಳೋ 3
--------------
ಪುರಂದರದಾಸರು
ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ ಪ.ಏಳುಗುರುರಾಘವೇಂದ್ರ ಏಳು ದಯಾಗುಣಸಾಂದ್ರಏಳು ವೈಷ್ಣವ ಕುಮುದಚಂದ್ರ ಶ್ರೀ ರಾಘವೇಂದ್ರ ಅ.ಪ.ಅಶನವಸನಗಳಿಲ್ಲವೆಂಬವ್ಯಸನಗಳಿಲ್ಲಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ 1ನಾನು ನನ್ನದು ಎಂದು ಹೀನಮನಸಿಗೆ ತಂದುಏನು ಮಾಡುವಕರ್ಮನಾನೆ ಅಹುದೆಂದುಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೊಂದುನೀನೆ ಉದ್ಧರಿಸಯ್ಯ ದೀನ ದಯಾಸಿಂಧು 2ಅನ್ಯರ ಕೈಯಲ್ಲಿ ನಿನ್ನವರನಿರಿಸುವುದುಅನ್ಯಾಯವಾಯ್ತುಪಾವನ್ನಗುರುರಾಯಎನ್ನ ಮಾತಲ್ಲವಿದು ನಿನ್ನ ಮಾತೇ ಸರಿಮನ್ನಿಸಿ ಆಗು ಪ್ರಸನ್ನ ಗುರುರಾಯ 3ವೇದ ಶಾಸ್ತ್ತ್ರಗಳನ್ನು ಓದಿ ಪೇಳ್ದವನಲ್ಲಭೇದಾಭೇದವನು ತಿಳಿಯಲಿಲ್ಲಸಾಧು ಸಜ್ಜನರ ಸಹವಾಸ ಮೊದಲಿಲ್ಲಹಿಂದಾಗಿಮಾನಮಾರಿಸಿದಿ ಉಳಿಸಲಿಲ್ಲ4ಆಸೆಗೊಳಗಾದೆನೊ ಹೇಸಿ ಮನುಜನು ನಾನುಕ್ಲೇಶಭವಸಾಗರದೊಳೀಸುತಿಹೆನೊಏಸುಜನ್ಮದಿ ಎನ್ನಘಾಸಿಮಾಡಿದೆ ಮುನ್ನದಾಸನಾಗುವೆ ತೋರೊ ಪ್ರಸನ್ನವೆಂಕಟನ 5
--------------
ಪ್ರಸನ್ನವೆಂಕಟದಾಸರು
ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|ನಾಗಸಂಪಿಗೆ ಅರಳಲು ಪಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |ನಿದ್ದೆ ತಿಳಿದೇಳಯ್ಯ ಕೃಷ್ಣ 1ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |ಹೊಸದಾದ ಹಸುವಿನೀ ತುಪ್ಪವನ್ನು ||ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |ಹಸುಳೆ ನಿನಗಾರೋಗಣೆಗೆ ಮಾಡುವೆ 2ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |ಕಂದರೊಳಗತಿ ನೀನು ಹಟಿಯಾದೆಯ ||ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |ಕಂದ ಅಳಬೇಡವೊ ಪುರಂದರವಿಠಲ 3
--------------
ಪುರಂದರದಾಸರು
ನವರತ್ನ ಖಚಿತ ಮಾಣಿಕ್ಯದ ಮಂಟಪದಿನವವಿಧದ ಹಂಸತೂಲಿಕ ತಲ್ಪದಲಿಭುವನಮೋಹನ ಶ್ರೀಹರಿಪವಡಿಸಿರಲುಕವಿಗಳು ಪೊಗಳಿ ಪಾಡುವರು ಶ್ರೀಹರಿಯೆಏಳಯ್ಯ ಬೆಳಗಾಯಿತು 1ನಾಗಶಯನನೆ ಏಳು ನಾಗಾರಿವಾಹನನೆನಾಗಸಂಪಿಗೆ ಪಾರಿಜಾತವರಳುತಿದೆಬೇಗದಲಿ ಭಾಗೀರಥಿ ಉದಕವನೆ ತಂದುನಾಗಕನ್ನಿಕೆಯರು ಕಾದು ನಿಂತಿಹರುಏಳಯ್ಯ ಬೆಳಗಾಯಿತು 2ಅತ್ರಿ ವಸಿಷ್ಠ ಭಾರದ್ವಾಜ ಗೌತಮರುಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆಏಳಯ್ಯ ಬೆಳಗಾಯಿತು 3ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳುಕುಕ್ಷಿಯೊಳು ಜಗವನಿಂಬಿಟ್ಟವನೆ ಏಳುರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳುಈಕ್ಷಿಸಿ ಭಜಕರನುದ್ದರಿಸಲೇಳುಏಳಯ್ಯ ಬೆಳಗಾಯಿತು 4ಕಮಲಮಲ್ಲಿಗೆ ಜಾಜಿಕುಸುಮಮಾಲೆಗಳನ್ನುಕಮಲಾಕ್ಷಿಗರ್ಪಿಸುತ ಹರುಷದಿಂದಕಮಲನಾಭ ವಿಠ್ಠಲ ಸಲಹು ಸಲಹೆಂದೆನುತಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆಏಳಯ್ಯ ಬೆಳಗಾಯಿತು 5ಏಳು ಧೃವವರರೂಪ ಏಳು ನರಹರಿರೂಪಏಳುನಗಧರರೂಪಏಳಯ್ಯ ಹರಿಯೆಏಳಯ್ಯ ಬೆಳಗಾಯಿತು
--------------
ನಿಡಗುರುಕಿ ಜೀವೂಬಾಯಿ
ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತಪ.ಪಕ್ಷಿರಾಜನು ಬಂದು ಬಾಗಿಲೊಳಗೆನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ 1ಸನಕ - ಸನಂದನ - ಸನತ್ಸುಜಾತರು ಬಂದುವಿನಯದಿ ಕೈಮುಗಿದು ಓಲೈಪರು ||ಘನಶುಕ - ಶೌನಕ - ವ್ಯಾಸ ವಾಲ್ಮೀಕರುನೆನೆದು ಕೊಂಡಾಡುವರೊ ಹರಿಯೇ 2ಸುರರು ಕಿನ್ನರರು ಕಿಂಪುರುಷರು ಉರಗರುಪರಿಪರಿಯಲಿ ನಿನ್ನ ಸ್ಮರಿಸುವರು ||ಅರುಣನು ಬಂದುದಯಾಚಲದಲ್ಲಿ ನಿಂದಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ 3ಪದುಮನಾಭನೆ ನಿನ್ನ ನಾಮಾಮೃತವನುಪದುಮಾಕ್ಷಿಯರು ತಮ್ಮ ಮನೆಯೊಳಗೆ ||ಉದಯದೊಳೆದ್ದು ಸವಿದಾಡುತ ಪಾಡುತದಧಿಯ ಕಡೆವರೇಳು ಮಧುಸೂದನ ಕೃಷ್ಣ 4ಮುರುಮಢನನೆ ನಿನ್ನ ಚರಣದ ಸೇವೆಯಕರುಣಿಸಬೇಕೆಂದು ತರುಣಿಯರು ||ಪರಿಪರಿಯಿಂದಲಿ ಸ್ಮರಿಸಿ ಹಾರೈಪರುಪುರಂದರವಿಠಲ ನೀನೇಳೊ ಹರಿಯೇ 5
--------------
ಪುರಂದರದಾಸರು
ಶ್ರೀನಿವಾಸನೆ ಏಳು ಶ್ರೀನಿಕೇತನ ಏಳುಗಾನಲೋಲನೆ ಏಳು ಸಾನುರಾಗದಲಿಏಳಯ್ಯ ಬೆಳಗಾಯಿತು ಪನಂಬಿದೆ ತಂದೆ ಮುದ್ದುಮೋಹನ ವಿಠ್ಠಲ ಏಳುಸುಂದರ ಶ್ರೀ ಉರುಗಾದ್ರಿವಾಸ ವಿಠ್ಠಲ ಏಳುಇಂದುಸಿರಿಉರುಗಾದ್ರಿವಾಸ ವಿಠ್ಠಲ ಏಳುಇಂದಿರಾಪತಿತಂದೆ ವೆಂಕಟೇಶ ವಿಠ್ಠಲನೆ1ಆನಂದಮಯಅಂತರಾತ್ಮ ವಿಠ್ಠಲ ಏಳುನವನೀತಧರ ತಾಂಡವ ಕೃಷ್ಣ ವಿಠ್ಠಲ ಏಳುಜಗವ ಮೋಹಿಪಜಯಾಪತಿವಿಠ್ಠಲ ಏಳುಸಮರ್ಯಾರೋ ನಿನಗಿನ್ನು ಶಾಂತೀಶ ವಿಠ್ಠಲ ಏಳಯ್ಯ 2ಗಂಗೆಯ ಪಡೆದ ಗಜವರದ ವಿಠ್ಠಲ ಏಳುಮಂಗಳ ಮಹಿಮ ಶೇಷಶಯನ ವಿಠ್ಠಲ ಏಳುಗರುಡನೇರುತ ಪೊರೆದಹರಿವಿಠ್ಠಲ ನೀ ಏಳುನಿರುತಪೊರೆ ಎಮ್ಮ ಧೃವವರದ ವಿಠ್ಠಲ ಏಳಯ್ಯ 3ಪರಿಪಾಲಿಪ ಗುರುವಾಸುದೇವ ವಿಠ್ಠಲ ಏಳುವರಪಾಲಿಪ ವರದ ಲಕ್ಷ್ಮೀಶ ವಿಠ್ಠಲ ಏಳುಪದ್ಮನಾಭಪ್ರದ್ಯುಮ್ನ ವಿಠ್ಠಲ ಏಳುಮುದ್ದುಮಖದ ವರದ ವೆಂಕಟೇಶ ವಿಠ್ಠಲನೇ 4ಸಜ್ಜನರ ಪ್ರಿಯ ಶ್ರೀ ಸುಙ್ಞÕನ ವಿಠ್ಠಲ ಏಳುಶಾಮಸುಂದರ ಕೃಷ್ಣ ಶ್ರೀನಾಥ ವಿಠ್ಠಲ ಏಳುಭಯಹಾರಿಭಾರತೀಶವಿಠ್ಠಲ ನೀ ಏಳುಪರಿಸರನೊಡೆಯ ಶ್ರೀ ವರಹ ವಿಠ್ಠಲನೆ 5ಜ್ಞಾನನಿಧಿಆನಂದಮಯವಿಠ್ಠಲ ನೀ ಏಳುಸಜ್ಜನ ಪ್ರಿಯ ಶ್ರೀಪ್ರಾಜÕ ವಿಠ್ಠಲ ಏಳುಜಗನ್ಮೋಹನ ಜಗದ್ಭರಿತ ವಿಠ್ಠಲ ಏಳುವಿಶ್ವಮೂರುತಿ ವಿಜ್ಞಾನಮಯ ವಿಠ್ಠಲನೇ 6ವಿಷ್ಣುಮೂರುತಿ ಕ್ರಷ್ಣದ್ವೈಪಾಯನ ವಿಠ್ಠಲ ಏಳುಅಕ್ಷರೇಢ್ಯನೆ ಲಕ್ಷ್ಮೀಶ ವಿಠ್ಠಲ ಏಳುಕಂಟಕಹಾರಿ ಶ್ರೀವೆಂಕಟೇಶ ವಿಠ್ಠಲ ಏಳುಸರಸೀಜಾಕ್ಷನೆ ಸಲಹೋ ಶ್ರೀರಮಣ ವಿಠ್ಠಲನೆ 7ದುರುಳರ ಮಡುಹಿದ ವರದ ವಿಠ್ಠಲ ಏಳುಕಂಜಾಕ್ಷ ಪನ್ನಗಶಯನ ವಿಠ್ಠಲ ಏಳುದಾರಿತೋರುವ ದಾಮೋದರ ವಿಠ್ಠಲ ನೀ ಏಳುಸರಸಿಜನಾಭನೆಪೊರೆಎನ್ನ ವಿಠ್ಠಲ8ಕಂಜಾಕ್ಷ ಕಮಲನಾಥ ವಿಠ್ಠಲ ಏಳುಮುರಮರ್ದನನೆ ಏಳು ಮುರಳೀಧರ ವಿಠ್ಠಲದಯದಿ ಪಾಲಿಪ ದಯಾನಿಧೆ ವಿಠ್ಠಲ ನೀ ಏಳುಅಚ್ಚುತಹರಿಕೃಷ್ಣ ಕ್ರೇತಜÕ ವಿಠ್ಠಲ9ಜ್ಞಾನಿಗಳರಸ ಆನಂದ ವಿಠ್ಠಲ ಏಳುಭಾಗವತಪ್ರಿಯ ಭಾರ್ಗವೀಶ ವಿಠ್ಠಲ ಏಳುಕರ್ತೃ ಶ್ರೀ ಪುರುಷೋತ್ತಮ ವಿಠ್ಠಲ ನೀ ಏಳುಮುರವೈರಿ ಮಧುರಾನಾಥ ವಿಠ್ಠಲನೆ 10ರಮೆಯರಸನೆ ರಮಾಧವ ವಿಠ್ಠಲ ನೀ ಏಳುಕರುಣಾಳುಹರಿಕಾರುಣ್ಯ ವಿಠ್ಠಲ ಏಳುಎದುರಿಲ್ಲ ನಿನಗೆ ಯದುಪತಿ ನೀ ಏಳುಉದ್ಧರಿಸೆನ್ನಉದ್ಧವವರದ ವಿಠ್ಠಲನೆ11ಗೋಪಿಕಾಲೋಲ ಗೋಪೀನಾಥ ವಿಠ್ಠಲ ಏಳುವೆಂಕಟೇಶ ವೈಕುಂಠಪತಿ ವಿಠ್ಠಲ ಏಳುಶ್ರೀನಿಕೇತನ ಶ್ರೀಕಾಂತ ವಿಠ್ಠಲ ಏಳುಧನ್ಯನಾದೆನೋ ದೇವ ಧನ್ವಂತ್ರಿವಿಠ್ಠಲ 12ಶ್ರೀಧರಪೊರೆವೇದವತೀಶ ವಿಠ್ಠಲ ಏಳುಸಾಧುಗಳರಸನೆ ಭಕ್ತವತ್ಸಲ ಏಳುಮೇಧಿನಿಯೊಳು ನಿನ್ನ ಪೋಲುವರ್ಯಾರಿಲ್ಲಸಾದರದಿಂ ಕೇಳೋ ನೀ ಎನ್ನಸೊಲ್ಲ 13ರನ್ನ ಮಂಟಪದೊಳಗೆ ಚಿನ್ನದ ತೊಟ್ಟಿಲೊಳುಕನ್ನೆಯರು ತೂಗಿ ಪಾಡಿದರೊ ಗೋವಿಂದಕರುಣಾಸಾಗರ ಕೃಷ್ಣ ಕಡು ನಿದ್ರೆ ಸಾಕೆಂದುಕಮಲಾಕ್ಷಿ ಸ್ತುತಿಸುವಳು ಕಮಲನಾಭವಿಠ್ಠಲಏಳಯ್ಯ ಬೆಳಗಾಯಿತು 14
--------------
ನಿಡಗುರುಕಿ ಜೀವೂಬಾಯಿ