ಒಟ್ಟು 69 ಕಡೆಗಳಲ್ಲಿ , 30 ದಾಸರು , 65 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆ ಗುರುರಾಯರನ್ನ ಈ ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ ಪ ಥಳಥಳಿಸುವ ಬೃಂದಾವನದಿ - ತಾನು ಕುಳಿತು ಭಕ್ತರಿಗೀವ ವರವನು ತ್ವರದಿ ನಳಿನನಾಭನ ಕೃಪಾಬಲದಿ - ಇದೆ ನಳಿನಜಾಂಡದಿ ಸರಿಗಾಣೆ ಮಹಿಮಾದಿ1 ಪೊಳೆವೊ ವಕ್ಷಸ್ಥಳದವನ - ಎಳೆ ತುಳಸಿ ಮಾಲಾಂಕಿತ ಕಂಧರಯುತನಾ ನಳಿನಾಕ್ಷಮಾಲೆ ಶೋಭಿತನ - ಉರ ಚಲುವ ದ್ವಾದಶಪುಂಢ್ರ -ಮುದ್ರಚಿಹ್ನಿತನಾ 2 ಕೃಷ್ಣವರ್ಣದಿ ಶೋಭೀತನಾ - ಮಹಾ ವೈಷ್ಣವ ಕುಮುದ - ನಿಕರಕೆ ಚಂದಿರನಾ ವಿಷ್ಣು ಭಕ್ತಾಗ್ರೇಸರನಾ - ಬಾಲ ಕೃಷ್ಣಮೂರುತಿ ಪದಯುಗ ಸರೋಜ ಇನಾ 3 ದಿನನಾಥ - ದೀಪ್ತಿ - ಭಾಸಕನ - ಭವ ವನಧಿ - ಸಂತರಣ - ಸುಪೋತಕೋಪÀಮನಾ ಮುನಿಜನ ಕುಲದಿ ಶೋಭಿಪನ - ಸ್ವೀಯ ಜನರ ಪಾಲಕ ಮಹಾರಾಯನೆನಿಪನಾ 4 ಗುರುಜಗನ್ನಾಥ ವಿಠಲನ - ಪಾದ ಸರಸಿಜ ಯುಗಳಕಾರಡಿ ಎನಿಪÀನಾ ಪೆರಿವೋನು ತನ್ನ ಜನರನಾ - ಎಂದು ಶಿರಸದಿ ನಮಿಸಿ ಬೇಡಿದೆ ಗುರುವರನಾ 5
--------------
ಗುರುಜಗನ್ನಾಥದಾಸರು
ನೋಡಿದ್ಯಾ ನೋಡಿದ್ಯಾ ಪ ನೋಡಿದ್ಯಾ ಶ್ರೀ ಗುರುಗಳನ್ನು | ಈ ಡಾಡಿ ಕೊಂಡಾಡಿದ್ಯಾ ಆಹಾ ನೋಡಿ ಮನದಲ್ಲಿ ಕೊಂಡಾಡುತ್ತ ಗುರುಗಳ ರೂಢಿವಳಗೆಲ್ಲ ಈಡಿಲ್ಲ ಯತಿಗಳ ಅ.ಪ ನಿಂತರೆದುರಲ್ಲೆ ಮುಖ್ಯ ಪ್ರಾಣಾ | ಜಗ ದಂತ ರೊಳಗೆಲ್ಲಿ ಅತಿ ಪ್ರಾಣಾ ಅಂತರಂಗದಲ್ಲಿ ಶಾಂತ ಮೂರುತಿಗಳು ಮಂತ್ರಾಲಯದಲ್ಲಿ ನಿಂತಿದ್ದ ಗುರುಗಳಾ 1 ಹೊದ್ದ ಕಾವೀಶಾಟಿಯಿಂದಾ ಶ್ರೀ ಮುದ್ರೆ ಹಚ್ಚಿದ ದೇಹ ದಿಂದಾ ಕೇಸರಿ ಗಂಧಾ | ಬಲು ಮುದ್ದು ಸುರಿವನಾಮದಿಂದಾ ಅಂಗಾರ ಮುದ್ರೆಯೊಳಕ್ಷತೆ ಎದ್ದು ಬರೂವಂಥ ಮುದ್ದು ಗುರೂಗಳಾ 2 ಮುದ್ದು ಬೃಂದಾವನದ ಮಾಟಾ ಅಲ್ಲಿದ್ದು ಜನರ ಓರೆನೋಟಾ ಪ್ರಸಿದ್ದ ರಾಯರ ಪೂರ್ಣನೋಟ ನಮ್ಮಲ್ಲಿದ್ದ ಪಾಪಗಳೆಲ್ಲ ಓಟ ವಾಹನ ನರಸಿಂಹ ವಿಠಲಾ | ಅ ಲ್ಲಿದ್ದು ವರವ ಕೊಡುವ ಗೋಪಾಲಕೃಷ್ಣನ್ನಾ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಪರಮಾನಂದದಿ ಸರಸಿಜಾಕ್ಷಿಯರೆಲ್ಲ ಪರಮ ಪುರುಷನಿಗಾರತಿ ಎತ್ತುತ ಪ ಕರಿವರ ವರದನ ಸ್ಮರಿಸುತ ಸಂತತ ನವರತ್ನದಾರತಿ ಬೆಳಗಿದರುಅ.ಪ ಗೋಪಿಕಾಲೋಲನಿಗೆ ಗೋಪಾಲಕೃಷ್ಣಗೆ ಗೋವರ್ಧನೋದ್ಧಾರ ಗೋವಿಂದಗೆ ಗೋಪಸ್ತ್ರೀಯರ ಕೂಡ್ಯಾಡಿದ ಹರಿಗೆ ಗೋಪಿಬಾಲನಿಗೆ ಎತ್ತಿದರಾರತಿ1 ನವನೀತ ಚೋರಗೆ ಬೃಂದಾವನÀದಿ ವಿರಾಜಿಪಗೆ ಇಂದಿರೆ ಸಹಿತಗೆ ಕುಂದಣದಾರತಿ ಬೆಳಗಿದರು2 ಕಮಲದಳಾಕ್ಷಗೆ ಕಮಲಮುಖಿಯರೆಲ್ಲ ಕಮಲ ಮುತ್ತಿನ ಆರತಿ ಪಿಡಿದು ಕಮಲನಾಭ ವಿಠ್ಠಲನ ಪಾಡಿ ಹರುಷದಿ ಕಮಲಾಕ್ಷಿಯರು ಶೋಭನ ಪಾಡುತ್ತ 3
--------------
ನಿಡಗುರುಕಿ ಜೀವೂಬಾಯಿ
ಪಾಲಯ ದನುಜಾರೆ ನೃಹರೆ ಪ ಮಾಧವ ಮಧುರಾಪುರ ಪರಿಪಾಲಕ ಶೌರೀ 1 ನಂದ ಕಿಶೋರ ಗೋಪಾಲ ಮುಕುಂದ ಬೃಂದಾವನಾ ಸಾನಂದ ಗೋವಿಂದ 2 ಸನಕಸನಂದನ ವಿನಮಿತ ಚರಣಾ ವನಜನಯನ ಗೋಪೀಜನ ಕರುಣಾ 3 ಮಂಗಳಭಾಸಾ ಮುನಿಗಣತೋಷಾ ಮಾಂಗಿರಿವಾಸಾ ಮಣಿಗಣಭೂಷಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪ್ರಾಣ ಗುರು ಜಯ ವಿಠಲ ಕಾಪಾಡು ಇವಳ ಪ ಪ್ರಣತಾರ್ತಿ ಹರನೆಂದು ಭಿನ್ನವಿಪೆ ಸತತಾ ಅ.ಪ. ಪತಿವ್ರತಾಮಣಿ ಎನಿಸಿ ಪತಿಸೇವೆಯೊಳುನಿರತೆಸತತ ಸದ್ಭಕ್ತಿ ಶ್ರೀ ಹರಿಗುರುಗಳಲ್ಲೀ |ಅತಿಶಯದಿ ಮಾಡುತಲಿ ವಿಹಿತವನು ತೊರೆಯದಲೆಕೃತಕಾರ್ಯಳಾಗಿಹಳ ಸತಿಯ ಸಲಹುವುದೂ 1 ತೈಜಸ ದಯಾಪಯೋನಿಧಿ ಹರಿಯೆಆ ಪರಿಮಳಾರ್ಯ ಯತಿರೂಪವನೆ ಕೊಂಡುಕೈ ಪಿಡಿದು ಕಾಯ್ವೆನೆಂಬಭಯ ಹಸ್ತವ ತೋರಿರೂಪವನು ಮರೆಮಾಡ್ಡೆ ಬೃಂದಾವನಾಂತ 2 ಮೋಚಕೇಚ್ಛೆಯೊಳ್ಸವ್ಯ ಸಾಚಿಗೇ ಅತಿಪ್ರೀಯಖೇಚರೋತ್ತಮ ಪ್ರಾಣಗೊಪ್ಪಿಸುತ ಇವಳಾನೀಚೋಚ್ಚತರತಮ ಜ್ಞಾನ ಸ್ಥಿರಪಡಿಸುತ್ತಪ್ರಾಚೀನ ದುಷ್ಕರ್ಮ ಪರಿಹರಿಸೊ ಹರಿಯೇ 3 ಪ್ರಣತಜನ ಪರಿಪಾಲಎನುತ ಭಿನ್ನೈಸುವೆನೊ ವೇಣುಗೋಪಾಲ 4 ಬದಿಗ ನೀನಾಗಿರಲು ಭಯವೇನೊ ಬುಧವಂದ್ಯವದಗಿ ಹೃದ್ಗುಹದೊಳಗೆ ತೋರಿತವ ರೂಪಮುದದಿಂದ ಕಳೆ ಇವಳನಾದಿ ರೋಗವನೆಂಬೆಇದನೇವೆ ಸಲಿಸೊ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಬಾ ಬಾ ಬೃಂದಾವನಾಲಯಸೋಮ ಶರಣಾವಲಯ ಬಾ ಬಾ ಪರಿಮಳ ಆಚಾರ್ಯ ಸತತಯೋಗಾನಂದ ಪ ಶೋಭಾಲಂಕರಣವಾರಿಧಿ ವೇಣುವಿನೋದ ನರೋತ್ತಮ ಶ್ರೀ ಭೂಮಿನಿಲಯ ಪರಮಸುರುಚಿರ ರಘುವರಾ ಪ್ರಪೂಜಕ ಅ.ಪ ನೀನೇ ದೀನಶರಣಕರುಣನು ಜಾನಿಸುವರ ಸುರತರು ವೆನ್ನಿಪೆ ದ್ವೈತಾಗಮಸರಸಿಜಭಾನು ವೇದಾಂತ ವೈಷ್ಣವಚತುರ 1 ಪ್ರಣವರೂಪ ನಿರುತ ಸುಖಕರಸದನ [ನೀನೆ]ಪಾವನಾ ಪರಮಪುಣ್ಯಕರಾ ಸುಜನಪಾಲ ಶ್ರೀ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರೋ ಯದುಕುಲ ತಿಲಕ ನಲಿಯುತ ಬಾರೋ ಯದುಕುಲ ತಿಲಕ ಅ.ಪ ನಂದಕುಮಾರ ಸುಂದರಾಕಾರ ಬೃಂದಾವನಲೋಲ ನಲಿಯುತ 1 ಜಗಮೋಹನ ಬಾಲ ಸದನಕೆ 2 ಅಧರಾಮೃತದ ಮಧುರಸ ಕುಡಿದ ಹೃದಯಂಗಮ ಮುರಳೀ ನುಡಿಸುತ 3 ರಂಗಿನ ತಿಲಕ ಮುಂಗುರುಳುಗಳು ಶೃಂಗಾರದ ಸೊಬಗ ನೋಡುವೆ 4 ಕುಣಿಯುತಲಿರುವ ಮನದ ಬಯಕೆಯ ದಣಿಸೋ ವನಮಾಲಿ ಪ್ರಸನ್ನನೆ 5
--------------
ವಿದ್ಯಾಪ್ರಸನ್ನತೀರ್ಥರು
ಬೃಂದಾವನದಿ ನೋಡುವ ಬಾರೆ ಗೋ-ಪ ವಿಂದನಾಡುವ ಸಂದಣಿ ಸಾಲದೆ ಸಖಿ ಅ.ಪ. ಮುನಿಗಳು ತರು ಪಕ್ಷಿ ಮೃಗಂಗಳಾಗಿರೆಸನಕಾದಿಗಳು ಗೋವುಗಳಾಗಿರೆಅನಿಮಿಷರೆಲ್ಲರು ಗೋಪಾಲರಾಗಿರೆದನುಜಾಂತಕನು ಮನುಜನಂತಾಗಿರೆ 1 ತಳಿತ ತೋರಣದಿಂ ತಂಪಿನ ನೆಳಲಿಂಮಳೆಯಾಗಿ ಸುರಿವಾ ಮಕರಂದ ಜಲದಿಂಫಲ ಪುಂಜಗಳಿಂ ಶುಕಚಾಟುಗಳಿಂನಳಿನನಾಭನನುಪಚರಿಪ ವೃಕ್ಷಗಳುಳ್ಳ 2 ತಳಿತ ತರುಗಳೆಲ್ಲ ತಂತಮ್ಮ ಜಾತಿಯಉಲುಹನುಳಿದು ಕಣ್ಣುಮುಚ್ಚಿ ತೆರೆಯುತ್ತನಳಿನನಾಭನ ವೇಣುಗೀತೆಯ ರಸದಲ್ಲಿಮುಳುಗಿ ಮುನಿಗಳಂತಿಪ್ಪ ಪÀಕ್ಷಿಗಳುಳ್ಳ 3 ಚಿತ್ತಜನೈಯನ ವೇಣುನಾದವಎತ್ತಿದ ಕಿವಿಯಿಂದ ಸವಿಯುತಲಿಮತ್ತಾದ ಸುಖಜಲ ಕಡಲಾಗಿ ಹರಿಯಲುಚಿತ್ತರದಂತಿಪ್ಪ ತುರುವಿಂಡುಗಳುಳ್ಳ 4 ನಖ ತಿಂಗಳ ಬೆಳಕಿಗೆತುಂಗ ಚಂದ್ರಕಾಂತ ಶಿಲೆ ಒಸರಿಹಿಂಗದೆ ಹರಿದು ಕಾಳಿಂದಿಯ ಕೂಡಲುಗಂಗೆ ಯಮುನೆಯರ ಸಂಗಮದಂತಿಪ್ಪ 5 ಚಕೋರ ಚಕ್ರವಾಕಇರುಳು ಹಗಲು ಎಂದು ಹೋಗುತಲಿರುತಿಪ್ಪ6 ಹರಿಯ ಕೊಳಲ ಸ್ವರದತಿ ಮೋಹನಕೆತರುಮೊಗ್ಗೆಗಳಿಂ ಪುಳುಕಿತವಾಗೆಗಿರಿಯು ಝರಿಯಾ ನೆವದಿಂ ಕರಗಲುತೊರೆಯು ಸುಳಿಯ ನೆವದಿಂದ ತಾ ನಿಲ್ಲುವ7 ಕುಂಡಲ ತಾಳಮೇಳದ ರಭಸಕ್ಕೆನಲಿನಲಿದಾಡುವ ನವಿಲ ಹಿಂಡುಗಳುಳ್ಳ 8 ನಳನಳಿಸುವ ವನಮಾಲೆ ಇಂದ್ರಚಾಪಪೊಳೆವ ಪೊಂಬಟ್ಟೆ ಮಿಂಚು ವೇಣುಗಾನಎಳೆಯ ಗರ್ಜನೆ ಶ್ಯಾಮಮೇಘ ಕೃಷ್ಣಮಳೆಯ ಮೇಘವೆಂದು ಚಾತಕ ನಲಿಯುತ9
--------------
ವ್ಯಾಸರಾಯರು
ಬೃಂದಾವನವಿದೆಕೊ ಯತಿವರ ಪ ನಂದ ನಂದನ ಗೋವಿಂದನ ಪಾದಾರ ವಿಂದವ ಪೂಜಿಪ ಶ್ರೀರಾಘವೇಂದ್ರನ ಅ.ಪ ಮಂತ್ರಾಲಯದಿ ಸ್ವತಂತ್ರ ಭೂಮಿಕೆಯಲ್ಲಿ ಯಂತ್ರ ಸ್ಥಾಪನೆಗೈದು ಸಂತೃಪ್ತಿಯಾಂತು ಮಂತ್ರಾರ್ಥ ತತ್ವಗಳನುಪದೇಶ ಗೈಯುವ ಮಂತ್ರ ಸ್ವರೂಪನು ಸೇವಿಪ್ಪ ಪುಣ್ಯದ1 ಗುರುರಾಜರಾಜನು ಕರುಣಾಪಯೋಧಿಯು ನಿರುತ ಭಕ್ತರಿಗೆಲ್ಲ ವರವೀವ ದೊರೆಯು ಸರಸೀರುಹಾಕ್ಷ ಮಾಂಗಿರಿವಾಸ ರಂಗನ ಚರಣವ ತೋರುವ ಕೃಪೆಮಾಡುವಾತನ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೃಂದಾವನಾನಂದ ಬಾ | ಬೃಂದಾರಕಾನಂದ ಬಾ ಪ ಮಂದಾಕಿನೀಪಾದ ಗೋಪೀಜನಾನಂದ ನಂದಾತ್ಮ ಗೋವಿಂದ ಬಾ ಅ.ಪ ನಂದನ ವನದಲ್ಲಿ ಬೆಳೆದ ಮಂದಾರಾ ಸುಂದರಿಯ ತಲೆಯ ಜಡೆಯ ಬಂಗಾರ ಮಂದಮಾರುತನಿಂದ ನಲಿವು ಶೃಂಗಾರ ಸಾರ 1 ಕತ್ತಲೆಯಲಿ ಹೊಳೆವ ರನ್ನದ ದೀಪ ಮತ್ತಗಾಮಿನಿಯರ ಸರಸ ಸಲ್ಲಾಪ ಎತ್ತೆತ್ತ ಸಡಗರ ಸೊಗದ ಪ್ರತಾಪ ತಾಪ 2 ಗೋಪಾಲ ಘನಲೀಲ ಬಾ ಮುರಹರ ತಾಪತ್ರಯಕಾಲ ಬಾ ಪರಂಧಾಮ ದಿತಿಸುತಭೀಮಾ ಆಪತ್ಸಖಾ ಭಕ್ತಪಾಲಾ ಮಾಂಗಿರಿನಾಥ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳಂ ಮಂಗಳಂ ತುಲಸಿದೇವಿಗೆ ಪ ಮಂಗಳಂ ರಂಗನ ಅರ್ಧಾಂಗಿಗೆ ಮಾಧವ ಮಂಗಳ ಭಕ್ತರ ಸಲಹುವ ತಾಯಿಗೆ ಮಂಗಳ ಮಹಿಷಾಸುರಮರ್ದಿನಿಗೆ 1 ಮಂಗಳ ಮಂದಾರ ವನವಾಸಿಗೆ ಶರಧಿ ಉದ್ಭವಳಿಗೆ ಮಂಗಳ ರಾಮದಾಸಗಭಯವಿತ್ತವಳಿಗೆ ಮಂಗಳ ಸಂಜೆಯೊಳ್ ಪೂಜೆಗೊಂಬುವಳಿಗೆ 2 ಮಂಗಳ ನಾರದನುತ ಅಂಬೆಗೆ ಮಂಗಳ ಸೇವಿತ ಸುರ ಸಮುದಾಯಗಳಿಗೆ ಮಂಗಳ ಮನೋಭೀಷ್ಟದಾಯಕಳಿಗೆ ಮಂಗಳ ಹರಿದ್ರಾ ಕುಂಕುಮನಿಡುವಳಿಗೆ 3 ಮಂಗಳ ಕೃಷ್ಣನ ಅಂತಸ್ಥಿತಳಿಗೆ ಮಂಗಳ ಜಗನ್ಮೋಹನ ದೇವಿಗೆ ಮಂಗಳ ಹಾಟಕ ಸಮಕಾಂತ್ಯಾವಳಿಗೆ ಮಂಗಳ ಬೃಂದಾವನ ದೇವಿಗೆ 4 ಕಮಲ ಲೋಚನದೇವಿಗೆ ಮಂಗಳ ಪೀತಾಂಬರಧಾರಿ ಸುಂದರಿಗೆ ಮಂಗಳ ಸರ್ವಾಭರಣ ಭೂಷಿತಳಿಗೆ ಮಂಗಳ ವಿಜಯ ರಾಮಚಂದ್ರವಿಠಲನ ರಾಣಿಗೆ 5
--------------
ವಿಜಯ ರಾಮಚಂದ್ರವಿಠಲ
ಮಂಗಳಾಂಗ ಕರುಣಾಪಾಂಗ ಅಂಗಜಾರಿಪ್ರಿಯತುರಂಗ ಸಂಗ ರೂಪಜಿತ ಭವಭಂಗ ಗಂಗಾ ಜನಕ ಜಯ ಶ್ರೀರಂಗ ಪ ದೇವ ದೇವ ದಿವ್ಯ ಪ್ರಭಾವ ಭಾವನಾದಿ ದೂರ ಭಾವ ಪಾವನೈಕ ರೂಪ ನಿರ್ಲೇಪ ಶ್ರಿವಧೂಕುಚ ಕುಂಕುಮ ದೀಪ 1 ಇಂದಿರಾ ಮುಖ ಪಂಕಜಸೂರ್ಯ ಮಂದಹಾಸ ಪೂರಿತಾಸ್ಯ ಕುಂದರದನ ದಿವ್ಯಹಾರ ಬೃಂದಾವನ ವಿಹಾರಶೂರ 2 ಮುರಳೀಧರ ಗೋವಿಂದ ಮುರಾರೆ ಶರಣಜನ ಸಂರಕ್ಷಕ ಶೌರೆ ದುರಿತ ದೂರ ವರಧೇನುನಗರ ಪುರವಿಹಾರ ಪಾಲಿಸು ವೀರ 3
--------------
ಬೇಟೆರಾಯ ದೀಕ್ಷಿತರು
ಮಂದರಧರ ಗೋವಿಂದ ಜಯ ನಂದನ ಕಂದ ಬಾಲಕುಲದಾಸಾನಂದ ಪ ಬೃಂದಾವನ ಗೋಪೀಜನ ವೃಂದ ಸುಂದರ ಮುರಳೀ ಗೀತಾನಂದ ಅ.ಪ ಶ್ರೀವತ್ಸಾಂಕಿತ ಪಾವನಚರಣ ದೇವ ದೇವಾನತ ದೇವಕಿತರುಣ ಭಾವ ಸಂಭವಪಿತ ರಾಧಾರಮಣ ಭಾವುಕ ಸೇವಿತ ಕರುಣಾಭರಣ1 ಮಂಗಳನಾಮಾ ಯದುಕುಲಸೋಮಾ ಸಂಗರಭೀಮ ಜಗದಭಿರಾಮ ಭೃಂಗಕುಂತಳ ಮಾಲಿಂಗನಿಸ್ಸೀಮ ರಂಗರಥಾಂಗ ಮಾಂಗಿರಿವರಧಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂದರೊದ್ಧಾರ ಮುಚುಕುಂದವರದ ಮುಕುಂದ ಇಂದಿರಾನಂದ ಗೋವಿಂದ ವರದ ಕಂದನತಿ ದೈನ್ಯದಿಂ ತಂದೆ ಬಾರೆನ್ನಲಾ ನಂದದಿಂ ಭದಿಂ ಬಂದೆ ಭರದಿಂ ನಂದಾತ್ಮ ಸಂಜಾತನೆಂದೆನಿಸಿ ನಲವಿನಿಂ ಬೃಂದಾವನದಿ ನಿಂದೆ ವರದನೆಂದೆ ನಂದಮಂ ಕೃಪೆಗೆಯ್ದುದರರೆ ಪಿರಿದು ಅಚ್ಚುತಾನಂತ ಚಿದ್ರೂಪ ವಿಭವ ಪಚ್ಚಕರ್ಪೂರದಿಂ ಮಿಳಿತವಾಗಿ ಪೆರ್ಚೆ ಪರಿಮಳ ವೀಳ್ವಮಿದನುಕೊಂಡು ಮೆಚ್ಚಿ ಪೊರೆಯೆನ್ನ ಶೇಷಾದ್ರಿರನ್ನ
--------------
ನಂಜನಗೂಡು ತಿರುಮಲಾಂಬಾ
ಮನಮೋಹಮಂದಿರಾ ಶ್ರೀವರ ಘನಮಣಿ ತಾ ಹಾರಾ ಪ ಮಾಂಗಿರಿಧಾಮಾ ಮಂಗಳನಾಮಾ ಶರಣಾಗತ ಪ್ರೇಮಾ ಅ.ಪ ದಿವಿಜನಿಕರ ಪರಿವಾರಾ ದಯಾಪೂರಾ ಭುವನೇಶ್ವರ ಶೂರಾ ಆನಂದಲೀಲಾ ಆಗಮಮೂಲಾ ತುಳಸೀದಳ ವನಮಾಲಾ 1 ಭಾಗವತಪ್ರಿಯ ಸಾಗರತನಯಾ ಮನರಂಜನ ಸದಯಾ ಮುರಳೀಧೃತಕರ ಕುಂಜವಿಹಾರಾ ರಾಧಾಮನ ಮಣಿಹಾರಾ 2 ನಂದನ ಕಂದಾ ಜಗದಾನಂದ ಬೃಂದಾವನಾನಂದ ಗೋಪಿಕಾ ಜಾಲ | ಪ್ರೇಮಿತ ಬಾಲಾ ಬೃಂದಾವನ ಲೋಲಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್