ಒಟ್ಟು 34 ಕಡೆಗಳಲ್ಲಿ , 20 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬುದ್ಧಿಯ ಪೇಳೇ ಗೋಪಮ್ಮ ನಿನ್ನಮುದ್ದು ಮಗನ ಲೂಟಿ ಘನವಾದುದಮ್ಮ ಪಸದ್ದು ಇಲ್ಲದ ಹಾಗೆ ಬಂದಾನೆಕದ್ದು ಬೆಣ್ಣೆಯನೆಲ್ಲ ತಿಂದಾನೆಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲುಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ 1ಜಲಜ ಗಂಧಿನಿಯರು ಕೂಡೀ ನಾವುಜಲದೊಳಾಡುವುದನ್ನು ನೋಡೀಜಲಜನಾಭನು ಮರದ ತಲೆಯ ಮೇಲ್ಕಟ್ಟಿದಸುಲಿದಿಟ್ಟ ಸೀರೆಯ ಬಲರಾಮನನುಜ 2ಹಾಲ ಮಾರಲು ಪೋದ ಮಗಳಾ ಕಂಡುಮೇಲೆ ಬೀಳುತ ಮಾಡೆ ಜಗಳಾಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನುಮೂರ್ಲೋಕದೊಡೆಂiÀುಶ್ರೀಲೋಲಗೋವಿಂದ 3
--------------
ಗೋವಿಂದದಾಸ
ವಂದಿಸಿದವರೆ ಧನ್ಯರು - ನಮ್ಮ - |ಇಂದಿರಾಪತಿಗಡ್ಡ ಬೀಳುತಲೊಮ್ಮೆ ಪ.ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ |ಒಂದೊಂದು ನಾಮವ ನೆನೆಯುತಲಿ ||ಮಂದರೋದ್ಧರನನು ಕುಂದದೆ ಪೂಜಿಸಿ |ವಂದಿಸುವಾನಂದದಿಂದ 1ಬಿಟ್ಟು ಲಜ್ಜೆಯನು ದೃಷ್ಟಿಸಿ ನೋಡುತ |ವಿಟ್ಠಲ ವಿಟ್ಠಲ ಎನುತ ಮನ - ||ಮುಟ್ಟಿ ಮಾಡುವ ಭಕ್ತಿ - ಸ್ತೋತ್ರ - ಸ್ತುತಿಗಳಿಂದ |ಅಷ್ಟಾಂಗದಲಿ ವಂದನೆಯ ಮಾಡುತಲಿ 2ಸಿರಿಲಕ್ಷ್ಮೀಪತಿ ಶರಣಾಗತರನು |ಕರುಣಿಸೆಂದೆನುತಕರವ ಮುಗಿದು ||ಹರುಷ ಪುಳಕದಿಂದ ಹೊರತ ದೇಹವನು ಶ್ರೀ - |ಪುರಂದರವಿಠಲರಾಯನ ಚರಣಕೆ 3
--------------
ಪುರಂದರದಾಸರು
ಸಾಕು ಸಾಕಿನ್ನು ಸಂಸಾರಸುಖವು |ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪಉದಿಸಿದುವು ಪಂಚಭೂತಗಳಿಂದ ಔಷಧಿಗ-|ಳುದಿಸಿದುವು ಔಷಧಿಗಳಿಂದನ್ನವು ||ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ 1ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |ಪತನವಾದಿಂದ್ರಿಯವು ಹೊಲೆ-ರುಧಿರವು ||ಸುದತಿಯುದರದೊಳೆರಡು ಏಕದಲಿ ಸಂಧಿಸಲು |ಬುದಬುದನೆ ಮಾಸಪರ್ಯಂತರದಿ ಹರಿಯೆ 2ಮಾಸವೆರಡರಲಿ ಶಿರಮಾಸಮೂರರಲಂಗ |ಮಾಸನಾಲ್ಕರಲಿ ಚರ್ಮದ ಹೊದಿಕೆಯು ||ಮಾಸವೈದರೊಳುನಖರೋಮ ನವ ರಂಧ್ರಗಳು |ಮಾಸವೇಳಲಿ ಧಾತು ಹಸಿವು ತೃಷೆಯು 3ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |ಭಂಗವನು ಪಡಲಾರೆ ಭವಭವದೊಳು ||ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ 4ಇನಿತು ಗರ್ಭದೊಳು ನವಮಾಸ ಪರಿಯಂತರದಿ |ತನು ಸಿಲುಕಿ ನರಕದಲಿ ಆಯಾಸಗೊಂಡು ||ಘನಮರುತವೇಗದಿಂ ಅರುಹನಲ್ಲಿಯೆ ಮರೆತುಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ 5ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |ಪರವಶದೊಳಿರಲು ನೀರಡಿಸಲಾಗ ||ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |ದುರಿತರೂಪದ ತನುವ ಧರಿಸಿದೆನೊ ಹರಿಯೆ 6ಶಿಶುತನದೊಳಿರಲು ನೊಣ ಮುಸುಕಲಂದದಕಳಲು |ಹಸಿದನಿವನೆಂದು ಹಾಲನೆ ಎರೆವರು ||ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |ಪಶುವಂತೆ ಶಿಶುತನದೊಳಿರಲಾರೆ ಹರಿಯೆ 7ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |ನುಡಿಯಲರಿಯದ ದುಃಖ ವಿಷಮದಿಂದ ||ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ 8ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |ಗೋಳಿಡುತವಿದ್ಯೆಕರ್ಮಗಳ ಕಲಿತು ||ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾಬಾಲೆಯರ ಬಯಸಿ ಬಹು ಮರಳಾದೆ ಹರಿಯೆ | 9ಜ್ವರದ ಮೇಲತಿಸಾರ ಬಂದಂತೆ ಯೌವನದಿ |ತರುಣಿಯೊಡನಾಡಿಕೂಡಿದವಿಷಯದಿ ||ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ 10ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |ಹತ್ತು ಇಂದ್ರಿಯದ ಬಹುರೋಗದಿಂದ ||ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ 11ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |ಕಟ್ಟಿಕಾದಿಹರು ಮುಪ್ಪಡಸಲಾಗ ||ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |ಮುಟ್ಟಿನೋಡರು ಸರಕುಮಾಡರೈ ಹರಿಯೆ 12ಎಷ್ಟವಜೆÕಯ ಮಾಡೆ ಮತ್ತವನಿಗಳಲುತಿರೆ |ಕಟ್ಟಳೆಯ ದಿನತುಂಬಿಮೃತನಾಗಲು ||ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |ಮುಟ್ಟದಲೆ ಹೆಣನೆಂದು ದೂರದೊಳಗಿಹರು 13ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ 14ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |ಬನ್ನವನು ಪಡಲರೆ ಭವಭವದೊಳು ||ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |ಸನ್ಮತಿಯೊಳಿರಿಸೆನ್ನ ಪುರಂದರವಿಠಲ 15
--------------
ಪುರಂದರದಾಸರು
ಹರ ಹರ ಹರ ಹರ ಹರ ಹರಹರ ಹರ ಹರ ಹರ ಹರ ಹರಪಹರ ಹರ ಹರ ಹರ ಹರ ಹರಏಳತಲೆನ್ನಿ ಹರ ಹರ ಹರ ಹರಬೀಳುತಲೆನ್ನಿ ಹರ ಹರ ಹರ ಹರ1ನಡೆಯುತಲೆನ್ನಿ ಹರ ಹರ ಹರ ಹರನುಡಿಯುತಲೆನ್ನಿ ಹರ ಹರ ಹರ ಹರ2ಉಣ್ಣುತಲೆನ್ನಿ ಹರ ಹರ ಹರ ಹರಉಡುವಾಗಲೆನ್ನಿ ಹರ ಹರ ಹರ ಹರ3ಮಲಗುತಲೆನ್ನಿ ಹರ ಹರ ಹರ ಹರವಂದಿಸುತೆನ್ನಿ ಹರ ಹರ ಹರ ಹರ4ಚಿದಾನಂದನನು ಹರ ಹರ ಹರ ಹರಚಿಂತಿಸೆ ಚಿಂತೆಯು ಹರ ಹರ ಹರ ಹರ5
--------------
ಚಿದಾನಂದ ಅವಧೂತರು