ಒಟ್ಟು 36 ಕಡೆಗಳಲ್ಲಿ , 23 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು
ಮಾರಿಯನು ತೋರುತಿಹೆನು ಅದನೀಗನಾರಿ ಎಂದೆಂಬರಯ್ಯಪಸೀರೆ ಕುಪ್ಪಸವನುಟ್ಟುಸಿಂಗರದಿ ತೋರ ಕಂಕಣವನಿಟ್ಟು ಅಯ್ಯಮೂರಳೆಯಕಟ್ಟಾಣಿಕಟ್ಟಿಯೇಮೋರೆ ಮುರಕಿಸುತಿಹುದು ಅಯ್ಯ1ಚಳ್ಳತುಂಬುಗಳಿಂದಚವುರಿ ಬೆಳ್ಳಿಯ ಬಳೆಗಳಿಂದ ಅಯ್ಯಮುಳ್ಳು ಗಜ್ಜೆಗಳ ಧರಿಸಿ ಮನೆಯೊಳಗೆಹಲ್ಲು ಕಡಿಯುತಲಿಹುದು ಅಯ್ಯ2ಓಲೆ ಮಾಡಿಸು ಎಂಬುದುವರಹಕೆ ಬಾಳುವೆ ನೋಡಿರಿ ಎಂಬುದಯ್ಯಹೇಳುವುದು ಕಿವಿಯೊಳಗೆ ಲೋಭಕಾಲು ಕೈ ತಿರುಹುವುದು ಅಯ್ಯ3ಕರೆಕರೆಯ ಮಾಡುತಿಹುದು ತಾಯಿಯಹೊರಡಿಸು ಮನೆಯಿಂದಲೆಂಬುದಯ್ಯಹರನ ಚಿಂತೆಗೆ ಹಾನಿಯು ಇದರಿಂದನರಕ ಬಹಳವ ತಿರುಗುವೆ ಅಯ್ಯ4ನಾರಿಯೆನಿಸಿಹುದೆ ಮೃತ್ಯುಇದನೀಗ ದೂರ ಮಾಡಿದನಾದರೆ ಅಯ್ಯಸೇರುವುದು ಸರ್ವಮುಕ್ತಿಚಿದಾನಂದನಿರೆ ತಾನೆಯಹುದು ಅಯ್ಯ5
--------------
ಚಿದಾನಂದ ಅವಧೂತರು
ಲೇಸಿನಮಾರ್ಗಕೇಳಿರೋ ಜನರುಈಸು ಲಾಲಿಸಿದರೆ ಲೇಸುಪಹಂದಿನಾಯಿ ತೃಣಗಳಲಿರುವ ದೇವನಅರಿದರೆ ಅದು ಲೇಸುಹಿಂದಾಗಿಹುದನು ಮುಂದಾಗುವುದನುಚಿಂತಿಸಿದರೆ ಅದು ಲೇಸು1ಕ್ರೂರ ಮನುಜರೊಡಗೂಡದೆ ಮೌನದಿಬೇರೆಯಿಹುದು ಅದು ಲೇಸುಪ್ರಾರಬ್ಧದ ದಶೆಯಿಂದಲಿ ಬಂದುದಕಳೆದುಕೊಂಡರೆ ಅದು ಲೇಸು2ಘೋರವಾದ ತಾಪತ್ರಯಗಳುಮನೆಸೇರದಿದ್ದಡೆ ಅದು ಲೇಸುಸಾರವ ತಿಳಿದು ವ್ಯವಹಾರದೊಳಿದ್ದುಧೀರನಾಗಿಹುದದು ಲೇಸು3ಪಾಪಿಯ ಕೂಡದೆ ಸುಜನರ ಕೂಡುತದೇವನ ಕಾಂಬುದೆ ಲೇಸುಕೋಪವು ಎಂದಿಗು ಸುಳಿಯದೆ ಶಾಂತಿಯುವ್ಯಾಪಿಸಿ ತಾನಿಹುದದು ಲೇಸು4ಪಾಪ ಪುಣ್ಯಗಳ ಗುರುವಿಗೆ ಅರ್ಪಿಸಿಬಾಳುವೆ ನಡೆಸುವುದದು ಲೇಸುಈಪರಿ ನಡೆಯ ನಡೆದು ಚಿದಾನಂದಭೂಪನಾಗುವುದತಿ ಲೇಸು5
--------------
ಚಿದಾನಂದ ಅವಧೂತರು
ಸಾಮಜಗಮನೆ ಕೇಳೀ ಮನ ನಿಲ್ಲದುಸ್ವಾಮಿಯ ಕರೆತಾರೆ ನೀರೆ ಪ.ಯಾತರ ಜನುಮ ಇನ್ಯಾತರ ಬಾಳುವೆಪ್ರೀತಿಯಿಲ್ಲವೆ ಎನ್ನಲ್ಲಿ ಅಗಲಿಧಾತುಗುಂದಿಹ್ಯದು ಮತ್ಯಾತಕೆ ಸಲ್ಲವಮ್ಮನಾಥನಿದಿರಿನಲ್ಲಾಸೆ ಉದಿಸೆ 1ಕಣ್ಣಕಜ್ಜಲನಿಲ್ಲದಿನ್ನೇನು ತರವಮ್ಮರನ್ನದುಡುಗೆಭಾರತೋರಪನ್ನಗವಾದವು ಎನ್ನ ಹೂವಿನಹಾರಮನ್ನಿಸಿ ಬರಲೊಲ್ಲನೆ ಎನ್ನೊಲ್ಲನೆ 2ಕೂಡಿದವಳ ಹೀಗೆ ಕಾಡಬಹುದೇನಕ್ಕಬ್ಯಾಡ ಕಠಿಣ ಮನಸುಮುನಿಸುನೋಡೆ ಪ್ರಸನ್ನವೆಂಕಟ ಗಾಡಿಕಾರನು ನೆರದುಆಡಿದನೆ ಕಾಂತೆ ಏಕಾಂತ 3
--------------
ಪ್ರಸನ್ನವೆಂಕಟದಾಸರು