ಒಟ್ಟು 524 ಕಡೆಗಳಲ್ಲಿ , 66 ದಾಸರು , 203 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುವಲ್ಲಿಕೇಣಿ (ಚೆನ್ನೈ) ದರುಶನ ಮಾಡುವ ಬಾಬಾರೋ ಪ ಪರಮ ಪುರುಷನವ ಪಾರ್ಥನ ಸೂತನು ವರಗೀತಾಮೃತವುಸುರಿದವನು ಅ.ಪ ಶರನಿಧಿಯೊಳು ಮಿಂದು ಐತರುವವರಿಗೆ ವರದಾಭಯಕರ ತೋರುವವನು ಪರಮಾಚಾರ್ಯಗೆ ದರುಶನವಿತ್ತು ಪರಭಕ್ತಿಯ ಸಾರಿದನಿವನು 1 ಚಾರು ವೇದಂಗಳ ತುರಗವ ಗೈದ ಧಾರುಣಿಯನು ರಥಹೂಡಿದನು ಮರುತಾತ್ಮಜನನು ಧ್ವಜಕೇರಿಸಿದನು ದುರುಳ ಕೌರವನ ಧುರದಿ ಸೋಲಿಸಿದನು2 ಹತ್ತವತಾರದಿ ಬಂದವನಿವನೇ ಮತ್ತದೈತ್ಯರನೆಲ್ಲ ಕೊಂದವನಿವನೇ ಉತ್ತಮಭಕ್ತರ ಕಾಯಲು ಮಾಂಗಿರಿ ಅತ್ತ ನಿಂದಾ ರಂಗನಾಥನು ಇವನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತೆರೆ ಬಾಗಿಲವ ಸುಗುಣೆ ಸುಂದರಿ ಮುಗಿವೆ ಕರವನುನಗಧರನ ಚರಣಕಮಲಯುಗಳ ನೋಳ್ಪೆನು ಪ ಪೇಳಿದವರು ಯಾರು ನಿನಗೆ ಕೀಲಿ ಹಾಕಲುಶೀಲಲಾಮನೊಬ್ಬನಾಜ್ಞೆ ಕೇಳಿ ನಡೆವಳು 1 ಹರಿಯು ಎಷ್ಟು ಸಾರೆ ನಿನಗೆ ತೆರೆಯ ಕೀಲಿಯೆಕರೆದು ಪೇಳಿದಾನೆ ಮಾತು ಸಿರಿಯೇ ಮರೆತೆಯಾ 2 ಬಾರೋ ಎಂದು ನೀನೆ ಎಷ್ಟು ಸಾರಿ ಕರೆದೆಯಾನಾರಿಮಣಿಯೆ ಬಂದರ್ಹೀಗೆ ತೋರ್ಪೆ ರೀತಿಯಾ 3 ಇಂದು ಹರಿಯ ದ್ವಾರದಲ್ಲಿ ಬಂದು ನಿಂತಿಹೆಮಂದಗಮನೆ ಕೀಲಿನೀನು ಬಂಧ ಮಾಳ್ಪರೆ 4 ಇಷ್ಟು ನೋಡಿ ಇಂದಿರೇಶನ ಭೆಟ್ಟಿ ಭರದಲಿಕೃಷ್ಣೆ ಬಂದು ತೆರೆಯೆ ಕೀಲಿ ದೃಷ್ಟಿಯಾಗಲು 5
--------------
ಇಂದಿರೇಶರು
ದಾಸಜನರ ಪ್ರಾಣೇಶ ಬಾರೋ ಪ ಉರಗಶಯನ ಬಾರೋ ಗರುಡಗಮನ ಬಾರೋ ಶರಧಿಸುತೆಯ ಪ್ರಾಣದರಸ ಬಾರೋ 1 ಕಲುಷಹರಣ ಬಾರೋ ವಿಲಸಿತಮಹಿಮ ಬಾರೋ ತುಲಸೀಮಾಲನೇ ಸಿರಿಲೋಲ ಬಾರೋ 2 ತರಳನುದ್ಧರ ಬಾರೋ ಕರಿಯಪಾಲನೆ ಬಾರೋ ಮಾನವ ಕಾಯ್ದ ಕರುಣಿ ಬಾರೋ 3 ಭಾವಜನಯ್ಯ ಬಾರೋ ಸೇವಕಜನ ಜೀವದಾಪ್ತ ಬಾರೋ 4 ಭಕ್ತವತ್ಸಲ ಬಾರೋ ಮುಕ್ತಿದಾಯಕ ಬಾರೋ ಭಕ್ತಾಂತರಂಗ ಶ್ರೀರಾಮ ಬಾರೋ 5
--------------
ರಾಮದಾಸರು
ದುರಿತ ಜೀಮೂತವಾತ ಪೊರಿಯಯ್ಯ ನಿನಗೆ ನಿರುತ ಧರಣಿಯೊಳಗೆ ವಿಸ್ತರಿಸಿ ಬಲ್ಲವರಾರು ಗುರುವೆ ನಿಜ ನಮಿತರ ಸುರತರುವೆ ಪ ನಂಬಿದೆ ನಿನ್ನ ಪಾದವಂಬುಜವನು ಗಾಲ ಬೆಂಬಿಡದಲೆ ನಾನೆಂಬೋದು ಬಿಡಿಸಿಂದು ಬೆಂಬಲವಾಗು ಆರೆಂಬ ಖಳರ ನೀಗು ಇಂಬಾಗಿ ನೋಡು ದಿವ್ಯಾಂಬಕದಿಂದ ವೇಗ ಡಿಂಬಾರೋಪಿರೆ ಡಂಬಕತನವೆಂಬುದು ಕೊಡದಲೆ ಸಂಭ್ರಮದಲಿ ಹರಿದೊಂಬಲ ಬಯಸುವ ಹಂಬಲಿಗರ ಕೂಡ ಇಂತು ತೋರು ಬಲು ಗಂಭೀರ ಕರುಣಿ 1 ಎಣೆಗಾಣೆÉ ನಿಮಗೆ ಕುಂಭಿಣಿಯೊಳಗೆಲ್ಲ ಯತಿ ಮಣಿಭೂಷಣ ಚರಣಾರ್ಚನೆ ಮಾಳ್ಪ ಮಹಿಮ ಮನಸಿಜ ಶರಭೀಮ ಮನದಣೆ ಗುಣಿಸಿ ಈ ದಿನ ಮೊದಲು ಪಿಡಿದು ಜನುಮ ಜನುಮದ ಸಾ ಧನ ಫಲಿಸುತು ಯೋಚನೆಗೊಳಲ್ಯಾಕೆ ಅನುಮಾನ ಸಲ್ಲದು ಘನತರ ಕೀರ್ತಿ ನೂರಾರಕೆ ಕಾಯ 2 ವರಹಜೆ ಸರಿತೆಯಲ್ಲಿ ಸ್ಥಿರನಾಗಿ ನಿಂದು ಕ್ಷಣ ಸುರರಿಂದಾರಾಧನೆ ಸರಸರನೆ ಹಗಲು ಇರಳು ಕೈಗೊಳುತ ವಕ್ಕಾರಗಳು ಹರಸಿ ಸುಂ ದರ ವರಗಳನಿತ್ತು ಚಿರಕಾಲ ಬಿಡದಲೆ ಪರವಾದಿಯ ಬಲ ಉರುದಲ್ಲಣ ಪೂ ತುರೆ ಸುಧೇಂದ್ರರ ಕರಾರವಿಂದಜ ಅರಸರಸರ ಪ್ರಿಯ ವಿಜಯವಿಠ್ಠಲನ ಬಿರಿಯ ಹೊಯಿಸುವ ಧೀರಾ ಗುರು ರಾಘವೇಂದ್ರ3
--------------
ವಿಜಯದಾಸ
ದೂರ ತರುವಿರೇನೆ ಕೃಷ್ಣನ ಮೇಲೆ ಪ ದೂರ ತರುವಿರೇನೆ ಚೋರಾಗ್ರೇಸರನೆಂದು ಕ್ಷೀರ ತಕ್ರಗಳನ್ನು ಸೂರೆ ಮಾಡಿದನೆಂದು ಅ.ಪ ನೊರೆಹಾಲ ಕುಡಿಬಾ ದೊರೆ ಬಾರೋ ಬಾ ಎಂದು ಕರದಿಂದಲೆತ್ತಿ ಮುತ್ತಿಟ್ಟೆಯಂತೆ ಬಿರುಗಾಳಿ ಬಂತೆಂದು ಬಿಗಿದಪ್ಪಿ ಕೊರಳಿಂಗೆ ಕೊರಳಿಟ್ಟು ಬರಿಗೈಯ ತೋರಿದೆಯಂತೆ 1 ಹಸಿದೆ ಬಾ ಕಂದ ಮೊಸರ ಕುಡಿಯೆಂದು ಹುಸಿನಗೆಯ ಬೀರಿ ಕೈಹಿಡಿದರವಳು ಉಸಿರಾಡದಂತೆ ಅಧರಕಧರವನ್ನಿಟ್ಟು ಹಸಿವಾರಿತಿನ್ನು ನೀ ಹೋಗೆಂದಳಂತೆ 2 ಮಲ್ಲಿಗೆ ಹಾಸಿನಲ್ಲಿ ಮಲಗು ಬಾರೆನ್ನುತ ಬೆಲ್ಲ ತುಪ್ಪವ ನೀ ತಿನ್ನಿಸಿದೆಯಂತೆ ಹಲ್ಲ ತೋರಿಸು ಹೊಂಬೆಳಕ ನೋಡುವೆನೆಂದು ಮೆಲ್ಲನೆ ಬಾಗಿ ಬಾಗಿ ಗಲ್ಲವ ಕಚ್ಚಿದೆಯಂತೆ 3 ಬೆಣ್ಣೆಗಳ್ಳನು ಎಂದು ಹಿಂದೋಡಿ ಓಡಿ ಬಂದು ಸಣ್ಣ ತೋಳನು ಹಿಡಿದು ಎಳೆದಾಡಲವಳು ಕಣ್ಣಿನಲಿ ಕಣ್ಣಿಟ್ಟು ದೃಷ್ಟಿ ದೋಷವ ಬೀರೆ ಚಿಣ್ಣ ಮಾಂಗಿರಿರಂಗ ಕಣ್ಣಬಿಡಲೊಲ್ಲ ನೋಡೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಂದ ವೃಜ ಮಧುರಿ ದ್ವಾರಕೀಯೊಳಾಡಿದ ಕೂಸೆಎಂದು ಬಾಹುವಿ ಇಲ್ಲಿಗೆ ಪ ಮಧುರೆಯಲಿ ನೀಪುಟ್ಟಿ ಪಿತೃಗಳ ರಕ್ಷಿಸಿದಿಹಿತದಿಂದ ಯಾದವರ ತಲೆಯ ಕಾಯ್ದಿಮೃತವಾದ ಮಗುವನು ಗುರುಸತಿಯ ಮಾತಿಗೆ ಕೊಟ್ಟೆಪ್ರತಿಗಾಣೆನೊ ನಿನ್ನ ಬಲಕೆ ಛಲಕೆ 1 ವೈರಿ ಬಾಧೆಯ ಬಿಡಿಸಿಭೂರಿ ಸುಖವಿತ್ತು ಪೊರೆದಿ ಭರದಿ 2 ಸರಯು ತೀರದಿ ಅಯೋಧ್ಯಾ ಪುರದೊಳಗೆ ಕಾಂಚನದಪರಮ ಪೀಠದಿ ಕುಳಿತು ಸೀತೆಯೊಡನೆಹರಳು ಕೆತ್ತಿದ ನಾನಾ ಭೂಷಣಂಗಳನಿಟ್ಟುಮರುಳು ಮಾಡುವಿ ನಮ್ಮನೂ ನೀನು 3 ನಂದ ಗೋಕುಲದಿ ರವಿ ನಂದನೀಯ ತೀರದಲ್ಲಿಚಂದದಿಂದಲಿ ನಿಂತು ಕೊಳಲನೂದಿಮಂದಗಮನಿಯರ ಮನಸು ಮರುಳು ಮಾಡುತ ಸುಖವು ದ್ವಂದ್ವಲೋಕದಿ ಕೊಟ್ಟಿ ಭೆಟ್ಟಿ 4 ಸಿರಿ ಸಂಪತ್ತು ಬಲ್ಲೆಇಂದಿರೇಶನೆ ಎನ್ನ ಚಿತ್ತ ಮಂದಿರದೊಳು ನಿನ್ನಸುಂದರಾನನ ತೋರೋ ಬಾರೋ5
--------------
ಇಂದಿರೇಶರು
ನರಕಾಂತಕ ವರದೇವನೆ ಕರುಣಾಕರ ಗೋವಿಂದಾ ಪ ಮರೆವೆಯೇತಕೋ ಲೋಲ ಬಾರೋ ಬಾರೋ ಗಾನಲೋಲ ಅ.ಪ ಪರಿಪರಿಯಾ ಜನುಮಾಂತರ ಸರಣಿಯೊಳಾನು ಜನಿಸಿ ಸೊರಗಿ ಸೊರಗಿ ಮರುಗಿ ತಿರುಗಿದೆ 1 ನೆಲೆಸಲಿಕೆ ಸ್ಥಳವು ಇಲ್ಲವೋ [ಕಲಿ]ಕಾಲಪಾಶ ಬದ್ಧನಾದೆನೊ 2 ಜನುಮಕೋಟಿಯೊಳಾದು ಪೋಪುದು ನಾಮ ಸ್ಮರಣೆಯೊಂದಿರಲೋ 3 ರಾಮದಾಸವಿನುತ ಕೇಶವಾ [ಉದ್ಧರಿಸೋ] ಆವ ಸುಖವು ಬೇಡವೆನಗೆ ಜೀವ ಪೋಗುವಂದು ನಿನ್ನ ಸೇವೆಗೈವ ವರವು ಸಾಕೆಲೈ ಮಾವಿನಕೆರೆಯರಸ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನೊರಲುವಾ ದನಿಯು ಕೇಳದೆ ರಂಗಾ ಭಂಗ ಪ ನಾರಿಯೊಬ್ಬಳು ಬಾಲರಿಬ್ಬರು ಕರಿಯೊಂದು ಕ್ಷೀರಾಬ್ಧಿಯೆಡೆಗೈದಿ ಬಾರೋವರೇನೋ ನಾರದನಾ ಯೆನ್ನಂಗ ಬಾರೆಂದೊಡೇನಾಯ್ತೋ ನೀರಜಾಂಬಕ ನೀನು ಪರಿದೋಡಲೇಕೋ 1 ಒಂದೆಲೆಯ ನೈವೇದ್ಯ ಒಂದು ಹಿಡಿಯವಲಕ್ಕಿ ಒಂದು ಹನಿಗೋಕ್ಷೀರ ಒಂದು ದಳ ಶ್ರೀತುಳಸಿ ಒಂದು ಫಲವರ್ಪಣಕೆ ತೇಗಲಿಲ್ಲವೆ ಸ್ವಾಮಿ ತಂದೆಯೆನ್ನಾತ್ಮನೈವೇದ್ಯ ಸಾಲದೆ ರಂಗಾ 2 ಕಾಲು ಕೈ ಕಣ್ಣು ಬೆನ್ನು ಸೋಲುವಂತಾದಾಗಾ ನೀಲಾಂಗ ನಿನ್ನ ಸೇವೆಯು ಸಾಧ್ಯವಲ್ಲ ಕಾಲ ಎಂದೊಳ್ಳಿತೈ ನಾಲಗೆಗೆ ನೋವಿಲ್ಲ ಬಾಲ ಗೋಪಾಲ ಮಾಂಗಿರಿಯ ರಂಗ ದಯಮಾಡೊ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ಕಾಣಬಂದೆನಯ್ಯ ಚೆನ್ನಕೇಶವಾ ನಿನ್ನ ಕಂಡು ನಲಿದೆ ರಮಾರನ್ನ ಮಾಧವಾ ಪ ಜಳದಿ ಮುಳುಗಿ ತೊಳಲಿ ಬಳಲಿ ಬಹಳನೊಂದೆನು ತಳವ ಬಯಸಿ ಬಳಸಿ ಬಳಸಿ ನಡುವೆ ನಿಂದೆನೊ ಬಳಿಯ ಬಳಗವಿಲ್ಲ ನೋವಿನಿಂದ ಬೆಂದೆನೋ ಸುಳಿಗೆ ಸಿಲುಕಿ ಅಳುಕಿ ಬಳುಕಿ ವಿಧಿಯ ಬೈದೆನೋ 1 ಕರವ ಮುಗಿದು ಕರೆವೆ ನಿನ್ನ ಕರುಣದಿ ಬಾರೋ ಮರುಗಿ ಮರುಗಿ ಕೊರಗಿದೆನಗೆ ಚರಣವ ತೋರೋ ಕರಿಯ ಪೊರೆದೆ ತರಳಗೊಲಿದೆ ಮರುಕವ ಬೀರೋ ಶಿರವ ಚರಣಕಿರಿಸುವೆ ಮಾಂಗಿರಿಯರಂಗ ಬಾರೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿಲ್ಲ ಬಾ ನಿಲ್ಲ ಬಾ ಮೆಲ್ಲಮೆಲ್ಲನೆ ಹೆಜ್ಜೆನಿಟ್ಟುನಿಲ್ಲ ಬಾರೋ ಕೃಷ್ಣಾ ನಿಲ್ಲ ಬಾರೋ ಪ ದುಷ್ಟ ಪೂತನಿಯ ದೊಡ್ಡ ಹೊಟ್ಟೆಯೊಳಾಡಿದಿ ಮಂದಿದೃಷ್ಟಿ ತಾಕಿಹುದೊ ರಕ್ಷೆನಿಟ್ಟು ಮುದ್ದಿಸುವೆ 1 ಆಲಯದಂಗಳದೊಳು ಲೀಲೆ ಮಾಡುವಿಯೊ ಕೆಟ್ಟಬಾಲೆಯರ ಗಾಳಿ ಸೋಕಿಹುದೋ ಹಣ್ಣು ನಿವಾಳಿಸಿಒಗೆವೆ ಕೃಷ್ಣ 2 ಇಂದಿರೇಶ ನಿನ್ನ ಬಹುಮಂದಿ ನೋಡುವರೋ ದೃಷ್ಟಿಇಂದು ಆಗಿಹುದೊ ಮಾಳ್ಪೆ ಕದಲಾರತಿಯ ಕೂಸೆ 3
--------------
ಇಂದಿರೇಶರು
ನಿಲ್ಲು ಬಾರೊ ದಯಾನಿಧೆ ಪ ನಿಲ್ಲು ಬಾರೋ ಸರಿಯಲ್ಲ ನಿನಗೆ ಲಕ್ಷ್ಮೀ ವಲ್ಲಭ ಮನ್ಮನದಲಿ ಬಿಡದೆ ಬಂದು ಅ ಅತಿ ಮೃದುವಾದ ಹೃತ್ಯತ ಪತ್ರಸದನದಿ ಶಾ ಶ್ವತವಾಗಿ ಭವ್ಯ ಮೂರುತಿ ಭಕ್ತವತ್ಸಲ 1 ತನುಮನಧನದ ಚಿಂತೆಯ ಬಿಟ್ಟು ತ್ವತ್ಪದ ವನರುಹ ಧೇನಿಪೆ ಮನುಮಥನಯ್ಯ 2 ಆಶೆಪುಟ್ಟಿತು ನಿನ್ನಲ್ಲೀ ಸಮಯದಲಿ ಪಾ ರಾಶರವರದ ಪೂರೈಸು ಬಯಕೆಯ 3 ನಾನಾವ್ರತಂಗಳ ನಾನನುಕರಿಸಿದೆ ಶ್ರೀನಿಧಿ ನಿನ್ನಂಘ್ರಿ ಕಾಣಬೇಕೆನುತಲಿ4 ಯಾತರ್ಯೋಚನೆ ಮನಸೋತ ಬಳಿಕ ಪುರು ಹೂತವಂದಿತ ಜಗನ್ನಾಧವಿಠ್ಠಲರೇಯ 5
--------------
ಜಗನ್ನಾಥದಾಸರು
ನೀನೆ ನಿರ್ದಯನಾಗಲಿನ್ನೇನು ಗತಿಯೋ ದೀನಜನಮಂದಾರ ಜಾನಕೀ ಮನೋಹರ ಪ ಪಿತ ಮಾತೆಯರ ಸುತರ ಹಿತದಿಂದ ನೋಡದಿರೆ ಕ್ಷಿತಿಯೊಳಗಿತರರು ಹಿತದಿಂ ನೋಡುವರೊ ಪಿತ ನೀನೆ ಮೂಜಗಕೆ ನುತಿಸುವ ಭಕ್ತರ ಸ್ಥಿತಿ ವಿಚಾರಿಸದಿರೆ ಗತಿಯೇನು ಮುಂದೆ 1 ಲೋಕ ಎರಡೇಳು ನೀ ಕರುಣದೊಡಲೊಳಿಟ್ಟು ಜೋಕೆ ಮಾಡುವಿ ನಿನ್ನೊಳ್ಯಾಕೆ ದಯವಿಲ್ಲ ಬೇಕೆಂದು ನಿನ್ನಪಾದ ಏಕಭಕ್ತಿಲಿ ನುತಿಪೆ ಮೂಕನಾಗಲು ಬೇಡ ಶ್ರೀಕರನೆ ದಯಮಾಡೊ 2 ನರಜನ್ಮವಿತ್ತೆನಗೀಪರಿ ಬವಣೆ ಬರಲಿಕ್ಕೆ ಕರುಣವನಿತು ನಿನಗೆ ಬರಲಿಲ್ಲವೇನೋ ಹರಿಯೆನ್ನ ಬರೆಹ ಹೀಗೆ ಬರೆದದ್ದೇ ತಪ್ಪು ನೀ ಮರೆಯಾದರೆ ಬಿಡದಯ್ಯಾ ತ್ವರೆಬಾರೋ ಶ್ರೀರಾಮ 3
--------------
ರಾಮದಾಸರು
ನೀಲಮೇಘಶ್ಯಾಮಾ ಬಾರೊ ನೀವೊಂದು ಮುತ್ತ ತಾರೋ ಪ. ನೀರಜಾಕ್ಷ ನಲಿದು ಬಾರೊ ನಗೆಮೊಗವನ್ನೆ ತೋರೊ ಅ.ಪ. ನಿನ್ನ ಸಮರ್ಯಾರೊ ಕೃಷ್ಣಾ ಸನ್ನುತಾಂಗ ಓಡಿ ಬಾರೋ ಬೆಣ್ಣೆಕೋಲು ಬೆಂಡು ಬುಗುರಿ ಚಿನ್ನ ರನ್ನ ಕೊಡುವೆ ಬಾರೋ 1 ಮುತ್ತಿನಂಗಿ ಕೊಡಿಸುವೇನೂ ರತ್ನತಿಲಕವಿಡುವೆ ಬಾರೋ ವತ್ತಿ ನಿನ್ನ ಬಾಯೊಳೂದೆ ರತ್ನ ಕೊಳಲ ಕೊಡುವೆ ಬಾರೋ 2 ಸ್ವರ್ಣಮಯೂರಂಗವ ತೋರೊ ನೀಲವರ್ಣಾ ಚಂದ್ರಬಿಂಬ ಬಾರೋ 3 ಭಕ್ತಿ ಸುರಧೇನುಬಾರೊ ಮುಕ್ತಿದಾತ ಶ್ರೀ ಶ್ರೀನಿವಾಸ ಮಾಧವ ಬಾರೋ 4
--------------
ಸರಸ್ವತಿ ಬಾಯಿ
ಪರಮ ಪುರುಷ ಬಾರೋ-ಪಾವನ- ಚರಣಯುಗವ ತೋರೋ ಪ ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ. ದಿಕ್ಕು ನೀನೆ ಎಂದು-ನಂಬಿದನಕ್ಕರಿಂದ ಬಂದು ಘನ ರಕ್ಕಸ ವೈರಿಯೆ 1 ಇಷ್ಟದೇವನಾರೋ-ಮನಸಾಭೀಷ್ಟವ ಕೊಡುಬಾರೋ ನೀಂದೃಷ್ಟಿಸು ನಮ್ಮನು2 ಕೇಣವ್ಯಾಕೋಹರಿಯೇ-ಕಣ್ಣಿಲಿ-ಕಾಣ ಬಾರೋ ಧೊರೆಯೇ ಸರಿ ಜಾಣತನದಿಹರಿ3 ವಾರಿಧಿಕೃತಶಯನ-ವಿಕಸಿತ-ವಾರಿಜದಳನಯನ ಕಂಸಾರಿ ಸಾರಿದೆ ನರಹರಿ4 ಧರೆಯೊಳಧಿಕವಾದ-ಶ್ರೀ ಪುಲಿಗಿರಿಯೊಳು ನೆಲೆಯಾದ ವರದವಿಠಲಧೊರೆ ವರದ ದಯಾನಿಧೆ 5
--------------
ಸರಗೂರು ವೆಂಕಟವರದಾರ್ಯರು
ಪಾದತೋರೋ ಪದ್ಮಾಕ್ಷ ಬಾರೋ ಪ. ಪಾದಪದ್ಮವ ತೋರೋ ಪದ್ಮಾಕ್ಷ ಬಾರೋ ಆದಿಮಧ್ಯಾಂತ ಸ್ವರೂಪ ಮೈದೋರೋ ಅ.ಪ. ಬಲಿಯನ್ನು ತುಳಿದಂಥ, ಭೂಮಿಯನಳೆದಂಥ ಶಿಲೆಯಾಗಿದ್ದವಳ ಕಲುಷವ ಕಳೆದಂಥ 1 ಶಿಶುರೂಪದಿಂದಲೆ ಶಕಟನ ಒದ್ದಂಥ ಶಶಿಮುಖಿಯಶೋದೆಗೆ ಶಿಶುವೆನಿಸಿ ಮೆರೆದಂಥ 2 ಗೊಲ್ಲರ ಮನೆಮನೆಗೆ ಕಳ್ಳನಂದದಿಪೊಕ್ಕು ನಲ್ಲೆಯರ ಕೈಪಿಡಿಗೆ ನಿಲ್ಲದೋಡುವ ಮುದ್ದು 3 ಕಾಳಿಂಗನ ಫಣೆಯೊಳ್ ಕೋಲಾಹಲದಿ ಕುಣಿದ ಕಾಳಿಂಗನರಸಿಯರಿಗೆ ತಾಲೀ ಭಾಗ್ಯವನಿತ್ತ4 ಕರುತುರುಗಳ ಮರೆಸಿ ದೊರೆ ನಿನ್ನರಸಿದ ಪರಮೇಷ್ಠಿಯೆ ತನ್ನ ಕರದಿಂ ಪೂಜಿಸಿದಂಥ 5 ಮಾವ ಕಂಸನ ಕೊಂದು ತಾಯಿ ದೇವಕಿ ವಸುದೇವಸುತ ವಾಸುದೇವನೆಂದೆನಿಸಿದ 6 ಸಿರಿದೇವಿಯೇ ನಿಜಕರಗಳಿಂದೊತ್ತುವ ಪರಮಪಾವನ ಪದಸರಸೀರುಹ 7 ವರಶೇಷಗಿರಿದೊರೆ ಶರಣರ ಮರೆವರೆ ಶಿರಬಾಗಿ ಬೇಡುವೆ ಭರಿಸೆನ್ನನೆನುವೆ 8
--------------
ನಂಜನಗೂಡು ತಿರುಮಲಾಂಬಾ