ಒಟ್ಟು 41 ಕಡೆಗಳಲ್ಲಿ , 20 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ
ಹೋಯಿತು ಪರಶುರಾಮನ ದಂಡಿಲಿ ನಷ್ಟ ವಾಯಿತು ಜನರೆಲ್ಲ ಹೊಡೆತ ಕಡಿತದಿ ಪ ಮೇಧಿನಿಯೊಳಗಣ ಜನರಿಂಗೆ ದಂಡಿಂದ ಮಣಿ ಮುತ್ತು ತೀರ್ದುದು ಕಂಚು ತಾಮ್ರಗಳು ಬಹುಕಾಲ ಸಾಧಿಸಿದೊಡವೆ ಸಾಧನ ಸಂಪತ್ತುಗಳೆಲ್ಲ 1 ಉಡುವ ತೊಡುವ ಜವಳಿ ಅಡಕೆ ಮೆಣಸು ಭತ್ತ ಕಡಿತ ಕಂಠಗಳಾಬ್ರ ಮುಡಿ ಉಪ್ಪುಗುಢಕಲ್ಲು ಗಡಿಗೆ ಮಡಕೆ ಎಣ್ಣೆ ಕೊಡವು ಕಬ್ಬಿಣದ ಕತ್ತಿ ಅಡಿಯಿಟ್ಟ ಚಿಟ್ಟು ಪಾಟ್ಟಿಗಳೊಂದುಳಿಯದಂತೆ 2 ಕೊಟ್ಟದೊಳಗೆ ಇಟ್ಟವಸ್ತು ವಡವೆಯೆಲ್ಲ ನಷ್ಟವಾಯಿತು ಹಾರೆ ಕೊಡಲಿ ಗುದ್ದಲಿ ಕುಳ ಬಟ್ಟಲು ಹಂಡೆ ಕೊಪ್ಪರಿಗೆ ಇಕ್ಕುವ ಗುಂಡಿ ಮಣಿ ಮರಿಗೆ ಸರ್ವಸ್ವವು 3 ನಗ ಯೊತ್ತು ಉಂಗುರ ಜಪಮಣಿ ಮಾಲೆ ಹವಳ ಯಾ ರೆತ್ತುವ ನಗನಾಣ್ಯವೆಲ್ಲ ಸುಲಿಗೆಯಿಂದ 4 ಅಂಧಕಾರಕೆ ನೆರವಾದಂತೆ ದುರ್ಭಿಕ್ಷ ಬಂದಿತು ಸಂಗಡ ತಂಡುಲ ಗದ್ಯಾಣವೊಂದಕೈದಾಗಿ ಮುಗಿತು ಹರಿನಂದನ ಕೋಣೆ ಲಕ್ಷ್ಮೀಶನೊಬ್ಬನೆ ಬಲ್ಲ 5
--------------
ಕವಿ ಪರಮದೇವದಾಸರು
ಏಕೆ ಗೋಪಾಲ ಕರೆಯುತಾನೆ - ಎಲೆ ಸಖಿಯೆ ಎನ್ನ |ಏಕೆ ಗೋಪಾಲ ಕರೆಯುತಾನೆ ? ಪಕಣ್ಣ ಸನ್ನೆ ಮಾಡುತಾನೆ - ಮತ್ತೆ ಬಗೆ ಬಗೆ |ಹಣ್ಣ ಕೈಯಲಿ ತೋರುತಾನೆ - ಎನ್ನ ಚೆಲುವಿಕೆ ||ಬಣ್ಣಿಸುತಲಿ ತಿರುಗುತಾನೆ - ಇವನೇನೆ |ಇನ್ನೂರು ವರಹಗಳ ಕೊಟ್ಟು ಮದುವೆಯಾದನೇನೆ ಎಲೆ ಸಖಿಯೆ 1ಹವಳ ಸರವ ತೋರುತಾನೆ - ದುಂಡು ಮುತ್ತಿನ - |ಧವಳಹಾರವ ನೀಡುತಾನೆ - ಹಾಸಿಗೆಯ ಮೇಲೆ ||ಪವಡಿಸಬೇಕೆನುತಾನೆ - ಇವನೊಡನಿರಲು ನ-|ಮ್ಮವರು ಸುಮ್ಮನೆ ಇಹರೇನೆ - ಎಲೆ ಸಖಿಯೆ 2ಬಟ್ಟಲ ಪಿಡಿದು ಬರುತಾನೆ - ಹಗಲೆ ಬಾ ಎಂದು -|ಬಟ್ಟ ಬಯಲೊಳು ಕರೆಯುತಾನೆ - ಎನ್ನ ಮನದೊಳು ||ದಟ್ಟು ಧಿಗಿಲು ಎನ್ನದೇನೆ - ಪುರಂದರವಿಠಲ - |ಇಟ್ಟು ಕೊರಳಾಣೆ ಈಗ ಬಾ ಎಂಬುವನೆ - ಎಲೆ ಸಖಿಯೆ 3
--------------
ಪುರಂದರದಾಸರು
ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
--------------
ಪುರಂದರದಾಸರು
ತೋಳು ತೋಳು ತೋಳು ಕೃಷ್ಣ-ತೋಳನ್ನಾಡೈ |ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈಪಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋ-|ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋ-|ನೆಲುವು ನಿಲುಕದೆಂದೊರಳ ತಂದಿಡುವನೆ ತೋ-|ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋ- 1ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋ-|ಕಟ್ಟದ ಕರಡೆಯ ಕರುವೆಂದೆಳೆವನೆ ತೋ-||ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋ-|ಬಟ್ಟಲ ಹಾಲನು ಕುಡಿದು ಕುಣಿವನೆ ತೋ- 2ಅಂಬೆಗಾಲಿಲೊಂದೊರಳನ್ನೆಳೆವನೆ ತೋ-|ತುಂಬಿದ ಬಂಡಿಯ ಮುರಿಯಲೊದ್ದವನೆ ತೋ-|ಕಂಬದಿಂದಲವತರಿಸಿದವನೆ ನೀ ತೋ-|ನಂಬಿದವರನುಹೊರೆವಕೃಷ್ಣ ತೋ3ಕಾಲಕೂಟದ ವಿಷವ ಕಲಕಿದ ತೋ-|ಕಾಳಿಂಗನ ಹೆಡೆಯನು ತುಳಿದ ತೋ-||ಕಾಳೆಗದಲಿ ದಶಕಂಠನ ಮಡುಹಿದ ತೋ-|ಶಾಲಕ ವೈರಿಯೆ ಕರುಣಿಗಳರಸನೆ ತೋ 4
--------------
ಪುರಂದರದಾಸರು
ಬ್ಯಾಡಿರವ್ವ ಎನ್ನ ಕಂದನ್ನ ದೂರಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿಪಿಡಿದು ತಂದು ದುರುಳನೆನ್ನ ಬ್ಯಾಡಿರೆ ಪ.ಹಸಿದೆ ಮಗುವೆ ಹಸಿದೆ ಚಿನ್ನಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುನಿಬಟ್ಟಲೊಳಿಟ್ಟ ಪಾಲಿನಬಿಸಿಗೆ ಬೊವ್ವೆಂದು ಬೆದರುವಮೊಸರ ಹರವಿಯೊಡೆದು ನಿಮ್ಮನೆಪೊಸಬೆಣ್ಣೆಗಳ ಮೆಲುವನೆಂದುಅಸಿಯರೊಂದುಗೂಡೆನ್ನ ಕೂಸಿಗೆಪುಸಿಯ ವಾಕನುಸುರಿ ದೂರ ಬ್ಯಾಡಿರೆ 1ಮುದ್ದು ತಾರೊ ರಂಗ ಎನಲುಎದ್ದು ತಪ್ಪಡಿಗಳನಿಡುತಬಿದ್ದು ಅಂಬೆಗಾಲನಿಕ್ಕಿಮುದ್ದು ನೀಡಲರಿಯನೆಕದ್ದು ನಿಮ್ಮನೆ ಕೆನೆವಾಲನುಗೆದ್ದು ನಿಮ್ಮ ಬಾಲರ ಬೆನ್ನಗುದ್ದಿ ಓಡಿ ಬರುವನೆಂತೆಬುದ್ಧಿ ಇಲ್ಲವೆ ನಿಮಗೆ ದೂರ ಬ್ಯಾಡಿರೆ 2ಎತ್ತಿಕೊಂಡು ರಂಬಿಸಿ ಬಾಯೊಳುತುತ್ತನಿಡಲು ಉಣ್ಣಲರಿಯಕತ್ತಲೆಯೊಳು ಹೆಂಗಳ ಪಿಡಿದುಚಿತ್ತ ಮೋಹಿಸಬಲ್ಲನೆಹೆತ್ತ ಮಕ್ಕಳಿಲ್ಲವೆ ನಿಮಗೆವ್ಯರ್ಥ ಜಾರನೆನ್ನುವಿರಮ್ಮಕರ್ತಪ್ರಸನ್ವೆಂಕಟರಾಯಗೆಭಕ್ತವತ್ಸಲನಲ್ಲೆಂದು ದೂರ ಬ್ಯಾಡಿರೆ 3
--------------
ಪ್ರಸನ್ನವೆಂಕಟದಾಸರು
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮ-ಶಂಕರಾದಿವಂದ್ಯ ಎನಗೆ ಮುಕ್ತಿ ತೋರಿಸೋ ಪಹುಟ್ಟು ಮೊದಲಾದಂಢ ಕಷ್ಟ ಬಿಡಿಸೋ-ನಿನ್ನಪಟ್ಟದ ರಾಣಿಗೆ ಹೇಳಿಪದವಿಕೊಡಿಸೋ ||ಇಷ್ಟ ಭಕ್ತಜನರೊಳು ಎನ್ನ ಸೇರಿಸೋ-ಈಸೃಷ್ಟಿಯೊಳು ನಿನ್ನ ದಾಸ-ದಾಸನೆನಿಸೋ 1ಅಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂ-ಬಟ್ಟಲೊಳಗಿನ ಹಾಲು ಎನಗೆ ಹೊಯ್ಯಿಸೊ ||ಗಟ್ಟಿ ಸಕ್ಕರೆ ತುಪ್ಪ ರೊಟ್ಟಿಗಳನು ಉಣ್ಣಿಸೋ-ಮುಂದೆಹುಟ್ಟಿಬಾಹಜನ್ಮಂಗಳ ಎನಗೆ ಬಿಡಿಸೋ2ಕಿಟ್ಟಿಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೋ-ಉತ್ಕøಷ್ಟ ಬಂಗಾರದೊಳು ಎನ್ನ ಕೂಡಿಸೋ ||ಬೊಟ್ಟಿಗೆ ಉಂಗುರವ ಮಾಡಿ ಎನ್ನ ಸೇರಿಸೋ-ಎನಗೆದಿಟ್ಟ ಪುರಂದರವಿಠಲನೆಂಬುದನೆ ಪಾಲಿಸೋ 3
--------------
ಪುರಂದರದಾಸರು