ಪುರಂದರ ದಾಸರಾಯ ಪ
ದಾಸರಾಯ ಪ್ರತಿವಾಸರದಲಿ ಶ್ರೀನಿ
ವಾಸನ್ನ ತೋರೋ ದಯಾಸಾಂದ್ರ ಅ.ಪ.
ವರದನಾಮಕ ಭೂಸುರನ ಮಡದಿ ಬ
ಸಿರಲಿ ಜನಿಸಿ ಬಂದು ಮೆರೆದೆ ಧರಣಿಯೊಳು 1
ಕುಲಿಶಧರಾಹ್ವಯ ಪೊಳಲೊಳು ಮಡದಿ ಮ
ಕ್ಕಳ ಕೂಡಿ ಸುಖದಿ ಕೆಲ ಕಾಲದಲಿದ್ಯೊ 2
ವ್ಯಾಸರಾಯರಲಿ ಭಾಸುರ ಮಂತ್ರೋ ಪ
ದೇಶವ ಕೊಂಡು ರಮೇಶನ ಒಲಿಸಿದ್ಯೊ 3
ವಾಹನ ವಸ್ತುಗಳನೆಲ್ಲ
ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ 4
ಕೃತಿ ಪೇಳಿ ಆ
ಪ್ರಾಕೃತ ಹರಿಯಿಂದ ಸ್ವೀಕೃತ ನೀನಾದ್ಯೊ 5
ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ6
ವನಧಿ ಪೋತನೆನಿಪ ಜಗ
ನ್ನಾಥ ವಿಠ್ಠಲನ ಸುಪ್ರೀತಿಯಿಂದೊಲಿಸಿದೆ 7