ನಿನ್ನ ದಾಸರದಾಸ ನಾನಯ್ಯ ಹರಿ ಎನ್ನನುಪೇಕ್ಷಿಪರೇನಯ್ಯ ಪ
ಪ್ರೇಮವೆನ್ನೊಳು ಕಾಲಿಡಲಿಲ್ಲ
ಭವ ತಾಮಸ ಬೀಜವ ಸುಡಲಿಲ್ಲ 1
ನೀಚರ ಸಂಗಕೆ ಮಿತಿಯಿಲ್ಲ
ಗೋಚರಪಡಿಸುವ ಮತಿಯಿಲ್ಲ 2
ದೇಹದಿ ಬಲವಿಲ್ಲವಾದರೂ ವ್ಯಾ
ಮೋಹವು ಬಿಡದಲ್ಪವಾದರೂ
ಸೋಹಮೆಂಬುದಕಿಲ್ಲ ಬೇಸರು3
ದಾಸರ ಸಂಗದೊಳಾಡಿಸು ಹರಿ
ವಾಸರವ್ರತದೊಳು ಕೂಡಿಸು
ಸಿರಿ ವಾಸನಾಮದ ಸವಿಯೂಡಿಸು 4
ಕರುಣಾರಸನಿನಗುಳ್ಳರೆ
ಸಿರಿವರದವಿಠಲ ನೀನೆ ನಮ್ಮ ದೊರೆ 5