ಒಟ್ಟು 127 ಕಡೆಗಳಲ್ಲಿ , 48 ದಾಸರು , 119 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರು ನಿಜಜ್ಞಾನ ಸುಖವ ಮಾರನಯ್ಯ ಮರೆಯ ಬಿದ್ದೆ ಪ ಪಾರಮಾರ್ಥ ಪರಮ ಸವಿ ಚಾರಮೆನಿಪ ಪಾವನ ಸುಪಥ ಅ.ಪ ತೀರದಂಥ ಅಪಾರಭವದ ವಾರಧಿ ಈಸಿ ಘೋರಬಡುವೆ ನೀರಜಾಕ್ಷ ನಿಗಮವಿನುತ ಪಾರುಮಾಡು ಕಾರುಣ್ಯಶರಧಿ 1 ವಿಷಯಲಂಪಟ ಮುಸುಕು ಮುಸುಕಿ ವ್ಯಸನಚಿತೆಯೋಳ್ ಬಸವಳಿದೆ ಅಸಮಹಿಮ ತವಪಾದ ಕುಸುಮ ಮರೆದು ಕೆಟ್ಟೆನಭವ 2 ನಾಶಮತಿಯಿಂದಾಸೆಗೈದ ದೋಷಗಳನ್ನು ಕ್ಷಮಿಸಿ ಬೇಗ ಪೋಷಿಸಿಭವ ಶ್ರೀಶ ಶ್ರೀರಾಮ ದಾಸಜನರುಲ್ಲಾಸ ಪ್ರಭು 3
--------------
ರಾಮದಾಸರು
ತೋರೈಯ್ಯ ಚರಣವ ಕ್ಷೀರಾಬ್ಧಿಶಯನಾ ಪ. ಒಂದೂ ಅರಿಯದ ಮಂದಮತಿಯ ಬಂದೂ ನೀ ಕಾಯೋ ಸಿಂಧುಶಯನನೇ 1 ವಾರಿಧಿ ತಂದೆ ಕ್ಷೀರಾಬ್ಧಿ ಶಯನಾ ಪಾರು ಕಾಣಿಸಯ್ಯ | ಮಾರಾನಾಪಿತನೇ 2 ಶೇಷಾದ್ರಿ ವಾಸಾ ವಾಸುಕೀಶಯನಾ ರಮಾವಲ್ಲಭ ವಿಠಲ ಪೊರೆಯನ್ನ3
--------------
ಸರಸಾಬಾಯಿ
ದಧಿವಾಮನ ವಿಠಲ ಉದ್ಧರಿಸೊ ಇವನ ಪ ಅಧಿ ಭೂತ ಅಧ್ಯಾತ್ಮ ಅಧಿದೈವಗತ ದೇವವಿಧಿ ಜನಕ ವಿಶ್ವಾತ್ಮ ಮಧು ಮಥನ ಹರಿಯೆ ಅ.ಪ. ವಿದ್ಯಾಯುಗಳನಿತ್ತು ಮಧ್ವಮತ ದೀಕ್ಷೆಯಲಿಶ್ರದ್ಧೆ ಬುದ್ಧಿಯ ನೀಯೊ ಮಧ್ವಾಂತರಾತ್ಮಾ |ಕೃದ್ಧಖಳರ್ಹಾವಳಿಯ ಒದ್ದು ಪೋಷಿಸುತಿಪನಶುದ್ಧಗೈವುದು ಮನವ ಸಿದ್ಧಜನ ವಂದ್ಯಾ 1 ತಾರತಮ್ಯ ಜ್ಞಾನ ಮೂರೆರಡು ಭೇದಗಳವಾರ ವಾರಕೆ ತಿಳಿಸಿ ಪೊರೆಯಬೇಕೋ |ಸಾರತಮ ನಿನ್ಹೊರತು ಆರು ಕಾಯುವರಯ್ಯಪೋರಗಿಹ ದುರಿತಾಳಿ ಪಾರುಮಾಡೈದೇವ 2 ಕಾರಣಿಕ ಕರುಣಾಬ್ಧಿ ತಾರೇಶ ಶ್ರೀ ಹರಿಯೆನೀರ ಜಾಸನವಂದ್ಯ ನೀರಜಾಕ್ಷಾ |ತಾರಕನು ಕುಭವ ಕೂಪಾರ ದಾಟಿಸಲುಧೀರ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ದಾರಿಗಾಣದಯ್ಯ ಕಣ್ಣಿಗೆ ದಾರಿ ತೋರಿಸಯ್ಯಾ ಪ ಪಾರುಗಾಣದ ಸಂಸಾರ ವಾರಿಧಿಯಲಿ ಪಾರುಗಾಣಿಸಯ್ಯ ಮಾರನ ಪಿತನೇ ಅ.ಪ ಯಾರಿಗೆ ಮೊರೆಯಿಡಲಾರು ಕೈಹಿಡಿವರು ಧಾರಿಣಿಯೆ ಅಂಧಕಾರವಯ್ಯ ಸಾರಸನಾಭ ನೀ ಕಾರುಣ್ಯಾಮೃತ ಬೀರದಿದ್ದರೆ ಎನ್ನ ಗತಿಏನೋ ರಂಗ1 ಸತಿಸುತರೆನಗತಿ ಹಿತರೆಂದೆನ್ನುತೆ ಸತತ ನಂಬಿ ಸತ್ಪಥವನು ಮರೆತಂತೆ ಪತಿತನಾದೆನಗೆ ನೀ ಗತಿದೋರದಿದ್ದರೆ ಪತಿತನಾಗಿರುವುದೇ ಗತಿಯೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಾರಿತೋರೋ ಮಾಯಾಕಾರ ಕರುಣಾಸಾಗರ ಪ ಪಾರುಗಾಣಲಾರೆನಯ್ಯ ದೂರಮಾಡದಿರಯ್ಯ ಅ.ಪ ಕರವ ನೀಡಿದೆ ಹರಿಯೇ ನಿನ್ನ ಭಜನೆಯೆಂಬುದ ಮರೆತು ಮೆರೆದೆನಯ್ಯ 1 ಸ್ನಾನ ನೇಮ ಜಪ ತಪಂಗಳ ಜ್ಞಾನವಿಲ್ಲವೈ ಧ್ಯಾನ ಹೋಮ ಭಜನೆ ಪೂಜೆ ಏನನರಿಯೆನಯ್ಯ 2 ನಿನ್ನ ದಾಸರದಾಸನೆಂದು ಎನ್ನ ಪಾಲಿಸೈ ಸನ್ನುತಾಂಗ ಮಾಂಗಿರೀಶ ನಿನ್ನ ನಂಬಿದೆ [ನಯ್ಯ] 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಾಶರಥೇ ದಯಮಾಡು ನಿನ್ನ ದಾಸದಾಸನ ನೋಡುದಾಸದಾಸನ ನೋಡು ಮುದ್ದು ದಾಶರಥೇ ದಯ ಮಾಡು ಪ ನೀರಜಾಕ್ಷ ನಿಜ ಮಾಯ ಮಮತೆ ಸಂಸಾರ ಶರಧಿಯೊಳು ಬಿದ್ದುಪಾರುಗಾಣದೆ ಬರಿದೆ ಪೋಗುವಾ ತಾರಕ ಬ್ರಹ್ಮ ನೀನೆಂದೂ 1 ವಿಶ್ವ ಕುಟುಂಬನೆ ಎನಗಾ ಇಂಗುಗೊಡದೆಯೆಲ್ಲರ್ಗಲ್ಲಿ 2 ಇಂದಿರೇಶ ಮುಚುಕುಂದ ವರದ ಮುನಿ ವಂದ್ಯನೆ ದಶರಥ ಕಂದಾಚಂದದಿ ನಿನ್ನ ಪದದ್ವಂದ್ವಗಳನುದಿನ ವಂದಿಸುವೆನುಮುದದಿಂದಾ3
--------------
ಇಂದಿರೇಶರು
ದೊರೆಯೆ ಪೊರೆವರ ಪ. ಹರಿಯನು ಧ್ಯಾನಿಪ ಪರಿಯನು ಮನಕೆ ವರೆದಾದರದೊಳು ಕರುಣಿಪುದು 1 ಭ್ರಮರವು ಪರಿಮಳ ಭ್ರಮಿಸುವಂತೆ ಮನ ಕಮಲನಯನನಲಿ ಒಲಿವಂತೆ 2 ಪಾರ್ವತೀರಮಣ ಪಾಲಿಸು ಎನ್ನನು (ಪಾರುಗಾಣಿಸು ಭವ) ಶ್ರೀವರ ಶ್ರೀ ಶ್ರೀನಿವಾಸನ್ನ ತೋರಿ 3
--------------
ಸರಸ್ವತಿ ಬಾಯಿ
ನಂಬಿದೆ ನಾನಿನ್ನ ನಾರಾಯಣ ವಿಶ್ವಂಭರ ಮೂರುತಿಯೇ ಕಂಬುಧರ ಕಮಲಾಂಬಕ ಶ್ರೀಹರಿ ಪಾರ್ಥನ ಸಾರಥಿಯೇ ಪ ವಾರಿಜನಾಭನೆ ಪಾರುಗಾಣಿಸೊ ಸಂ- ಮಾರಮಣನೆ ಮೊರೆಹೊಕ್ಕೆ ಲಾಲಿಸೊ ಮುರಹರ ಗೋವಿಂದ 1 ಪುಣ್ಯುಪುರುಷ ಲಾವಣ್ಯ ನಿಧಿಯೆ ಕಾ- ವನಜಾಪ್ತವಂಶ ಚಂದ್ರ 2 ಕಾಮ ಜನಕ ಸುತ್ರಾಮವಿನುತ ಶುಭ- ನಾಮಸುಜನಪ್ರೇಮಿ ತಾಮಸದೂರ ಸುಧಾಮವರದ ಗುರು- ರಾಮವಿಠಲಸ್ವಾಮಿ 3
--------------
ಗುರುರಾಮವಿಠಲ
ನಂಬಿದೆನೇ ನಿನ್ನ ಅಂಬುಜನಯನೆ ನಂಬಿದೆ ನಿನ್ನ ಪ. ನಂಬಿದೆ ನಿನ್ನನು ಅಂಬುಧಿಶಯನನೆನ್ನ ಡಿಂಬದಿ ನಿಲುವಂಥ ಸಂಭ್ರಮ ಕೊಡು ತಾಯೆ ಅ.ಪ. ಆರು ಮೂರೆರಡೊಂದು ಮೇರೆ ಇಲ್ಲದೈದು ಜಾರರು ಸೇರಿದರೆ ತಾಯಿ ತೋರುತ ಕರುಣವ ಬೀರುತ ವರ ಸಂಗ ದೂರಮಾಡಿಸಿ ಪಾರುಗಾಣಿಸು ತಾಯೇ 1 ಅಗಣಿತ ಮಹಿಮನ ಬಗೆಬಗೆ ಪೂಜಿಸಿ ಜಗದಾಖ್ಯಾನ ನೀ ಮಿಗೆ ವಲಿಸಿಹೆ ತಾಯೆ ಮಗುವೆಂದು ಭಾವಿಸಿ ಚಿಗಿದು ಕಂಬದಿ ಬಂದ ನಗಧರ ನರಹರಿ ಸಿಗುವ ಪರಿಯ ತೋರೆ2 ಕಲಿಯುಗದಲಿ ಶ್ರೀ ಶ್ರೀನಿವಾಸನ ಜ್ಹಾಯೆ ವಲಿದು ಭಕ್ತರ ಕೊಲ್ಹಾಪುರ ಮೆರೆಸಿಹೆ ತಾಯೆ ಕಲಿಮಲ ಕಳೆದು ನಲಿದು ಭಕ್ತರ ಕಾಯೆ ಛಲವ್ಯಾಕೆ ಹರಿ ಸಹ ನÀಲಿಯುತೆ ಬಾರೆ 3
--------------
ಸರಸ್ವತಿ ಬಾಯಿ
ನಾರದ ಪ್ರಿಯ ಕೃಷ್ಣ ನರಾಕಾರ ಜಾರ ಚೋರ ಶೂರ ಧೀರಪ ಘೋರತರವಾದ ಸಂಸಾರ ಸುಖ ದುಃಖಗಳ ಮೀರಿ ಪೊರೆವಂಥ ಬಲು ಭಾರಕರ್ತನೇ ಸೂರಿ ಜನರನು ಸದಾ ಸಾರಸಾಕ್ಷ ಬಿಡದಲೆ ಪಾರುಗಾಣಿಸುವ ದೇವಾ 1 ಮಂದಮತಿಯನಳಿದು ಚಂದದಿ ಸುಮಾರ್ಗವನ್ನು ನಂದದಿಂದ ತೋರ್ಪ ಮುಚುಕುಂದ ವಂದ್ಯನೆ ಎಂದಿಗೆಮ್ಮ ಗತಿಯೆಂದು ಹೊಂದಿ ಬೇಡ್ವ ಭಕುತರ ವÀಂದಿಸುವರ ಭವಬಂಧನ ಬಿಡಿಸುವ ದೇವಾ2 ದಾಶರಥೆ ಎನ್ನ ಕ್ಷೇಶ ನಾಶ ಮಾಡು ದಯದಿ ದಿ ನೇಶ ಶತಕೋಟಿ ಭಾಸ ಸಂಕಾಶ ಶ್ರೀಶ ವಾಸುದೇವ 3
--------------
ಜಗನ್ನಾಥದಾಸರು
ನಾರಸಿಂಹ ಶ್ರೀ ನಾರಸಿಂಹ ಪಾರುಗಾಣಿಸಿ ದುರಿತೌಘಹರಿಸಿ ಕಾಯೊ ಪ ನರಹರಿ ಜ್ವರಹರ ಘೋರವ್ಯಾಧಿಯ ಪರಿಹಾರಗೈಸಿ ಪರಿಪಾಲಿಸಬೇಕಯ್ಯಾ ಅ.ಪ ಘುಡು ಘುಡಿಸುತ ಪಲ್ಕಡಿದು ಚೆಂಡಾಡುತ ಮೃಡನೆ ಪರನು ಎಂದು ನುಡಿದ ಕಶಿಪುವಿನ ಒಡನೆ ಕಂಭದಿ ಬಂದು ಒಡಲ ಬಗೆದು ನಿನ್ನ ಧೃಡ ಭಕುತಗೆ ಬಂದೆಡರ ಬಿಡಿಸಿದೆ1 ತುಷ್ಟಿಪಡಿಸೊ ಪರಮೇಷ್ಟಿಯ ಪಿತ ನಿನ್ನ ದೃಷ್ಟಿಯಿಂದ ಅನಿಷ್ಟ ನಿವಾರಣ ಅಷ್ಟಕರ್ತೃತ್ವದ ಪ್ರಭೋಕಷ್ಟಹರಿಸಿಭಕ್ತ- ರಿಷ್ಟ ಪಾಲಿಪ ಸರ್ವಸೃಷ್ಟಿಗೊಡೆಯ ದೇವ2 ಸಂಕಟ ಬಿಡಿಸೊ ಭವಸಂಕಟದಿಂದ ಶ್ರೀ ವೇಂಕಟೇಶಾತ್ಮಕ ಭೀಕರ ರೂಪ ಶಂಕರಾಂತರ್ಗತ ಸಂಕರುಷಣ ಮೂರ್ತೇ ಮಂಕುಹರಿಸಿ ಪಾದಪಂಕಜ ತೋರಯ್ಯ 3
--------------
ಉರಗಾದ್ರಿವಾಸವಿಠಲದಾಸರು
ನಾರಾಯಣ ನರಹರಿ ಪರಮಾತ್ಮ ನೀ ಪಾಲಿಸೋ ಪ ಆರು ಮೂರಾರೊಳೆನ್ನ ಬಿಡಿಸೊ ಪಾರುಗಾಣಿಸೋ ಮುನ್ನಾ ಪರ ತೋರೋ ನಿಜ ನರಹರಿ 1 ಬಾಲಪ್ರಹ್ಲಾದನಾರ್ತನಾಗಿ ಶ್ರೀಲೋಲನೆಂದು ಕರೆಯೆ ಕಂಬದಿ ಬೇಗಾ ನೀಲಮೇಘಶ್ಯಾಮನೆನಿಸಿದ ನರಹರಿ 2 ಧರಣಿಗಧಿಪ ಮದ್ಗುರುವು ತುಲಸೀರಾಮದಾಸನೆನ್ನುತ ಬಂದೆ [ವರದ] ಪಾರಾ ಮಹಿಮ ಪರಾತ್ಪರ ನರಹರಿ 3
--------------
ಚನ್ನಪಟ್ಟಣದ ಅಹೋಬಲದಾಸರು
ನಾರಿ ನಾನರಿಯೆನೆ ನಿನ್ನಯ ಮಹಿಮ ಕರುಣದಿ ಇಡು ಪ್ರೇಮ ಪ ಬಾರಿ ಬಾರಿಗೆ ನಿನ್ನ ಭಜಿಸುವ ಭಕ್ತರ ಪಾರುಗಾಣಿಸಿ ಪೊರೆ ನಾರಿ ಶಿರೋಮಣಿ ಅ.ಪ ಕನಸು ಮನಸಿನೊಳ್ ನಿನ್ನಯ ಧ್ಯಾನ ಬಿಡದಲೆ ನಾ ಇನ್ನ ನೆನಸಿ ನೆನಸಿ ಸುಖಿಸುವೆ ಮುನ್ನ ವನಜಾಕ್ಷಿಯೆ ನಿನ್ನ ಅನುದಿನ ನಿನ್ನನು ಸ್ಮರಿಸುವ ಸುಜನರ ಘನವನುಳುಹಿ ಕಾಯೆ ಮನಸಿಜನ ತಾಯೆ 1 ಸೃಷ್ಟಿಯೊಳಗೆ ಶೆಟ್ಟಿ ಕೆರೆಯ ತಟದಲಿ ನೀ ನಿಂತು ಶ್ರೇಷ್ಠಳೆನಿಸಿ ಭಕ್ತರ ಮೊರೆಯ ನಿತ್ಯದಿ ನೀನರಿತು ಇಷ್ಟದಿ ಕೇಳುತ ಶಿಷ್ಟಜನರ ಅಘ ಹಿಟ್ಟುಮಾಡಿ ಕಾಯೆ ಶ್ರೀ ಕೃಷ್ಣನ ಜಾಯೆ 2 ಮದನನಯ್ಯನ ಮೋಹದ ರಾಣಿ ಮದಮುಖದ ಶ್ರೇಣಿ ವಧಿಸಿದ್ಯೆಲೆ ಪರಮ ಕಲ್ಯಾಣಿ ಜಗದೊಳಗತಿ ಜಾಣೆ ಸದನ ಮಾಡಿಕೊಂ ಡೊದಗಿ ಭಕ್ತರ ಮುದವಪಡಿಸಿದ್ಯೆಲೆ 3 ಜಗದೊಳು ನಿನಗೆ ಸರಿಯಾರೆ ಪರಿಪರಿ ವಯ್ಯಾರೆ ಅಗಣಿತ ಗುಣಗಂಭೀರೆ ಸುಂದರ ಸುಕುಮಾರೆ ಬಗೆಯಲಿ ಎನ್ನವಗುಣಗಣ ವೆಣಿಸದೆ ಸೊಗದಿಂದಲಿ ಕಾಯೆ ನಗಧರನ ಪ್ರಿಯೆ 4 ಅನುವನರಿತು ಪಾಲಿಸು ಮುನ್ನನಂಬಿದ ಮನುಜರನ ಅನುದಿನ ನಿನ್ನ ಪಾದಧ್ಯಾನ ಮನಸಿಗೆ ಕೊಟ್ಟೆನ್ನ ವನಜಾಕ್ಷಶ್ರೀ ಪ್ರಾಣನಾಥ ವಿಠಲನ ಸನ್ನಿಧಾನವಿತ್ತು ಮನ್ನಿಸು ತಾಯೆ 5
--------------
ಬಾಗೇಪಲ್ಲಿ ಶೇಷದಾಸರು
ನೀ ಕರುಣಿಸದಿರೆ ಸಾಕುವರ್ಯಾರು ದಯಾಕರ ಮೂರುತಿ ರಾಘವೇಂದ್ರ ಪ ಪಾರು ಮಾಡೊ ಸಂಸಾರಭವದಿ ಅ- ಪಾರ ಮಹಿಮ ಗುರು ರಾಘವೇಂದ್ರಾ ದೂರ ನೋಡಿದರೆ ಬಿಡಿಸೋ ತವ ಚರ- ಣಾರವಿಂದಕೆ ಕೊರಳನು ಕಟ್ಟಿಸೊ 1 ಒಡವೆ ವಸ್ತುಗಳ ಮಡದಿ ಮಕ್ಕಳ ಕೊಡು ಎನುತಲಿ ಬೇಡುವುದಿಲ್ಲ ಒಡೆÉಯನೆ ನಿನ್ನಯ ಅಡಿಗಳಲಿ ದೃಢ ಭಕುತಿಯ ಕೊಡದಿರೆ ಬಿಟ್ಟವನಲ್ಲ 2 ನರರ ಸೇವೆಯಾ ಬಿಡಿಸೋ ಹರಿವಾಯುಗಳ ಸೇವೆಯಾ ಹಿಡಿಸೊ ವರದ ಹನುಮೇಶವಿಠಲನಾ ಸರ್ವೋತ್ತಮನೆಂದು ಕರೆದವನೆ 3
--------------
ಹನುಮೇಶವಿಠಲ
ನೀನಲ್ಲದಲೆ ಇನ್ನು ನಾನಾರ ಕೂಗಲೊ ಮಾನನಿಧಿ ಗೋಪಾಲ ಶ್ರೀನಿಧಿಯೇ ಪ. ಶ್ರೀನಿವಾಸನೆ ಎನ್ನ ನಾನಾ ಪರಿಯ ಕಷ್ಟ ನೀನೆ ಬಿಡಿಸಿ ಸಲಹೊ ಮಾನಾಭಿಮಾನದೊಡೆಯ ಅ.ಪ. ಕಡುಕೋಪದಿಂ ಖಳನು ಹುಡುಗನ ಬಾಧಿಸೆ ದೃಢ ಭಕ್ತಿಯಿಂದ ನಿನ್ನಡಿಯ ಭಜಿಸೆ ಕೆಡಹಿ ಅಸುರನ ಕೊಂದು ಒಡನೆ ಭಕ್ತನ ಕಾಯ್ದೆ 1 ತೊಡೆಯನೇರಲು ಬರೆ ಜಡಿದು ನೂಕಲು ತಾಯಿ ಒಡನೆ ಮನದಿ ನೊಂದು ಪೊಡಮಡುತ ಅಡವಿ ಅಡವಿ ತಿರುಗಿ ದೃಢದಿ ಭಜಿಸೆ ಧ್ರುವ ಒಡನೆ ಓಡಿ ಬಂದು ದೃಢಪಟ್ಟ ಕೊಡಲಿಲ್ಲೆ 2 ಕರಿ ಕರೆಯೆ ತಡೆಯದೆ ಸಲಹಿದ ಪೊಡವೀಶ ನೀನಲ್ಲೆ ಕಡುಕರುಣಿ ಬಡವಗೆ ಸಿರಿಯಿತ್ತೆ ಮಡದಿಗಕ್ಷಯವಿತ್ತೆ ಕಡುದ್ರೋಹಿಗಳ ಕೊಲಿಸಿ ಒಡನೆ ಐವರ ಕಾಯ್ದೆ3 ಚಿನುಮಯ ಗುಣಪೂರ್ಣ ಅಣು ಮಹತ್ ಅಂತರಾತ್ಮ ಎಣಿಸಲಾಹೊದೆ ನಿನ್ನ ಘನ ಮಹಿಮೆ ಮನಸಿಜಪಿತ ಸರ್ವ ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ 4 ಶ್ರೀಪದ್ಮಭವನುತ ನಾ ಪಾಮರಾಳಿಹೆ ಗೋಪಾಲಕೃಷ್ಣವಿಠಲ ಶ್ರೀಪತಿಯೆ ನೀ ಪಾರು ಮಾಡದೆ ಕಾಪಾಡುವವರ್ಯಾರೊ ತಾಪ ಬಿಡಿಸಿ ಸಲಹೋ5
--------------
ಅಂಬಾಬಾಯಿ