ಭಿಕ್ಷೆ ನೀಡೆನಗೆ ಪಕ್ಷಿಗಮನ ನಿಮ್ಮ ನಾಮ
ಭಿಕ್ಷೆನೀಡಿ ರಕ್ಷಿಸೆನ್ನ ಮೋಕ್ಷಪದಕಧ್ಯಕ್ಷ ನಾಮ ಪ
ಅಂಬರೀಷನ ಕಾಯ್ದ ನಾಮ
ಇಂಬು ಇವಗಿತ್ತ ನಾಮ
ಶಂಭು ಕುಣಿದು ಕುಣಿದು ಪೊಗಳ್ವ
ಕುಂಭಿನಿಯೊಳು ಮೆರೆವ ನಾಮ 1
ಕರಿಯ ಕಷ್ಟಕ್ಕಾದ ನಾಮ
ತರಳನ್ನೆತ್ತಿ ಪೊರೆದ ನಾಮ
ಪರಮಪಾವನೆ ಪರಮೇಶ್ವರಿ
ಅರಸಿ ಶಿರವದೂಗ್ವ ನಾಮ 2
ಯಮನ ಬಾಧೆ ಗೆಲಿಪ ನಾಮ
ಸುಮನಸರೊಳಾಡಿಸುವ ನಾಮ
ಅಮಿತ ಶ್ರೀರಾಮ
ನಿಮ್ಮಾನಂದ ನಾಮ 3