ಪದ್ಮಾಲಯೆ ಪೊರೆಯೆ ಸದಯೆ ಪ.
ಪದ್ಮಸಂಭವೆ ಬೇಡುವೆ ಕೊಂಡಾಡುವೆ ನಿನ್ನ ಪಾಡುವೆ ಅ.ಪ.
ಮನಸಿಜನಯ್ಯನ ಮೋಹದ ರಾಣಿಯೆ
ಮುನಿಸಿಂತೇತಕೆ ಭೂಸುತೆ ಮುನಿಸನ್ನುತೆ ಕರುಣಾನ್ವಿತೆ 1
ಜೋಡಿಸಿ ಕರಮಂ ಪಾಡುತ ನಿನ್ನಂ
ಬೇಡುವ ಕಂದನ ಪಾಲಿಸೆ ಮೊರೆಲಾಲಿಸೆ ದಯೆತೋರಿಸೆ 2
ಸುರನರವಂದಿತ ಚರಣಸರೋಜದಿ
ಶರಣೆನ್ನುವ ಕಂದನಂ ವರಿಸೀ ದಿನದಿನಮೆಂದೆನು 3
ಮಾತೆಯೆ ಮುಳಿದೊಡೆ ಪೋತನ ಪೊರೆವಾ
ದಾತರುಮಿರ್ಪರೆ ನೀನುಡಿ ಗತಿ ನಿನ್ನಡಿ ಅಣುಗರ ಕೈಪಿಡಿ4
ಪರಮಪಾವನ ಶೇಷಗಿರೀಶನ
ಕರುಣಾರೂಪಿಣಿ ಭಾಮಿನೀ ಶುಭದಾಯಿನೀ ಜಯನಂದಿನೀ5