ಒಟ್ಟು 49 ಕಡೆಗಳಲ್ಲಿ , 30 ದಾಸರು , 47 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆವರೇನೊ ರಾಮ ನಿನ್ನ ಚರಣ ಸೇವಕನÀನ್ನು ಪರರಿಗೊಪ್ಪಿಸಿ ಹೀಗೆ ಪ ಪರಮ ದಯಾನಿಧಿ ಅಲ್ಲವೆ ಮುನ್ನ ಶರಣರ ಪಾಲಿಸಲಿಲ್ಲವೆ ಇದು ಸರಿಯೇನೊ ಜನ ನಗರೇನೊ ಇನ್ನು ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ. ಗತಿಹೀನರಿಗೆ ನೀ ಗತಿಯೆಂದು | ನೀನೆ ಪತಿತರ ಪತಿಕರಿಸುವನೆಂದು ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ ಗತಿದೋರೆಂದು ಸಾರಿದೆ ಚೀರಿದೆ ದೂರಿದೆ 1 ದೋಷರಾಶಿಗಳೆಲ್ಲ ಅಳಿಸಯ್ಯ ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ ದಾಸಾನುದಾಸ ದಾಸನು ಎನಿಸಿ | ಪರಿ- ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ 2 ಏನು ಸಾಧನವನ್ನು ನಾ ಕಾಣೆ | ನಿನ್ನಾ- ಧೀನದವನು ನಾ ನಿನ್ನಾಣೆ ದೀನ ಬಂಧುವೆ ದಯಾಸಿಂಧುವೆ ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ 3
--------------
ಲಕ್ಷ್ಮೀನಾರಯಣರಾಯರು
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು
ವೀಣಾಪಾಣಿಯ ಪ್ರಿಯ ಜಾಣನಾರದರೀಶ ಕಾಣಿಸದಂತಿರುವ ಸರ್ವರಲ್ಲಾವಾಸ ಕ್ಷೀಣವಾಗೋದು ನಿನ್ನ ನಂಬಿದವರ ದೋಷ ಕ್ಷೋಣೀಪತಿಯ ಪಾದಪದ್ಮಕ್ಕೆ ನಿಜದಾಸ ಎ- ನ್ನಾಣೆ ನಿನ್ನಾಣೆ ಭೀಮೇಶಕೃಷ್ಣ(ನ) ಪಾದ-
--------------
ಹರಪನಹಳ್ಳಿಭೀಮವ್ವ
ಶ್ರದ್ಧಾ ಪಾಲಿಸೇ ಮಾತೇ | ನಂಬಿದೆ ಶೇಷಾರುದ್ರಾದಿ ಸುರ | ವಿನುತೇ ಪ ಉದ್ಧರಿಸುವುದೆನ್ನ | ಅವಿದ್ಯವ ನೀಗಿ ಹೇಬುದ್ಯಭಿಮಾನಿ ಸ | ದ್ಬುದ್ಧಿ ಪ್ರದಾತೇ ಅ.ಪ. ಪುತ್ಥಳಿ ಬೊಂಬೆ 1 ಕೃತಿ ಕುಮಾರಿ | ಬ್ರಹ್ಮಮಾನಸಮಂದಿರೆ ಸಜ್ಜನೋದ್ಧಾರಿ ||ಚಂದಿರೆ ಎನ ಮನ | ಮಂದಿರದಲಿ ಬಲುಸುಂದರ ಶ್ರೀ ಗೋ | ವಿಂದ ಪಾದಾಬ್ಜವತೋರೆ - ಹೇ ನೀರೆ - ವೈಯ್ಯಾರೆ | ಸದ್ಗುಣಗಣ ಗಂಭೀರೆ 2 ನಿತ್ಯ ಕಲ್ಯಾಣೀ ||ಚತುರ ಮೂರುತಿ ಗುರು | ಗೋವಿಂದ ವಿಠಲನಸತತ ಭಜಿಪ ಮತಿ | ಸುಸ್ಥಿರದಲಿ ಕೊಡುನೀನೆ - ಬಲು ಜಾಣೆ :ಎನ್ನಾಣೆ | ಪತಿತ ಪಾವನ್ನೇ 3
--------------
ಗುರುಗೋವಿಂದವಿಠಲರು
ಶ್ರೀ ರಾಘವೇಂದ್ರರು ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ. ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ 1 ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ 2 ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು 3
--------------
ಶ್ರೀದವಿಠಲರು
ಶ್ರೀ ವಾದಿರಾಜರು ಆವಕಾರಣ ಮೂಗು ತಿರುಹಿದೆಯೋ ಶ್ರೀ ವಾದಿರಾಜೇಂದ್ರ ಪ ಆವಾವ ಬಗೆಯಿಂದ ನಾ ನೋಡೆ ನಿನ್ಹೊರತು ಗತಿಕಾಣೆನೊ ನಿನ್ನಾಣೆಗೊ ಅ.ಪ. ಪತಿ ಬಂದು ಕರಪಿಡಿದು ಹಿತಿಸುವಾತೆರದಿ ಹಿತಿಸದೇ ಮತ್ತಾವ 1 ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರಾರು ನಿನ್ಹೊರತು ಪೇಳೋಅಸಮ ಕರುಣಾಬ್ಧಿ ಶಿರಿಹಯವದನ ನಿನ್ನಾಧೀನನಾದ ಬಳಿಕ ಎನ್ನುದಾಶಿಸುವರೇ 2 ದಾನವಾದರೆ ಸಲಹೊ ಬೇಗ ಇರದಿರೆ ಬ್ಯಾಡೋ ಈಗ ಶಿರಿ ಅರಸ ನಮ್ಮ ತಂದೆವರದಗೋಪಾಲವಿಠಲನ ಸಹ ಬಾ ಬಂದ ಕಾಯದೆ ಮತ್ತಾವ 3
--------------
ತಂದೆವರದಗೋಪಾಲವಿಠಲರು
ಸಂದೇಹ ವೇತಕೆ ಸರ್ವೇಶಾ ಇಂದೆನ್ನ ಹೃದಯಾದಿ ನಿಂದೆನ್ನ ರಕ್ಷಿಸಲು ಪ ಹಿಂದೆ ನೀ ಸಲಹಿದವರು ಹೊಂದಿದವರೇನಾ ಪಾದ ಹೊಂದಲಲ್ಲೇ ಬಂದೆನ್ನ ಅತಿತ್ವರದಿಂದೆನ್ನ ಕೈಯಪಿಡಿದು ಅಂಧ ನಾ ತೋರಿಸಾ ನಂದನ ಸುತಹರಿ 1 ಭಂಡಾರ ವುಳ್ಳವನಾಗಿ ನೀನುಯನ್ನ ಕಂಡಾರೆ-------------- -------------- ಏನು ಹೆಂಡಾರ ಮೇಲೆ ದೃಷ್ಟಿ ಗಂಡಾರಿಗಿಲ್ಲದಿರೆ ದುಂಡೇರಿಗೇನುಗತಿ ಪುಂಡರೀಕ್ಷಾಕ ಹರಿ 2 ನಿನ್ನನ್ನೇ ನಂಬಿದವ ನಾನು ಇನ್ನು ಯನ್ನಾ ನೀಕಡೆ ದೃಷ್ಟಿ ನೋಡ್ವದೇ ನೋ ನಿನ್ನಾಣೆ ನಿನಗೆ ಇನ್ನು ಎನ್ನ ನೀ ಸಲುಹದಿರೆ ಮುನ್ನೀನಾ ದೋಷ ಕಳೆದು 'ಹೆನ್ನೆಯ ವಿಠಲಾ’ 3
--------------
ಹೆನ್ನೆರಂಗದಾಸರು
ಸಾಧನದ ಚಿಂತೆ ಎನಗ್ಯಾಕೊ ಹರಿಯೇ ಪ. ಮಾಧವಾ ನೀಯನ್ನಾ ಮನಸಿಲಿದ್ದು ಮಾಡಿಸುವಿ ಧೊರಿಯೇ ಅ.ಪ. ಹಿಂದೇಸು ಜನ್ಮಗಳು ಬಂದು ಪೋದವು ಒಂದು ತೃಣವಾದರೂ ನಾ ಗಳಿಸಲಿಲ್ಲ ಮುಂದಿನ ಗತಿಯು ತಿಳಿಯದು ಬಿಂದು ಮಾಧವಾ ಯಾದವಾ 1 ನಿನ್ನ ಹೊರತು ಎನಗೆ ಮನ್ನಿಸುವರು ಯಾರೋ ಬೇರೆ ಗತಿ ಕಾಣೆ ಪುಸಿಯಲ್ಲಿ ಯನ್ನಾಣೆ ಪಾದಸ್ಮರಣೆ ಮಾಡಿಸುವ ಬಾರಾ ಉದಾರ ಭಕ್ತರಾಧಾರಾ 2 ಯೆಷ್ಟು ಪೊಗಳಿದರು ನಿನ್ನ ಕರುಣಕೆ ಇನ್ನು ಕೇಡು ಉಂಟೇ ಸ್ವಾಮಿ ದಯಾ ದೃಷ್ಟಿಯಿಂದಲಿ ನೋಡು ಪ್ರೇಮಿ ದುಷ್ಟ ಅಘರಾಶಿ ದೂರ ಮಾಡೋ ಕಣ್ತೆರೆದು ನೋಡೋ ಕಾಳಿಮರ್ಧನ ಕೃಷ್ಣನೆ ಮಧ್ವಮುನಿ ಪ್ರಿಯನೆ 3
--------------
ಕಳಸದ ಸುಂದರಮ್ಮ
ಇದೆಕೊದಧಿಮಥಿಸಿ ಹೊಸ ಬೆಣ್ಣೆ ಕೊಡುವೆನೊಪದುಮನಾಭನೆ ಗೊಲ್ಲ ಗೋರಸಕೆ ಗೋಳಿಡಬ್ಯಾಡೊ ಪ.ಮಲತ ಹಾಲು ಹುಳಿಮೊಸರು ತಂಗಳ ಬೆಣ್ಣೆನಳಿನಾಕ್ಷ ನಿನಗೇನು ರುಚಿಯೊ ಕಂದಕಳವಿನ ಮಾತ್ಯಾಕೆ ಹಸುಳೆ ಗೋವಳೆಯರಗೆಳತನವ್ಯಾತಕೊ ನಿನಗೆ ರಂಗಮ್ಮ 1ಮನೆ ಮನೆ ತಿರುಗಲು ತಿರುಕರ ಮಗನೇನೊಮನೆಯಲೇನು ಗೋರಸ ಕೊರತ್ಯಾಗಿದೈಅನುದಿನವಿಗಡೆÉೀರು ದೂರುತಲೈದಾರೆದಣಿದೆನಾರೋಪಣೆಯಕೇಳಿಕೃಷ್ಣಮ್ಮ2ಎನ್ನ ಮುದ್ದಿನಮೂರ್ತಿಎನ್ನ ಭಾಗ್ಯದ ನಿಧಿಯೆಎನ್ನ ಚಿತ್ತದ ಚಿಂತಾಮಣಿಯೆಚಿನ್ನರರಸನಾದ ಪ್ರಸನ್ವೆಂಕಟ ಕೃಷ್ಣನನ್ನಾಣೆ ಕಣ್ಣ ಮುಂದಿರೊ ನಮ್ಮಮ್ಮ 3
--------------
ಪ್ರಸನ್ನವೆಂಕಟದಾಸರು
ಎಂತು ಜೀವಿಸಲಮ್ಮ ರಂಗನನ್ನಗಲಿ ಎನ್ನಂತರಪರಾಧವ ನೋಡದೊದಗನ್ಯಾಕೆ ಪ.ಎಂದೆಂದು ತನ್ನ ಪೊಂದಿದಮಂದಮುಗ್ಧೆಯನುಕಂದರ್ಪಶರಕೆ ಗುರಿ ಮಾಡಬಹುದೆಇಂದುಕಾಂತಿಯು ಅಗ್ನಿಯಂದದಾಯಿತು ಹರಿಯೆಮಂದಸ್ಮಿತಸುಧೆಎನಗೆ ದೊರೆಯದಿರಲು1ಶೃಂಗಾರ ಸೊಬಗ್ಯಾಕೆ ರಂಗನೀಕ್ಷಿಸದಿರಲುಅಂಗದಲಿಲ್ಲದೆ ಪ್ರಾಣ ಸುಖವಾರಿಗೆಕಂಗಳುದಣಿಯೆ ಅಘಭಂಗನ ದಿಟ್ಟಿಸಿ ನೋಡಿಪೊಂಗೊಳಲ ಸವಿ ರವವ ಕೇಳದಿರೆ ನಾನು 2ವಿಪುಲ ತಾಪದಿ ಬಾಲೆ ನೊಂದಳೆಂಬ ಮಾತುಅಪಕೀರ್ತಿ ತನಗೆ ಅಲ್ಲವೇನೆ ತಂಗಿಶ್ರೀಪತಿ ಪ್ರಸನ್ವೆಂಕಟೇಶನು ನೆರೆದ ಸಂಭ್ರಮಕೆನಾ ಪಾವನಳಾದೆನೆ ಜಾಣೆ ನಿನ್ನಾಣೆ 3
--------------
ಪ್ರಸನ್ನವೆಂಕಟದಾಸರು
ಎಂಥ ಪುಣ್ಯವೆ ನಿನ್ನದೆಂಥ ಭಾಗ್ಯವೆಗೋಪಿ|ಇಂಥ ಮಗನ ಕಾಣೆವೆ ಪಚಿಂತಿಸಿದರೂ ದೊರಕ ಚೆಲುವ ರಾಜಗೋಪಾಲ |ಇಂತೀ ಮಾತುಗಳೆಲ್ಲವು - ಹುಸಿಯಲ್ಲವು ಅ.ಪಸರಸಿಜನಾಭನ ಸುಮ್ಮನೆ ಕೊಂಡಾಡೆ |ದುರಿತವೆಲ್ಲವು ಪೋಪುದೆ ||ಸರಸದಿಂದಲಿ ಒಮ್ಮೆ ಸವಿಮಾತನಾಡಿದರೆ |ಪರಿತೋಷ ಕೈಗೂಡುವುದೆ-ಯಶೋದೆ 1ಊರ ಒಳಗೆ ನಿಮ್ಮ ಅಂಜಿಕೆ ನೆರೆಹೊರೆ |ದೂರಿಕೊಂಬುವರಲ್ಲವೆ? ||ಅರಣ್ಯದಲಿ ನಾವು ಆಡಿದ ಆಟವು |ಆರಿಗಾದರೂ ಉಂಟೇನೆ-ಇಂದುವದನೇ? 2ನಿನ್ನ ಮಗನ ಕರೆಯೆ ಎನ್ನ ಪ್ರಾಣದೊಡೆಯ |ಪುಣ್ಯದ ಫಲವು ಕಾಣೆ ||ಚೆನ್ನ ಶ್ರೀಪುರಂದರವಿಠಲರಾಯನ |ನಿನ್ನಾಣೆ ಬಿಡಲಾರೆವೆ-ಪುಸಿಯಲ್ಲವೆ 3
--------------
ಪುರಂದರದಾಸರು
ಏನು ರಂಗ ದೂರ ನೋಡುವೆಪ್ರಾಣನಾಥ ದೂರ ನೋಡುವೆ ಪ.ಒಳ್ಳೆ ನಾರಿಯರೊಳು ಮನವಿಟ್ಟು ನೀನನ್ನಸಲ್ಲದವಳ ಕೈಯವಿಡಿದ್ಯೇಕೆ ಮೊದಲಿಗೆ 1ಏಸುಮನೆಯ ಹೊಕ್ಕು ದಣಿದೆ ಕಾಣದೆ ಕೃಷ್ಣಆಸು ಮನೆಯೊಳು ನೀನಿದ್ದು ಕಾಣಿಸಿಕೊಳ್ಳೆ 2ನಿನ್ನವಳೆನಿಸಿದ ಬಳಿಕ ಮಾತಾಡದೆಅನ್ಯಾಶ್ರಯ ನನಗಿದ್ದರೆ ಹೇಳು ನನ್ನಾಣೆ 3ನೀ ಪರಿಹರಿಸಲಾರದ ತಪ್ಪೆನ್ನಲ್ಲುಂಟೇನೊಈ ಪರಿಗಾಳ ಬಳಲಿಸಿ ಸುಮ್ಮನೆ 4ದೂರ ನೋಡಿದರೆ ನೀನೋಡುನಾ ಬಿಡೆನೆಂಬೆದೂರ ಸಾರಿ ನಿನ್ನ ಪೋಗಲಾರೆ ಪ್ರಸನ್ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಏನು, ಬರೆದೆಯೊ ಬ್ರಹ್ಮ ಎಂತು ನಿರ್ದಯನು-ಅಭಿ |ಮಾನವನು ತೊರೆದು ಪರರನು ಪೀಡಿಸುವುದ ಪಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು |ಸೊಲ್ಲುಸೊಲ್ಲಿಗೆಅವರಕೊಂಡಾಡುತ ||ಇಲ್ಲ ಈ ವೇಳೆಯಲಿ ನಾಳೆ ಬಾ-ಎನಲಾಗಿ |ಅಲ್ಲವನೆ ತಿಂದ ಇಲಿಯಂತೆ ಬಳಲುವುದ 1ಗೇಣೊಡಲ ಹೊರೆವುದಕೆ ಹೋಗಿ ನರರೊಳು ಪಂಚ-|ಬಾಣ ಸಮರೂಪ ನೀನೆಂದು ಪೊಗಳೆ ||ಮಾಣು ಎನ್ನಾಣೆ ನೀ ನಾಳೆ ಬಾ ಎಂದೆನಲು |ಗಾಣತಿರುಗುವ ಎತ್ತಿನಂತೆ ಬಳಲುವುದ2ಹಿಂದೆ ಬರೆದಾ ಬರೆಹ ಏನಾದರಾಗಲಿ |ಮುಂದೆನ್ನ ವಂಶದಲಿ ಪುಟ್ಟುವರಿಗೆ ||ಸಂದೇಹಬೇಡ ಶ್ರೀಪುರಂದರವಿಠಲನೇ |ಕಂದರ್ಪನಯ್ಯ ಉಡುಪಿಯ ಕೃಷ್ಣರಾಯ 3
--------------
ಪುರಂದರದಾಸರು
ಒಲ್ಲೆನೆ ವೈದಿಕ ಗಂಡನ - ನಾ -ನೆಲ್ಲಾದರೂ ನೀರ ಧುಮುಕುವೆನಮ್ಮ ಪ.ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ |ಕೆಟ್ಟ ಸೀರೆಯ ನಾನುಡಲಾರೆನೆ ||ಹಿಟ್ಟ ತೊಳಸಿ ಎನ್ನ ರಟ್ಟೆಯಲ್ಲ ನೊಂದವು |ಎಷ್ಟೆಂದು ಹೇಳಲಿ ಕಷ್ಟದ ಒಗತನ 1ಕೃಷ್ಣಾಜಿನವನು ರಟ್ಟೆಯಲಿ ಹಾಕಿಕೊಂಡು ||ಬೆಟ್ಟಲಿ ಗಿಂಡಿಯ ಹಿಡಿದಿಹನೆ ||ದಿಟ್ಟತನದಿ ನಾನೆದುರಿಗೆ ಹೋದರೆ |ದೃಷ್ಟಿಯಿಂದಲಿ ಎನ್ನ ನೋಡನಮ್ಮ 2ನಿನ್ನಾಣೆ ಹುಸಿಯಲ್ಲ ಬಿನ್ನಣ ಮಾತಲ್ಲ |ಕಣ್ಣಸನ್ನೆಯಂತು ಮೊದಲೆ ಇಲ್ಲ ||ಮುನ್ನಿನ ಜನ್ಮದಲಿ ಪುರಂದರವಿಠಲನ |ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮ 3
--------------
ಪುರಂದರದಾಸರು
ಪೇಳಲಳವೆ ನಿನ್ನ ಮಹಿಮೆಯ-ಶ್ರೀರಂಗಧಾಮ|ಪೇಳಲಳವೆ ನಿನ್ನ ಮಹಿಮೆಯ ಪನೀಲಮೇಘಶ್ಯಾಮ ನಿನ್ನ |ಬಾಲಲೀಲೆಯಾಟವ ಅ.ಪವಿಷದ ಮೊಲೆಯ ಪೂತನಿಯ |ಅಸುವ ಹೀರಿದ ಶೂರನಾದೆ |||ಉಸಿರಲಳವೆ ನಿನ್ನ ಮಹಿಮೆ |ಅಮ್ಮಮ್ಮಮ್ಮಮ್ಮಮ್ಮ ||ಕೆಸರ ತಿನಬೇಡೆನುತ ತಾಯಿ |ಶಿಶುವಿನ ವದನವ ನೋಡಿದಳಾಗ |ದಶಚತುರ್ಭುವನವ ತೋರಿದ ಬಾಯೊಳ |ಗಲ್ಲಲ್ಲಲಲ್ಲಲ್ಲಲ್ಲೇ 1ಬಾಲಲೀಲೆಯ ಬಂಡಿ |ಕಾಲಿಲೊದ್ದು ಶಕಟಾಸುರನ ||ಮೂಲನಾಶ ಮಾಡಿದೆ ನೀ |ನಬ್ಬಬ್ಬಬ್ಬಬ್ಬಬ್ಬಬ್ಬ ||ತಾಳಮರದ ನಡುವೆಒರಳ|ಕಾಲಿಗೆ ಕಟ್ಟೆಳೆಯುತಿರಲು |ಬಾಲ ಸತ್ತನೆಂದುಗೋಪಿಅತ್ತ-|ಳಯ್ಯಯ್ಯಯ್ಯಯ್ಯಯ್ಯಯ್ಯೊ 2ಸಣ್ಣವನಿವನಲ್ಲ ನಮ್ಮ |ಬೆಣ್ಣೆ ಕದ್ದು ಗೊಲ್ಲರ ಮನೆಯ |ಹೆಣ್ಣು ಮಕ್ಕಳನು ಹಿಡಿದ ಕಳ್ಳ |ಎಲ್ಲೆಲ್ಲೆಲ್ಲೆಲ್ಲೆಲ್ಲೆಲ್ಲೆ ||ನಿನ್ನಾಣೆಯಿಲ್ಲೆಂಬ ರಂಗನ |ಬಿನ್ನಾಣಕೆ ನಕ್ಕವರನು ಬಯ್ಯುತ |ಎನ್ನ ಕಂದ ಹುಸಿಯನಾಡ |ನೆಂದೆಂದೆಂದೆಂದೆಂದು 3ನಾರಿಯರೆಲ್ಲ ಬತ್ತಲೆಯಾಗಿ |ನೀರಾಟವನಾಡುತಿರಲು |ಸೀರೆಗಳೊಯ್ದು ಮರವನೇರಿದ |ನತ್ತತ್ತತ್ತತ್ತತ್ತತ್ತ ||ವಾರಿಜಮುಖಿಯರು ಲಜ್ಜೆಯ ದೊರೆದು |ಸೀರೆಗಳನು ಬೇಡಲವರಮೋರೆ ನೋಡಿ ರಂಗ ನಕ್ಕ |ಅಬ್ಬಬ್ಬಬ್ಬಬ್ಬಬ್ಬಬ್ಬ 4ಕಾಡು ಕಿಚ್ಚು ಮುಸುಕಿ ಗೋವ-|ವಾಡಿಯು ಬೆಂದದ್ದು ನೋಡಿ |ಈಡಿಲ್ಲದ ಉರಿಯ ತೀಡಿದ |ಅತ್ತತ್ತತ್ತತ್ತತ್ತತ್ತ ||ಬೇಡಿದ ವರಗಳನೀವ |ಪುರಂದರವಿಠಲನ ಲೀಲೆಯ |ರೂಢಿಯೊಳೀಡನ ಸಮರು ಯಾರುಇಲ್ಲಿಲ್ಲಿಲ್ಲಿಲ್ಲಿಲ್ಲಿಲ್ಲ 5
--------------
ಪುರಂದರದಾಸರು