ಒಟ್ಟು 110 ಕಡೆಗಳಲ್ಲಿ , 42 ದಾಸರು , 97 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಶರಥೇ ದಯಮಾಡೊ ನಿನ್ನ ದಾಸರ ದಾಸನ ನೋಡೋ ಪ ನೀರಜಾಕ್ಷ ನಿಜಮಾಯಾ ಮಮತೆ ಸಂ- ಸಾರಶರಧಿಯೊಳು ಬಿದ್ದು ಪಾರಗಾಣದೆ ಪರಿದು ಪೋಗುವೆನು ತಾರಕ ನೀನೆನಗಿದ್ದು ಹರಿ ಹರಿ 1 ತುಂಬಿದ ಭಂಡಿಗೆ ಮೊರ ಭಾರವೆ ಎನ- ಗಿಂಬಿಲ್ಲವೆ ನಿನ್ನಲಿ ನಂಬಿದ ಭಕ್ತರ ಸಲಹುವ ವಿಶ್ವಕು- ಟುಂಬಿ ಎನಿಸಿಕೊಳುವಲ್ಲಿ ಹರಿ 2 ಬಲ್ಲಿದರೊಳು ಬಡವರಿಗಾಶ್ರಯ ನೀ ಬಲ್ಲೆ ಮತ್ತೆ ಎನಗೀಗ ಎಲ್ಲಿದ್ದರು ಶ್ರೀದವಿಠಲ ಬಿಡ ದಲ್ಲೂ ನಿನ್ನ ದಯ ಬೇಗ 3
--------------
ಶ್ರೀದವಿಠಲರು
ದಾಸನಾಗೋ ಪ್ರಾಣಿ ಬರಿದೆ ಕಾಣಿ ಪ ದಾಸನಾಗು ರಮೇಶನ ಪಾದ ಹೇಸಿಮನಸಿನ ಕ್ಲೇಶವ ನೀಗಿ ಅ.ಪ ಹಮ್ಮು ಬಿಟ್ಟುಬಿಡೋ ಈಶತ್ವ ಸುಮ್ಮನಲ್ಲ ನೋಡೋ ಸಮ್ಮತ್ಹೇಳಬೇಡೋ ಮಹವಾಕ್ಯ ಮರ್ಮಶೋಧ ಮಾಡೋ ಹಮ್ಮು ಅಹಂಕಾರ ದೂಡಿ ನಿರ್ಮಲಮತಿಗೂಡಿ ಒಮ್ಮನದಿಂ ಪರಬ್ರಹ್ಮನ ಪಾಡಿ 1 ಶಂಕೆಯನೀಡ್ಯಾಡೋ ಚಿತ್ತದ ಕ ಲಂಕ ದೂರ ಮಾಡೋ ಓಂಕಾರರ್ಥ ಮಾಡೋ ಬ್ರಹ್ಮದ ಅಂಕಿತಿಟ್ಟು ಪಾಡೋ ಕಿಂಕರನಾಗದೆ ಶಂಕರ ನಿನಗೆಲ್ಲಿ ಮಂಕುತವನವ ಬಿಟ್ಟು ಸಂಕರುಷಣನ 2 ಹಾಳು ವಾಸನೆ ತೂರಿ ನಿಜವಾದ ಶೀಲಜನರ ಸೇರಿ ಮೂಲತತ್ತ್ವದಾರಿ ಅನುಭವ ಕೀಲಿ ತಿಳಿದು ಭೇರಿ ತಾಳನಿಕ್ಕುತ ಮಮಶೀಲ ಶ್ರೀರಾಮನ ಮೇಲೆಂದು ನಂಬಿ ಭವಮಾಲೆ ಗೆಲಿದು ನಿಜ 3
--------------
ರಾಮದಾಸರು
ನಂಬು ನಂಬೆಲೆ ಮನ ಗಿರಿಧರನ ನಿನ ಗಿಂಬುಗೊಡುವ ಭಕ್ತ ಸಂಜೀವನ ಪ ಕತ್ತೆಯಂತೆ ಕೂಗಿ ಕೆಡಬೇಡ ಪರ ಮಾರ್ಥತತ್ತ್ವದ ಹಾದಿ ತಿಳಿ ಮೂಢ ಸತ್ಯರ ಪಾದದಿ ಮನನೀಡೋ ನಿತ್ಯ ಉತ್ತಮರೊಳಗಾಡಿ ನಿಜ ನೋಡೋ 1 ಕೋತಿಯಂತೆ ಕುಣಿಯಲುಬೇಡೋ ಮಹ ನೀತಿವಚನ ಮೀರಿ ನಡಿಬೇಡೋ ಮಾತುಮಾತಿನ ಸಂಶಯಬೇಡೋ ಮುಂದೆ ಪಾತಕದೊಳು ಬಿದ್ದು ಕೆಡಬೇಡೋ 2 ಸಾರಸಂಸಾರ ಮಿಥ್ಯವೆಂದು ತಿಳಕೋ ನೀನು ಧೀರ ಶ್ರೀರಾಮನ ಅಡಿಗ್ಹೊಂದಿಕೋ ಗಂ ಭೀರ ಮೋಕ್ಷಪದವನೆ ಪಡಕೋ 3
--------------
ರಾಮದಾಸರು
ನಮ್ಮ ಗಿರಿಯ ತಿಮ್ಮ ಪರಬೊಮ್ಮನಮ್ಮ ಒಮ್ಮೆ ಕಾಯೋದ(ತ?)ಮ್ಮ ಪ. ಭಂಗ ಗುಣ ತ-ರಂಗ ಜಗದೊಳಗೆ ನೀನೆ ಸರ್ವೋತ್ತುಂಗ 1 ನೋಡೋ ಎನ್ನಲ್ಲಿ ಕೃಪೆಮಾಡೋ ಕೈಯನೀಡೋ ಎನ್ನ ಪೊರೆವನೆಂಬ ಮಾತನಾಡೊ 2 ಏಳು ಎನ್ನ ಮಾತ ಕೇಳು ಕಡು ಕೃ-ಪಾಳು ನಿನ್ನ ಹದನ ಎನಗೊಲಿದು ಪೇಳು 3 ಎಂದ ಮಾತಿಗೆ ಮುಂದೆ ನಿಂದ ನೀ ಕರುಣಿ ಗೋ-ವಿಂದ ಎಂಬುದಿನ್ನು ನಿನಗೆ ಚೆಂದ 4 ಪ್ರಿಯ ಎನ್ನ ಕಾಯೊ ಜೀಯ ಮುಕ್ತ್ಯು-ಪಾಯ ಹಯವದನ ಶೇಷಗಿರಿರಾಯ5
--------------
ವಾದಿರಾಜ
ನರಿತು ಅರ್ಚಿಸಲು ಲಿಂಗೈಕ್ಯಕೆ ಯೋಗ್ಯ ಪ ವೈರಿ ಸಂಸಾರ ಮಾಯಾ ವನಿತೆ ಇಕ್ಕಿದ ಮದ್ದು ದುಃಖದಾಕಾರಾ ಮನವೆ ಶುದ್ಧಾತ್ಮವಿಚಾರಾ ನೀನು ನೆನೆದು ಮರೆಯದಿರು ಗುರು ಉಪಕಾರಾ 1 ನಗಿಸಿ ಅಳಿಸುವುದು ಕುಂದು ಭಕ್ತ ರಘವ ನಿವಾರಿಸಿ ಸಲಹಬೇಕೆಂದು ಮೃಗಧರ ರೂಪಿಲಿ ಬಂದು ಸ್ವಾಮಿ ಸೊಗಸಾಗಿ ಶ್ರೀ ಗುರುಚಿತ್ತಕೆ ತಂದು 2 ಜೋಡಿಲ್ಲದೈಶ್ವರ್ಯದಿಂದಾ ಹೋ ಗಾಡಿಸೋ ಘೋರಸಂಸಾರದ ಬಂಧಾ ನೋಡೋ ನಿತ್ಯಾತ್ಮನ ಚಂದಾ ನಲಿ ದಾಡೋ ಎನ್ನನು ಗುರು ವಿಮಲಾನಂದಾ 3
--------------
ಭಟಕಳ ಅಪ್ಪಯ್ಯ
ನಾಗಲೋಕದ ಕಾಳಿ ಈಗಳೆ ಹಿಡಿಸುತನಾಗವೇಣಿಯರೆಲ್ಲ ಸಾಗಿ ಹೆಜ್ಜೆ ನಿಕ್ಕುತ ಈಗ ನೋಡುಣು ಬಾರೆ ಬ್ಯಾಗಸೆ ದ್ವಾರಕಾಸಾಗರ ಶಯನನಿನ್ನು ಪ. ಅಂಬುಜಾಕ್ಷನು ತಾನು ಅತಿ ಬೇಗ ಹೊಯ್ಸಿದ ಜಂಬುದ್ವೀಪದ ಜಯಭೇರಿಜಂಬುದ್ವೀಪದ ಜಯಭೇರಿ ಹೊಯಿಸಲು ಕುಂಭಿಣಿ ಜನರೆಲ್ಲ ಕೂಡಿತು ಎಲೆ ಸಖಿ 1 ಏಳು ಲೋಕದ ಕಾಳಿಭಾಳೆ ರೌಸದಿ ಹಿಡಿಯೆಕಾಳಿ ಮರ್ದನನ ಮನೆಮುಂದೆಕಾಳಿ ಮರ್ದನನ ಮನೆಮುಂದೆ ಹಿಡಿಸಲುಏಳು ಲೋಕದ ಜನ ಮೇಳವ ನಮಗೆ ಎಲೆ ಸಖಿ2 ಕೋಟಿ ಕೋಟಿ ಹಿಲಾಲು ಥಾಟಾಗಿ ತೋರುವ ಹಾಟಗಾಂಬರನ ಮನೆಮುಂದೆ ಹಾಟಗಾಂಬರನ ಮನೆಮುಂದೆ ಬೆರಗಾಗಿಪಾಟಿಸಿ ನೋಡೋ ಪ್ರಜರೆಷ್ಟ ಎಲೆ ಸಖಿ 3 ಹತ್ತು ಕೋಟಿ ಹಿಲಾಲು ಜತ್ತಾಗಿ ತೋರುತಚಿತ್ತಜನೈಯನ ಮನೆಮುಂದೆಚಿತ್ತಜನೈಯನ ಮನೆಮುಂದೆ ಬೆರಗಾಗಿಅರ್ಥಿಲೆ ನೋಡೋ ಪ್ರಜರೆಷ್ಟ ಎಲೆ ಸಖಿ4 ನೂರು ನೂರು ಸಾವಿರ ತೋರುವ ಬಾಣ ಬಿರುಸುವಾರಿಜಾಕ್ಷನ ಮನೆಮುಂದೆ ವಾರಿಜಾಕ್ಷನ ಮನೆಮುಂದೆ ಈ ಸೊಬಗುಆರುವರ್ಣಿಸಲು ವಶವಲ್ಲ ಎಲೆಸಖಿ5 ಸಿಡಿಲು ಫರ್ಜಿಸಿದಂತೆ ಬಿಡುವ ಬಾಣಗಳೆಷ್ಟಧಡ ಧಡ ಹಾರುವ ಬಿರುಸೆಷ್ಟಧಡ ಧಡ ಹಾರುವ ಬಿರುಸೆಷ್ಟು ಮುಯ್ಯದ ಬೆಡಗವರ್ಣಿಸಲು ವಶವಲ್ಲ ಎಲೆಸಖಿ6 ಗರುಡನ ಆಭರಣವ ಮೃಡನು ವರ್ಣಿಸಲಾರ ಜಡಿದ ರತ್ನಗಳು ಝಳಪಿಸುತಜಡಿದ ರತ್ನಗಳು ಝಳಪಿಸುವÀ ವಾಹನವೇರಿಒಡೆಯ ರಾಮೇಶ ಕುಳಿತಾನೆ ಎಲೆಸಖಿ 7
--------------
ಗಲಗಲಿಅವ್ವನವರು
ನಿನಗ್ಯಾಕೆ ದುರ್ಮತಿ ಎಲೆ ಕೋತಿ ಪ ಅನುದಿನದಿ ನಾನು ನನದೆಂಬ ಅ.ಪ ಮೊದಲಿಂದಲಿ ಅವಿವೇಕದಿಂದ ಮೋಹಪಡುತ ನೀನಿರಲ್ ತುದಿಗೆಯಮನ ಬಾಧೆಯಹುದು ಬಲು 1 ಚಪಲಾತ್ಮರಾದವರಲಿ ಸೇರಿ ಚಾಟು ಮಾತುಗಳಾಡುವೇ ವಿಪರೀತ ಜ್ಞಾನವಿದಲ್ಲವೇ 2 ನಡೆನುಡಿಗಳಾದಿಯಾದ ಎಲ್ಲಕು ನಾಥ ನೀನೆಯೇನಲಾ ದೃಢವಾಗಿ ನಿನ್ನೊಳು ತಿಳಿದು ನೋಡೋ 3 ಸುರರು ಹಿತವಾಗದೆಂದಿಗು ನೀನಲ್ಲ ದೊರೆ 4 ಭಾರ ಗುರುರಾಮವಿಠಲ ಪೊರೆಯುವನು 5
--------------
ಗುರುರಾಮವಿಠಲ
ನಿನ್ನ ನೀ ತಿಳಿದು ನೋಡೋ ಕೇಳಲೋ ಪ್ರಾಣಿ ಪ ನಿನ್ನ ನೀ ತಿಳಿದು ನೋಡೋ ಪನ್ನಗಾದ್ರೀಶನ ಕೂಡೋ ಬನ್ನ ಭವಣೆ ಈಡ್ಯಾಡೋ ಕೇಳೆಲೋ ಪ್ರಾಣಿ 1 ನಾನಾರು ತನುವಾರು ತನುವಿ ನೊಡೆಯನಾರು ನಾನೀ ನೆಂಬುದರೊಳಾರು ಕೇಳೆಲೋ ಪ್ರಾಣಿ 2 ಹಿಂದಿನ ಪುಣ್ಯಗಳಿಂದ ಬಂದು ನರ ದೇಹದಿಂದ ಬಂದೇನಾ ಘಳಿಸಿನಿಂದೇ ಕೇಳೆಲೋ ಪ್ರಾಣಿ 3 ವಿದ್ಯಾ ವಿತ್ಪತ್ತಿ ತೋರಿ ಗದ್ಯ ಪದ್ಯಗಳ ಬೀರಿ ಬಿದ್ದಿ ಗರ್ವಾರಣ್ಯದಾರೀ ಕೇಳೆಲೋ ಪ್ರಾಣಿ 4 ತಂದೆ ಮಹಿಪತಿ ದಯದಿಂದ ಪಡೆಯೋ ವಿಜಯ ಕಾಯ ಕೇಳೆಲೋ ಪ್ರಾಣಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಸಂಕಲ್ಪಾನುಸಾರ ಮಾಡೋ ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡೋ ಪ ಪಾತ್ರನೆಂದೆನಿಸೋ ಬಹು ಪಾಪಾತ್ಮನೆಂದೆನಿಸೋ ಶ್ರೋತ್ರೀಯನೆಂದೆನಿಸೋ ಶುಂಠನೆನಿಸೋ ಪುತ್ರಮಿತ್ರಾದ್ಯರಿಂ ಬಯಸಿ ಪೂಜೆಯಗೈಸೋ ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ 1 ಜನರೊಳಗೆ ನೀನಿದ್ದು ಜನ್ಮಗಳಲ್ಲಿ ಗುಣಕಾಲಕರ್ಮ ಸ್ವಭಾವಂಗಳಾ ಅನುಸರಿಸಿ ಪುಣ್ಯ ಪಾಪಗಳ ಮಾಡಿಸಿ ಫಲಗ ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು 2 ಯಾತಕೆನ್ನನು ಇನಿತು ದೂಷಕನ ಮಾಡುವಿ ಧ ರಾತಲದೊಳನುದಿನದಿ ಮಾಯಾಪತೇ ಭೀತಿಗೊಂಬುವನಲ್ಲ ಭಯನಿವಾರಣ ಜಗ ನ್ನಾಥ ವಿಠ್ಠಲ ಜಯಪ್ರದನೆ ಜಗದೀಶಾ3
--------------
ಜಗನ್ನಾಥದಾಸರು
ನೀಚಮನಸೆ ನೀ ಯೋಚಿಸಿ ಕೆಡಬೇಡ ಬರಿದೆ ಪ ಸಾರವಿಲ್ಲದ ನಿಸ್ಸಾರ ಸಂಸಾರವೆಂಬುದು ಮಾಯಾಬಜಾರ ತೋರಿ ಅಡಗುತಿಹ್ಯದು ನಿಮಿಷ ನೀರಮೇಲಿನ ಗುರುಳೆತೆರದಿ ಪರಿ ಸ್ಥಿರವಲ್ಲದನರಿದು ನೋಡೋ 1 ಕಾರಣಲ್ಲದ ಕಾಯವಿದು ಮೂರುದಿನದಸುಖವ ಬಯಸಿ ಮೀರಿಸಿ ಗುರುಹಿರಿಯರ್ವಚನ ಪಾರಮಾರ್ಥವಿಚಾರ ಮರೆಸಿ ಸೂರೆಗೈದು ಸ್ವರ್ಗಭೋಗ ಘೋರನರಕಕೆಳಸುತಿಹ್ಯದು 2 ಆಶಾಬದ್ಧನಾಗಿ ಭವಪಾಶದೊಳಗೆ ಸಿಲುಕಬೇಡೆಲೊ ವಾಸನಳಿದು ಐಹಿಕಸುಖದ ಕ್ಲೇಶನೀಗಿ ಸುಶೀಲನಾಗಿ ಬೇಸರಿಲ್ಲದೆ ಶ್ರೀಶಜಗದೀಶ ಶ್ರೀರಾಮನಂಘ್ರಿ ಭಜಿಸು 3
--------------
ರಾಮದಾಸರು
ನೀನೆ ದಯಾಸಿಂಧು ದೀನಜನರ ಬಂಧು ಧ್ಯಾನಿಪ ಭಕುತರ ಪ್ರಾಣಪದಕನೆ ರಂಗ ಪ ತೊಳಲಿಬಳಲುವ ಮಾನರಕ್ಷಿಸು ಜಾನಕೀಶ ಅ.ಪ ಎಷ್ಟುಪರಿ ಅನೃತವನಾಡಿದೆ ಈ ಹೊಟ್ಟೆಗಾಗಿ ಕೆಟ್ಟ ಕೃತ್ಯಮಾಡಿ ನಾ ದಣಿದೆ ಇ ನ್ನೆಷ್ಟುದಿನ ಈ ದುಷ್ಟ ಬವಣೆ ಎನಗೆ ಸ್ಥಿರವಿದೇ ಭ್ರಷ್ಟನಾಗುಳಿದೆ ಕೊಟ್ಟ ಒಡೆಯರು ಬಿಡದೆ ಕಟ್ಟಿಕಾಡ್ವರು ನಿಲ್ಲಗೊಡದೆ ಇಷ್ಟ ಸತಿಸುತರ್ಹೊಟ್ಟೆಗಿಲ್ಲೆಂದಟ್ಟಿ ಬಡಿವರು ಬಿಟ್ಟುಬಿಡದೆ ಬಿಟ್ಟಿದುಡಿದೆಷ್ಟು ಬಳಲಲಿ ಸೃಷ್ಟಿಗೀಶ ದಯಾದೃಷ್ಟಿಯಿಂ ನೋಡೋ ಕೃಷ್ಣ 1 ಮೋಸಹೋದೆ ಬಲು ಭ್ರಮಿಸದ್ದನು ಭ್ರಮಿಸಿ ತುಸು ಕರುಣವಿಲ್ಲದೆ ಘಾಸಿಯಾದೆ ಮಾತೆಪಿತರ ಮನ ನೋಯ್ಸಿ ವ್ಯಸನಕೂಪದಿ ವಾಸಮಾಡಿದೆ ಕಾಸುಹಣಬಯಸಿ ಅಧಮಸುಖನೆನೆಸಿ ಆಸೆÀಯೆಂಬುವ ಪಾಶ ಎನ್ನನು ನಾಶಮಾಡಿತು ಮುಸುರೆಯನು ಕಟ್ಟಿ ಭಾಷೆ ಕೆಡಿಸಿ ದೋಷಕೆಳಸಿತು ದೋಷ ಗಣಿಸದೆ ಶ್ರೀನಿವಾಸ ಜಗದೀಶ ಕೇಶ 2 ಪಾಪಲೋಪನೆ ಶ್ರೀಶ ಶ್ರೀರಾಮ ಕೃಪೆಯಿಂದ ನೋಡೊ ಪಾಪಿಯಿವನೆಂದು ಮರೆಯದಿರು ಪ್ರೇಮ ಹೇ ಪರಮನೆನ್ನಯ ಪಾಪರಾಶಿಯ ಕಳೆದುಕೊಡಲಿ ಕ್ಷೇಮ ಹೇ ಪರಬ್ರಹ್ಮ ಸ್ಥಾಪಿಸೆನ್ನಯ ಉದರಕಮಲದಿ ಶ್ರೀಪತಿಯೆ ನಿಮ್ಮ ನಾಮ ಅಮೃತ ತಾಪಬಿಡಿಸದೆ ಗಜವ ಸಲಹಿದೆ ಶಾಪದಿಂ ಪೊರೆದಂಬರೀಷನ ದ್ರುಪದನುಜಳ ಮಾನಕಾಯ್ದಾಪತ್ತು ಬಾಂಧವ ಭಕ್ತವತ್ಸಲ ದೇವ 3
--------------
ರಾಮದಾಸರು
ನೋಡೊ ನೋಡೋ ನಿನ್ನೊಳು ನಿಜಾ ಪ ಮೂಢತನವ ಬಿಟ್ಟು ಕೂಡಿ ಭಾವ ಭಕ್ತಿಯಾ | ಪಾಡಿ ಕೊಂಡಾಡಿ ಸೂರ್ಯಾಡೆಲೋ ಹರಿನಾಮಾ ಅ.ಪ ನಾನು ನನ್ನದು ಯಂದು ಹೀನ ವೃತ್ತಿಗೆ ಬಿದ್ದು | ನಾನಾ ಬವಣೆಯಲ್ಲಿ ತೊಳಲುತ ತೊಳಲುತ | ಗಳೆವರೇ ದಿನವನು 1 ಸನ್ನುತ ಗುರುಪಾದ ಮನ್ನಿಸಿ ಪಡೆಯಲೋ ಬೋಧಾ | ಬನ್ನ ಬಡುವದೇನು ಕಣ್ಣದೆರೆನ್ನಾರೆ ತನ್ನತಾ ಮರೆವರೆ 2 ಗುರುಮಹಿಪತಿ ಸ್ವಾಮಿ ಸುರಮುನಿಜನ ಪ್ರೇಮಿ | ಮೊರೆ ಹೊಕ್ಕವರ ಕೈಯ್ಯಾ ಜರಿಯೂತಾ ಮರಿಯಾ | ನೀ ನರಿಯದೆ ಕೆಡಬ್ಯಾಡಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡೋ ಹನುಮ ನಂಬಿದೆ ಭೀಮಾ ವರಮಧ್ವರಾಯಾ ಪ ಆ ಲಂಕೆಯ ಬೆಂಕಿಗೆ ಆಹುತಿ ಇತ್ತ 1 ಹೃದಯವ ಹರಿಸಿದನವ ಮಾಡಿದ ಹದನವ ತೋರಿಸೋ ಬುಧಜನ ನಮಿತನೆ 2 ದ್ವಾಪರ ಯುಗದಲಿ ಪರಮಾತ್ಮನ ಪೂಜಿಸಿ ತೋರಿಸಿದಂಥ ಅಪಾರ ಮಹಿಮನೆ 3 ಕಲಿಯುಗದೊಳು ಮಹಾ ಖಳಮತಗಳನೆಲ್ಲಾ ನಿನ್ನ ಸರಳಿಗಳಿಂದೊರಿಸಿದೆ ಅಕಳಂಕ ಮಹಿಮನೆ 4 ತಂದೆ ಹಸನ್ಮುಖವಿಠಲನ ಚಂದದಿಂದಲಿ ಪಾಡುವ ಸುಂದರಮೂರುತಿಯೆ 5
--------------
ಮಹಾನಿಥಿವಿಠಲ
ನೋಡೋರು ಕೃಷ್ಣನ ನಾಡಿನ ಪ್ರಜರೆಲ್ಲಮೂಡಲಗಿರಿವಾಸನ ಬೇಡಿದವರಗಳ ನೀಡುವ ದಯದಿಕೊಂಡಾಡುವರು ವೆಂಕಟರಾಯನ ಪ. ಶ್ರೀನಿವಾಸನ ಕೋಟಿ ಆನೆ ಶೃಂಗರಿಸ್ಯಾವ ನಾನಾರತ್ನಗಳಿಂದ ಭಾನು ಕೋಟಿ ತೇಜ ತಾನು ನಿರ್ಮಿಸಿದನು ಏನೆಂಬೆÉನು ಛಂದ 1 ಚಿತ್ರ ವಿಚಿತ್ರದ ಮುತ್ತಿನ ಪಲ್ಲಕ್ಕಿ ರತ್ನ ಮಾಣಿಕ ಹಚ್ಚಿಚಿತ್ತ ಜನೈಯನ ಪ್ರತ್ಯೇಕ ವಿವರಿಸಿ ಅರ್ಥಿಹೇಳುವೆನಂದ2 ಎಂಟು ದಿಕ್ಕಿಗೆ ಒಪ್ಪೊಒಂಟಿ ಸಾಲಗಳು ವೈಕುಂಠಪತಿಯ ಮುಂದೆ ಕಂಠಿ ಚಿತ್ರವÀ ಬರೆಸಿ ಕರುಣಿ ವೆಂಕಟದಿವ್ಯಗಿಲೀಟು ವಸ್ತ್ರಗಳ ಹೊಚ್ಚಿ 3 ಹೇಳಲು ವಶವಲ್ಲ ಕಾಲೊಳುಆಭರಣವ ಭಾಳ ಮುತ್ತಿನ ಕುಚ್ಚುವ್ಯಾಳಾಶಯನನು ಅವರಿಗೆ ಹೇಳಿನೇಮಿಸಿದನು ಆಳುಮಂದಿಯು ಮೆಚ್ಚ4 ವಾಹನ ಸುತ ಸತಿಯರಿಗಿತ್ತು ಅತಿ ಸೇವ್ಯರು ಮೆಚ್ಚಿ5 ಕೆಂಚೆ ಕೃಷ್ಣನ ರಥಕೆ ಗೊಂಚಲ ಮುತ್ತುಗಳೆಷ್ಟಮಿಂಚುವ ಸೂರ್ಯನಂತೆ ಮುಂದೆ ನೊಡುಣು ಬಾರೇಚಂಚಲಾಕ್ಷಿ ಕೇಳೇ ವಿರಂಚಿ ಬೆರಗಾಗೋನಂತೆ6 ಚದುರ ರಾಮೇಶನ ಕುದುರೆ ಸಾಲುಗಳಿಗೆ ಅದ್ಬುತ ರತ್ನಗಳೆ ಮದನಜನಯ್ಯನುಮುದದಿ ನಿರ್ಮಿಸಿದನು ಸುದತೆ ಹೇಳುವೆ ಕೇಳೆ 7
--------------
ಗಲಗಲಿಅವ್ವನವರು
ಪ್ರಭುರಾಯ ಪ್ರಭುರಾಯ ಅಭಿನಂದಿಸುವೆನು | ಶುಭಮತಿ ಪಾಲಿಸು ಪ ಶ್ರೀಶಗುರಪ್ರಾಣೇಶದಾಸರಿಂದ ಪೋಷಿತನಾದ ಭೂಸುರ ಪ್ರೀಯ 1 ಭಾವÀಭಕ್ತಿಲಿ ಸೇವಿಸಿ ಸಂತಸ ಶ್ರೀವರದೇಂದ್ರರ | ನೀಮೊಲಿದ‌ಘನ 2 ಕೋಶಿಗಿ ಗುರು ಉಪದೇಶದಿಂದ ವರ ದೇಶವಿಠಲನ ದಾಸನೆಂದೆನಿಸಿದ 3 ಕಪ್ಪುಗೊರಳನುತ | ಕುಪ್ಪಿಯ ಭೀಮನ ತಪ್ಪು ಕ್ಷಮಿಸೆಂದು | ತಪ್ಪದೆ ಸ್ತವಿಸಿದ 4 ಅನ್ಯನಲ್ಲನಾ ನಿನ್ನಾಪ್ತನು ನಿಜ ವೆನ್ನುತ ಬಿನ್ನಪ ಮನ್ನಿಸಿ ನೋಡೋ 5 ರಾಮಸ್ತವನವನು ನೇಮದಿಗೈಯುವ ಕೋಮಲಾಂಗದ ಹೇಮಮ ಬಂಧು 6 ನಂದಜ ಶಾಮಸುಂದರವಿಠಲನ ಮಂದಜ ಮಧುಪ7
--------------
ಶಾಮಸುಂದರ ವಿಠಲ