ಒಟ್ಟು 43 ಕಡೆಗಳಲ್ಲಿ , 17 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
--------------
ಪುರಂದರದಾಸರು
ಸ್ನಾನ ಮಾಡಿರಯ್ಯ ಜಾÕನತೀರ್ಥದಲಿನಾನು ನೀನೆಂಬಹಂಕಾರವ ಬಿಟ್ಟು ಪ.ತನ್ನೊಳು ತಾನೆ ತಿಳಿದರೊಂದು ಸ್ನಾನಅನ್ಯಾಯಗಾರಿ ಕಳೆದರೊಂದು ಸ್ನಾನಅನ್ಯಾಯವಾಡದಿದ್ದರೊಂದು ಸ್ನಾನಚೆನ್ನಾಗಿ ಹರಿಯ ನೆನೆದರೊಂದು ಸ್ನಾನ 1ಪರಸತಿಯ ಬಯಸದಿದ್ದರೆ ಒಂದು ಸ್ನಾನಪರನಿಂದೆ ಮಾಡದಿದ್ದರೆ ಒಂದು ಸ್ನಾನಪರದ್ರವ್ಯ ಅಪಹರಿಸದಿರೆ ಒಂದು ಸ್ನಾನಪರತತ್ವತಿಳಿದುಕೊಂಡರೆ ಒಂದು ಸ್ನಾನ2ತಂದೆತಾಯಿಗಳ ಸೇವೆ ಒಂದು ಸ್ನಾನಮುಂದಿನಮಾರ್ಗ ತಿಳಿದರೊಂದು ಸ್ನಾನಬಂಧನವನು ಬಿಡಿಸಿದರೊಂದು ಸ್ನಾನಸಂಧಿಸಿ ತಿಳಿದುಕೊಂಡರೆ ಸೇತು ಸ್ನಾನ 3ಅತ್ತೆ ಮಾವನ ಸೇವೆಯೊಂದು ಸ್ನಾನಭರ್ತನ ಮಾತು ಕೇಳುವುದೊಂದು ಸ್ನಾನಕ್ಷೇತ್ರಪಾತ್ರರ ಸಹವಾಸ ಒಂದು ಸ್ನಾನಪಾರ್ಥಸಾರಥಿ ನಿಮ್ಮ ಧ್ಯಾನವೆ ಧ್ಯಾನ 4ವೇದ ಶಾಸ್ತ್ರಗಳನೋದಿದರೊಂದು ಸ್ನಾನಭೇದಾಭೇದ ತಿಳಿದರೊಂದು ಸ್ನಾನಸಾಧು ಸಜ್ಜನರ ಸಂಗ ಒಂದು ಸ್ನಾನಪುರಂದರವಿಠಲನ ಧ್ಯಾನವೆ ಸ್ನಾನ 5
--------------
ಪುರಂದರದಾಸರು
ಹರಿಧ್ಯಾನವೆ ಗಂಗಾಸ್ನಾನ ವಿಷ-ಯಾನುಭವ ಜಯವೆ ಮೌನಪ್ರಾಣೇಶನೆ ಸರ್ವೋತ್ತಮ ವೇದ ಪು-ರಾಣ ಪ್ರಮಾಣವೆ ಜ್ಞಾನ 1ಮತ್ತರ ಸಂಗ ಪ್ರವೃತ್ತಿಯೊಳಿರದೆ ನಿ-ವೃತ್ತಿಯೊಳಿರುವುದೆಮಾನಸತ್ಯಾತ್ಮನ ರೂಪದೊಳು ಭೇದರಾ-ಹಿತ್ಯವೆ ಸರ್ವಸಮಾನ 2ಕರ್ತಲಕ್ಷ್ಮೀನಾರಾಯಣನಪಾದಭಕ್ತಿ ವಿರಹಿತನೆ ಹೀನಚಿತ್ತಜೋದ್ಭವಪರಾತ್ಪರತ್ರಿಜಗವುಪ್ರತ್ಯಗಾತ್ಮನಾಧೀನ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ