ನೋಡು ನಿನ್ನೊಳು ನಿನ್ನುಗಮ ಮನವೆ ಧ್ರುವ
ನೋಡು ಒಡನೆ ಖೂನ
ಬಿಡದೆ ಸಾರುತದೆ ನಿಗಮಾ
ದೃಢ ಭಾವದಲಿ ಪಡೆದು ಸದ್ಗುರು ದಯ
ವಿಡಿದು ಸೆರಗ ಕುಡುವದಿದು ಸುಗಮ 1
ಉಗಮಸ್ಥಾನದ ಉದ್ಭವ ತಿಳಿಯದೆ
ಬಿಗಿದ್ಹೆಮ್ಮಿಲಿಹುದ್ಯಾಕೆ
ಬಗೆ ಬಗೆ ಸಾಧನ ಶ್ರಮಗೊಂಡು
ಜಗಜಾಲದಿ ಭ್ರಮಿಸುವುದಿದೇಕೆ 2
ನಿರ್ಮಳ ನಿಶ್ಚಳ ನಿಜಘನವರಿತು
ಕರ್ಮ ಬಂಧನವ ಗೆಲಿಯಾ
ಮರ್ಮಿಲಿ ಮಹಿಪತಿ ಗುರುಯೋಗಧರ್ಮದಿ
ನಿರ್ಮನದಲಿ ನಿಜಗೂಡ ಮನವೇ 3