ಒಟ್ಟು 38 ಕಡೆಗಳಲ್ಲಿ , 20 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಲವನು ಕೊಳುವಾಗ ಸಡಗರದ ಸಿರಿಯೋ ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ 1 ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ ವನಿತೆಯೊಳೆನುತಿಹ್ಯನು ನನಗಾರು ಸರಿಯೆ ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು ಹೆಣಇರುವ ಮನೆಗಿಂತ ಘನದು:ಖಕೇಳೊ 2 ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು ಬಡಿವಾರ ಬಿಂಕ ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ 3 ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ ಗಿಕ್ಕುವಾಗ ನೋಡವನವಕ್ಕರಂಗಳನು ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ 4 ಮನೆಮುರಿದು ಹೋಗಲಿ ವನಿತೆಯರು ಜರಿಯಲಿ ಎನಗೆಡರು ಬಂದೊದಗಿ ಅನ್ನ ಸಿಗದಿರಲಿ ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ ಋಣದ ಬಾಳುವೆ ಬೇಡ ಜನಮಜನುಮಗಳಲಿ 5
--------------
ರಾಮದಾಸರು
ಸೇವಕತನದ ರುಚಿಯನೇನರಿದೆಯೊದೇವ ಹನುಮರಾಯ ವೈರಾಗ್ಯ ಬೇಡಿ ಪ ಪಾಷಾಣ ಪೆಣ್ಣ ಮಾಡಿದಾತಗೆಇದೇನಸಾಧ್ಯವೊ ನೀ ಬಯಸಲೊಲ್ಲದೆ1 ಕ್ಷಣದಲ್ಲಿ ಸಂಜೀವನ ಪರ್ವತ ತಂದಾಗಹಣ ಹೊನ್ನುಗಳ ಬೇಡ ಬಾರದಿತ್ತೆವಿನಯದ ವಿಭೀಷಣಗೆ ರಾಜ್ಯವನಿತ್ತಂಥಧಣಿಗೆ ಏನಸಾಧ್ಯವೊ ಹನುಮ ನೀನೊಲ್ಲದೆ 2 ಸಾರ್ವಭೌಮನು ತಾನೆ ಮೆಚ್ಚಿ ಬಳಿಗೈದಾಗಉರ್ವಿಯನು ಬೇಡಿದಡೆ ಕೊಡದಿಹನೆಸರ್ವವನು ತೊರೆದು ಶ್ರೀ ನೆಲೆಯಾದಿ ಕೇಶವನನಿವ್ರ್ಯಾಜ ಭಕುತಿಯನು ಬೇಡಿಕೊಂಡೆಯೊ 3
--------------
ಕನಕದಾಸ
ಹ್ಯಾಗೆ ಒಲಿಯುವನೊ ಎನ್ನೊಡೆಯ ರಂಗ ಹ್ಯಾಗೆ ಒಲಿಯುವನೊ ಪ ಹ್ಯಾಗೆ ಒಲಿಯುವ ಜಾಣೆ ಪೇಳಮ್ಮ ನಾಗಶಾಯಿ ನಿಗಮಾಗಮೊಂದಿತ ರಾಘವೇಶನು ಬೇಗ ಒಲಿಯದಿರೆ ನೀಗುವೆನು ಪ್ರಾಣ ಕೇಳೆ ಸಖಿಯೆಅ.ಪ ಧಣಿಯು ಇಲ್ಲದ ದುರ್ದೈವ ಬಾಳು ಹೆಣನ ಸಮವಿದು ಮನ್ನಿಸೆ ಕೆಳದಿ ಗಣನೆಯಿಲ್ಲದ ಜನಮವ್ಯಾಕಿದು ಸನಕಸನಂದರೆಣಿಕೆಯಿಲ್ಲದೆ ಮಣಿದು ಆತಗೆ ಧನ್ಯರಾದದ್ದು ನೆನೆಸಿ ಮನದೊಂದು ದಿನಸುವಾಗುವುದು ಚಿನಮಯಾತ್ಮನ ಕಾಣದಿರಲಾರೆ 1 ನೀರೆ ಬೇಗಿನ್ನು ಕರೆತಂದು ತೋರೆ ಸಾರಸಾಕ್ಷನ್ನ ಅಗಲಿರಲಾರೆ ವಾರಿಧಿಶಾಯಿನ್ನ ಹರಣದೊಡೆಯನ್ನ ಮಾರ ಸುಂದರಪಾರ ಮಹಿಮನ ಬಾರಿಬಾರಿಗೆ ಸ್ಮರಿಸಿ ಮನ ಬಲು ಘೋರ ಬಡುತದೆ ವಾರಿಜಾಕ್ಷಿ ಕರೆ ತಾರೆ ಶೀಘ್ರದಿ ನಾರಸಿಂಹನ 2 ಕಡಲೊಳಿರುವನೋ ದೃಢದಿ ಕರೆಯಲು ಒಡನೆ ಬರುವನೋ ಜಡಜಾಕ್ಷಿ ಕೇಳೆ ಜಡಜನಾಭನೋ ದೃಢಕರೊಡೆಯನೋ ಬಿಡದೆ ಆತಗೆ ಮಿಡುಕಿ ಮಿಡುಕಿ ಹಿಡಿಕಿಯಾಯಿತು ದೇಹ ಸೊರಗಿ ಒಡೆಯ ಶ್ರೀರಾಮನಡಿಗೆ ಹೊಂದಿ ನಾ ತೊಡರಿನೊಳಗಿಂದ ಕಡೆಗೆ ನಿಲ್ಲುವೆ 3
--------------
ರಾಮದಾಸರು
ಎರೆದು ಪೀತಾಂಬರÀವನುಡಿಸಿದಳಾಗವರಗೋಪಿಯು ಬೇಗಪಮುರುಳಿಯನೂದುತ ಪರಿಪರಿ ಗೆಳೆಯರುಪರಮಾತ್ಮನೆ ನಿನ್ನರಸುತಲಿಹರೆಂದು ಅಪಗುರುಳು ಕೂದಲು ಮುಖದಲ್ಲಿ ಹೊಸ ಬೆವರುಥಳಥಳಿಸುತಲಿಹುದುಎಳೆಯ ಶ್ರೀ ತುಳಸಿಯ ವನಮಾಲೆಗಳುಗಳದಲಿ ಶೋಭಿಪುದುಅರಳು ಮಲ್ಲಿಗೆ ಪುಷ್ಪದ ಹಾರಗಳುಮುತ್ತಿನ ಪದಕಗಳುಕೊರಳೊಳು ಮುತ್ತಿನ ಸರಗಳಿಂದೊಪ್ಪುತಮುರುಳಿಯ ನೂದುತ ಸರಸರ ಬಾರೆಂದು 1ಗುರುಳು ಕೂದಲೊಳೊಪ್ಪುವ ಅರಳೆಲೆಯುಸೊಗಸಿನ ನವಿಲ್ಗರಿಯುಬಿಗಿದು ಸುತ್ತಿದ ಸಿರದಲಿ ಕೇಶಗಳುಅತಿ ಶೋಭಿಸುತಿಹವುಚದುರಿದ ಕೇಶದಿ ಕೆಂದೂಳಿಗಳುಮಧುವೈರಿಯ ಕೇಳುವಿಧವಿಧ ರಾಗದಿ ಪಾಡುತ ನಿನ್ನನುಸದನದಿ ಪೂಜಿಸಿ ನೋಡುವೆ ಬಾರೆಂದು 2ನೊಸಲಲ್ಲಿ ಕುಡಿನಾಮವನಿಟ್ಟಿಹಳುನೋಡುತ ಹಿಗ್ಗುವಳುಎಸಳು ಕಣ್ಣಿಗೆ ಕಪ್ಪನೆ ತೀಡುವಳುಬಣ್ಣಿಸಿ ಕರೆಯುವಳುಎಸೆವೊ ಕರ್ಣಕೆ ನೀಲದ ಬಾವುಲಿಯೂರತ್ನದ ಚೌಕಳಿಯುಬಿಸುಜನಾಭ ನಿನ್ನ ಶಶಿಮುಖಿಯರುಗಳುರಸಕಸಿ ಮಾಳ್ಪರು ಹಸನಾಗಿ ಕೂಡೆಂದು 3ಅರಳುಕೆಂದಾವರೆ ಪೋಲುವಚರಣಸ್ಮರಿಸುವರಘಹರಣಸುರರುಕಿನ್ನರರೋಲೈಸುವಚರಣವರಸುಗುಣಾಭರಣಘಲುಘಲುಘಲುರೆಂದೊಪ್ಪುವಚರಣಸಜ್ಜನರಾಭರಣಅಡಿಯಿಡುತಲಿ ಬಾ ಮೃಡಸಖ ನಿನ್ನಯಅಡಿಗೆರಗುವರೈ ತಡೆಯದೆ ಬಾರೆಂದು 4ವರಹಸ್ತದಿ ಬೆಣ್ಣೆಯ ಮುದ್ದೆಯ ಕೊಡುವೆಬಾರೆನ್ನಯ ದೊರೆಯೆಜರದೊಲ್ಲಿಯ ಮುರಳಿಸಹಿತ ನಡುವಿಗೆ ಕಟ್ಟುವೆನುಬಾ ಭಕುತರ ಪೊರೆಯೆಉಗುರಿಂದ ಗಿರಿಯನು ಎತ್ತಿದ ಧಣಿಯೆಸುರಚಿಂತಾಮಣಿಯೆಹಗಲು ಇರಳು ನಿನ್ನಗಲಿರಲಾರೆ ಶ್ರೀ-ಕಮಲನಾಭವಿಠ್ಠಲ ಬೇಗಬಾರೆಂದು 5
--------------
ನಿಡಗುರುಕಿ ಜೀವೂಬಾಯಿ
ನಾನೇಕೆ ಬಡವನೊ -ನಾನೇಕೆ ಪರದೇಶಿನೀನಿರುವತನಕ ಹರಿಯೇ ಪಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆಅಷ್ಟೆಲ್ಲ ಬಳಗ ನೀನೆ ||ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆಶ್ರೇಷ್ಠಮೂರುತಿ ಕೃಷ್ಣ ನೀನಿರುವ ತನಕ 1ಒಡಹುಟ್ಟಿದಣ್ಣ ನೀನೆ, ಒಡಲ ಹೊರೆವನ ನೀನೆಇಡು-ತೊಡುವ ವಸ್ತು ನೀನೆ ||ಮಡದಿ ಮಕ್ಕಳನೆಲ್ಲ ಕಡಹಾಯ್ಸುವವ ನೀನೆಬಿಡದೆ ಸಲಹುವ ಒಡೆಯ ನೀನಿರುವ ತನಕ 2ವಿದ್ಯೆಹೇಳುವಗುರುನೀನೆ ಬುದ್ಧಿ ಹೇಳುವ ಧಣಿ ನೀನೆಉದ್ಧಾರಕರ್ತ ನೀನೆ ||ಮದ್ದು ಶ್ರೀಪುರಂದರವಿಠಲನ ಪಾದದಲಿಬಿದ್ದು ಲೋಲಾಡುತಿರು ಕಾಣು ಮನವೆ 3
--------------
ಪುರಂದರದಾಸರು
ಸಾಮಾನ್ಯವಲ್ಲ ಶ್ರೀ ಹರಿಸೇವೆ ಪ.ಪಾಮರಜನರಿಗೆಸಾಮಜವರದನ ಪ್ರೇಮದಿ ನೆನೆವುದುತಾಮಸಬುದ್ಧಿಯ ತಾ ತಗ್ಗಿಸದೆಅಪಅಂತರ ಮಲಿನವಳಿಯಲು ಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತವ ಕೇಳಲು ಬೇಕು ಸಂತಸದಿರಬೇಕುಸಂತ ಜನರಗುಣ ಸಂತತ ಮನದಿ ನಿರಂತರದಲಿ ತಾ ಚಿಂತಿಸಬೇಕು 1ಜಾÕನ ಕರ್ಮೇಂದ್ರಿಯಗಳ ನಿಗ್ರಹಿಸಿ ಜಾÕನವ ಸಂಗ್ರಹಿಸಿಹಾನಿ ವೃದ್ಧಿಗಳೆರಡನು ತಾ ಸಹಿಸಿ ದೀನತೆಯನು ವಹಿಸಿ ||ಮಾನಾಪಮಾನ ಸಮಾನವೆಂದರಿದು ನಿಧಾನದಿ ಹರಿಗುಣ ಧ್ಯಾನವ ಮಾಳ್ಪುದು 2ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದುಸರ್ವರ ಧಣಿ ಸ್ವರಮಣನೆಂದು ಸರ್ವಾನುರಾಗನೆಂದುಸರ್ವ ಮೂರುತಿ ಶ್ರೀ ಪುರಂದರವಿಠಲನಸರ್ವದಾ ಧ್ಯಾನಿಸಿ ಗರ್ವವಳಿಯಬೇಕು 3
--------------
ಪುರಂದರದಾಸರು
ಹೊಡೆಯೊ ನಗಾರಿ ಮೇಲೆ ಕೈಯ |ಆನಂದಮದವೇರಿ ಗಡಗಡ ಪ.ಮೃಡಸಖನಪಾದ ಬಿಡದೆ ಭಜಿಂಸರಫ |ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು 1ವೇದಗಮ್ಯ ಸಕಾಲಾರ್ತಿನಿವಾರಕ |ಮೋದವೀವ ಮಧುಸೂದನ ದೊರೆಯೆಂದು 2ಗಾನಲೋಲ ತನ್ನ ಧ್ಯಾನಿಸುವರನೆಲ್ಲ |ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು 3ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು 4ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |ಶ್ರೀಪತಿ ಪುರಂದರವಿಠಲನು ಧಣಿಯೆಂದು 5
--------------
ಪುರಂದರದಾಸರು