ಎಂಥ ಟವಳಿಗಾರನಮ್ಮ ಪ
ನಂದ ಗೋಪ್ಯಮ್ಮ ಕೇಳೆ - ನಿನ್ನ ಮಗ ಎಂಥ ಟವಳಿಗಾರನಮ್ಮ ಅ
ಹಣವ ಕೊಟ್ಟೇನೆಂದುಗುಣದಿಂದ ಎನ್ನ ತಂದಹಣವ ಕೇಳಿದರಲ್ಲಿ - ಹಣವೆ ?ತಡೆಯಲಾರದ ತಲ್ಲಣವೆ ?ಕುದುರೆ ಮೇಲಿನ ಪಲ್ಲಣವೆ ?ಇಲ್ಲ, ಬಾಯಿಗಿಟ್ಟ ಬೊಕ್ಕಣವೆ ? - ಹೋಗೆನುತಾನೆ 1
ಕೊಪ್ಪಾನೆ ಕೊಟ್ಟೇನೆಂದುಒಪ್ಪಿಸಿ ಎನ್ನ ತಂದಕೊಪ್ಪಾನ ಕೇಳಿದರಲ್ಲಿ - ಕೊಪ್ಪ ?ಊರಮುಂದಿನ ತಿಪ್ಪ ?ಕೇರಿಯೊಳಗಿನ ಕೆಪ್ಪ ?ಕೆರೆಯೊಳಗಿನ ಹುಳಿಸೊಪ್ಪ ? - ಹೋಗೆನುತಾನೆ2
ಬಳೆಯ ಕೊಟ್ಟೇನೆಂದುಬಲು ಮಾತಿನಲಿ ತಂದಬಳೆಯ ಕೇಳಿದರಲ್ಲಿ - ಬಳೆಯೆ ?ಊರ ಮುಂದಿನ ಗಳೆಯೆ ?ಗದ್ದೆಯೊಳಗಿನ ಕಳೆಯೆ ?ಕೈಕಾಲ ಹಿಡಿದು ಸೆಳೆಯೆ ? - ಹೋಗೆನುತಾನೆ 3
ವಾಲೆ ?ಕನ್ನಡಿಯ ಕಪೋಲೆ ?ಹೇಳು ಸುವ್ವಿ ಸುವ್ವಾಲೆ ?ನಿನ್ನ ಕಾಲಿಗೆ ಸಂಕೋಲೆ ? - ಹೋಗೆನುತಾನೆ 4
ಕಡಗವ ಕೊಟ್ಟೇನೆಂದುಸಡಗರದಿಂದ ತಂದಕಡಗ ಕೇಳಿದರಲ್ಲಿ - ಕಡಗ ?ಅಂಬರದ ಗುಡುಗ ?ಮುಂಗೈ ಮೇಲಿನ ಗಿಡುಗ ?ಎತ್ತಿನ ಮ್ಯಾಲಿನ ಧಡಗ ? - ಹೋಗೆನುತಾನೆ 5
ಬುಗುಡಿಯ ಕೊಟ್ಟೇನೆಂದುರಗಡು ಕಿವಿಹಿಂಡಿ ತಂದಬುಗುಡಿ ಕೇಳಿದರಲ್ಲಿ - ಬುಗುಡಿ ?ಪಾಂಡವರಾಡಿದ ಪಗಡಿ ?ಮೂಗಿಂದ ಸುರಿವ ನೆಗಡಿ ?ಛಿ ! ನೀನೆಂಥ ಧಗಡಿ ? - ಹೋಗೆನುತಾನೆ 6
ಆದಿಕೇಶವನ ಮೇಲೆಆಣೆಯಿಟ್ಟು ಕರೆತಂದಆಣಿ ಎಲ್ಲಹುದೆಂದು ತೋರ್ದಆನಂದದಿಂದಲಿ ಬೆರೆದಬೀದಿಗೆ ಬಂದು ಕರೆದಹೀಂಗೆ ಧರೆಯೊಳು ಮೆರೆದ - ಶ್ರೀ ಕೃಷ್ಣರಾಯ 7