ನಾಮತ್ರಯ ನೆನೆಯಿರೊ ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ಪ ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ ದುಶ್ಚರಿತವೆಂಬ ಮಹ ಕಾನನಕ್ಕೆ ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು1 ಅನಂತ ಅನಂತ ಎಂದು ಮನದಲ್ಲಿ ನೆನೆಯೆ ನಾನಾ ಭವಬಂಧ ದುಷ್ಕರ್ಮದಿ ಹೀನಾಯವನು ಕಳೆದು ಹಿತದಿಂದಲಿ ವೊಲಿದು ಆನಂದ ಆನಂದವಾದ ಫಲ ಕೊಡುವುದು. 2 ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ ಗೋವಿಂದ ಕಡೆಹಾಕಿ ಸಾಕುವದು ದೇವೇಶ ಶಿರಪತಿ ವಿಜಯವಿಠ್ಠಲೇಶನ ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು 3
ನಿನ್ನ ನೆನೆಯುವುದೆ ಭಾಗ್ಯ ನಿನ್ನ ನೋಡುವುದೇ ಕಂಗಳಿಗೆ ಹಬ್ಬ ನಿನ್ನ ಬಳಿ ನಲಿದಾಡುವುದೇ ಭಕ್ತರಿಗಿಷ್ಟ ನಿನ್ನಗಲಿ ಇಹದೊಂದು ಘಳಿಗೆಯೂ ಅವರ ಮನಸಿನಲಿ ಅಖಿಳ ದೇವೇಶ ನಿನ್ಹೊರತು ಗತಿಯಮಗಾರೆಂಬರೊ ನಿನ್ನ ಭಕ್ತರು ಶ್ರೀ ಶ್ರೀನಿವಾಸ
ಪಾಲಿಸು ಜಗದೀಶಾ ಸರ್ವೇಶಾ ಪಾಲಿಸು ಜಗದೀಶಾ ಪ ಪಾಲಿಸು ಸರ್ವೇಶ ದೇವ ದೇವೇಶ ಪಾಲಿಸು ಬಾಲನ ರಾಮ ರಮೇಶ ಅ.ಪ. ಶರಣರ ತಂದೆ ನೀನು ಸರ್ವೇಶಾ ದುರುಳರಾಂತಕನು ನೀನು ಪರಿಯಿಂದ ಬಳಲುವ ಪರಮ ದಾಸರಿಗೆಲ್ಲಾ ಪೊರೆಯುವ ರಾಜಾಧಿರಾಜನೇ ನೀನು 1 ಮಾನಿನಿ ಕಾಯ್ದೆ ನೀನು ಸರ್ವೇಶಾ ಮಾನವ ನೀಡೋ ನೀನು ಹೀನರ ಸಲಹುವ ಪರಮ ನಾಯಕ ನೀನು ದೀನರ ರಕ್ಷಿಪ ತಾತನೇ ನೀನು 2 ಸುಜನರ ದೇವ ನೀನು ಸರ್ವೇಶಾ ಭಜಕರ ನಾಥ ನೀನು ಕುಜನರ ಕಾಲನು ದೂರ್ವಾಪುರೇಶನು ದ್ವಿಜವೃಂದ ವಂದ್ಯನು ಚನ್ನಕೇಶವನು 3
ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಪ ಬಡತನವಿದ್ದರು ನೆರೆಹೊರೆ ಮನೆಯಲ್ಲಿ ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ ಬಿಡದೆ ಮಾಡುವ ಗೃಹಕೃತ್ಯಂಗಳು ಜಗ ಅನುದಿನ 1 ವಿಪರೀತ ಕಾಲಗಳಟ್ಟಿದ ಕಾಲಕ್ಕು ಸ್ವಪನಾದಿಯಪ ಕಳವಳಿಸದಲೇ ಪತಿ ಸೇವೆ ಅಫಲದಲ್ಲಿ ಮಾಡಿ ಒಲಿದೊಲಿದಾಡುವ2 ಲಾವಣ್ಯ ಪುರುಷರ ಕಂಡರು ಮನದಲ್ಲಿ ಭಾವಿಸಬೇಕು ಸಹೋದರರು ಎಂದು ವಿಭೂತಿ ರೂಪವ ನಿತ್ಯ 3 ಬಂದು ತಂದರೆ ಸಾವಿರ ಮಾಡಿ ಚಿಂತಿಸಿ ಇಂದಿರೇಶನೆ ಪತಿರೂಪವೆಂದು ಅಂದದದಲಿದ್ದ ವಿಭವಾನುಸಾರ ಆ ನಂದವಾಗಿ ಸಂಸಾರದೊಳಗಿರೆ 4 ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ ಹಿತವಂತಳಾಗಿ ನುಡಿಸಿಕೊಳುತಾ ಗಾತ್ರ ಸರ್ವದಾ ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ 5 ಚಕೋರ ಚಂದ್ರಮನಲ್ಲಿ ಮನಸು ಇಟ್ಟು ಸುಖಬಡುವಂತೆ ನಾನಾ ಪ್ರಕಾರ ಕಕುಲಾತಿಯಿಂದ ಕಾಮುಕಳಾಗದೆ ಮಹಾ ಭಕುತಿಯಿಂದಲಿ ಗುರು ಹಿರಿಯರ ಸಮ್ಮತ 6 ಸಂತಜನರೆಂಬ ಕ್ಷೀರಾಂಬುಧಿ ಮಧ್ಯ ಸಂತತ ಮೀನಿನಂದದಿ ಬೀಳುತಾ ಪತಿ ಧರ್ಮವಹಿಸಿ ಶ್ರೀ ಕಾಂತನ ಗುಣಕಥೆ ಕೇಳಿ ಪೊಗಳಲಾಗಿ 7 ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ ಪ್ರೇಮದಿಂದಲಿ ಗುಣಗಳ ಗುಣಿಸೀ ಕಾಮಾದಿ ಚತುರ್ವಿಧÀ ಪುರುಷಾರ್ಥ ತನ್ನಯ ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ 8 ಆವಾವ ಪ್ರಯೋಜನ ಮಾಡಲು ಸರ್ವದ ದೇವದೇವೇಶನಾಧೀನವೆಂದೂ ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು ಪಾವನ ವಿಜಯವಿಠ್ಠಲನ ಭಕುತಿಯಿಂದಾ 9