ಒಟ್ಟು 33 ಕಡೆಗಳಲ್ಲಿ , 20 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಠವ ಕೊಡು ಹರಿಯೆ ಮುಂದೆನಗೆಸಾಟಿಯಿಲ್ಲದೆ ನಿನ್ನ ಆಟಕಾಣುವವಿದ್ಯೆಪಸುಜನಸನ್ನುತತವ ನಿಜಮಹಿಮೆನ್ನ ಮನದಿನಿಜಪಿಡಿದನುದಿನ ಭಜಿಪ ಸುವಿದ್ಯ 1ನಿಪುಣತೆಯಲಿ ನಿಮ್ಮ ಸಫಲಸಚ್ಚರಿತವಅಪರೋಕ್ಷದ್ಹೊಗಳುವಗುಪಿತಸುವಿದ್ಯ2ಪ್ರಾಣೇಶ ಶ್ರೀರಾಮಮಾಣದೆತವಪಾದಧ್ಯಾನ ಸದೃಢಭಕ್ತಿ ಜ್ಞಾನ ಸುವಿದ್ಯ 3
--------------
ರಾಮದಾಸರು
ಮಾಮಝ ಭಾಪುರೆ ಭಳಿರೆ ಹನುಮಂತರಾಮಪದ ಸೇವಿಪ ವೀರ ಹನುಮಂತ ಪಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನಪಟ್ಟಕನುವಾದ ಸಿರಿವಂತ ಹನುಮಂತ 1ಅಂಬರಕೆ ಪುಟನೆಗೆದು ಅಂಬುಧಿಯನೆರೆದಾಟಿಕುಂಭಿನಿಯ ಮಗಳಿಗುಂಗುರವನಿತ್ತು |ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆಗಂಭೀರ ವೀರಾಧಿವೀರ ಹನುಮಂತ 2ಅತಿದುರಳ ರಕ್ಕಸನು ರಥದ ಮೇಲಿರಲು ರಘು-ಪತಿಯು ಪದಚರಿಯಾಗಿ ನಿಂತಿರಲು ನೋಡಿ ||ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆಅತಿ ಭಯಂಕರ ಸತ್ತ್ವವಂತ ಹನುಮಂತ 3ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದುದೃಢಭಕ್ತಿಯಿಂದ ಮೌನದಿ ಕುಳಿತು ||ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆಕೊಡುತ ಸವಿದುಂಡ ಗುಣವಂತ ಹನುಮಂತ 4ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮತೃತೀಯದಲಿಗುರುಮಧ್ವಮುನಿಯೆನಿಸೀ ||ಪ್ರತಿಯಿಲ್ಲದಲೆ ಮೆರೆದೆಪುರಂದರವಿಠಲನಸುತ್ತ ನಿನಗಾರು ಸರಿ -ವಿಜಯಹನುಮಂತ5
--------------
ಪುರಂದರದಾಸರು
ವಿಧಿನಿಷೇಧವು ನಿನ್ನವರಿಗೆಂತೊ ಹರಿಯೇ ಪವಿಧಿನಿನ್ನ ಸ್ಮರಣೆಯು ನಿಷೇಧ ವಿಸ್ಮøತಿಯೆಂಬವಿಧಿಯನೊಂದನೆ ಬಲ್ಲರಲ್ಲದೇ ಮತ್ತೊಂದು ಅ.ಪಮಿಂದದ್ದೆ ಗಂಗಾದಿ ಪುಣ್ಯತೀರ್ಥಂಗಳುಬಂದದ್ದೆ ಪುಣ್ಯಕಾಲ ಸಾಧುಜನರು ||ನಿಂದದ್ದೆ ಗಯೆ ವಾರಣಾಸಿ ಕುರುಕ್ಷೇತ್ರಸಂದೇಹವೇಕೆ ಮದದಾನೆ ಪೋದುದೆ ಬೀದಿ 1ಕಂಡಕಂಡಲ್ಲಿ ವಿಶ್ವಾದಿ ಮೂರುತಿಯು ಭೂಮಂಡಲದಿ ಶಯನವೆ ನಮಸ್ಕಾರವು ||ತಂಡತಂಡದ ಕ್ರಿಯೆಗಳೆಲ್ಲ ನಿನ್ನಯ ಪೂಜೆಮಂಡೆಬಾಗಿಸಿ ನಮಿಪಭಾಗವತಜನಕೆ 2ನಡೆದ ನಡಿಗೆಯು ಎಲ್ಲ ಲಕ್ಷ ಪ್ರದಕ್ಷಿಣೆಯುನುಡಿವ ನುಡಿಗಳು ಎಲ್ಲ ಗಾಯತ್ರಿ ಮಂತ್ರ ||ಕೊಡುವುದೆಲ್ಲವು ಅಗ್ನಿಮುಖದಲ್ಲಿ ಆಹುತಿದೃಢಭಕ್ತರೇನ ಮಾಡಿದರದೇ ಮರ್ಯಾದೆ 3ನಷ್ಟವಾದುದು ಎಲ್ಲ ಸಂಚಿತದ ಕರ್ಮವುಮುಟ್ಟಲಂಜುವುವೆಲ್ಲ ಆಗಾಮಿಕರ್ಮ ||ಸ್ಪಷ್ಟವಾಗಿರುವ ಪ್ರಾರಬ್ಧ ಕರ್ಮವ ಮೀರಿಸೆಟ್ಟಿಮೆಟ್ಟಿದ್ದೆ ಪಟ್ಟಣವೆಂಬುದೇ ನಿಜವು 4
--------------
ಪುರಂದರದಾಸರು