ಕಲಿಪುರುಷನಿಗತಿಹರುಷ
ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ
ಅಲಕ್ಷ್ಮೀರಮಣ ಅಖಿಲ ದುರ್ಗುಣಂ
ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ
ರಾವಣಾಸುರಗೆ ಮಗನೆನಿಸಿ
ದೇವತೆಗಳ ಸೆರೆಯಲ್ಲಿಡಿಸಿ
ಭಾವಜ್ಞರನು ನಿರಾಕರಿಸಿ
ಸಭಾಸ್ಥಾನಗಳ ಭಂಗಪಡಿಸಿ
ಬಹುದುಃಖ ಪಡಿಸಿ ಪಾಂಡುಕುಮಾರರ
ಪಾವನಿಯಿಂತೊಡೆಯೊಡೆದು ಬೀಳುತ
ಬಗೆಯ ನೆನದುಯೀಗೆಮ್ಮ ಬಾಧಿಸುವೆ 1
ಆಗಮಗಳು ಸುಳ್ಳೆಂಬುವದು | ನಾ
ಯೋಗಿಯೆಂದು ಹಿಗ್ಗುತಲಿಹುದು
ಭಾಗವರತ ನಿಂದನೆಗೈದು | ನಿರ್
ಭಾಗ್ಯತನ್ನತಾನೆ ಪೊಗಳುವದು
ಸಾಗರದಂತಿಹ ದುರಾಸೆಯೊಳಗಾ
ವಾಗಲು ಜನ ಮುಳುಗುತ ತಿಳಿಯದೆ
ಹಾಗರ್ವದಿ ನಿಷ್ಫಲವ ಪೊಂದುವರಿದು 2
ನೀತಿ ತಪ್ಪಿತಾವ್ನಡೆಯುವುದು | ದು
ರ್ಜಾತಿಗಳುತ್ತಮರೆಂಬುವದು
ಆತುರದಲಿಮನವಳುಕುವುದು | ಬಲು
ಘಾತಕತನದಲಿತಿರುಗುವದು
ಗಾತುರಸುಖವೇ ಮೊಕ್ಷವೆಂದು ವಿಷ
ಯಾತಿಶಯದಿಯರಿಷಡ್ವರ್ಗಗಳೊಳು
ರಾತಿರಿಪಗಲೆನ್ನದೆ ಬೀಳ್ವುದುನಿ
ನ್ನಾತಗಳಿಂಗೆ ಸ್ವಭಾವಗುಣಂಗಳು 3
ಕ್ಷಾಮಡಾಂಬರಗಳ್ಹೆಚ್ಚುವದು | ನಿ-
ಷ್ಕಾಮರ ಹಾಸ್ಯವಮಾಡುವದು
ಕಾಮದಿಜನಗಳ ಬಾಧಿಪದು
ನಿಷ್ಕಾರಣರೋಗದಿ ಸಾಯುವದು
ಪಾಮರರೆಲ್ಲರು ಪಂಡಿತರಾವೆಂ-
ದೀಮಹಿಯೊಳುಮನಬಂದಂತೆಸದಾ
ತಾಮಸಗಳಬೋಧಿಸುತಲಿಜಗದೊಳು
ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4
ವಿಪರೀತ ಫಲಗಳಾಗುವುದು
ಚಪಲಹೊಂದಿಚಿಂತಿಸುತಿಹುದು
ಜಪಹೋಮಗಳನು ತ್ಯಜಿಸುವದು
ಬಲುಜಾಡ್ಯಂಗಳನನುಭವಿಸುವದು
ಉಪಕಾರಗಳನುಮಾಳ್ಪರಲ್ಲಿ ಪ್ರ
ತ್ಯಪಕಾರಗಳೆಣಿಸುತಲಾವಾಗಲು
ಕಾಲಕಳೆಯುತ ವೃಥಾನೋಯುವದು 5
ಶೂದ್ರರುವೇದವ ಪಠಿಸುವದು | ನಿರು
ಪದ್ರವನುದಂಡಿಸುತಿಹುದು | ಹರಿ
ರುದ್ರವಿಧಿಗಳದೂಷಿಪದು | ಅ-
ಬದ್ಧವೆಬಲುರುಚಿಯೆಂಬುವದು
ಕ್ಷುದ್ರಕುನಾಸ್ತಿಕಮತವನಂಬಿ ದೇ-
ವದ್ರೋಹಗಳನುಮಾಡುತ ಬಾಯಲಿ
ಇದ್ದದ್ದಾದರುಯಿಲ್ಲೆಂಬುವದು6
ಪರರೊಡವೆಗಳಪಹರಿಸುವದು | ನೆರೆ-
ಹೊರೆಯಂತಿರಬೇಕೆಂಬುವದು
ಗುರುವಿನಲ್ಲಿ ದ್ವೇಷವೆಣಿಸುವದು | ಸತಿ-
ಯರುಪತಿಯಲಿದ್ವೇಷಿಸುತಿಹುದು
ನಿರತವುಜೀವನಕಿಲ್ಲೆಂದುಬಳಲಿ
ದುರ್ವಿದ್ಯಗಳಭ್ಯಾಸಿಸಿಕಡೆಯಲಿ
ನರಕಂಗಳಿಗೆ ಪ್ರಯಾಣಮಾಡುವದು7