ರಂಗಯ್ಯ ನಿನಗ್ಯಾತಕೋ |
ಹೇಳುವದು ಥರವೆ
ಅಲ್ಲಾ ಪೂತನಿ ಮೊಲೆ ಉಂಡ ಪುಂಡಗೋವಿಂದ ಪ
ನೆರೆಹೊರೆ ಮನಿಗಳಿಗ್ಹೋಗಿ |
ಅವರ ನೆಲವಿಗಳಿಗೆ ನೀನು ಹುದಗಿ |
ಮೇಲಿರುವಂಥ ಪಾಲು ಬೆಣ್ಣೆಗಾಗಿ |
ಎರಡು ಕರದಿತ್ವರದಿ ನೀನು ಬಾಗಿ |
ಇಂಥ ಪರಿಚೇಷ್ಟಿಗಳಲ್ಲಿ ಬಡವರಾಲಯ ಪೊಕ್ಕು |
ದುರುಳತನವ ಮಾಡಿ ದೂರುತರುವರೇನೊ 1
ಮಂದಗಮನಿಯಳ ಕರವನ್ನು |
ಹಿಡಿದು ಮಾನಭಂಗವ ಮಾಡುವದೇನು |
ಇದು ಚಂದವೆ ಬುದ್ಧಿ ನಿಮಗಿನ್ನು |
ಇಂಥಾ ಚಾಳಕತನ ಬಿಡಿಸುವೆನು |
ಶ್ರೀ ಮಂದರೋದ್ಹರ ಮಹಾಮಹಿಮ ಪ್ರಕಾಶನೆ
ನಂದದಿ----------------- 2
ಧರೆಯೊಳ್ಹೆನ್ನೆಯ ಪುರವಾಸ |
ಧೊರಿ ಹೆನ್ನೆ ವಿಠಲನ ಈಶ |
ಭಕ್ತರನ್ನ ಪೊರೆವ ಜಗದೀಶ |
ತಾರಕನಾದ ಸರ್ವೇಶ |
ಇನ್ನು ಪರಿಯಾದದಲ್ಲಿ ಮೊರೆಯದ ಕಾರಣ
ನೀನಗೀಗ ಚನ್ನಾಗಿ ಬುದ್ಧಿಯಪೇಳ್ವೆನು3