ಬಂದ ಬಂದ ಹಿಮದ ಗಿರೀ | ಯಿಂದ ಅನಿಮಿತ್ತ ಬಂಧು | ಬದರಿವಾಸ | ಬಂದ | ಬಂದ ಪ
ಇಂದಿರೆ ಅಜ ಭವ ಕ್ಷಿತಿ | ವೃಂದಾರಕ ವಹಬಂದನು ತಾ ಮಮ | ಮಂದಿರಕಿಂದೂ ಅ.ಪ.
ಕೌಸ್ತುಭ ಉರ ಸಿರಿ ವತ್ಸಾಂಕಿತ ಸುರಚಿರೋದರವು | ಮೆರೆವ ತ್ರಿವಳಿಯಿಂವರ ಪಟ್ಟಕ ವಸನವು | ತರ್ಕ ಚಿಹ್ನಿತಕರಸುರ ಭೂಸುರರಿಗೆ | ವರ ಜ್ಞಾನದ ಹರಿ1
ಕಾಯ ಕಟಕ ಕರ | ಪುಟದಲಿ ಜಪಮಣಿಕಟಕ ಧರಿಸಿ ಸುರ | ತಟನಿ ತೀರಗ ಸುರಕಟಕವೆರಸಿ ಉತ್ | ಕೃಷ್ಟನು ಮಮ ಮಂದಿರಕೆ 2
ಸುಜನ ಸುರದ್ರುಮಕುಜನಾರಾತಿಯು | ರಜಮಾರನು ಸುರವ್ರಜವು ಪೊಗಳುತಿರೆ | ಮಝ ಭಾಪೆಸೆ ಮಮರಜವ ಕಳೆಯೆ ಗುರು ಗೋವಿಂದ ವಿಠಲ 3