ಕಂಡೆವು ಗುರುದಿವ್ಯ ಶ್ರೀ ಸುಚರಣ
ಮಂಡಲದೊಳಾಯಿತು ಸುಭೂಷಣ ಧ್ರುವ
ಇದೆ ನಿಜ ಪುಣ್ಯ ಪೂರ್ವಾರ್ಜಿತ
ಇದರಿಟ್ಟು ಬಂತೆನಗಾಯಿತು
ಒದಗಿ ಕೈಗೂಡಿತು ತ್ವರಿತ
ಹೃದಯಲೆನ್ನಾಯಿತು ಉದಿತ 1
ಕಣ್ಣಾರೆ ಕಂಡೆವು ನಿಜ ಧನ
ಜನುಮವೆನ್ನಾಯಿತು ಪಾವನ
ಎನ್ನೊಳು ದೋರಿತಾನಂದ ಘನ
ಧನ್ಯ ಧನ್ಯವಾಯಿತು ಜೀವನ 2
ಲೇಸು ಲೇಸಾಯಿತಯ್ಯ ನೋಡಿ
ಭಾವಿಸಿದ ಸದ್ಗುರು ದಯಮಾಡಿ
ವಾಸನೆ ಪೂರಿಸಿತು ಇಲ್ಲೆ ನೋಡಿ
ದಾಸಮಹಿಪತಿ ನಿಜಗೂಡಿ 3