ಒಟ್ಟು 51 ಕಡೆಗಳಲ್ಲಿ , 23 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯದುನಂದನ ಬುಧಚಂದನ ಭವಬಂಧನ ದಮನಾ ಪ ಮಧುಸೂದನ ವಿಧುರಂಜನ ಕಮಲಾಕರಭವನಾ ಅ.ಪ ಅಜವಂದಿತ ಗಜಸೇವಿತ ಕರುಣಾರಸ ಭರಿತ ಸುಜನಾನತ ಭಜಕಾನ್ವಿತ ಜಗದೀಶ್ವರ ಮಹಿತಾ 1 ಪುರುಷೋತ್ತಮ ಪದವಿಕ್ರಮ ದನುಜಾವಳಿ ಭೀಮಾ ಪರಮೋತ್ತಮ ಶರಧಿಸಮಾಯುತ ಮಾಂಗಿರಿಧಾಮಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೆ ಬೇಕು ಜನ್ಮವಾದರು ಲೋಕನಾಥನೆ ಪ ಜೋಕೆ ಮಾಡುತಲೆನ್ನ ಕಾಯದ ನೌಕ ನಾಯಕ ನೀ ಕರುಣ ಬಿಡೆ 1 ಮಾತೆ ಕರುಣದೊಳಾತ್ಮಜಗೆ ಸ್ತನವಿತ್ತು ಪೊರೆವಂತೆ ಪ್ರೀತಿಯಲಿ ತವಜಾತನೆಂದು ಆತುರದಿ ನೀನಾದರಿಸದಿರೆ 2 ವಾರಿಧರ ನೆರೆ ಚಾತಕಗೆ ನೀರಬಿಂದುವೀವಂತೆ ಧೀರ ನರಸಿಂಹವಿಠಲನೆ ಕರುಣಾರಸವೆನಗೆ ಬೀರದಿರ್ದೊಡೆ 3
--------------
ನರಸಿಂಹವಿಠಲರು
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ. ಯಾಕೆ ಪಂಥ ಲೋಕೈಕನಾಥ ದಿ- ವಾಕರಕೋಟಿಪ್ರಭಾಕರ ತೇಜನೇ ಅ.ಪ. ಪೂರ್ವಾರ್ಜಿತ ಕರ್ಮದಿಂದಲಿ ಇರ್ವೆನು ನರಜನ್ಮ ಧರಿಸುತ ಗರ್ವದಿಂದ ಗಜರಾಜನಂತೆ ಮತಿ ಮರ್ವೆಯಾಯ್ತು ನಿನ್ನೋರ್ವನ ನಂಬದೆ ಗರ್ವಮದೋನ್ಮತ್ತದಿ ನಡೆದೆನು ಉರ್ವಿಯೊಳೀ ತೆರದಿ ಇದ್ದೆನಾದರೂ ಸರ್ವಥಾ ಈಗ ನಿಗರ್ವಿಯಾದೆಯಹ ಪರ್ವತವಾಸ ಸುಪರ್ವಾಣ ವಂದಿತ 1 ಯಾರಿಗಳವಲ್ಲ ಮಾಯಾ ಕಾರ ಮಮತೆ ಸಲ್ಲ ಸಂತತ ಸಾರಸಾಕ್ಷ ಸಂಸಾರಾರ್ಣವದಿಂದ ಪಾರಗೈದು ಕರುಣಾರಸ ಸುರಿವುದು ನತ ಮಮ ಕಾರ ಹೋಯ್ತೆ ಕಡೆಗೆ ಏನಿದು ಭಾರಿ ಭಾರಿ ಶ್ರುತಿ ಸಾರುವುದೈ ದಯ ವಾರಿಧಿ ನೀನಿರಲ್ಯಾರಿಗುಸುರುವುದು 2 ಬಾಲತ್ವದ ಬಲೆಗೆ ದ್ರವ್ಯದ ಶೀಲವಿತ್ತೆ ಎನಗೆ ಆದರೂ ಪಾಲಿಸುವರೆ ನಿನಗಾಲಸ್ಯವೆ ಕರು- ಸಾಲದೆರಡು ಮೂರು ನಿನ್ನಯ ಮೂಲ ಸಹಿತ ತೋರು ಮುನಿಕುಲ ಪಾಲ ಶ್ರೀಲಕ್ಷ್ಮೀನಾರಾಯಣ ಗುಣ ಶೀಲ ಕಾರ್ಕಳ ನಗರಾಲಯವಾಸನೇ 3
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷುಮಿ ನಾರಾಯಣ ಸಂರಕ್ಷಿಸು ಎನ್ನನು ಬೇಗ ಪ. ಪಕ್ಷ್ಮ(?)ಗಳಕ್ಷಿಗಳನು ಕಾವಂದದೊಳಕ್ಷಯ ನಿಧಿಯ ಸ- ಮಕ್ಷದಿ ತೋರುತ ಅ.ಪ. ಅರ್ಭಕನಾ ಮೋರೆ ಕೇಳಿ ಕರ್ಬುರ ಚರ್ಮನ ಸೀಳಿ ಗರ್ಭೀತ ಕರುಳ ಮಹಾರ್ಭಟದಿಂ ತೆಗದುರ್ಬಿಗೆ ಬೀರಿದ ನಿರ್ಭಯಕಾರಿ 1 ಮಣಿಗರ್ಭ ಮೂರ್ತಿಗೆ ನೀ ಎಣೆಯಾಗಿಲ್ಲಿಗೆ ಬಂದು ಕುಣಿಯಲು ನಿಧಿ ಸಂದಣಿಗೊಳದಿರೆ ಲಕ್ಷಣಕೆ ಕೊರತೆಯಂ- ದೆಣಿಸರೆ ಸುಜನರು 2 ಶಕ್ರ ಚತುಷ್ಕರ ಸಿರಿಯು ಚಕ್ರಗದಾಬ್ಜರ ಪರಿಯು ವಕ್ರ ಮತಿಯ ರಿಪುಚಕ್ರವ ತರಿವ ಪರಾಕ್ರಮ ಕರುಣೋ- ಪಕ್ರಮ ತೋರುತ 3 ಅಂಬುಜನಾಭನೆ ನಿನ್ನ ನಂಬಿದ ಭಾವನೆಯೆನ್ನ ತುಂಬಿದ ಜಗದೊಳಗಿಂಬುಗೊಂಡಿಹ ನಿನಗೆಂಬುದೇನು ಪೀ- ತಾಂಬರ ಧಾರಿ4 ಎರಡೊಂದು ಋಣಬಂಧ ಪರಿಹರಿಸೊ ಗೋವಿಂದ ಸುರತರು ಕರುಣಾರಸವಿರಿಸು ಶೇಷಗಿರಿ- ವರ ತ್ವರೆಯಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷ್ಮೀದೇವಿ ಅಂಬೋರುಹೇಕ್ಷಣೆ ಅಂಬಾಲತೇ ಜಗ ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ ಪ ನಂಬಿದೆ ನಿನ್ನ ಪದಾಂಬುಜಯುಗಳವ ಕಂಬು ಕಂಧರಿ ಕನಕಾಂಬರ ಧಾರಿಣಿ ಬೆಂಬಲವೀಯೆ ವಿಳಂಬವ ಮಾಡದೆ ಅ.ಪ `ಯಂಕಾಮಯೇ'ತ್ಯಾದಿ ಶೃತಿಗಳೆಲ್ಲಾ ಪಂಕಜಭವಮುಖ ಸುಮನಸರು ಕಿಂಕರರೆನ್ನುತ ಪೊಗಳುತಿರೆ ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ ಶ ಶಾಂಕ ಸೋದರಿ ಆತಂಕವ ಬಿಡಿಸೆ 1 ನೀರಜಾತಗಣ ಕೃತ ನಿಲಯೇ ಮಾರಜನಕ ಹರಿ ಪ್ರಿಯ ಜಾಯೆ ಕೋರುವೆ ನಿನ್ನಯ ಪರಮದಯೆ ಸಾರಸಾಕ್ಷಿ ಸರಿಯಾರು ನಿನಗೆ ಕರು ಣಾರಸಮಯೆ ಸುವಿಶಾರದೆ ಜನನಿ 2 ಕನ್ಯೆ ನಿಖಿಲ ಸುರನರರೊಳಗೆ ಮಾನ್ಯೆ ನಿನ್ನ ಪೋಲುವರನ್ಯರುಂಟೆ ನಿನ್ನ ದಾಸನಾದ ಎನ್ನ ಮನೋರಥ ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ 3
--------------
ವಿದ್ಯಾಪ್ರಸನ್ನತೀರ್ಥರು
ಲಕ್ಷ್ಮೀದೇವಿಯ ಪ್ರಾರ್ಥನೆ ಶ್ರೀನಿವಾಸನ ಕರುಣಾನು ಸಂಸರಣಿ ಜ್ಞಾನ ಭಕ್ತಿಗಳನ್ನು ಪಾಲಿಸಂಭರಣಿ ಪ. ಅಜಭವಾದಿಗಳಿಗೆ ನಿಜಪದದಾಯಿನಿ ವೃಜಿನ ಸಮೂಹ ನಿವಾರಿಣಿ ಕುಜನ ಕುಠಾರಿಣಿ ಕುಂಜರ ಗಮನೆ ಪಾಲು ದಧಿವಾಸನ ಕೂಡಿ ಸದನದಿ ನೆಲೆಗೊಳ್ಳೆ 1 ಆರಿಗೆ ನಿನ್ನ ಕರುಣಾರಸ ದೊರೆವದೊ ನೀರಜಾಲಯೆ ನಿನ್ನ ಸೇರಿಕೊಂಡಿಹ ಎನ್ನ ವೈರಿ ಜನರು ಬೇಗ ಗಾರಾಗದುಳಿವರೆ 2 ನೀನೊಲಿಯಲೂ ಸರ್ವ ಮಾನವರೊಳಗತಿ ಮಾನ ಮಹತ್ವಾದಿ ಸದ್ಗುಣವೂ ತಾನಾಗಿ ಬರುವವಿಂನೇನೆಂದು ನಿನ್ನ ಮಹಿ- ಮಾನು ವರ್ಣನೆ ಮಾಳ್ಪೆ ದೀನ ದಯಾಕಲೆ 3 ಮಂದಿರದೊಳಗೆ ನೀ ನಿಂದು ನಗುತ ನಲಿ ವಂದ ನೋಡುತ ಮಿತ್ರ ಬಂಧುಗಳು ಮಂದರಧರ ತಾನೆ ನಿಂದು ರಕ್ಷಿಸನೆಂದಾ ನಂದ ಪೂರಿತ ಮನದಿಂದ ಸೇರಿರುವರು 4 ಸರಸಿಜನಾಭ ಶ್ರೀಹರಿಯು ನಿನ್ನನ್ನೆ ಮುಂ ದಿರಿಸಿ ಚತುರ್ವಿಧ ಪುರುಷಾರ್ಥವಾ ಕರುಣಿಪೆನೆಂದು ಕಂಠಸರದ ಮಧ್ಯೂರದಲಿ ಧರಿಸಿ ಶೋಭಿಪ ಶೇಷಗಿರಿವರ ಶಿಖರದಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಾಯುದೇವರ ಪ್ರಾರ್ಥನೆ ಪ್ರಾಣಪತೇ ಪರಿಪಾಲಯ ಮಾಂಪ್ರಾಣಪತೇ ಪರಿಪಾಲಯ ಮಾಂ ಕಮಲಾಲಯ ಕರುಣೈಕಾಲಯ ಭೂಮನ್ಯೆ ಪ. ಋಜುಗಣನಾಯಕ ಭುಜಗಭೂಷಣ ದ್ವಿಜರಾಜಾಹಿಪರಾಜಾ 1 ಭಾರತೀಶ ಕರುಣಾರಸ ಭೂಷಣ ವಾರಿಜಾಸನ ಸಮಾಂಶಾ 2 ಕಪಿವರ ನೃಪವರ ಯತಿವರ ರೂಪ ದುರಿತ ಸುರೂಪ 3 ರಾಮಕೃಷ್ಣ ವ್ಯಾಸಾಮಲ ಮಂಗಲ ನಾಮಕ ಶ್ರೀಪತಿ ದೂತ 4 ವೆಂಕಟೇಶ ಚರಣಾಂಬುಜ ಮಧುಪ ವಿ- ಶಂಕ ಶಂಕರಾತಂಕ ನಿವಾರಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಿಜಾಸನ ವಂದ್ಯ ಚರಣಾ ಲಕ್ಷ್ಮೀ- ನಾರಾಯಣ ಎನ್ನೊಳಿರಿಸು ಸತ್ಕರುಣಾ ಪ. ಶ್ರೀರಮಣಿಯ ಕೂಡಿ ನೀನು ದಯ ದೋರಲನ್ಯರಿಗೆಂದರಂಜೆ ನಾನು ದಾರಿದ್ರ್ಯ ಭಯ ದೋಷಗಳನು ದೂರ ಹಾರಿಸಿ ಪೊರೆವ ಸಕಲ ಸುರಧೇನು1 ನಿನ್ನಂಥ ದಾತರಿನ್ನಿಲ್ಲ ಪರ- ಮೋನ್ನತ ಪದವ ಧ್ರುವನಿಗಿತ್ತಿಯಲ್ಲ ಮುನ್ನ ಕುಚೇಲನ ಸೊಲ್ಲ ಕೇಳಿ ಅನ್ಯರಿಗೊಲಿಯದ ಸಿರಿಯಿತ್ತಿಯಲ್ಲ 2 ಇಂದಿರಾವರ ವೆಂಕಟೇಶ ನೀ ಬಂದುದರಿಂದಾದುದೆನಗೆ ಸಂತೋಷ ಹೊಂದಿದೆ ನಿನ್ನನು ಶ್ರೀಶ ಪೂ- ರ್ಣೇಂದು ವದನ ಕರುಣಾರಸ ಭೂಷಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ವರನೆ ಪರತರನೆ ಪ ಪಾವನಕರ ಕರುಣಾರಸ ಭರಿತನೆ ಅ.ಪ. ಅಘ ಪರಿಹಾರಕ ಹರಿಯೆ ಬಗೆ ಬಗೆ ಅಪರಾಧಗಳನು ಕ್ಷಮಿಸಿದೆ 1 ಸಕಲ ನಿಯಾಮಕ ವಿಭುವೆ ಭಕುತಪರಾಧ ಸಹಿಷ್ಣುವೆ ಪ್ರಭುವೆ 2 ಮೊರೆಯನು ಕೇಳೆಲೊ ದೊರೆಯೆ ಗರುವ ಕೊಡದೆ ಪೊರೆ ಕರಿಗಿರಿ ನಿಲಯನೆ 3
--------------
ವರಾವಾಣಿರಾಮರಾಯದಾಸರು
ಶ್ರೀಧರಾ ನೀನೆ ಎನ್ನ ಹೃದಯ ಕಮಲದೊಳಿದ್ದು ಮಾಡಿಸಿದ್ದು ನಾ ಮಾಡಿದೆನೊ ಪ ಇಂದು ಮಾಡುವುದೇನು ಮುಂದೆ ಮಾಡತಕ್ಕದ್ದೇನು ತಂದೆ ಅ.ಪ ಹಿಂದೆ ನಿನ್ನಯ ಜನರ ವಂದಿಸದೆ ಭವ- ಬಂಧನದಿ ನಾ ನೊಂದೆನೋ ಇಂದು ತೀರಿತು ಅದಕೆ ತಕ್ಕಮುಯ್ಯವು ಎನಗೆ ಆ- ನಂದ ವಾಯಿತು ನಿನ್ನ ಕರುಣಾರಸಕೆ ಮಂದಭಾಗ್ಯನಿಗೆ ನೀ ತಂದಂಥ ಬಂಧನವ ಬಂಧಿಸಿ ಎನ್ನಿಂದ ವಂದನೆಯ ಕೊಂಡೆ1 ಮೂರು ದಿನದಲಿ ಹಿಂದೆ ತೋರಿದಂದದಿ ಎನ್ನ ಅ- ಪರಾಧಗಳ ಎಣಿಸಲಿಲ್ಲ ಬಾರಿ ಬಾರಿಗೆ ಗುರುಗಳು ಕಾದಿಹರು ಎಂದೆನ್ನ ಎಚ್ಚರಿಸಿದುದಕೆ ನಾ ಮೈಮರೆದೆನೊ ಮಾರಮಣನೇ ನೀ ಗುರುವಾಸರದಿ ತ್ವರಿತದೊಳು ಹರಿ ಗುರು ಪೂಜೆಗೆ ಕಾತರವನಿತ್ತೆ 2 ಸರ್ವಸೇವೆಯ ನೀ ಕರುಣದಿ ಸ್ವೀಕರಿಸು ಶರಣರಕ್ಷಕನಹುದೊ ನೀನು ಉರಗಗಿರಿವಾಸ ಶ್ರೀ ವೇಂಕಟೇಶನೆ ಎನ್ನ ಸರ್ವಾಪರಾಧಗಳ ಕ್ಷಮಿಸೋ ಅರಿತವನು ನಾನಲ್ಲವೆಂದೆನ್ನ ಕೈಬಿಡದೆ ದುರಿತ ಪರಿಹರಿಸಿ ಕಾಯೋ ಶೌರೆ3
--------------
ಉರಗಾದ್ರಿವಾಸವಿಠಲದಾಸರು
ಶ್ರೀನಿವಾಸ ಭಕ್ತಪೋಷಣಭೂಷ ಮನ್ಮಂದಿರವಾಸ ಶ್ರೀನಿವಾಸ ಪಾದಾತನ ಜನರನು ಸಾನುರಾಗದೊಳ್ಮಾನಿಸಿ ಸಲಹುವ ಪ. ಬಾಲತ್ವದಿಂದ ಬಹುವಿಧವಾದ ಭಕ್ತಿಯನಿತ್ತು ಲಾಲಿಸಿ ಪೊರೆದ ಪೂಜ್ಯಪಾದ ಈ ಮಧ್ಯದೊಳಾದ ಧಾಳಿಗಳನು ನಿರ್ಮೂಲಗೈದ ಕರು- ಣಾಳು ರಾಜ ನಿನ್ನಾಳಾಗಿಹೆನು 1 ಪಂಚಭೌತಿಕವಾದ ತನುವಿಂದ ಆಗುವ ತಪ್ಪ ಕಿಂಚಿನ ವರದ ನೀ ದಯದಿಂದ ಕ್ಷಮಿಸೈ ಗೋವಿಂದ ವಂಚಿಸಿ ದಾನವದಿತಿಜರ ಸುರರಿಗೆ ಹಂಚಿದಿ ಸುಧೆಯನು ಶುಭಕರದಿಂದ 2 ಕಮಲಾಬ್ಜಭವರುದ್ರೇಂದ್ರಾದಿಗಳು ಪಾದಯುಗ ಕಲ್ಪ ದ್ರುಮ ನಿನ್ನ ನೆಳಲನಾಶ್ರೈಸಿಹರು ಕರುಣಾರಸದೋರು ನಮಿಸುವೆ ಎಂಬೀ ಮಮತೆಯಿಂದ ಎ- ನ್ನಮಿತಪರಾಧವ ಕ್ಷಮಿಸುವ ಹರಿಯೆ 3 ಇಂದ್ರಿಯಂಗಳ ಭಾವನೆ ಬಹುಘೋರ ಅದರಲ್ಲಿ ಮುಳುಗಿದ- ರಿಂದಿರಾಧವ ನೀನೆ ಬಹುದೂರ ಆ ರೀತಿಯ ಭಾರ ಹೊಂದಿದ ದಾಸರಿಗೆಂದು ತಾರಾ- ಮಂದರಾದ್ರಿಧರಾ ಮಾಧವಧೀರ 4 ಚರಣ ಸಂಸ್ಮರಣೆ ಮಾತ್ರ ಬೇಕು ಇದರಿಂದ ಸರ್ವ ಪುರುಷಾರ್ಥ ಲಬ್ಧಿಗಿನ್ನು ಸಾಕು ಇರುವುದೆ ಈ ನಾಕು ಉರಗ ಗಿರೀಂದ್ರನ ಶಿರದಲಿ ಮಂಡಿಸಿ ಮೆರೆವ ಸುಖಾಂಬುಧಿ ಸುರವರ ನಾಥ5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಸತಿ ಮದ್ಬಾರ ನಿನ್ನದಮ್ಮಾ | ಕರುಣದಿ ಪೊರೆಯಮ್ಮ ಪ ಸರಸಿಜಾಕ್ಷ ಹರಿಭಕುತಿ ನೀಡೆ ತಾಯೇ | ಆರತರನು ಕಾಯೇ ಅ.ಪ. ಕಾಳಿ ದ್ರೌಪತಿ ಶಿವಕನ್ಯೆ | ಮನ್ಮನದಲಿ ನಿಲು ಘನ್ನೆಫಾಲಾಕ್ಷನ ಪ್ರಿಯ ಜನನೀ | ದಯದಲಿ ಪೊರೆ ಕರುಣೀ ||ನಳನಂದಿನಿ ಇಂದ್ರಸೇನೆ ತಾಯೇ | ಕಲಿ ಕಲ್ಮಷ ಕಳೆಯೇಏಳಲ ಮಾಡದೆ ನೀಲವರ್ಣನ ತೋರೇ | ಕರುಣಾರಸ ಬೀರೇ 1 ಭವ ಖಗ ಪನ್ನಗ ಭವ ದೂರೇ2 ಕೃತಿ ರಮಣನ ಪ್ರಿಯ ಪುತ್ರಿ | ನರಹರಿ ಗುರುಭಕ್ತೀಪ್ರಥಮಾಂಗನ ಪ್ರಿಯರಾಣೀ | ನಮಿಸುವೆ ಬ್ರಹ್ಮಾಣಿ ||ಪತಿತನ ಪಾಲಿಸೆ ಪರಮ ಕಲ್ಯಾಣಿ | ಪಾವನೆಯ ಭಾವಿವಾಣಿಗತಿಪ್ರದ ಗುರು ಗೋವಿಂದ ವಿಠಲನ್ನ | ಪದ ತೋರಿಸೆ ಘನ್ನ 3
--------------
ಗುರುಗೋವಿಂದವಿಠಲರು
ಸಿತಗಿರೀಶ ಶ್ರೀಪತಿಯೆ ಕಾಯೋ ಯನ್ನಾ | ಕರುಣಾರಸ ಪೂರ್ಣ ಪ ಭವ ಭಂಗಾ ಅ.ಪ. ವರುಷಾ | ಕಾಣಲಿಲ್ಲ ಹರುಷಾ ||ಇಂದಿರೇಶ ತವ ಚರಣ ಸನ್ನಿಕರ್ಷಾ | ಎಂದಾಗುದೊ ಶ್ರೀಶಾ ||ವಂದಿಸೂವೆನೊ ನಾನು ನಿನ್ನ ಅನಿಶಾ | ಶ್ವೇತಾದ್ರಿ ವಾಸಾ 1 ಕಮಲ ಕಾಂಬುವಂಥ ಹದನಾ | ತೋರಿಸೊ ಜಿತ ಮದನಾ 2 ಸುರುಚಿರಾಂಗ ಶ್ರೀ ಬಿಳಿಗಿರಿಯ ರಂಗಾ | ಎನ್ನಂತರಂಗಾ ||ಮುರ ವಿರೋಧಿ ಸುರ ಸಾರ್ವಭೌಮ ಹರಿಯೇ | ಕರಿರಾಜನು ಕರಿಯೇ ||ತ್ವರದೊಳುದಿಸ್ಯವನ ಕಾಯ್ದ ದೊರೆಯೇ | ಹೀಗೆನ್ನ ಪೊರೆಯೆ ||ಗುರು ಗೋವಿಂದ ವಿಠಲ ಶ್ರೀಹರಿಯೇ | ನಿನ್ನುಪಕೃತಿ ತಾ ಮರೆಯೆ 3
--------------
ಗುರುಗೋವಿಂದವಿಠಲರು
ಹರಿದಾಸರ ಸಂಗಕೆ ಸರಿಯುಂಟೆ ಗುರು ಕರುಣಕೆ ಇನ್ನು ಪಡಿಯುಂಟೆ ದೇವ ಪ ದಾವಾನಲವ ತÀಪ್ಪಿಸಿ ಕಾಡಾನೆಯದÉೀವಗಂಗೆಗೆ ತಂದು ಹೊಗಿಸಿದಂತೆಆವರಿಸಿರುವ ಷಡ್ವರ್ಗ ತಪ್ಪಿಸಿ ಎನ್ನಶ್ರೀವರನ ಕರುಣಾರಸದಿ ತೋಯಿಸುವ 1 ಪಾದ ಸನ್ನಿಧಿಯ ಸೇರಿಸುವ 2 ಬಲೆಯ ಹಾರಿದ ಎಳೆ ಹುಲ್ಲೆಯ ಮರಿಗಳಿಗೆಒಲಮೆಯಿಂದಲಿ ತಾಯ ತೋರಿಸಿದಂತೆಬಲು ಇಂದ್ರಿಯಗಳ ಸೆರೆಯ ಬಿಡಿಸಿ ಎನ್ನನಳಿನನಾಭನ ಸನ್ನಿಧಿಯ ತೋರಿಸುವ 3 ಪಾದ ಸಂದರುಶನವನ್ನೀವ 4 ಭವಾಬ್ಧಿ ನಡುವೆ ಸಿಕ್ಕಿದ ಎನ್ನಪಿಡಿದು ಶ್ರೀಕೃಷ್ಣನಂಘ್ರಿಗಳ ಸೇರಿಸುವ 5
--------------
ವ್ಯಾಸರಾಯರು